97446americaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97446americaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg97446americaಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg97446americaಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif97446americaನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!/nri/article/2008/1226-the-storytellers-rekha-hegade.htmlಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.* ರೇಖಾ ಹೆಗಡೆ ಬಾಳೇಸರ, ಫ್ಲಾರಿಡಾ, ಅಮೆರಿಕಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ 33719http://kannada.oneindia.com/img/2008/12/26-storyteller1.jpg123850ugadiಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg123850ugadiಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg123850ugadiಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್/movies/heroine/2009/03/16-kannadada-kiran-bedi-clears-censor.htmlಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು 35242http://kannada.oneindia.com/img/2009/03/16-malashri-kiran-bedi2.jpg123850ugadiಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg123850ugadiಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್/movies/headlines/2009/03/19-om-prakash-raos-kiran-bedi.htmlಓಂ ಪ್ರಕಾಶ್ ರಾವ್, ಮಾಸ್ ನಿರ್ದೇಶಕ ಎಂದೇ ಖ್ಯಾತರಾದವರು. ಓಂ ನಿರ್ದೇಶನದ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಕಥೆಯ ಆಯ್ಕೆ, ಪ್ರೇಕ್ಷಕರನ್ನು ಸೆಳೆಯುವ ಜಾಣ್ಮೆ ಓಂ ಪ್ರಕಾಶ್ ಗೆ ಇದೆ ಎಂದರೆ ತಪ್ಪಾಗಲಾರದು.ಮಾಸ್ ಚಿತ್ರಗಳ ಮಾಸ್ಟರ್ ಮೈಂಡ್ ಆಗಿರುವ ಓಂ ಪ್ರಕಾಶ್ , ರಾಮು ನಿರ್ಮಾಣದಲ್ಲಿ ಮಾಡುತ್ತ್ತಿರುವ ಐದನೇ ಚಿತ್ರ ಕಿರಣ್ ಬೇಡಿ. ಲಾಕಪ್ ಡೆತ್ 35365http://kannada.oneindia.com/img/2009/03/19-omprakash1.jpg390316festivals of karnatakaಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/recipe/sweet/2009/0325-sajjappa-sweet-recipe-for-ugadi.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35501http://kannada.oneindia.com/img/2009/03/25-sajjappa2.jpg390316festivals of karnatakaಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/festivals/ugadi/2009/0325-sajjappa-sweet-recipe.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35502http://kannada.oneindia.com/img/2009/03/25-sajjappa2.jpg390316festivals of karnatakaಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ/festivals/ugadi/2009/0414-sauramana-ugadi.htmlಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ, ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು. ಇಂದು ಸೌರಮಾನ ಯುಗಾದಿಯ ಸಂಭ್ರಮ.* ವಾಣಿ ರಾಮದಾಸ್, ಸಿಂಗಪುರಬೆಳಿಗ್ಗೆ ಶಾಲೆಯ ಬಳಿ ಸಿಕ್ಕ ಅನುಪಮಾ ಘೋಷ್ "ನಬ ಬರ್ಶ್" ಶುಭಾಶಯ ಕೋರಿದಳು. 35931http://kannada.oneindia.com/img/2009/04/14-ugadi-sauramana1.jpg390316festivals of karnatakaಫಿಲಡೆಲ್ಫಿಯಾ ಕನ್ನಡಿಗರ ಹರುಷದ ಯುಗಾದಿ/nri/article/2009/0420-ugadi-navodaya-kannada-sangha-philadelphia.htmlಏಪ್ರಿಲ್ 11ರಂದು ಶನಿವಾರ ನವೋದಯ ಕನ್ನಡ ಕೂಟದ ಸದಸ್ಯರಿಗೆಲ್ಲ ಯುಗಾದಿ ಸಂಭ್ರಮ. ಫಿಲಡೆಲ್ಫಿಯಾ ನಗರದ ಸುತ್ತ ಮುತ್ತ ಇರುವ ಕನ್ನಡಿಗರ ಈ ಕೂಟದ 2ನೇ ವಾರ್ಷಿಕೋತ್ಸವದ ಸಂತೋಷದಲ್ಲಿ ಪಾಲುದಾರರಾಗಲು ಎಲ್ಲರೂ ಬಹಳ ಉತ್ಸಾಹದಿಂದ ಒಟ್ಟುಗೂಡಿದ್ದರು. ಮರಿಸಿದ್ದಯ್ಯ ದಂಪತಿಗಳು ಕರ್ನಾಟಕದಿಂದ ತರಿಸಿದ್ದ ಬೇವು ಬೆಲ್ಲ ಹಂಚಿಕೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಬಹಳ ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಅಭ್ಯಸಿಸಿದ್ದ ಮಕ್ಕಳಿಗೂ, ಹಿರಿಯರಿಗೂ ಈ 36085http://kannada.oneindia.com/img/2009/04/20-philadelphia-ugadi1.jpg390316festivals of karnatakaಕವನ : ದೈವ ದೇವಿ ಶಕ್ತಿ ನನ್ನಲಿ ಜಾಗೃತವಾಗು/festivals/dasara/2009/0917-kannada-poem-by-moolky-nagabhushana.htmlವಿಷಯ ವಿಷಮದಿಬೀಸಿಹ ಪಂಕ ಶಂಕಾ IIವಿIIವಂಚನೆಯ ಮಂಚಇಂದ್ರಿಯ ಪ್ರಪಂಚಸ್ವೇಚಾ ಪಂಚೆಂದ್ರಿಯನರಕಾತ್ಮಾ ಹಂದರ IIವಿIIಹೃದಯ ಕಮಲದಲಿನೆಲೆಸಿಹ ದೇವಿಯೇದಯ ಕೋಮಲದಿಜಾಗೃತಿ ಜಾಗೃತವಾಗು IIವಿIIಅಸುರ ಸಂಹಾರನಿನದು ಸಂಸ್ಕಾರಸಂಸಾರ ಸಾಗರಕೆನಮಗೆ ನಿ ಆಧಾರ IIವಿIIನಿ ನೆಲೆಸೆ ನನ್ನಲಿನಶಿಸುವ ಅಸುರನುಅವ ಆಳು ಕಾಳಾಗಿನಿನ್ನ ಕಾಳಾಲಾಗುವ IIವಿIIದೈವ ದೇವಿ ಶಕ್ತಿನನ್ನಲಿ ಜಾಗೃತವಾಗುಈ ಶಕ್ತಿ ಯುಕ್ತಿಯೇಈ ಜೀವಕೆ ಮುಕ್ತಿ IIವಿII39235http://kannada.oneindia.com/img/2009/09/17-nagabhushan-moolki1.jpgnews"> ಫಿಲಡೆಲ್ಫಿಯಾ ಕನ್ನಡಿಗರ ಹರುಷದ ಯುಗಾದಿ | Ugadi | Philadelphia | Navodaya Kannada Sangha - ಫಿಲಡೆಲ್ಫಿಯಾ ಕನ್ನಡಿಗರ ಹರುಷದ ಯುಗಾದಿ - Kannada Oneindia

ಫಿಲಡೆಲ್ಫಿಯಾ ಕನ್ನಡಿಗರ ಹರುಷದ ಯುಗಾದಿ

Cultural programme by children
ಏಪ್ರಿಲ್ 11ರಂದು ಶನಿವಾರ ನವೋದಯ ಕನ್ನಡ ಕೂಟದ ಸದಸ್ಯರಿಗೆಲ್ಲ ಯುಗಾದಿ ಸಂಭ್ರಮ. ಫಿಲಡೆಲ್ಫಿಯಾ ನಗರದ ಸುತ್ತ ಮುತ್ತ ಇರುವ ಕನ್ನಡಿಗರ ಈ ಕೂಟದ 2ನೇ ವಾರ್ಷಿಕೋತ್ಸವದ ಸಂತೋಷದಲ್ಲಿ ಪಾಲುದಾರರಾಗಲು ಎಲ್ಲರೂ ಬಹಳ ಉತ್ಸಾಹದಿಂದ ಒಟ್ಟುಗೂಡಿದ್ದರು. ಮರಿಸಿದ್ದಯ್ಯ ದಂಪತಿಗಳು ಕರ್ನಾಟಕದಿಂದ ತರಿಸಿದ್ದ ಬೇವು ಬೆಲ್ಲ ಹಂಚಿಕೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಬಹಳ ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಅಭ್ಯಸಿಸಿದ್ದ ಮಕ್ಕಳಿಗೂ, ಹಿರಿಯರಿಗೂ ಈ ದಿನ ತಮ್ಮ ಕಲೆಗಳನ್ನು, ಕರ್ನಾಟಕದ ಸಂಸ್ಕೃತಿಯ ವಿವಿಧ ರೂಪಗಳನ್ನು ಪ್ರದರ್ಶಿಸುವ ಸದವಕಾಶ. ಮೊದಲಿಗೆ ಸತ್ಯಪ್ರಸಾದ್ ಹಾಗು ಪ್ರತಿಭಾ ಅವರಿಂದ ಯುಗಾದಿ ಹಬ್ಬದ ಆಚರಣೆಯ ಕಿರು ಪರಿಚಯ. ನಂತರ ಲಕ್ಶ್ಮಿ ಮತ್ತು ಸಂಯುಕ್ತ ಅವರಿಂದ ಪುಷ್ಪಾಂಜಲಿ ನೃತ್ಯದ ಮೂಲಕ ದೇವರಿಗೆ ನಮನ. ಆಮೇಲೆ ವೇದಿಕೆ ಮೇಲೆ ಬಂದ ಪುಟ್ಟ ಅನನ್ಯ, ರಾಮಾಯಣ ಹಾಗು ಮಹಾಭಾರತ ಮಹಾಕಾವ್ಯಗಳನ್ನು ಎರಡು ಶ್ಲೋಕಗಳ ರೂಪದಲ್ಲಿ ಸ್ಪಷ್ಟವಾಗಿ ಉಚ್ಚರಿಸಿ ಎಲ್ಲರ ಮೆಚ್ಚುಗೆ ಗಳಿಸಿದಳು. ಈಗ ಮೂರು/ನಾಲ್ಕು ವಯಸ್ಸಿನ ಶ್ರೇಯ, ಸುನಿಧಿ ಮತ್ತು ಸಾಧ್ಯ ಮಂಗನ ವೇಷದಲ್ಲಿದ್ದ ಆಯುಷ್ ಜೊತೆಯಲ್ಲಿ ಆಟವಾಡಲು ಬಂದರು. ಅವರು "ಗೇರ್ ಗೇರ್ ಮಂಗಣ್ಣ" ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಪ್ರತೀ ಸಲದ ಕಾರ್ಯಕ್ರಮಗಳಂತೆ, ಈ ಸಲವೂ ಮಕ್ಕಳ ಕಾರ್ಯಕ್ರಮಗಳದ್ದೇ ಮೇಲುಗೈ. ಜಿ.ಪಿ.ರಾಜರತ್ನಂ ಅವರು ಮಕ್ಕಳ ಪದ್ಯಗಳನ್ನು ಬರೆಯುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ವಿವರಿಸಿ ಅವರ ಮೊದಲ ಪದ್ಯ "ಬಣ್ಣದ ತಗಡಿನ ತುತ್ತೂರಿ"ಯನ್ನು ಪ್ರಸ್ತುತ ಪಡಿಸಿದ್ದು ನಿಖಿಲ್. ಕಣ್ತುಂಬ ಪ್ರೀತಿ ತರುವುದು ಯುಗಾದಿ, ಸಂಬಂಧಗಳನ್ನು ಬೆಸೆಯುವುದು ಯುಗಾದಿ ಎಂದು ರಿಶಿ ಚಿತ್ರದ "ಎಲ್ಲೆಲ್ಲೂ ಹಬ್ಬ ಹಬ್ಬ" ಹಾಡಿಗೆ ನರ್ತನ ಮಾಡಿದ ಮಕ್ಕಳು ಅಂಕುಶ್, ಅಕ್ಷಯ್, ತರಣ್, ಅಕ್ಷತಾ, ನಿಶಾ, ಅನನ್ಯ ಮತ್ತು ಶ್ರೇಯ. ಈ ಸೊಗಸಾದ ನೃತ್ಯ ನಿರ್ದೇಶನ ಮಾಡಿದ್ದು ಆರತಿ. ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ "ಕೆರೆಯ ನೀರನು" ಗೀತೆ ಹಾಡಿದ್ದು ಶ್ರೇಯಾ ಹಾಗು ಅಂಕುಶ್.

ಮೇಘಾ ತನ್ನ ಪಿಯಾನೊದಲ್ಲಿ ನುಡಿಸಿದ ಸದಾ ಮಧುರ ಗೀತೆಗಳಾದ "ಹಿಂದೂಸ್ಥಾನವು ಎಂದೂ ಮರೆಯದ" ಮತ್ತು "ಹೂವೊಂದು ಬಳಿಬಂದು" ಹಾಡುಗಳು ಬಹಳ ಇಂಪಾಗಿದ್ದವು. ನಂತರ ಕೋಲು ಕೋಲಣ್ಣ ಕೋಲೆ ಎಂದು ಕೋಲಾಟ ಆಡಲು ಬಂದ ಮಕ್ಕಳು ಅಂಕಿತ, ಆಕಾಂಕ್ಷಾ, ಜಾಹ್ನವಿ, ಸೀಮಾ, ಹಿಮವತ್, ನೀಲ್, ನಿಹಾರ್, ಪ್ರಣವ್, ಸುನಿಲ್ ಮತ್ತು ಶ್ರೀರಾಮ್. ಮಕ್ಕಳ ಕರಾರುವಕ್ಕಾದ ನೃತ್ಯವನ್ನು ನೋಡಿ ನೃತ್ಯ ನಿರ್ದೇಶಿಸಿದ ಪ್ರತಿಭಾ ಹಾಗು ತಂದೆ ತಾಯಿಯರು ಸಂತೋಷದ ಕಡಲಲ್ಲಿ ತೇಲಾಡುತ್ತಿದ್ದರು. "ಅಡವಿ ದೇವಿಯ" ಹಾಡಿಗೆ ಕಾಡು ಜನರಂತೆ ಹೆಜ್ಜೆ ಹಾಕಿದ ಸಂಜನಾ ಹಾಗು ಸುಶಾ, ಪ್ರೇಕ್ಷಕರೂ ಕುಳಿತಲ್ಲೆ ಹೆಜ್ಜೆ ಹಾಕುವಂತೆ ಮಾಡಿದರು. ತಮ್ಮದೇ ಒಂದು ಪುಟ್ಟ ವಾದ್ಯ ತಂಡ ಮಾಡಿಕೊಂಡು "ಬೆಳ್ಳಿಯ ರಾಜ ಬಾರೊ" ಹಾಡನ್ನು ಪ್ರಸ್ತುತ ಪಡಿಸಿದ್ದು ಹಿಮವತ್, ಜಾಹ್ನವಿ, ಆಕಾಂಕ್ಷಾ, ಸೀಮಾ ಹಾಗು ಅಂಕಿತ.

ಮಕ್ಕಳಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ತೋರಿಸುವುದು ಈಗ ಹಿರಿಯರ ಸರದಿ. ಯುಗಾದಿ ಬರುವುದು ಚೈತ್ರ ಮಾಸದ ಪ್ರಾರಂಭದಲ್ಲಿ, ವಸಂತ ಋತುವಿನ ಆಗಮನ, ಎಲ್ಲೆಲ್ಲೂ ಮಲ್ಲಿಗೆಯ ಘಮ ಘಮ. ಮಲ್ಲಿಗೆಯನು ಚೆಲ್ಲುತ್ತಾ ನೃತ್ಯ ಮಾಡಿದ್ದು ಲಕ್ಷ್ಮಿ, ಸಂಯುಕ್ತ, ಪ್ರತಿಭಾ, ಸೌಮಿನಿ, ಮೇಖಲಾ, ಸುಜಾತ, ಪ್ರಿಯಾ ಹಾಗು ಕಲಾ. ಕೆಲವು ಹೊಸ ಚಿತ್ರದ ಹಾಡುಗಳನ್ನು ಸೇರಿಸಿ ಹಾಡಿದವರು ಆರತಿ, ಸಪ್ನ, ರಶ್ಮಿ, ಕವಿತಾ, ಶ್ಯಾಮಲ ಮತ್ತು ವಾಣಿ. ಇವರಿಗೆ ಪಕ್ಕವಾದ್ಯ ನೀಡಿದ್ದು, ಮೃದಂಗದಲ್ಲಿ ಪ್ರಮೋದ್ ಮತ್ತು ಗಿಟಾರಿನಲ್ಲಿ ಚಂದನ್. "ಗ್ಲೋ ಶಾರ್ಟ್ಸ್" ವಸ್ತುವಿನ ವಿವಿಧ ರೀತಿಯ ಜಾಹೀರಾತುಗಳನ್ನು ಪ್ರಸ್ತುತ ಪಡಿಸಿದವರು ಸತ್ಯಪ್ರಸಾದ್, ಪ್ರಮೋದ್, ಜಯರಾಮ್, ಮಂಜುನಾಥ್ ಮತ್ತು ಹರೀಶ್. ಅನೇಕ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದವರು ಸತ್ಯಪ್ರಸಾದ್, ಶೃತಿ, ಶರ್ಮಿಳಾ ಹಾಗು ಪ್ರವೀಣ್.

