ಲಂಡನ್ ಕನ್ನಡ ರಾಜ್ಯೋತ್ಸವದ ಕರೆಯೋಲೆ

ಇದೇ ಅಕ್ಟೋಬರ್ ತಿಂಗಳಲ್ಲಿ ಕನ್ನಡಿಗರು ಯುಕೆ ಲಂಡನ್ನಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವಕ್ಕೆ ಆಂಗ್ಲನಾಡಿನ ಕನ್ನಡಿಗರಿಗೆಲ್ಲರಿಗೂ ಹೃತ್ಪೂರ್ವಕ ಆಮಂತ್ರಣ. ಕನ್ನಡ ರಾಜ್ಯೋತ್ಸವದೊಂದಿಗೆ ರೂಪತಾಳಿದ ಕನ್ನಡಿಗರು ಯುಕೆ ಸಂಸ್ಥೆ ತನ್ನ 6ನೆಯ ಕನ್ನಡ ರಾಜ್ಯೋತ್ಸವ / ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ವಸಂತೋತ್ಸವದ ರಘು ದೀಕ್ಷಿತ್ ಸಂಗೀತದ ಗುಂಗಿನಲ್ಲಿರುವ ಶೋತೃಗಳಿಗೆ, ಸಂಗೀತದ ವಿಭಿನ್ನ ಆಯಾಮ ಈ ಕಾರ್ಯಕ್ರಮದಲ್ಲಿ ಸವಿಯುವ ಅವಕಾಶ ಒದಗಿಬರಲಿದೆ. ಕರ್ನಾಟಕದಿಂದ ಬಹು ದೂರ ನೆಲೆಸಿರುವ ಕನ್ನಡಿಗರಿಗೆ ಕನ್ನಡ ಸಂಸ್ಕೃತಿ ಹಾಗೂ ಕನ್ನಡ ಭಾಷೆಯನ್ನು ಸಹ ಕನ್ನಡಿಗರೊಂದಿಗೆ ಆನಂದಿಸಿ, ಕನ್ನಡತನ ಮತ್ತು ಕನ್ನಡಾಭಿಮಾನ ಮೆರೆಯಲು ಇದೊಂದು ಸದವಕಾಶ.
ಕಾರ್ಯಕ್ರಮದ ವಿವರ:
ದಿನಾಂಕ : 30 ಅಕ್ಟೋಬರ್ 2010, ಶನಿವಾರ
ಸ್ಥಳ : ಕ್ಯಾನನ್ಸ್ ಪ್ರೌಢಶಾಲೆ, ಶಾಲ್ಡನ್ ರಸ್ತೆ, ಹ್ಯಾರೊ, ಮಿಡ್ಲ್ ಸೆಕ್ಸ್, ಲಂಡನ್, HA8 6AN
ಸಮಯ : ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ
ಮುಖ್ಯ ಆತಿಥಿಗಳು :
ಮುದ್ದು ಮೋಹನ್ : ಕರ್ನಾಟಕ ಸರ್ಕಾರದ ಮಾಹಿತಿ ವಿಭಾಗದ ನಿರ್ದೇಶಕರು ಮತ್ತು ಪ್ರಖ್ಯಾತ ಗಾಯಕರು.
ಡಾ|| ನೀರಜ್ ಪಾಟೀಲ್ : ವೃತ್ತಿಯಲ್ಲಿ ವೈದ್ಯರಾದ ಶ್ರೀಯುತರು ಲಂಡನ್ನಿನ ಲ್ಯಾಂಬೆತ್ ಕೌನ್ಸಿಲ್ ನ ಮೇಯರ್. ಲ್ಯಾಂಬೆತ್ ನ ಮೇಯರ್ ಹುದ್ದೆಗೇರಿರುವ ಪ್ರಥಮ ಭಾರತೀಯ, ಇಂಗ್ಲೆಂಡಿನಲ್ಲಿ ಮೇಯರ್ ಆಗಿರೋ ಪ್ರಥಮ ಕನ್ನಡಿಗ, ಇವು ನಮಗೆ ಹೆಗ್ಗಳಿಕೆ ಹಾಗು ಹೆಮ್ಮೆಯ ವಿಷಯ.
