ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕಪ್ರಿಯ ಹರಿಗೆ ಪುಸ್ತಕರೂಪದಲ್ಲಿ ಶ್ರದ್ಧಾಂಜಲಿ

By * ಮೈಶ್ರೀ ನಟರಾಜ, ಪೊಟೊಮಿಕ್
|
Google Oneindia Kannada News

Harihareshwara, Nagalakshmi
1980ರ ದಶಕದಲ್ಲಿ ಅಮೆರಿಕದಲ್ಲಿದ್ದ ಕನ್ನಡಿಗರಿಗೆಲ್ಲ ತುಂಬ ಹತ್ತಿರದವರಾಗಿದ್ದ "ಅಮೆರಿಕನ್ನಡ" ಪತ್ರಿಕೆಯ ಸಂಸ್ಥಾಪಕ ಹರಿಹರೇಶ್ವರ ಅವರು ಕಳೆದ ಜುಲೈನಲ್ಲಿ ನಮ್ಮನಗಲಿದ್ದು ಎಲ್ಲರಿಗೂ ತಿಳಿದೇ ಇದೆ. ನಿವೃತ್ತರಾದ ಬಳಿಕ ತಮ್ಮ ಶ್ರೀಮತಿಯೊಂದಿಗೆ ಮೈಸೂರಿಗೆ ತೆರಳಿ ತಮ್ಮ ಮನಸ್ಸಿಗೆ ಆನಂದವನ್ನು ಕೊಡುವ ಕನ್ನಡಸೇವೆಯಲ್ಲಿ ತೊಡಗಿಸಿಕೊಂಡು ತಾವು ಗಳಿಸಿಕೊಂಡಿದ್ದ ಗೆಳೆಯರ ವೃಂದಕ್ಕೆ ಮತ್ತಷ್ಟು ಸಂಖ್ಯೆಯ ಮಿತ್ರರನ್ನೂ ಅಭಿಮಾನಿಗಳನ್ನೂ ಗಳಿಸಿಕೊಂಡು ಸಕ್ರಿಯವಾಗಿ ದುಡಿದು ತಮ್ಮ ಛಾಪನ್ನು ಮೈಸೂರಿನಲ್ಲಿಯೂ ಬಿಟ್ಟು ಹೋಗಿದ್ದಾರೆ.

ಮೃತ್ಯು ಅಷ್ಟು ಬೇಗ ಅವರನ್ನರಸಿ ಬರುವುದೆಂದು ಯಾರೂ ಎಣಿಸಿರಲಿಲ್ಲ. ಅವರ ಒಡನಾಡಿಗಳು, ಅಭಿಮಾನಿಗಳು, ಅವರಿಂದ ಸ್ಫೂರ್ತಿ ಪಡೆದವರು, ಅವರ ಉತ್ತೇಜನದಿಂದ ಕನ್ನಡದ ಅಧ್ಯಯನ ಮತ್ತು ಬರವಣಿಗೆಗೆ ಕಾಲಿಟ್ಟವರು ಅಮೆರಿಕ, ಭಾರತ ಹಾಗು ಇತರ ದೇಶಗಳಲ್ಲಿ ಹರಡಿದ್ದಾರೆ. ಅವರ ಬಗ್ಗೆ ಈಗಾಗಲೇ ಹಲವಾರು ಲೇಖನಗಳು ಶ್ರದ್ಧಾಂಜಲಿಯ ರೂಪದಲ್ಲಿ ಪತ್ರಿಕೆಗಳಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟವಾಗಿವೆ. ಅವರು ಬರೆದ ಪುಸ್ತಕಗಳ ವಿಮರ್ಶೆಗಳೂ ಹಲವಾರು ಪ್ರಕಟವಾಗಿವೆಯಾದರೂ ಇನ್ನೂ ಅವರ ಇತ್ತೀಚೆಗೆ ಪ್ರಕಟವಾದ ಪುಸ್ತಕಗಳನ್ನು ಕುರಿತ ಗಂಭೀರ ವಿಮರ್ಶೆಗಳು ಬೆಳಕನ್ನು ಕಂಡಿಲ್ಲ.

