ಇಲಿನಾಯ್ ನಲ್ಲಿ ಸರದೇಶಪಾಂಡೆ ಹಾಸ್ಯ ಪಟಾಕಿ

Yashwanth Sardeshpande
ಕನ್ನಡ ನಾಡಿನ ಖ್ಯಾತ ಹಾಸ್ಯ ನಟ, ನಾಟಕಕಾರ, ಸಂಭಾಷಣಕಾರ ಯಶವಂತ ಸರದೇಶಪಾಂಡೆ ಬಣ್ಣ ಹಚ್ಚಿ ವೇದಿಕೆ ಏರಿದರೆ ಅಲ್ಲೆಲ್ಲ ನಗೆಯ ಹಾವಳಿ. ಮಾತಿನ ಪಟಾಕಿ, ಹಾಸ್ಯ ಚಟಾಕಿಗಳು ಪ್ರೇಕ್ಷಕರಲ್ಲಿ ನಗೆಬುಗ್ಗೆಯ ಕಿಡಿ ಹಚ್ಚಿಬಿಡುತ್ತದೆ.

ಇದೇ ಶನಿವಾರ, ನವೆಂಬರ್ 20ರಂದು ಈ ಪ್ರತಿಭಾವಂತ ನಟ ಅಮೆರಿಕಾದ ಇಲಿನಾಯ್ ನಲ್ಲಿರುವ ವಿದ್ಯಾರಣ್ಯ ಕೂಟದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮದಲ್ಲಿ ಕನ್ನಡ ಧ್ವಜ ಮತ್ತು ನಗೆ ಪಟಾಕಿಗಳನ್ನು ಪಟಪಟಿಸಲಿದ್ದಾರೆ. ಇಡೀ ಸಂಭ್ರಮದ ಪ್ರಧಾನ ಆಕರ್ಷಣೆ ಯಶವಂತ ಸರದೇಶಪಾಂಡೆ ಅವರ ನಗೆ ನಾಟಕ 'ರಾಶಿ ಚಕ್ರ' ಎಂದರೆ ತಪ್ಪಾಗಲಾರದು.

ಶನಿವಾರದ ಸಂಜೆ 4.30ರಿಂದ 10ರವರೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲಿನಾಯ್ ಕನ್ನಡಿಗರನ್ನು ರಂಜಿಸಲು ಸಿದ್ಧವಾಗಿವೆ. ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ :

4.30ಕ್ಕೆ : ನೊಂದಣಿ ಮತ್ತು ಪರಸ್ಪರ ಪರಿಚಯ.

5.00ಕ್ಕೆ : ಸೌಮ್ಯ ಪ್ರಸಾದ್ ಸಂಯೋಜನೆಯಲ್ಲಿ ಲಕ್ಷ್ಮೀ ಪ್ರಾರ್ಥನೆ.

5.05ಕ್ಕೆ : ಲಕ್ಷ್ಮೀ ಪೂಜೆ.

5.30ರಿಂದ 6.50 : ಊಟದ ಸಮಯ.

7.00ಕ್ಕೆ : ಭಾರತ ಮತ್ತು ಅಮೆರಿಕದ ರಾಷ್ಟ್ರಗೀತೆ.

7.10ರಿಂದ 7.45 : ವಿಕೆಕೆ ವಾರ್ಷಿಕ ಸರ್ವ ಸದಸ್ಯರ ಸಭೆ.

7.45ಕ್ಕೆ : ಲಕ್ಷ್ಮಿ ಕರ್ಪೂರ್ ಸಂಯೋಜನೆಯಲ್ಲಿ ನೃತ್ಯ ರೂಪಕ - ಹಚ್ಚೇವು ಕನ್ನಡದ ದೀಪ.

7.50ಕ್ಕೆ : ವೀಣಾ ಹಲ್ಲೂರ್ ಸಂಯೋಜನೆಯಲ್ಲಿ ನೃತ್ಯ ರೂಪಕ - ಸಿನಿಮಾಯಣ.

8.00ಕ್ಕೆ : ಜ್ಞಾನಭಾರತಿ ಕನ್ನಡ ಶಾಲೆಯಿಂದ ಸಮೂಹ ಗಾಯನ - ಕನ್ನಡದ ಆಲಾಪ.

8.05ಕ್ಕೆ : ನಿರ್ಮಲ ಮೋಹನ್ ಸಂಯೋಜನೆಯಲ್ಲಿ ನೃತ್ಯ ಪಟಾಕಿ ಪಟಾಕಿ.

8.10ಕ್ಕೆ : ಅಪರ್ಣ ದೇಶಪಾಂಡೆ ಸಂಯೋಜನೆಯಲ್ಲಿ ನೃತ್ಯ - ಶಾಸ್ತ್ರೀಯ ಮಿಲನ.

8.15ರಿಂದ 8.45 : ಕನ್ನಡ ರಾಜ್ಯೋತ್ಸವ ಆಚರಣೆ - ಕನ್ನಡ ಭಾವಸಂಗಮ.

8.45ಕ್ಕೆ : ಯಶವಂತ ಸರದೇಶಪಾಂಡೆ ಅವರ ನಾಟಕ 'ರಾಶಿ ಚಕ್ರ'.

10ಕ್ಕೆ : ವಂದನಾರ್ಪಣೆ.

ಹೆಚ್ಚಿನ ಮಾಹಿತಿಗೆ ವಿದ್ಯಾರಣ್ಯ ಕನ್ನಡ ಕೂಟ, ಇಲಿನಾಯ್ ವೆಬ್ ಸೈಟ್ ನೋಡಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+