ನಿರರ್ಗಳವಾಗಿ ಕನ್ನಡ ಮಾತನಾಡುವ ಸವಾಲನ್ನು ಪ್ರತಿಭಾ ಪ್ರೇಕ್ಷಕರ ಮುಂದೆ ಇಟ್ಟಾಗ ನಗುಮೊಗದಿಂದ ಸ್ವೀಕರಿಸಿ ವೇದಿಕೆ ಮೇಲೆ ಬಂದವರು ಕೇಶವ್, ಶ್ರೀನಿವಾಸ್, ಸುಧಾಕರ್, ಬಸವರಾಜ್ ಮತ್ತು ನಾಗಭೂಷಣ್. ಯಾರಿಗೂ ಶುದ್ದ ಕನ್ನಡದಲ್ಲಿ ಒಂದು ನಿಮಿಷ ಸಹ ಮಾತಾಡಲು ಸಾಧ್ಯವಿಲ್ಲ ಎಂದು ನಿರೀಕ್ಷಿಸಿದ್ದ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಎಲ್ಲರೂ ಅಚ್ಚುಕಟ್ಟಾಗಿ ಕನ್ನಡ ಮಾತನಾಡುವ ಪ್ರಯತ್ನ ಮಾಡಿ ಮೆಚ್ಚುಗೆ ಗಳಿಸಿದರು. ಒಳ್ಳೆಯ ಪೈಪೋಟಿ ನಡುವೆ ಬಸವರಾಜ್ ಅವರು ಒಂದೂವರೆ ನಿಮಿಷ ಮಾತನಾಡಿ ಸ್ಪರ್ಧೆಯನ್ನು ಗೆದ್ದರು. ಕಾರ್ಯಕ್ರಮವನ್ನು ನಿರೂಪಿಸಿದ ಸತ್ಯಪ್ರಸಾದ್ ಅವರು ತಮ್ಮ ಹಾಸ್ಯ, ಪುರೋಹಿತರ ಕ್ರಿಕೆಟ್ ಆಟದ ವರದಿ ಹಾಗೂ ಮಂಗಳೂರು ಕನ್ನಡ ಮಾತುಗಳೊಂದಿಗೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಭಾರತದ ಹಾಗೂ ಅಮೇರಿಕದ ರಾಷ್ಟ್ರಗೀತೆಗಳನ್ನು ಪಿಯನೋದಲ್ಲಿ ನುಡಿಸಿದ ಸಂಜನಾ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದಳು.

ಇಂಥ ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಲು ಬಹಳ ಶ್ರಮ ಪಟ್ಟ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಸಲ್ಲಿಸಿ ಎಲ್ಲ ಊಟಕ್ಕೆ ಹೊರಟರು. ರುಚಿಯಾದ ಬಿಸಿಬೇಳೆಬಾತ್, ಕೇಸರಿಬಾತ್, ಮೊಸರನ್ನ, ಪಕೋಡ ಊಟ ಸೊಗಸಾಗಿತ್ತು. ನಾಲ್ಕು ಸ್ನೇಹಿತೆಯರು ಕೂಡಿ ಪ್ರಾರಂಭಿಸಿದ ಈ ಕೂಟ ಎರಡು ವರ್ಷಗಳಲ್ಲಿ ಇಷ್ಟು ಮಟ್ಟಿಗೆ ಬೆಳೆದಿರುವುದು ಬಹಳ ಸಂತೋಷದ ವಿಷಯ. ಎಲ್ಲರೂ ಹೀಗೆ ಸೇರಿ ಹಬ್ಬಗಳನ್ನು ಆಚರಿಸುತ್ತಿರುವುದು, ನಾವೆಲ್ಲಾ ಒಂದೇ ಕುಟುಂಬದವರು ಅನ್ನುವ ಭಾವನೆ ಮೂಡಿಸಿದೆ. ಬಹಳ ಜನರಲ್ಲಿ ಹುದುಗಿದ್ದ ಕಲೆ ಬೆಳಕಿಗೆ ಬಂದಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತಿದೆ. ಈ ಎಲ್ಲಾ ಭಾವನೆಗಳೊಂದಿಗೆ ಜೂನ್ ತಿಂಗಳಲ್ಲಿ ಆಯೋಜಿಸಿರುವ ವಿಹಾರಕ್ಕಾಗಿ ಎದುರುನೋಡುತ್ತಾ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+