ಬ್ರಾಡ್ ಫಾರ್ಡಲ್ಲಿ ಮೇಳೈಸಿದ ಯಕ್ಷಗಾನ

ದೇವಿಕ ರಾವ್ ರವರು ಪುಂಡು ವೇಷದಲ್ಲಿ ಮತ್ತು ಅವರ ಸಹೋದರ ಡಾಕ್ಟರ್ ಬೆನಕ ಕಾರಂತ್ ರವರು ರಾಜವೇಶದಲ್ಲಿ ಗಣಪತಿ ಸ್ತುತಿಯನ್ನು ಬಹು ಭಕ್ತಿಯಿಂದ ನೆರವೇರಿಸಿ ಅಲ್ಲಿ ಸೇರಿದ್ದ ಪ್ರೇಕ್ಷಕರ ಮನಸನ್ನು ಸೂರೆಗೊಂಡರು.
ರಾಕ್ಷಸ ಬಣ್ಣದ ವೇಷದಲ್ಲಿ ಕುಮಾರ್ ಕುಂಟಿಕಾನಮಠ ಮತ್ತು ಅರುಣ್ ರಾಘವೇಂದ್ರರವರು ಸಾಂಪ್ರದಾಯಿಕವಾಗಿ ತೆರೆಯೊಂದಿಗೆ ಪ್ರವೇಶ ಮಾಡಿ ಸಮುದ್ರ ಸ್ನಾನ, ಶಿವ ಪೂಜೆ ದೃಶ್ಯವನ್ನು ಅಭಿನಯಿಸಿದರು. ಕೊನೆಯಲ್ಲಿ ಎಲ್ಲ ಕಲಾವಿದರು ಯುದ್ದ ಮತ್ತು ಮಂಗಳಪದಕ್ಕೆ ಕುಣಿದು ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇದೆಲ್ಲದರ ಸಂಯೋಜನೆಯನ್ನು ದೇವಿಕ ರಾವ್ ಮಾಡಿದರು. ವೇಷ ಭೂಷಣವನ್ನು ಕಟ್ಟಲು ನರೇಂದ್ರ ರಾವ್ ಮತ್ತು ಬೆನಕ ಕಾರಂತರ ಸ್ನೇಹಿತರು ಮಾಡಿದರು.
ದೇವಿಕ ರಾವ್ : ಮೂಲತಃ ಮಂಗಳೂರಿನವರಾದ ದೇವಿಕ ರಾವ್ ಅವರು ಭರತನಾಟ್ಯ, ಕುಚುಪುಡಿ ಮತ್ತು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿತು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಕರ್ನಾಟಕದ ಕಲಾಶ್ರೀಮಂತಿಕೆಯನ್ನು ತೋರ್ಪಡಿಸಿದ್ದಾರೆ. ಅಲ್ಲದೆ ಮಕ್ಕಳಿಗೆ ನಾಟ್ಯ ತರಬೇತಿಯನ್ನು ನೀಡುತ್ತಿದ್ದಾರೆ.
ಡಾಕ್ಟರ್ ಬೆನಕ ಕಾರಂತ್ : ವೃತ್ತಿಯಲ್ಲಿ ವೈದ್ಯರಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬ್ರಿಟನಿನಲ್ಲಿ ಕಳೆದ ಒಂದು ವರುಷದಿಂದ ನೆಲಿಸಿದ್ದಾರೆ. ಇವರು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿತು ಹಲವಾರು ಪ್ರದರ್ಶನವನ್ನು ಕೊಟ್ಟಿದ್ದಾರೆ. ದೇವಿಕ ರಾವ್ ಇವರ ಸಹೋದರಿ.
ಅರುಣ್ ರಾಘವೇಂದ್ರ : ಮೂಲತಃ ಬೆಂಗಳೂರಿನವರಾದ ಇವರು ಯಕ್ಷಗಾನದ ಪರಿಚಯವೇ ಇಲ್ಲದಿದ್ದರು ತಮ್ಮ ಧರ್ಮ ಪತ್ನಿಯವರಿಂದ ಯಕ್ಷಗಾನದ ಬಗ್ಗೆ ತಿಳಿದು, ಇಂದು ಯಕ್ಷಗಾನವನ್ನು ಕಲಿತು ಹಲವಾರು ಪ್ರದರ್ಶನವನ್ನು ನೀಡಿದ್ದಾರೆ. ಇವರು ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.
ಕುಮಾರ್ ಕುಂಟಿಕಾನಮಠ : ಯಕ್ಷಗಾನವನ್ನು ಬಾಲ್ಯದಲ್ಲಿ ಕಲಿತು ಹಲವಾರು ಪ್ರದರ್ಶನವನ್ನು ಕೊಟ್ಟಿದ್ದಾರೆ. ಬ್ರಿಟನಿನಲ್ಲಿ ಔಷಧ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸುಮಾರು ಒಂದು ದಶಕದಿಂದ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ.











Click it and Unblock the Notifications