ರಿಸೆಷನ್ ಗಾಯಕ್ಕೆ ಹಿಮಪಾತದ ಬರೆ

ಶ್ವೇತಭವನ ಸೇರಿದಂತೆ ಅನೇಕ ಸರಕಾರಿ ಮತ್ತು ಖಾಸಗಿ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ರಜೆ ಘೋಷಿಸಿವೆ. ಕೆಲವರು ಮನೆಯಿಂದಲೇ ಕೆಲಸಮಾಡುವಂತೆ ನೌಕರರಿಗೆ ಸೂಚಿಸಿದ್ದಾರೆ. ಆದರೆ, ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಹೊರಗೆ ಹಿಮ ಆವರಿಸಿ ಮನೆಯೊಳಗೆ ಕತ್ತಲು ಹೆಪ್ಪಾಗಿದೆ. ಕೊರೆಯುವ ಚಳಿಯಲ್ಲಿ ತತ್ತರಿಸುತ್ತಿರುವ ಜನಕ್ಕೆ ಮನೆಯಲ್ಲಿ ಹೀಟರ್ ಕೂಡ ಬಳಸಲಾಗದೆ ಪರಿತಪಿಸುವಂಥ ಸನ್ನಿವೇಶವನ್ನು ಪ್ರಕೃತಿಲಾಸ್ಯ ಸೃಷ್ಟಿಸಿದೆ. ವಿಪರೀತ ಚಳಿ ತಡೆಯಲಾಗದೆ ಅನೇಕರು ಮನೆಮಾರು ಬಿಟ್ಟು ಬೆಚ್ಚಗಿನ ಆದರೆ ಭಾರೀ ಖರ್ಚುವೆಚ್ಚದ ಹೋಟೆಲುಗಳಲ್ಲಿ ಆಶ್ರಯಪಡೆಯುಂತಹ ಅನಿವಾರ್ಯತೆ ತಲೆದೋರಿದೆ.
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಆದಂತೆ ಅಮೆರಿಕಾದಲ್ಲಿ ಹಿಮಹಾವಳಿ. ಬರುವ ಸೋಮವಾರದವರೆಗೂ ಶಾಲೆಗಳಿಗೆ ರಜೆ ಘೋಷಿಲಾಗಿದೆ. ಕಂಡುಕೇಳರಿಯ ಇಂಥ ಪ್ರಕೃತಿ ವಿಕೋಪಕ್ಕೆ ಅಧ್ಯಕ್ಷ ಬಾರಾಕ್ ಒಬಾಮ Snowmageddon ಎಂದು ನಾಮಕರಣ ಮಾಡಿ willing to brave a blizzard Snowmageddon here in D.C ಎಂದು ಪ್ರಜೆಗಳಿಗೆ ಕರೆಕೊಟ್ಟು ಶ್ವೇತ ಭವನದಲ್ಲಿ ಕಂಬಳಿಹೊದ್ದು ಮಲಗಿಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬಿದ್ದಿರುವ ಹಿಮವನ್ನು ತೊಡೆದುಹಾಕಲು ಕಾರ್ಮಿಕರು ಅಹೋರಾತ್ರಿ ಶ್ರಮಿಸುತ್ತಿದ್ದರೂ ಸ್ಥಿತಿ ತಹಬಂದಿಗೆ ಬರುತ್ತಿಲ್ಲ. ಈ ಚಿತ್ರ ನಿಮಗೆ ಶಿಕಾಗೋದಿಂದ ಶುರುವಾಗಿ ಪೂರ್ವ ಕರಾವಳಿಯ ರಾಜ್ಯಗಳನ್ನು ಸುತ್ತುವರೆದು ಉತ್ತರ ಕೆರೋಲಿನಾವರೆಗೂ ಕಾಣಿಸುತ್ತದೆ.
ಹಿಮವೃಷ್ಟಿಗೆ ಸಿಲುಗಿ ತತ್ತರಿಸಿರುವ ರಾಜ್ಯಗಳಲ್ಲಿ ವಾಷಿಂಗ್ ಡಿಸಿ ಪ್ರದೇಶ ಪ್ರಮುಖವಾಗಿದೆ. ಮೇರಿಲ್ಯಾಂಡ್, ವರ್ಜೀನಿಯಾ, ರೆಸ್ಟನ್, ಇಂಡಿಯಾನ, ಶಿಕಾಗೋ, ಪೆನ್ಸಿಲ್ವೇನಿಯಾ, ನ್ಯೂ ಜೆರ್ಸಿ ಮುಂತಾದ ಪ್ರದೇಶಗಳಲ್ಲಿ ಸ್ಥಿತಿ ಚಿಂತಾಜನಕ. ಡಿಸಿ ಪ್ರದೇಶದ ಡ್ಯೂಲಸ್ ವಿಮಾನ ನಿಲ್ದಾಣದಲ್ಲಿ 32 ಅಂಗುಲ ಹಿಮ ದಾಖಲಾಗಿದ್ದರೆ, ವಿಯಟ್ನಾಮ್ ಸಮರವೀರರ ಸ್ಮಾರಕ 16 ಅಂಗುಲ ಹಿಮದಲ್ಲಿ ಹೂತುಹೊಗಿದೆ. ಹಿಮಕಸವನ್ನು ಗುಡಿಸಿಹಾಕುವವರು ಇಲ್ಲಿ ಯಾರೂ ಇಲ್ಲವೇ ಎಂದು ಚಳಿಯಲ್ಲಿ ನಡುಗುತ್ತಿರುವ ಲಿಂಕನ್ ಪ್ರತಿಮೆ ಸ್ಥಳೀಯ ಆಡಳಿತಗಾರರನ್ನು ಅಣಕಿಸುತ್ತಿದೆ.
ಆದರೆ, ಬಜೆಟ್ ಇಲ್ಲ ಸ್ವಾಮಿ. ಸ್ಥಳೀಯ ರಾಜ್ಯದ ಬೊಕ್ಕಸಗಳು ಖಾಲಿಖಾಲಿ. ವಿಶೇಶವಾಗಿ ಪ್ರಕೃತಿ ವಿಕೋಪಗಳನ್ನು ಮೆಟ್ಟಿನಿಲ್ಲುವ ಪಡೆಗಳಿಗಾಗಿ ವೆಚ್ಚಮಾಡಲು ಹಣದ ಮುಗ್ಗಟ್ಟು. ಹಿಮ ಒರೆಸಲು ಅಗತ್ಯವಾದ ಉಪ್ಪು ಮತ್ತು ಮರಳಿನ ಕೊರತೆ ಎದ್ದುಕಾಣುತ್ತಿದೆ. ಪಶ್ಚಿಮದ ಪೆಸಿಫಿಕ್ ಅಂಚಿನ ಜೀವನ ಚಕ್ರಕ್ಕೆ ಹೋಲಿಸಿದರೆ ಪೂರ್ವದ ಅಟ್ಲಾಂಟಿಕ್ ತಟಾಕದ ಬದುಕು ಎಷ್ಟೋ ವಾಸಿ ಎಂದು ಭಾವಿಸಿ ನಿಟ್ಟುಸಿರು ಬಿಡುತ್ತಿದ್ದ ಈ ಭಾಗದ ಜನತೆಯ ಆಶಾವಾದಕ್ಕೆ ಪೆಟ್ಟು ಬಿದ್ದಿದೆ. ರಿಸೆಷನ್ ಗಾಯಕ್ಕೆ ಹಿಮಪಾತದ ಬರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications