ಬರ್ಮಿಂಗ್ ಹ್ಯಾಮಿನಲಿ ಮಳೆಯಲಿ ಜೊತೆಯಲಿ

ಆಂಗ್ಲನಾಡಿನಲ್ಲಿ ಮಳೆಗಾಲ ಮುಗಿದು ಬೇಸಿಗೆ ಶುರುವಾಗಿರುವಾಗ, ಇದೇನಿದು ಮಳೆಯಲಿ ಜೊತೆಯಲಿ ಎಂದು ಆಶ್ಚರ್ಯ ಪಡಬೇಡಿ. ಈ ಮೂಲಕ ನಾವು ತಿಳಿಸಬಯಸುವುದೆನೆಂದರೆ, ಕನ್ನಡಿಗರುಯುಕೆ ಸಂಘದವರ ಪ್ರೋತ್ಸಾಹ ಹಾಗು ಸಹಕಾರದೊಂದಿಗೆ, ಯುಗಾದಿ ಹಾಗು ಶ್ರೀರಾಮ ನವಮಿಯ ಪ್ರಯುಕ್ತ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಸೂಪರ್ ಹಿಟ್ ಕನ್ನಡ ಚಲನಚಿತ್ರ ಮಳೆಯಲಿ ಜೊತೆಯಲಿ ಆಂಗ್ಲನಾಡಿನಲ್ಲಿ ತೆರೆಕಾಣಿಸುತ್ತಿದ್ದೇವೆ. ಆದ ಕಾರಣ ತಾವೆಲ್ಲರು ಸಕುಟುಂಬ ಸಮೇತರಾಗಿ ಬಂದು, ಚಿತ್ರ ನೋಡಿ ಪ್ರೋತ್ಸಾಹಿಸಿ ಇನ್ನೂ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ಯುನೈಟೆಡ್ ಕಿಂಗ್ಡಂಗೆ ತರಿಸಲು ಬೆನ್ನುತಟ್ಟಬೇಕಾಗಿ ಕೋರಿಕೆ.
ಕಾರ್ಯಕ್ರಮದ ಪೂರ್ಣ ವಿವರ ಈ ಕೆಳಗಂಡಂತಿದೆ:
ಚಿತ್ರಪ್ರದರ್ಶನ ದಿನಾಂಕ : 11-04-2010
ಸಮಯ : ಬೆಳಿಗ್ಗೆ 11:00 ಘಂಟೆಗೆ
ಸ್ಥಳ : Piccadilly Cinema, Birmingham,
372 Stratford Road (A34),
Sparkhill, Birmingham - B11 4AB
Tel: 0121 773 1658
ಟಿಕೆಟ್ ಬೆಲೆ: ಕೇವಲ 7 (ಏಳು) ಪೌಂಡ್ ಮಾತ್ರ.
ಟಿಕೆಟ್ ಕಾದಿರುಸುವಿಕೆ: ನಿಮ್ಮ ಹೆಸರು ಹಾಗು ಬೇಕಿರುವ ಒಟ್ಟು ಟಿಕೆಟ್ ಸಂಖ್ಯೆಯೊಂದಿಗೆ [email protected] ವಿಳಾಸಕ್ಕೆ ಇ-ಮೇಲ್ ಮಾಡಿ. ದೂರವಾಣಿಯ ಮೂಲಕ ಕೂಡ ಟಿಕೆಟ್ ಅನ್ನು ಕಾದಿರಿಸಬಹುದು. ದೂರವಾಣಿ ಸಂಖ್ಯೆ: ಅಶ್ವಿನಿ - 07891016194 / ವಿನಯ್ - 07872964548.
ಚಲನಚಿತ್ರ ವಿಮರ್ಶೆಗಾಗಿ:
Once again, Golden star Ganesh shines
ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮ ಈ ಪ್ರಯತ್ನವನ್ನು ಸಾಕಾರಗೊಳಿಸಬೇಕಾಗಿ ನಮ್ರ ವಿನಂತಿ. ತಮ್ಮ ಸ್ನೇಹಿತರಿಗೂ ಹಾಗೂ ಇತರ ಕನ್ನಡಾಭಿಮಾನಿಗಳಿಗೂ ಈ ವಿಷಯವನ್ನು ಹರಡಬೇಕಾಗಿ ಕಳಕಳಯಿ ಮನವಿ. ಕನ್ನಡವನ್ನು ಬಳಸಿ, ಉಳಿಸಿ ಹಾಗು ಬೆಳೆಸಿ. ಜೈ ಕನ್ನಡ ಮಾತೆ.
ಗಂಧದಗುಡಿ ಮೂವೀಸ್ ಬಳಗ












Click it and Unblock the Notifications