ಚಂದನದಲ್ಲಿ ಮಿಡಿಯಲಿದೆ ಸಾಗರದಾಚೆ ಸಪ್ತಸ್ವರ
ವಿಭಿನ್ನ
ಕಾರ್ಯಕ್ರಮಗಳಿಗೆ ಹೆಸರಾಗಿರುವ ಚಂದನ ವಾಹಿನಿಯಲ್ಲಿ ''ಸಾಗರದಾಚೆ ಸಪ್ತಸ್ವರ'' ಎಂಬ ಸಂಗೀತ ಕಾರ್ಯಕ್ರಮ ಪ್ರಸಾರವಾಗಲಿದೆ.ಎಲೆಮರೆಯ ಕಾಯಿಗಳಂತಿರುವ ಅನಿವಾಸಿ ಗಾಯಕ ಮತ್ತು ಗಾಯಕಿಯರಿಗಾಗಿ ಉದ್ದೇಶಿಸಿರುವ ಸ್ಪರ್ಧಾತ್ಮಕ ಸಂಗೀತ ಕಾರ್ಯಕ್ರಮವಿದು. "ಎದೆ ತುಂಬಿ ಹಾಡುವೆನು" ಮಾದರಿಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. id="toptextpromo">ಒಟ್ಟು
26 ವಾರಗಳ ಕಾಲ ಈ ವಿಭಿನ್ನ ಕಾರ್ಯಕ್ರಮ ಧಾರಾವಾಹಿ ರೂಪದಲ್ಲಿ ಪ್ರಸಾರವಾಗಲಿದೆ. ಜುಲೈ 17ರಂದು ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿದ್ದು ಪ್ರತಿ ಶನಿವಾರ ರಾತ್ರಿ 8 ರಿಂದ 9 ಗಂಟೆಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶಿವಮೂರ್ತಿ ಕಿಲಾರ ಮತ್ತು ಸಪ್ತಗಿರಿ ಗೌಡ ಕಾರ್ಯಕ್ರಮದ ನಿರ್ಮಾಪಕರು. ನಿರ್ದೇಶನ ಅಶೋಕ್ ಪಾಟೀಲ್ ಅವರದು. id='are-slot-1' class='oiad oi-axt oiadv'> id='top-searched-articles'>ಮನೋಮೂರ್ತಿ,
ಜಯಂತ್ ಕಾಯ್ಕಿಣಿ, ರತ್ನಮಾಲಾ ಪ್ರಕಾಶ್, ಸುನೀತಾ ಮತ್ತು ಅನಿತಾ ಅನಂತಸ್ವಾಮಿ ಕಾರ್ಯಕ್ರಮದ ತೀರ್ಪುಗಾರರು. "ಸಾಗರದಾಚೆ ಸಪ್ತಸ್ವರ" ಕಾರ್ಯಕ್ರಮವನ್ನು ಹರಟೆಮಲ್ಲ ಪ್ರೊ.ಕೃಷ್ಣೇಗೌಡ ನಿರೂಪಿಸಲಿದ್ದಾರೆ. ಈ ವಿಭಿನ್ನ ರಿಯಾಲಿಟಿ ಶೋ ಪ್ರೇಕ್ಷಕರ ಮನತಣಿಸಲಿದೆ ಎಂಬ ವಿಶ್ವಾಸವನ್ನು ಶಿವಮೂರ್ತಿ ಕಿಲಾರ ವ್ಯಕ್ತಪಡಿಸಿದ್ದಾರೆ.











Click it and Unblock the Notifications