97446americaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97446americaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg97446americaಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg97446americaಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif97446americaನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!/nri/article/2008/1226-the-storytellers-rekha-hegade.htmlಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.* ರೇಖಾ ಹೆಗಡೆ ಬಾಳೇಸರ, ಫ್ಲಾರಿಡಾ, ಅಮೆರಿಕಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ 33719http://kannada.oneindia.com/img/2008/12/26-storyteller1.jpg38247ಅಮೆರಿಕನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg38247ಅಮೆರಿಕಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg38247ಅಮೆರಿಕಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38247ಅಮೆರಿಕಡಯಟ್ ಕೋಕ್ ಪ್ಲಸ್,ಪೋಷಕಾಂಶ ಮೈನಸ್ /news/2008/12/25/diet-coke-plus-is-vitamins-minus-fda.htmlವಾಷಿಂಗ್ಟನ್, ಡಿ.25: 'ಡಯಟ್ ಕೋಕ್ ಪ್ಲಸ್' ತಂಪು ಪಾನೀಯದಲ್ಲಿ ಹೆಚ್ಚುವರಿ ಪೋಷಕಾಂಶಗಳಿವೆ ಎಂದು ಪ್ರಚಾರ ಮಾಡಿದ್ದ ಕೋಕಾಕೋಲಾ ಕಂಪನಿಗೆ ಅಮೆರಿಕದ ಕೇಂದ್ರ ಆರೋಗ್ಯ ನಿಯಂತ್ರಣ ಇಲಾಖೆ ತಪರಾಕಿ ಕೊಟ್ಟಿದೆ. ಡಯಟ್ ಕೋಕ್ ಪ್ಲಸ್ ನಲ್ಲಿ ಖನಿಜಾಂಶಗಳು, ಪೋಷಕಾಂಶಗಳು ಇವೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದಕ್ಕೆ ಇಲಾಖೆ ಎಚ್ಚರಿಕೆಯನ್ನೂ ಕೊಟ್ಟಿದೆ. ಯಾವುದೇ ಆಹಾರ ಉತ್ಪನ್ನದಲ್ಲಿ ಅದರ ಮೂಲ ಪೋಷಕಾಂಶಕ್ಕಿಂತ 33697http://kannada.oneindia.com/img/2008/12/25-diet-coke-plus1e.jpg38247ಅಮೆರಿಕಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!/column/majavani/2009/0105-mecale-sons-caught-in-hindutva-lab.htmlಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ 33881http://kannada.oneindia.com/img/2009/01/05-hindutva2.jpgnews"> ಡಲ್ಲಾಸ್ ನಲ್ಲಿ ನಾಗಶ್ರೀ ಸಂಗೀತ ಆರಂಗ್ರೇಟಮ್ | Classical Music | Nagashree | NRI kannadati | Dallas TX | Mallige kannada sangha - ಡಲ್ಲಾಸ್ ನಲ್ಲಿ ನಾಗಶ್ರೀ ಸಂಗೀತ ಆರಂಗ್ರೇಟಮ್ - Kannada Oneindia

ಡಲ್ಲಾಸ್ ನಲ್ಲಿ ನಾಗಶ್ರೀ ಸಂಗೀತ ಆರಂಗ್ರೇಟಮ್

Nagashree music concert in Dallas (photo by Krishna Murthy)
ರಂಗ ಪ್ರವೇಶ ಪದ್ದತಿ ಭರತನಾಟ್ಯಕ್ಕೆ ಸೀಮಿತವಾದರ ಅಮೆರಿಕದಲ್ಲಿ ಸಂಗೀತಕ್ಕೂ ರಂಗ ಪ್ರವೇಶ(ಕಛೇರಿ ಪ್ರವೇಶ)ಮಾಡುವ ವಾಡಿಕೆಯಿದೆ. ಸಾಂಪ್ರದಾಯಿಕವಾಗಿ ಹಲವಾರು ವರುಷ ಸಂಗೀತ ಕಲಿತ ಮೇಲೆ ಅವರಿಗಾಗಿ ಆರಂಗ್ರೇಟಮ್ (ರಂಗಪ್ರವೇಶ) ಏರ್ಪಡಿಸಲಾಗುತ್ತದೆ. ಸಪ್ತ ಸಾಗರದಾಚೆ ಇರುವ ಅಮೆರಿಕಕ್ಕೆ ಭಾರತದಿಂದ ಲಲಿತ ಕಲೆಯ ಸೊಗಡನ್ನು ಈ ಮಣ್ಣಿಗೆ ತರಬೇಕಾದರೆ ಹೆಚ್ಚಿನ ಶ್ರಮ ಪಡಲೇಬೇಕು. ಈ ಪರಿಶ್ರಮವನ್ನು ಗುರುತಿಸುವ ಸಲುವಾಗಿ ನಡೆಸುವ ಒಂದು ಕಛೇರಿ ಇದಾಗಿರುತ್ತದೆ.

