ಮಾರ್ಚ್ 22ರಂದು 'ಕನ್ನಡ ಕಲಿ' ದಿನಾಚರಣೆ

ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಇವೆ. ಕನ್ನಡ ಕಲಿತು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸ ಬನ್ನಿ. ಇದರಲ್ಲಿ ಭಾಗವಹಿಸುತ್ತಿರುವ 60ಕ್ಕೂ ಹೆಚ್ಚು ಮಕ್ಕಳಿಗೆ ಶುಭ ಕೋರಿ ಹಾರೈಸೋಣ. ತಪ್ಪದೆ ಬನ್ನಿ. ಬರಲಾಗದಿದ್ದರೆ ಸಂದೇಶ ಕಳುಹಿಸಿ : ಶಾಂತಾರಾಮ ಕೇಶವ (562)787-3258 ಅಥವಾ [email protected], [email protected]ಗೆ ಈಮೇಲ್ ಮಾಡಿರಿ.
ಕನ್ನಡ ಕಲಿಯ ಮೊದಲ ಅಧ್ಯಾಯ ಸೆಪ್ಟೆಂಬರ್ 2000ರಲ್ಲಿ ಅರ್ವೈನ್ ನಗರದಲ್ಲಿ ಪ್ರಾರಂಭವಾಯಿತು. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಲ್ಲಿ ಹುದುಗಿದ ಆಸೆಗೆ ಅದು ಜೀವ ತುಂಬಿತು. ಕೆಲವೇ ತಿಂಗಳಲ್ಲಿ ಇನ್ನೂ ನಾಲ್ಕು ಅಧ್ಯಾಯಗಳು ಈ ತೆಂಕಣ ಪ್ರದೇಶದ ವಿಸ್ತಾರದಲ್ಲಿ ಹುಟ್ಟಿಕೊಂಡವು. ವಾರಾಂತ್ಯದಲ್ಲಿ ನಿಯತವಾಗಿ ಸೇರುತ್ತ ಸಾಮಾನ್ಯ ಪಠ್ಯಕ್ರಮವನ್ನು ರೂಪಿಸಿಕೊಂಡವು. ಮಕ್ಕಳು ಕನ್ನಡ ಕಲಿಯುವುದರ ಜೊತೆ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಲ್ಲಿನ ಜನರಿಗೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಕೂಡ ಸಮರ್ಥರಾಗಿದ್ದಾರೆ.
ನಿಮ್ಮ ಮಕ್ಕಳು ಕನ್ನಡ ಮಾತನಾಡಬೇಕೆ? ನೀವು ಕನ್ನಡ ಕಲಿಸಬಯಸುತ್ತಿರಾ? ಹೊರದೇಶದಲ್ಲಿ ಕನ್ನಡ ಕಲಿಸಲು ನಿಮ್ಮಲ್ಲಿ ಉತ್ತಮ ಯೋಜನೆಗಳು ಇವೆಯೆ? ಕೂಡಲೆ ಒಂದು ಈ-ಮೇಲ್ ರವಾನಿಸಿ: [email protected]
ಪೂರಕ ಓದಿಗೆ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications