ದುಬೈನಲ್ಲಿ ಪ್ರಾಣೇಶ್, ಭಜಂತ್ರಿ ಹಾಸ್ಯೋತ್ಸವ

ದುಬೈನಲ್ಲಿರುವ ಕನ್ನಡಿಗರು ಕೂಡ ಹಾಸ್ಯ ಕಾರ್ಯಕ್ರಮ 'ಹಾಸ್ಯೋತ್ಸವ' ನಡೆಸಿ, ಬಂದ ಹಣದಲ್ಲಿ ಖರ್ಚುವೆಚ್ಚಗಳನ್ನು ಸರಿದೂಗಿಸಿ, ಉಳಿದ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ. ಈ ಹಣ ಮೈಸೂರು ಸಿಟಿಜನ್ಸ್ ಫೋರಂನ ಪ್ರಕೃತಿ ವಿಕೋಪ ನಿಧಿಗೆ ಜಮಾ ಆಗಲಿದೆ.
ಈ ಉದಾತ್ತ ಧ್ಯೇಯವನ್ನು ಬೆಂಬಲಿಸಲು ಮತ್ತು ಉದಾರವಾಗಿ ಹಣ ನೀಡಲು ಮುಂದಾಗಬೇಕು ಮತ್ತು ಕಾರ್ಯಕ್ರಮಕ್ಕೆ ಸ್ನೇಹಿತರು, ಬಂಧು ಬಾಂಧವರನ್ನು ಕರೆತರಬೇಕೆಂದು ಆಯೋಜಕರು ದುಬೈ ಕನ್ನಡಿಗರನ್ನು ಕೇಳಿಕೊಂಡಿದ್ದಾರೆ.
'ನಾವು ನಮ್ಮ ಕನ್ನಡ' ಆಯೋಜಿಸಿರುವ ಹಾಸ್ಯೋತ್ಸವಕ್ಕೆ ಕರ್ನಾಟಕದ ಖ್ಯಾತ ಹಾಸ್ಯ ಕಲಾಕಾರರಾದ ಗಂಗಾವತಿ ಪ್ರಾಣೇಶ್ ಮತ್ತು ರವಿ ಭಜಂತ್ರಿ ಅವರು ಆಗಮಿಸಲಿದ್ದಾರೆ. ಇತ್ತೀಚೆಗೆ ತಾನೆ ಪ್ರಾಣೇಶ್ ಅವರು ಸಿಂಗಪುರದಲ್ಲಿ ಕೂಡ ಹಾಸ್ಯದ ಸುನಾಮಿ ಹರಿಸಿ ಬಂದಿದ್ದರು.
ಕಾರ್ಯಕ್ರಮ ಇದೇ ಶುಕ್ರವಾರ, ಡಿಸೆಂಬರ್ 4ರಂದು ಜೆಎಸ್ಎಸ್ ಇಂಟರ್ನ್ಯಾಶನಲ್ ಸ್ಕೂಲ್ ಅಲ್ ಬರ್ಶಾ (ದಕ್ಷಿಣ), ದುಬೈನಲ್ಲಿ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.












Click it and Unblock the Notifications