ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂರಿಗೆ ಭಯಮುಕ್ತ ಭಾರತ ಇನ್ನೂ ಕನಸು!

By * ಅಶ್ರಫ್ ಮಂಜ್ರಾಬಾದ್, ಸೌದಿ ಅರೇಬಿಯಾ
|
Google Oneindia Kannada News

India Fraternity Forum, Damam, Saudi Arabia
ದಮಾಮ್ (ಸೌದಿ ಅರೇಬಿಯಾ), ಫೆ. 2 : ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತಹ ಭಾರತದ ಮುಸ್ಲಿಂ ಸಮುದಾಯ ಸ್ವಾತಂತ್ರ್ಯಾನಂತರ ತಮ್ಮ ಕನಸಿನ ಹಸಿವುಮುಕ್ತ ಮತ್ತು ಭಯಮುಕ್ತ ಭಾರತದಲ್ಲಿ ಜೀವನ ನಡೆಸಲಾಗದಿರುವುದಕ್ಕೆ ರಾಜಕೀಯ ಪಕ್ಷಗಳು ತೋರಿದ ಮಲತಾಯಿ ಧೋರಣೆಯ ಕಾರಣದಿಂದಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್: ಕೆ.ಎಂ. ಶರೀಫ್ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಫ್ರೆಟರ್ನಿಟಿ ಫೋರಮ್, ದಮಾಮ್ ಘಟಕ ಹಮ್ಮಿಕೊಂಡಿದ್ದ ಮೀಸಲಾತಿ ಮತ್ತು ಮುಸ್ಲಿಮರ ಹಕ್ಕುಗಳು ಎಂಬ ವಿಚಾರಗೋಷ್ಠಿ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದ ಅವರು ಭಾರತದ ಸಂವಿಧಾನ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಭದ್ರತೆಯ ಜೊತೆಗೆ ಇಲ್ಲಿನ ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗಗಳಿಗೆ ಸೂಕ್ತ ರಕ್ಷಣೆಯ ಭರವಸೆಯನ್ನು ನೀಡಿದ್ದರೂ ಇಲ್ಲಿ ಆಡಳಿತ ನಡೆಸುತ್ತಿರುವ ಮತ್ತು ಆಡಳಿತ ನಡೆಸಿದ ಪಕ್ಷಗಳು ಅನುಸರಿಸಿದ ಫ್ಯಾಸಿಸ್ಟ್ ಮತ್ತು ಸಂವಿಧಾನ ವಿರೋಧಿ ನೀತಿಗಳಿಂದಾಗಿ ಈ ಸಮುದಾಯದ ಜನರು ಇಂದಿಗೂ ಅಭದ್ರತೆಯ ನಡುವೆ ಬದುಕಬೇಕಾಗಿದೆ ಎಂದು ಹೇಳಿದರು.

ರಂಗನಾಥ್ ಮಿಶ್ರಾ ವರದಿಯನ್ವಯ ಮುಸ್ಲಿಂ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿದ ಅವರು ಮುಸ್ಲಿಂ ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಇಂಡಿಯಾ ಫ್ರೆಟರ್ನಿಟಿ ಫೋರಮ್ ಉತ್ತರ ವಲಯದ ಅಧ್ಯಕ್ಷರಾದ ಮೌಲಾನ ಜಫರುಲ್ಲಾ ಖಾಸಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಂಡಿಯಾ ಫ್ರೆಟರ್ನಿಟಿ ಫೋರಮ್ ದಮಾಮ್ ವಿಭಾಗದ ಸಂಯೋಜಕರಾದ ಜನಾಬ್ ಮೂಸಾ ಕುಟ್ಟಿ, ಆಲ್ ಇಂಡಿಯಾ ಇಮಾಂ ಕೌನ್ಸಿಲ್ ಸದಸ್ಯರಾದ ಜನಾಬ್: ಸಾದಿಕ್ ಫೈಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜನಾಬ್ ಅಬ್ದುಲ್ ಖಾದರ್ ಕಿರಾತ್ ಪಾರಾಯಣ ಮಾಡಿದರೆ ಜನಾಬ್ ಮಹಮ್ಮದ್ ಶರೀಫ್ ಸ್ವಾಗತ ಭಾಷಣ ಮಾಡಿದರು. ಜನಾಬ್ ಮಹಮ್ಮದ್ ಅಶ್ರಫ್ ಜುಬೈಲ್ ಕಾರ್ಯಕ್ರಮ ನಿರೂಪಿಸಿದರೆ ಜನಾಬ್ ಮಹಮ್ಮದ್ ಅಶ್ರಫ್ ಧನ್ಯವಾದ ಸಮರ್ಪಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X