ಹಲವಾರು ವರುಷಗಳಿಂದ ವಿದ್ಯಾಶಂಕರ್ ದಂಪತಿಗಳಿಗೆ ಇಲ್ಲಿರುವ ಭಾರತೀಯರಿಂದ ಬರುತಿದ್ದ ಪ್ರಶ್ನೆಯೇ ಇದು. ನಿಮ್ಮ ಮಗಳು ಕುಂ.ನಾಗಶ್ರೀ ಸುಶ್ರಾವ್ಯವಾಗಿ ಹಾಡುತ್ತಾಳೆ ಅವಳಿಗೆ ಸಂಗೀತದ ಆರಂಗ್ರೇಟಮ್ ಯಾವಾಗ ಮಾಡುತ್ತೀರಿ? ಎಂದು. ಅದಕ್ಕೆ ಉತ್ತರವಾಗಿ ಕಳೆದ ಒಂದು ವರುಷದಿಂದ ತಯಾರಿ ನಡೆಸಿದ್ದರು. ಡಲ್ಲಾಸ್ ನಗರದ ಸಂಗೀತ ಪ್ರೇಮಿಗಳು ಎದುರು ನೋಡುತ್ತಿದ್ದ ದಿನ ಆಗಸ್ಟ್ 2, 2009. ಇಲ್ಲಿನ ಚಿಲ್ದ್ರೆನ್ ಕೋರ್ಟ್ಯಾರ್ಡ್ ಥಿಯೇಟರ್ ನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ಎಂದರೆ ಸುಮಾರು ಮೂರೂವರೆಗೇ ಜನರು ಸೇರಲು ಪ್ರಾರಂಭಿಸಿದರು. ಸುಮಾರು 300 ಅಸನಗಳನ್ನೊಳಗೊಂಡ ರಂಗಮಂದಿರದ ಎಲ್ಲಾ ಆಸನಗಳು ಭರ್ತಿಯಾಗಿ ನಿಂತು ನೋಡುವ ಪರಿಸ್ಥಿತಿ.

ದಕ್ಷಿಣ ಭಾರತದ ದೇವಾಲಯದ ದೃಶ್ಯ ಹಿಂಬದಿಯಲ್ಲಿದ್ದರೆ, ಅಕ್ಕ ಪಕ್ಕ ಚೆನ್ನಕೇಶವ ದೇವಾಲಯದ ಕಂಬದಂತೆ ಕಾಣುವ ಇಳಿಬಿದ್ದ ಪರದೆಗಳು. ಇದರ ಮಧ್ಯೆ ಅಪ್ಪಟ ದಕ್ಷಿಣ ಭಾರತದ ಸಂಪ್ರದಾಯದಂತೆ ಹಳದಿ ಬಣ್ಣಕ್ಕೆ ಕೆಂಪು ಅಂಚಿನ ಸೀರೆ ತೊಟ್ಟು, ಮೈಸೂರು ಮಲ್ಲಿಗೆಯನ್ನು ಮುಡಿದು ಸ್ಥಳೀಯ ಸಂಗೀತದ ಘಟಾನುಘಟಿಗಳ ಎದುರು ಹಾಡಲು ಸಿದ್ದ. ದರ್ಬಾರ್ ರಾಗದ ವರ್ಣದಿಂದ ಕಾರ್ಯಕ್ರಮದ ಆರಂಭ. ನಾಟರಾಗದ ಶ್ರೀ ಮಹಾಗಣಪತಿಂ ಹಾಡುವ ಮೂಲಕ ಗಜಾನನನ್ನು ಪ್ರಾರ್ಥಿಸಿದರು ನಾಗಶ್ರೀ.

ರಾಗ ಮಧ್ಯಮಾವತಿಯಲ್ಲಿ ತ್ಯಾಗರಾಜರ ರಾಮಕಥಾ ಸುಧಾವನ್ನು ಸಂಪೂರ್ಣವಾಗಿ ಸ್ವರಪ್ರಸ್ತಾರಗಳೊಂದಿಗೆ ಹಾಡಿ ಮುಗಿಸಿದಾಗಲಂತೂ ಸಭೆಯಲ್ಲಿ ಕಿವಿಗಡಚಿಕ್ಕುವಷ್ಟು ಕರತಾಡನ. ಕಛೇರಿಯ ಕೊನೆಯಲ್ಲಿ ಕನ್ನಡ ಸಂಗೀತ ಸಾಹಿತ್ಯಕ್ಕೆ ಕೊಡುಗೆ ಇತ್ತ ಪ್ರತಿಯೊಬ್ಬರನ್ನು ಸ್ಮರಿಸುತ್ತಾ ರಾಘವೇಂದ್ರ ಸ್ವಾಮಿಗಳ ಕೃತಿ, ಬಸವಣ್ಣನವರ ವಚನ, ಪುರಂದರದಾಸರ ಕೃತಿಗಳನ್ನು ಮಧುರ ಕಂಠದಿಂದ ಹಾಡಿ ಎಲ್ಲರ ಮನ ಗೆದ್ದರು ನಾಗಶ್ರೀ. ಸತತ ಮೂರು ಗಂಟೆಗಳು ವಿರಾಮವಿಲ್ಲದೇ ನಡೆದ ಕಛೇರಿ ಇದಾಗಿತ್ತು. ಪ್ರತಿಯೊಂದು ಹಾಡು ಮುಗಿದಾಗಲು ಜನರ ಉದ್ಗಾರ. ಸ್ಪಷ್ಟ ಉಚ್ಛಾರಣೆ, ಸ್ವರಪ್ರಸ್ತಾರ, ರಾಗಮಾಧುರ್ಯವನ್ನು ಆಲಿಸಿದಾಗ ಇವಳು ಅಮೆರಿಕಾದಲ್ಲಿ ಹುಟ್ಟಿ ಬೆಳೆದ ಹುಡುಗಿಯೇ ಎನ್ನುವ ಅಚ್ಚರಿ. ಕಾರ್ಯಕ್ರಮ ಮುಗಿದಕೂಡಲೇ ಡಾ. ಬಾಲಮುರಳಿಕೃಷ್ಣರವರ ಶಿಷ್ಯೆಯರಲ್ಲಿ ಒಬ್ಬರಾದ, ನಡೆದಾಡುವ ಸರಸ್ವತಿ ಎಂದೇ ಖ್ಯಾತಿಯಾಗಿರುವ ಶ್ರೀಮತಿ ಲಲಿತ ಮಾಮಿ ನಾಗಶ್ರೀಯನ್ನು ಅಭಿನಂದಿಸುವುವರಲ್ಲಿ ಮೊದಲಿಗರಾಗಿದ್ದರು.

ನಾಗಶ್ರೀ ಬಂದಿರುವುದು ಸಂಗೀತಗಾರರ ಕುಟುಂಬದಿಂದ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಗಾಯಕಿಯಾದ ತಾಯಿ ಜಯಶ್ರೀಯವರೇ ಮೊದಲ ಗುರು. ದೊಡ್ಡಮ್ಮ ಶ್ರೀಮತಿ ಗಾಯತ್ರಿ ಕೂಡ ಗಾಯಕಿ ಹಾಗು ಸದ್ಯ ಮೈಸೂರು ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದ ಮುಖ್ಯಸ್ಥೆ ತಾತ ನಂಜುಂಡಯ್ಯನವರು ವಯೊಲಿನ್ ವಾದಕರು. ಮೈಸೂರು ಸಹೋದರರೆಂದೇ ಖ್ಯಾತಿಯಾಗಿರುವ ಮೈಸೂರ್ ಮಂಜುನಾಥ್ ಹಾಗು ಮೈಸೂರ್ ನಾಗರಾಜ್ ಅವರ ತಂದೆಯವರ ಒಡನಾಡಿಗಳು ಹಾಗು ಆಪ್ತ ಮಿತ್ರರು ಹೌದು.

ಬಾಲ್ಯದಿಂದಲೇ ನಾಗಶ್ರೀಗೆ ಸಂಗೀತದಲ್ಲಿ ವಿಶೇಷ ಆಸಕ್ತಿ. 2004 ನೇ ಇಸವಿಯಲ್ಲಿ ಸದ್ಯ ಮೈಸೂರಿನಲ್ಲಿ ಇರುವ ಶ್ರೀಮತಿ.ಎಂ.ವಿ. ಅನಿತಾ ಅವರಿಗೆ ನಾಗಶ್ರೀಯನ್ನು ಪರಿಚಯಿಸಲಾಯಿತು. ಅವರಿಂದ ಶಾಸ್ತ್ರೋಕ್ತವಾಗಿ ಸಂಗೀತ ಕಲಿಕೆ ಪ್ರಾರಂಭವಾಯಿತು. ಎಲ್ಲ ಮಕ್ಕಳು ಅಜ್ಜಿ ತಾತನ ಮನೆಗೆ ಬೇಸಿಗೆ ರಜಾ ಕಳೆಯಲು ಹೋದರೆ ನಾಗಶ್ರೀ ಅಮೇರಿಕಾದಿಂದ ಸಂಗೀತ ಕಲಿಯಲು ಮೈಸೂರಿಗೆ ಬರುತಿದ್ದಳು. ನಂತರ ಸ್ಥಳೀಯ ಗಾಯಕಿಯರಾದ ಶ್ರೀಮತಿ ಇಂದು ಮಾಮಿ ಹಾಗು ದೀಪ ಶ್ರೀನಿವಾಸ್ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆದಳು. ಕಳೆದ ಎರಡು ತಿಂಗಳಿಂದ ಅಮೇರಿಕಾ ಪ್ರವಾಸದಲ್ಲಿರುವ, ಆಕಾಶವಾಣಿಯಲ್ಲಿ 'ಎ' ದರ್ಜೆ ಗಾಯಕಿಯಾದಂಥ ವಿದುಷಿ ಶ್ರೀಮತಿ ಪಿ. ರಮಾ ಅವರಿಂದ ಸತತವಾಗಿ ಸಂಪೂರ್ಣ ಕಛೇರಿ ನಡೆಸಲು ಬೇಕಾದ ಅಂಶಗಳನ್ನು ಕಲಿತಳು.

ಸಂಗೀತವಲ್ಲದೆ ವಿಜ್ಞಾನ ಸಂಶೋಧನೆಯಲ್ಲಿ ಹೆಚ್ಟು ಆಸಕ್ತಿ ಹೊಂದಿರುವ ನಾಗಶ್ರೀ ಸ್ಥಳೀಯ ವಿಶ್ವವಿದ್ಯಾನಿಲಯದ ಆರೋಗ್ಯ ವಿಜ್ಞಾನ ಇಲಾಖೆಯ ಮುಖ್ಯಸ್ಥರಾಗಿರುವ ಅಲಕಾನಂದ ಬಸು ಹಾಗು ಡಾ. ಚಂದ್ರಮೋಹನ್ ಅವರೊಡಗೂಡಿ ಕೀಮೋ ಥೆರಪಟಿಕ್ ಡ್ರಗ್ ರೆಸಿಸ್ಟೆನ್ಸ್ ಹಾಗು ಚರ್ಮ ಖಾಯಿಲೆಯಲ್ಲಿ ಒಂದಾದ ಲುಪಸ್ ಅನ್ನು ಪ್ರಥಮ ಹಂತದಲ್ಲಿ ಕಂಡು ಹಿಡಿಯುವ ಬಗ್ಗೆ ಸಂಶೋಧನೆ ನಡೆಸಿ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದ್ದಾಳೆ. 12ನೇ ತರಗತಿಯನ್ನು ಅತಿ ಹೆಚ್ಚು ಅಂಕಗಳನ್ನು ಪಡೆಯುವುದರೊಂದಿಗೆ ಪೂರ್ಣ ವಿದ್ಯಾರ್ಥಿ ವೇತನದೊಂದಿಗೆ ಇಲ್ಲಿನ ವೈದ್ಯಕೀಯ ಪೂರ್ವ ಶಿಕ್ಷಣಕ್ಕೆ ಸೇರುವ ಸಿದ್ದತೆಯಲ್ಲಿದ್ದಾಳೆ. ಕನ್ನಡ, ಕರ್ನಾಟಕದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಈ ಬಾಲೆ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡದ ಒಂದು ಸಾಲು ಹಾಕಲು ಮರೆಯಲಿಲ್ಲ ಹಾಗು ತನ್ನ ಪ್ರತಿಭೆಗೆ ಅವಕಾಶ ವೇದಿಕೆಯನ್ನು ಕಲ್ಪಿಸಿಕೊಟ್ಟ ಸ್ಥಳೀಯ ಮಲ್ಲಿಗೆ ಕನ್ನಡ ಸಂಘವನ್ನು ಸ್ಮರಿಸಲು ಮರೆಯಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+