ದಿನದ ಪ್ರಮುಖ ಆಕರ್ಷಣೆ :
* 'ಹಾಸ್ಯೋತ್ಸವ' ಕಲಾವಿದ ರಿಚರ್ಡ್ ಲೂಯಿಸ್ ಅವರು ಮಾತಿನ ಕಚಗುಳಿಯಿಂದ ನಿಮ್ಮನ್ನೆಲ್ಲ ನಗೆಗಡಲಿನಲ್ಲಿ ತೇಲಿಸಲಿದ್ದಾರೆ.
* ಲಯತರಂಗ ಸಂಗೀತ ತಂಡದಿಂದ ಸಂಗೀತ ಸುಧೆ, ಲಯ ಮಾಧುರ್ಯ ಸುಶ್ರಾವ್ಯವಾಗಿ ಹರಿದು ಬರಲಿದೆ.
* ಮುಖ್ಯ ಅತಿಥಿಗಳಾದ ಮುದ್ದು ಮೋಹನ್ ಅವರು ಹಿಂದೂಸ್ತಾನಿ ಹಾಗು ಲಘು ಸಂಗೀತದಿಂದ ನಿಮ್ಮ ಮನ ರಂಜಿಸಲಿದ್ದಾರೆ.
* ಲ್ಯಾಂಬೆತ್ ಕೌನ್ಸಿಲ್ ನ ಮೇಯರ್ ನಮ್ಮ ಕನ್ನಡಿಗ ಡಾ|| ನೀರಜ್ ಪಾಟೀಲ್ ರಿಂದ ಸಭೆಯನ್ನುದ್ದೇಶಿಸಿ ಕೆಲ ಮಾತುಗಳು.
* ಪ್ರತಿ ಬಾರಿಯಂತೆ ನಮ್ಮ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಸಂಗೀತ. ಲಘು ಪ್ರಹಸನ ಹಾಗೂ ಇನ್ಣೂ ಅನೇಕ ಕಾರ್ಯಕ್ರಮಗಳು.
* ಎಂದಿನಂತೆ ಸ್ವಾದಿಷ್ಟವಾದ ಭೋಜನ.
ಕಾರ್ಯಕ್ರಮ, ನೋಂದಣಿ ಮತ್ತು ಭೋಜನದೊಂದಿಗೆ 11.30 ಗಂಟೆಗೆ ಪ್ರಾರಂಭವಾಗಿ ಸಂಜೆ 7ಕ್ಕೆ ಮುಕ್ತಾಯ.
ನೊಂದಣಿ : ನಮ್ಮ ಅಂತರ್ಜಾಲ ನೊಂದಣಿ ಈಗ ತೆರೆದಿದೆ. ಈ ಉಲ್ಲೇಖ ಕ್ಲಿಕ್ಕಿಸಿ ವಿಳಂಬಿಸದೆ ತಮ್ಮ ಹಾಜರಾತಿಯನ್ನು ದೃಢಪಡಿಸಿಕೊಳ್ಳಿ.
ಪ್ರವೇಶದರ : ವಯಸ್ಕರಿಗೆ £17. (ರಿಯಾಯತಿ: ಅಕ್ಟೋಬರ್ 25ರೊಳಗೆ ನೊಂದಾಯಿಸಿ, ಹಣಪಾವತಿ ಮಾಡಿದಲ್ಲಿ ಕೇವಲ £15 ಅನ್ವಯಿಸುತ್ತದೆ). 5ರಿಂದ 12 ವಯಸ್ಸಿನ ಮಕ್ಕಳಿಗೆ £8. ಮತ್ತು 5 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ಉಚಿತ.
ವಾಹನ ನಿಲುಗಡೆ : ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆ ಶಾಲಾಪ್ರಾಕಾರದಲ್ಲಿ ಸಾಕಷ್ಟಿದೆ. ಇದು ಭರ್ತಿಯಾದಲ್ಲಿ ಹೊರಗಿನ ರಸ್ತೆಬದಿಯ ನಿಲುಗಡೆಗಳನ್ನು ಉಪಯೋಗಿಸಬಹುದು. ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆಯುಂಟಾಗದಂತೆ ದಯವಿಟ್ಟು ಕಾಳಜಿವಹಿಸಿ. ಸ್ಥಳಕ್ಕೆ ಮಾರ್ಗದರ್ಶನ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ, ನಮ್ಮ ಅಂತರ್ಜಾಲ ತಾಣದ ಪುಟವನ್ನು ಪರಿಶೀಲಿಸಿ.