ಹರಿ ಪುಸ್ತಕಪ್ರಿಯರಾಗಿದ್ದರು. ಮನೆಗೆ ಬಂದವರಿಗೆಲ್ಲ ತಾಂಬೂಲದ ಜೊತೆಗೆ ಒಂದು ಕನ್ನಡ ಪುಸ್ತಕವನ್ನು ಕೊಡುವುದು ಅವರ ಪದ್ಧತಿಯಾಗಿತ್ತು. ಅವರ ಪತ್ರಿಕೆಗೆ ಲೇಖನ ಬರೆದುಕೊಟ್ಟವರಿಗೆ ಅವರು ಕೊಡುತ್ತಿದ್ದ ಸಂಭಾವನೆಯೂ ಕನ್ನಡ ಪುಸ್ತಕಗಳೇ. ಮದುವೆ-ಮುಂಜಿ-ಹುಟ್ಟುಹಬ್ಬಗಳಿಗೂ ಕನ್ನಡ ಪುಸ್ತಕವನ್ನೇ ಉಡುಗೊರೆಯಾಗಿ ಕೊಡುವುದು ಅವರ ಪದ್ಧತಿಯಾಗಿತ್ತು. ಈ ಎಲ್ಲ ಕಾರಣಗಳಿಂದ ಅವರ ಕೆಲವು ಮಿತ್ರರೂ ಅಭಿಮಾನಿಗಳೂ ಸೇರಿ ಹರಿ ಅವರ ಬಗ್ಗೆ ಪ್ರಕಟವಾಗಿರುವ ಉತ್ತಮ ಲೇಖನಗಳನ್ನೆಲ್ಲ ಕ್ರೋಢೀಕರಿಸಿ, ಜೊತೆಗೆ ಕೆಲವು ಹೊಸ ಲೇಖನಗಳನ್ನೂ ಬರೆಯಿಸಿ ಪುಸ್ತಕರೂಪದಲ್ಲಿ ಪ್ರಕಟಿಸಬೇಕೆಂದು ಸಂಕಲ್ಪಿಸಿದ್ದೇವೆ. ಪುಸ್ತಕಪ್ರಿಯ ಹರಿಗೆ ಇದಕ್ಕಿಂತ ಹೆಚ್ಚು ಸೂಕ್ತವಾದ ಶ್ರದ್ಧಾಂಜಲಿ ಮತ್ತೊಂದಿಲ್ಲವೆಂದೇ ನಮ್ಮ ನಂಬಿಕೆ.

ಹೀಗೆ ಸಹಾಯ ಮಾಡಿ : ನಾನಾ ದೇಶಗಳಲ್ಲಿರುವ ಹರಿಹರೇಶ್ವರರ ಅಭಿಮಾನಿಗಳನ್ನೂ, ಮಿತ್ರರನ್ನೂ ಈ ನಮ್ಮ ಶ್ರದ್ಧಾಂಜಲಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಈ ಮೂಲಕ ಬಿನ್ನವಿಸಿಕೊಳ್ಳುತ್ತೇವೆ. ನೀವು ಹೇಗೆ ನಮಗೆ ಸಹಾಯ ಮಾಡಬಹುದು ಎಂದರೆ: (1) ನೀವು ಹಿಂದೆ ಹರಿ ಅವರ ಬಗ್ಗೆ ಅಥವಾ ಅವರ ಪುಸ್ತಕವೊಂದರ ಬಗ್ಗೆ ಬರೆದಿರುವ (ಪ್ರಕಟವಾಗಿದ್ದ/ವಾಗದಿದ್ದ) ಲೇಖನವಿದ್ದರೆ ಅದನ್ನು ನಮಗೆ ಕಳುಹಿಸಬಹುದು; (2) ಅವರೊಡನೆ ನಿಕಟ ಸಂಪರ್ಕಹೊಂದಿದ್ದವರು ಯಾವುದಾದರೋ ಹಂಚಿಕೊಳ್ಳಬಹುದಾದ ಹೃದಯಸ್ಪರ್ಶೀ ಘಟನೆ ಅಥವಾ ಅನುಭವವನ್ನು ಬರೆದು ಕಳುಹಿಸಬಹುದು; (3) "ಅಮೆರಿಕನ್ನಡ" ಪತ್ರಿಕೆಯು ನಡೆಯುತ್ತಿದ್ದಾಗಿನ ಪ್ರಸಂಗಗಳನ್ನು ಬರೆದು ಕಳುಹಿಸಬಹುದು; (4) ಅವರು ಸಂಪಾದಕರಾಗಿ ದುಡಿದ ಹಲವಾರು ಪ್ರಕಟಣೆಗಳೊಂದಿಗೆ ಒಂದಿಲ್ಲ ಒಂದು ರೀತಿ ಸಂಬದ್ಧವಿಟ್ಟುಕೊಂಡಿದ್ದವರು ಅವರ ಕಾರ್ಯವೈಖರಿಯ ಬಗ್ಗೆ ಅಥವಾ ಅವರ ಕೊಡುಗೆಯ ವಿವರಗಳನ್ನು ಹಂಚಿಕೊಳ್ಳಬಹುದು; (5) ಹರಿಯವರ ಅಪರೂಪದ ಚಿತ್ರಗಳಿದ್ದರೆ ಅವನ್ನು ನಮಗೆ ಕಳುಹಿಸಬಹುದು; (6) ನಾವು ಪ್ರಕಟಿಸುವ ಪುಸ್ತಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುಂಗಡವಾಗಿ ನಿಮ್ಮ ಸ್ವಂತ ಉಪಯೋಗಕ್ಕಾಗಲೀ ನಿಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಸಂಘಗಳಿಗಾಗಲೀ ಕೊಳ್ಳಬಹುದು; (7) ಪುಸ್ತಕ ಪ್ರಕಟಣೆಯ ಯೋಜನೆಗೆ ಒಂದಿಲ್ಲ ಒಂದು ರೀತಿ ಸಹಾಯಹಸ್ತ ನೀಡಬಹುದು (ಈ ಶ್ರದ್ಧಾಂಜಲಿ ಯೋಜನೆಗೆ ಸ್ವಂತ ಪ್ರೇರಣೆಯಿಂದ ಧನಸಹಾಯ ಮಾಡಲಿಚ್ಛೆಯುಳ್ಳವರು ಕೆಳಗಿನ ಅಂಚೆಯಲ್ಲಿ ನಮ್ಮನ್ನು ಸಂಪರ್ಕಿಸಿದಲ್ಲಿ ವಿವರಗಳನ್ನು ಒದಗಿಸಲಾಗುವುದು).

ಕಳಿಸಲು ಕೊನೆಯ ದಿನ : ನಿಮ್ಮ ಲೇಖನಗಳನ್ನು ಇತ್ತೀಚಿನ ಬರಹ' (ನುಡಿ ಅಥವಾ ಯೂನಿಕೋಡ್) ತಂತ್ರಾಂಶ ಉಪಯೋಗಿಸಿ ಬರೆದು ಕಳುಹಿಸಲು ಕೊನೆಯ ದಿನ ನವೆಂಬರ್ 30, 2010. ಚಿತ್ರಗಳು ಮುದ್ರಣಯೋಗ್ಯವಾಗಿರಬೇಕು. ಮಾರ್ಚ್ 2011ರಲ್ಲಿ ಅವರ 75ನೇ ಜನ್ಮದಿನದ ಸಂದರ್ಭದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ. ದಯವಿಟ್ಟು ಗಮನಿಸಿ, ಈ ಯೋಜನೆಗೆ ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಅವರ ಒಪ್ಪಿಗೆಯನ್ನು ಪಡೆದೇ ನಾವು ಮುಂದುವರೆದಿದ್ದೇವೆ. ನಾಗಲಕ್ಷ್ಮಿ ಅವರು ಈ ಪುಸ್ತಕ ಹೊಗಳುಗಬ್ಬ'ವಾಗಬಾರದೆಂದು ಆಶಿಸಿದ್ದಾರೆ. ಆದ್ದರಿಂದ, ಯಾವ ಅತಿಶಯೋಕ್ತಿ ಮತ್ತು ಉತ್ಪ್ರೇಕ್ಷೆಗಳಿಗೆ ಅವಕಾಶ ಕೊಡದ, ನಿಷ್ಪಕ್ಷಪಾತವಾದ, ವಸ್ತುನಿಷ್ಠವಾದ, ವ್ಯಕ್ತಿನಿಷ್ಠವಾದ ಬರಹಗಳನ್ನು ನಾವು ನಿರೀಕ್ಷಿಸುತ್ತೇವೆ. ಪುಸ್ತಕದ ಗಾತ್ರ ಮತ್ತಿತರ ಇತಿ-ಮಿತಿಗಳ ಕಾರಣದಿಂದ ನಮ್ಮ ಕೈಸೇರುವ ಲೇಖನಗಳನ್ನೆಲ್ಲಾ ಪ್ರಕಟಿಸಲು ಸಾಧ್ಯವಾಗದೇ ಹೋಗಬಹುದು, ಇದನ್ನು ಹರಿಯ ಗೆಳೆಯರು ಸಹೃದಯತೆಯಿಂದ ಒಪ್ಪುವರೆಂದು ನಂಬಿದ್ದೇವೆ.

ಲೇಖನಗಳನ್ನು ಕಳುಹಿಸಲು ವಿ-ಅಂಚೆ ವಿಳಾಸ: [email protected] ಮತ್ತು ಪತ್ರವ್ಯವಹಾರಕ್ಕೆ: M.S. Nataraja, 10510 Beechknoll Lane, Potomac, MD 20854, USA. (ಕರ್ನಾಟಕದಲ್ಲಿರುವ ಮಿತ್ರರು ಮೈಸೂರು ನಿವಾಸಿ ಶ್ರೀಮತಿ ನಾಗಲಕ್ಷ್ಮಿ ಅವರನ್ನು ನೇರವಾಗಿ ಸಂಪರ್ಕಿಸಬಹುದು. ದೂರವಾಣಿ: 812-2544841. ವಿ ಅಂಚೆ: [email protected]).

ಶ್ರದ್ಧಾಂಜಲಿ ಸಮಿತಿ: ಮೈ.ಶ್ರೀ. ನಟರಾಜ (301-424-4305), ಶ್ರೀವತ್ಸ ಜೋಶಿ (240-401-0945), ಮತ್ತು ಎಸ್. ಕೃಷ್ಣಮೂರ್ತಿ (301-983-0799). ಸಲಹೆಗಾರರು: ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಮತ್ತು ದಟ್ಸ್ ಕನ್ನಡ'ದ ಎಸ್. ಕೆ. ಶಾಮಸುಂದರ್.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ</a> | <a href=ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS" title="ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS" />ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

English summary
Friends of Shikaripura Harihareshwara plan to bring a memoir on him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X