ಅಮೆರಿಕ : ಮೊದಲ ಕನ್ನಡಿಗನಿಗೆ ಕೊನೆಯ ಮಾತು

Prof Rangaiah Rao, CA
ಹಳೆಯ ತಲೆಮಾರಿನ ಅಚ್ಚಕನ್ನಡಿಗ, ಉತ್ತರ ಕ್ಯಾಲಿಫೋರ್ನಿಯಾ ನಿವಾಸಿ ಮತ್ತು ಕನ್ನಡ ಬಂಧು ಪ್ರೊ. ರಂಗಯ್ಯ ರಾವ್ ಏಪ್ರಿಲ್ 22ರಂದು ಅಮೆರಿಕಾದಲ್ಲಿ ವಿಧಿವಶರಾದರು. ಅಮೆರಿಕಾದ ವಿವಿಧ ಶಿಕ್ಷಣಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮತ್ತು ಕಲಿಕಾ ಮಾರ್ಗದರ್ಶಿಯಾಗಿ ಬದುಕು ಸವೆಸಿದ ಅವರ ಅಗಲಿಕೆ ಸ್ಥಳೀಯ ಕನ್ನಡ ಸಮುದಾಯಕ್ಕೆ ಒಂದು ತುಂಬಲಾರದ ನಷ್ಟ. ರಂಗಯ್ಯನವರು ಮಡದಿ ಸರಳಾ, ಮಗ ಗೋಪಾಲ್, ಮಗಳು ಅಳಿಯ ಗೌರಿ ಪಾಲ್ ಗ್ರೆವಾಲ್ ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.

ನಮ್ಮೆಲ್ಲರಿಗೂ ಅಶ್ವಥ್ ಎಂದು ಚಿರಪರಿಚಿತರಾಗಿದ್ದ ಪ್ರೊ ರಂಗಯ್ಯ ರಾವ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಲ್ಲಿ ಅಶ್ವಥ್ ಅವರು ಬಿ.ಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಪ್ರಥಮರು. ಆಗ ಮೈಸೂರು ಪ್ರಾಂತ್ಯದಲ್ಲಿ ಬಿ.ಎಸ್‌ಸಿ ಪರೀಕ್ಷೆಯನ್ನು 60,000 ವಿದ್ಯಾರ್ಥಿಗಳು ಬರೆದಿದ್ದು, ಅವರಲ್ಲಿ ಅಶ್ವಥ್ ಅವರಿಗೆ ಮೊದಲ ರ‌್ಯಾಂಕ್ ದೊರಕಿದ್ದು ಹೆಮ್ಮೆಯ ಮಾತು. ಆನಂತರ ಅವರು ಐ.ಐ.ಎಸ್ಸಿಯಲ್ಲಿ ಡಿಪ್ಲೊಮ ಮುಗಿಸಿ, ಮುಂದೆ ರಾಜಸ್ತಾನದ ಪಿಲಾನಿಯ EERIಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು.

ವಿದ್ಯಾಭ್ಯಾಸ ಮುಗಿಸಿ ಅಶ್ವಥ್ ಅವರು ಭಾರತದಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಬಂದಿದ್ದು ಭಾರತೀಯರು ಅಮೇರಿಕಾಗೆ ಬರುವುದು ಅಪರೂಪವಾಗಿದ್ದ ಕಾಲದಲ್ಲಿ, 1959ನೆಯ ಇಸವಿಯಲ್ಲಿ. ಬರ್ಕ್‌ಲಿ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಮ್.ಎಸ್. ಓದಿ, ನಂತರ ಅಲ್ಲಿಯೇ ಅವರು ಪಿಎಚ್.ಡಿಯನ್ನು ಪಡೆದರು.

1966ರಲ್ಲಿ ಫೇರ್ ಚೈಲ್ಡ್ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ, ಸ್ಯಾನ್ ಹೊಸೆ ಸ್ಟೇಟ್ ಯೂನಿವರ್ಸಿಟಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನ ಪ್ರೊಫೆಸರ್ ಆಗಿ ಅಶ್ವಥ್ ಸೇರಿಕೊಂಡರು. ಅಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ, ಜಪಾನಿನ ಕ್ಯೋಟೋ ಯೂನಿವರ್ಸಿಟಿ ಮೂಂತಾದ ಕಡೆ ವಿಸಿಟಿಂಗ್ ಪ್ರೊಫೆಸರ್ ಆಗಿಯೂ ಅವರು ಕೆಲಕಾಲ ಕೆಲಸ ಮಾಡಿದ್ದಾರೆ.

ಅಶ್ವಥ್ ಅವರು ಬೇ ಏರಿಯಾದ ಪ್ರಮುಖ ಭಾರತೀಯರಲ್ಲಿ ಒಬ್ಬರಾಗಿದ್ದರು. 1984ರಲ್ಲಿ SIFAಸಂಸ್ಥೆಯ ಅಧ್ಯಕ್ಷರಾಗಿದ್ದ ಅಶ್ವಥ್ ಅವರು ಈ ಅವಧಿಯಲ್ಲಿ ಭಾರತದ ಅನೇಕ ಪ್ರಸಿದ್ಧ ಕಲಾವಿದರ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅಶ್ವಥ್ ಅವರು ಬೇ ಏರಿಯಾವನ್ನು ತಮ್ಮ ಮನೆಯಾಗಿಸಿಕೊಂಡ ಮೊದಲ ಕನ್ನಡಿಗರಲ್ಲಿ ಒಬ್ಬರು. ಕನ್ನಡ ಪ್ರೇಮಿಯಾಗಿದ್ದ ಇವರು 1982ರಲ್ಲಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ (KKNC) ಅಧ್ಯಕ್ಷರಾಗಿದ್ದರು.

ಅಶ್ವಥ್ ಮತ್ತು ಅವರ ಮಡದಿ ಡಾ.ಸರಳಾ ರಾವ್ ಅವರು ಪ್ರತಿ ವರ್ಷ ಏರ್ಪಡಿಸುತ್ತಿದ್ದ ಸಂತೋಷ ಕೂಟಗಳು, ಕನ್ನಡಿಗರು ಕಡಿಮೆಯಿದ್ದ 1970 ಮತ್ತು 80ರ ದಶಕಗಳಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಲು ಮತ್ತು ಕಷ್ಟಸುಖಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯಾಗುತ್ತಿತ್ತು. ಹರಟೆ, ಹಾಡು, ಹಾಸ್ಯ ಚಟಾಕಿಗಳು ತುಂಬಿದ್ದ ಈ ಕೂಟಗಳಲ್ಲಿ, ನಮ್ಮ ಇಲ್ಲಿನ ಬದುಕು ಮತ್ತು ನಾವು ಮಕ್ಕಳನ್ನು ಬೆಳೆಸುತ್ತಿರುವ ರೀತಿ ಇವುಗಳ ಬಗ್ಗೆ ಮಾತುಕತೆಯೂ ಇರುತ್ತಿತ್ತು. ತವರೂರಿನಿಂದ ದೂರವಿದ್ದು ನಾವು ಅನುಭವಿಸುತ್ತಿದ್ದ ಒಂಟಿತನವನ್ನು ಕೊಂಚ ಕಡಿಮೆ ಮಾಡುವುದಕ್ಕೆ ಈ ಕೂಟಗಳು ಸಹಾಯಕವಾಗಿದ್ದವು.

2003ರಲ್ಲಿ ಸ್ಯಾನ್ ಹೊಸೆ ಸ್ಟೇಟ್ ಯೂನಿವರ್ಸಿಟಿಯಿಂದ ನಿವೃತ್ತರಾದ ಮೇಲೆ, ಮೊಮ್ಮಕ್ಕಳಾದ ಕ್ಯಾಲ್ವಿನ್ ಮತ್ತು ಸರೀನ ಜೊತೆ ಮತ್ತು ಇತರ ಬಂಧುಗಳೊಡನೆ ಸಮಯ ಕಳೆಯುತ್ತಿದ್ದರು. ವ್ಯಾಯಾಮ, ಗಾಲ್ಫ್ ಮತ್ತು ಕನ್ನಡಿಗರೊಡನೆ ಕಲೆಯುವುದು ಅವರ ಆಸಕ್ತಿಯ ಹವ್ಯಾಸಗಳಲ್ಲಿ ಪ್ರಮುಖವಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+