ಸಂಪರ್ಕ ಮಾಹಿತಿ : ಯಾವುದಕ್ಕೂ ಅಂತರ್ಜಾಲ ತಾಣವನ್ನು ಕಾರ್ಯಕ್ರಮದ ಮಾಹಿತಿ ಬಗ್ಗೆ ಅಗಾಗ್ಗೆ ಭೇಟಿಮಾಡುತ್ತಿರಿ ಅಥವ ಅಡ್ಮಿನ್@ಕನ್ನಡಿಗರುಯುಕೆ.ಕಾಂ ಗೆ ಮಿಂಚೆ (ಈಮೈಲ್) ಕಳಿಸಿ. ಅದಲ್ಲದೆ ನಮ್ಮ ನೊಂದಣಿ ಸಮಿತಿಯ ಈ ಕೆಳಗಿನ ಸದಸ್ಯರಲ್ಲೊಬ್ಬರನ್ನು ಸಂಪರ್ಕಿಸಬಹುದು.
ಸೂರ್ಯ ಪ್ರಕಾಶ್ : 07717865728, ದಿಲೀಪ್ : 07919916338
ಈ ಬರಹವನ್ನು (ಮೈಲ್) ನಿಮ್ಮ ಬಂಧುಬಳಗದವರಿಗೆ, ಮಿತ್ರರಿಗೆ ಅಥವ ನಿಮ್ಮ ಕನ್ನಡ ಸಹೋದ್ಯೋಗಿಗಳಿಗೆ / ಕಚೇರಿಯಲ್ಲಿ ಪ್ರಕಟಿಸಿ, ಆಂಗ್ಲನಾಡಿನ ಕನ್ನಡಿಗರೆಲ್ಲ ಈ ಸಮಾರಂಭಕ್ಕೆ ಕಲೆಯುವಂತೆ ನೆರವಾಗಿ ಎಂದು ನಮ್ಮ ವಿನಮ್ರ ವಿನಂತಿ. ಕನ್ನಡಿಗರುಯುಕೆ ಯಾಹು ಗ್ರೂಪ್ ನ ಸದಸ್ಯರಾಗದೆ ಇರುವ ಆಂಗ್ಲನಾಡಿನ ಕನ್ನಡಿಗರು ನಮ್ಮ ಈ ಸಮಾರಂಭದ ಹೆಚ್ಚಿನ ವಿವರ ಮತ್ತು ನಿಯತಕಾಲಿಕ ಪ್ರಕಟಣೆಗಳು ನಿಮ್ಮ ಈಮೈಲ್ ಗೆ ಸ್ವಯಂಚಾಲಿತವಾಗಿ ತಲುಪುವಂತೆ ಮಾಡಲು ದಯವಿಟ್ಟು ವಿಳಂಬಮಾಡದೆ ಸದಸ್ಯರಾಗಿ.
ಕನ್ನಡ ಭಾಷೆ, ಸಂಸ್ಕೃತಿ ಇಲ್ಲಿ ಪಸರಿಸುವುದಕ್ಕೆ ನಿಮ್ಮ ಪ್ರೋತ್ಸಾಹ ಮತ್ತು ಹಾಜರಾತಿಯೇ ನಮಗೆ ಸ್ಫೂರ್ತಿ. ದಯವಿಟ್ಟು ನಮ್ಮ ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕನ್ನಡಾಂಬೆಯ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಮತ್ತೊಮ್ಮೆ ಕಳಕಳಿಯ ಪ್ರಾರ್ಥನೆ.
ಕನ್ನಡಿಗರು ಯುಕೆ ಸಮಿತಿಯ ಪರವಾಗಿ.
ಕನ್ನಡಿಗರುಯುಕೆ!
ಆಂಗ್ಲನಾಡಿನ ಸಶಕ್ತ ಕನ್ನಡಿಗ ಸಮುದಾಯದ ನಿರ್ಮಾಣಕ್ಕಾಗಿ.
ಈ ಕೆಳಗಿನ ಉಲ್ಲೇಖಗಳನ್ನು ಪರಿಶೀಲಿಸಿ. ಲಯತರಂಗ - http://www.layatharanga.com/
ವಿ.ಸೂ. : ಎಲ್ಲಾ ಕಲಾವಿದರಿಗೂ ವೀಸಾ ಅನುಮತಿ ದೊರಕಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications