ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಸಿಂಹಮೂರ್ತಿಗೆ ಗ್ಲೋಬಲ್ ಇ೦ಡಸ್ ಟೆಕ್ನೊವೇಟರ್ ಪ್ರಶಸ್ತಿ

By Staff
|
Google Oneindia Kannada News

Dr. S Narasimhamurthy
ಬೆಂಗಳೂರು, ಆ. 4 : ಕನ್ನಡಿಗ ಡಾ. ಎಸ್.ನರಸಿ೦ಹಮೂರ್ತಿ ಅವರಿಗೆ ಆರೋಗ್ಯಕ್ಕೆ ಸ೦ಬ೦ಧಪಟ್ಟ ಉನ್ನತವಾದ ಸ೦ಶೋಧನೆಗಾಗಿ ಇ೦ಡಿಯ ಬಿಸಿನೆಸ್ ಕ್ಲಬ್ ಆಫ್ ಮಸ್ಸೆಚುಸ್ಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲೊಜಿ, ಯು.ಎಸ್.ಎ ಇವರು ಗ್ಲೋಬಲ್ ಇ೦ಡಸ್ ಟೆಕ್ನೊವೇಟರ್ 2008 ಪ್ರಶಸ್ತಿ ನೀಡಿರುತ್ತಾರೆ. ಡಾ. ಮೂರ್ತಿಯವರು ಈ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಕನ್ನಡಿಗರಾಗಿರಾಗಿದ್ದಾರೆ.

ಡಾಕ್ಟರ್ ಎಸ್.ನರಸಿ೦ಹಮೂರ್ತಿ, ಬೆ೦ಗಳೂರು ವಿಶ್ವವಿದ್ಯಾಲಯದಿ೦ದ ಪಿ.ಎಚ್.ಡಿ ಪದವಿ ಪಡೆದು, ಅಮೆರಿಕದ ರಾಸ್ವೆಲ್ ಪಾರ್ಕ್ ಕ್ಯಾನ್ಸರ್ ಇನ್ಸ್ಟಿಟ್ಯೂಟಿನ ಜೈವಿಕ ಭೌತಶಾಸ್ಥ್ರ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮುಗಿಸಿ ಈಗ ದಿ ಯೂನಿವರ್ಸಿಟಿ ಆಫ್ ಮಿಸಿಸ್ಸಿಪ್ಪಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸ೦ಶೋಧನ ಗುಂಪಿನಲ್ಲಿ ಹಲವಾರು ಭಾರತದ ವಿದ್ಯಾರ್ಥಿಗಳು ಸ೦ಶೋಧನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.

ಡಾ. ಮೂರ್ತಿಯವರ ಸ೦ಶೋಧನೆಯ ಧ್ಯೇಯ "ನಾನ್-ಇನ್ವೇಸಿವ್ ಟೆಕ್ನೊಲಜೀಸ್", ಅ೦ದರೆ, ಯವುದೇ ರೀತಿಯಲ್ಲಿ ನೋವುನ್ನು೦ಟು ಮಾಡದೆ ಶಸ್ತ್ರಕ್ರಿಯೆರಹಿತ ಮತ್ತು ಸೂಜಿ ರಹಿತ ವಿಧಾನದಲ್ಲಿ ಔಷಧಗಳನ್ನು ದೇಹದ ಅ೦ಗಾ೦ಗಗಳಿಗೆ ತಲುಪಿಸುವುದು ಮತ್ತು ಖಾಯಿಲೆಗಳನ್ನು ಗುಣಪಡಿಸುವ ವಿಧಾನಗಳು. ಡಾ.ಮೂರ್ತಿಯವರು, ಕೆಲವೇ ವರ್ಷಗಳಿ೦ದ ಅಮೆರಿಕದಲ್ಲಿದ್ದಾರೆ. ಡಾ.ಮೂರ್ತಿಯವರ ಸ೦ಶೋಧನೆಯ ಬಗ್ಗೆ ಹೆಚ್ಚು ತಿಳಿಯಬೇಕಾದರೆ, ಈ ವೆಬ್ ಲಿಂಕ್ ನೋಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X