• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹದವಾಗಿ ಬೆರೆತ ಚಿಕೋರಿ ಕಾಫಿಯ ಧ್ಯಾನ

By Staff
|

"ಇವತ್ತು ಯಾಕೋ ಕಾಫಿ ದಿನಾ ಕುಡಿಯೋ ತರ ಇಲ್ವಲ್ಲಾ", ಬೇರೆನಾ ಕಾಫಿ ಪುಡಿ ಅಥ್ವಾ ಚಿಕೋರಿ ಜಾಸ್ತಿ ಆಗಿದೆಯಾ" ಎಂಬುದು ಬೆಳಗ್ಗೆ ಬೆಳಗ್ಗೆ ಕಾಫಿ ರುಚಿಸದ ದಿವಸ ಕಾಫೀ ಪ್ರಿಯರ ಹೇಳುವ ದೂರು. ಈ ದೂರು ಬರೀ ನನ್ನ ಮನೆಯದಲ್ಲ, ಕಾಫಿ ಮೋಹಕ್ಕೆ ಬಿದ್ದ ಮನೆ ಮನೆ ಕಥೆ. ನೀವೇನೆ ಹೇಳಿ, ಬೆಳಿಗ್ಗೆಯ ಫಸ್ಟ್ ಡೋಸ್ ಕಾಫಿ ಸರಿ ಇಲ್ಲ ಅಂದ್ರೆ ಆ ದಿನವೆಲ್ಲಾ ಅದೇನೋ ಗೊಣಗಾಟ, ಕಸಿವಿಸಿ ಆಮೇಲೆ ಕುಡಿಯುವ ಕಾಫಿ ಹೇಗೇ ಇದ್ರೂ ಚಲ್ತಾ ಹೈ, ಆದ್ರೆ ಫಸ್ಟ್ ಡೋಸ್ ಕಾಫಿ ಮಾತ್ರ ಸ್ಟ್ರಾಂಗ್ ಆಗಿ ನಸು ಕಹಿ-ಸಿಹಿ, ಬಿಸಿಯಾಗಿ ಸವಿದರೇನೇ ಚೆಂದ.

ವಾಣಿ ರಾಮದಾಸ್, ಸಿಂಗಪುರ

ಇದು ನನ್ನಂತೆ ಕಾಫೀ ಪ್ರಿಯರ ಖಾಫೀ ಅನುಭವದ ಮಾತಿದು. ಕೆಲವು ದು-ಅಭ್ಯಾಸಗಳಿದೆಯಲ್ಲಾ ಅದು ಹುಟ್ಟುಗುಣ ಸುಟ್ಟರೂ ಹೋಗೋಲ್ಲ ಎಂಬುದರ ಫಲವಿದು. ಮುಂಜಾನೆಯ ಸೊಗಡಿನ ಕಾಫಿ ಉದರದ ಪೆಟ್ರೋಲ್ ತಾನೇ? ಬರೀ ಕಾಫಿ-ಪುಡಿ ಡಿಕಾಕ್ಷನ್ ಅದೇಕೋ ನೀರು-ನೀರು ಎನಿಸುತ್ತೆ. ಜೊತೆಗೆ ಚಿಕೋರಿ ಬೆರೆಸಿದರೆ ಸ್ಟ್ರಾಂಗ್ ಬರುತ್ತೆ. ಮೊದಲು ಕಹಿ ನಂತರ ಸಿಹಿ ಎಂದು ಕಾಫೀ ಜೊತೆ-ಜೊತೆಯಲೀ ಬೆರೆಯುವ ಚಿಕೋರಿ ಬಗ್ಗೆ, ಕ್ಷಮಿಸಿ ಚಿಕೋರಿ ಬಗ್ಗೆ ತಿಳಿಯುವಾ ಬನ್ನಿ.

ಒಂದು ಸಸ್ಯದ ಬೇರನ್ನು ಸುಟ್ಟ ಪುಡಿ, ಚಿಕೋರಿ ಪುಡಿ.

ಚಿಕೋರಿ ಒಂದು ಸಸ್ಯ. ಭಾರತೀಯ ನಾಮಧೇಯ ಕಸ್ನಿ, ಸಸ್ಯಶಾಸ್ತ್ರದ ಹೆಸರು ಚಿಕೋರಿಯಮ್ ಇನ್ಟೈಬಸ್. ವರ್ಗ-ಕಂಪೋಸೈಟೈ ಅಸ್ಟರೇಸಿಯಾ. ವೈಲ್ಡ್ ಚಿಕೋರಿ, ರೆಡ್ ಲೀಫ್ ಚಿಕೋರಿ ಮತ್ತು ಎಂಡೀವ್ಸ್ ಎಂಬ ಹಲವು ರೀತಿಯ ಸಸ್ಯ ಪ್ರಕಾರಗಳಿವೆ. ಚಿಕೋರಿ ಗಿಡ ಸುಮಾರು 5-6 ಅಡಿ ಎತ್ತರಕ್ಕೆ ಬೆಳೆಯುತ್ತದೆ. ನೀಲಿ ಬಿಳಿ ಅಥವಾ ಗುಲಾಬಿ ಬಣ್ಣದ ಹೂಗಳು, ಉದ್ದನೆಯ ಎಲೆಗಳು, ಕೂದಲಿನಂತೆ ಕಾಂಡ, ಕ್ಯಾರೆಟಿನಂತೆ ಗೆಡ್ಡೆ. ಸಸ್ಯದ ಬೇರನ್ನು ಕಾಫೀ ಬೀಜದಂತೆ ಸಂಸ್ಕರಣಗೊಳಿಸಿ, ಸುಟ್ಟು ಕಾಫಿಪುಡಿಯೊಂದಿಗೆ ಬೆರೆಸುತ್ತಾರೆ.

ಭಾರತದಲ್ಲಿ ಗುಜರಾತ್, ಜಾಮ್‌ನಗರ್, ಉತ್ತರಪ್ರದೇಶ, ಆಂಧ್ರ ಪ್ರದೇಶ, ತಮಿಳುನಾಡುಗಳಲ್ಲಿ ಚಿಕೋರಿ ಸಸ್ಯಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಆಗಸ್ಟ್ ತಿಂಗಳಲ್ಲಿ ಬಿತ್ತಿ ಮಾರ್ಚಿನಲ್ಲಿ ಕೊಯ್ಲು ಮಾಡುತ್ತಾರೆ. ಈ ಸಸ್ಯಗಳು ನದಿ ತೀರಗಳಲ್ಲಿಯೂ, ಒಣ ಪ್ರದೇಶಗಳಲ್ಲಿಯೂ ಬೆಳೆಯಲ್ಪಡುತ್ತದೆ.

ಚಿಕೋರಿ ಇತಿಹಾಸ : ಕಾಫಿಗೆ ಬದಲಾಗಿ ಚಿಕೋರಿ ಬ್ಲಾಕ್ ಡಿಕಾಕ್ಷನ್ ಅಥವಾ ಕಾಫೀ ಬೀಜದೊಂದಿಗೆ ಚಿಕೋರಿ ಪುಡಿ ಮಿಶ್ರಣ ಮಾಡಿ ಕುಡಿಯುವ ಬಳಕೆ ನೆಪೋಲಿಯನ್ ಕಾಲದಿಂದ ಪ್ರಾರಂಭಗೊಂಡಿತಂತೆ. 1789 ರಲ್ಲಿ ಫ್ರೆಂಚ್ ಕ್ರಾಂತಿಯಿಂದ ಇದರ ಬಳಕೆ. ನೆಪೋಲಿಯನ್ ಸಾಮ್ರಾಟನಾದಾಗ ಬ್ರಿಟಿಷರು ಡಚ್‌ನಿಂದ ಈಸ್ಟ್ ಇಂಡೀಸಿಗೆ ಕಾಫಿ ರಪ್ತು ಮಾಡುವುದನ್ನು ನಿಲ್ಲಿಸಿದರು. ಈ ನಿಲುಗಡೆ ಚಕೋರಿಗೆ ದಾರಿ ನೀಡಿತು. ಫ್ರಾನ್ಸ್ ಹಾಗೂ ಬೆಲ್ಜಿಯಂ ದೇಶಗಳಲ್ಲಿ ಬೆಳೆಯುತ್ತಿದ್ದರು. ಫ್ರೆಂಚರು "ಪಾಟ್ ಹರ್ಬ್" ಎಂದು ಇದನ್ನು ಬೆಳೆಸುತ್ತಿದ್ದರು. ಕಾಫಿ ಇಲ್ಲದೆ ಬಳಲುತ್ತಿದ್ದ ಬ್ಲಾಕ್ ಕಾಫಿ ಪ್ರಿಯರಾದ ಫ್ರೆಂಚರು ಚಿಕೋರಿಗೆ ಶರಣಾದರು. ಅಲ್ಲಿಂದ ಅಮೇರಿಕಾ, ಇಂಗ್ಲೆಂಡ್, ಮೆಡಿಟರೇನಿಯನ್ ಹಾಗು ಈಶಾನ್ಯ ಭಾರತಕ್ಕೆ ಪಸರಿಸಿಕೊಂಡಿತು.

ರೋಮನ್ನರು ಚಿಕೋರಿ ಬೇರು ಹಾಗೂ ಎಲೆಯನ್ನು ಬೆಳ್ಳುಳ್ಳಿ, ದೊ.ಮೆಣಸಿನಕಾಯಿ ಜೊತೆಗೆ ಹುರಿದು ಮಾಂಸದ ಖಾದ್ಯಗಳಲಿ ಉಪಯೋಗಿಸುತ್ತಿದ್ದರಂತೆ. ಜರ್ಮನ್ನರು ಚಿಕೋರಿ ಹೂಗಳ ದಳಗಳನ್ನು ಗ್ಯಾಸ್ಟ್ರೊ ತೊಂದರೆಗಳಿಗೆ, ಸೈನಸ್ ತೊಂದರೆಗಳಿಗೆ ಉಪಯೋಗಿಸುವ ಪದ್ದತಿ ಚಾಲ್ತಿಯಲ್ಲಿದೆಯಂತೆ.ಕಾಫಿ ಬೀಜದ ಡಿಕಾಕ್ಷನ್ನಿಗಿಂತ ಕಾಫಿ-ಚಿಕೋರಿ ಮಿಶ್ರಣದ ಡಿಕಾಕ್ಷನ್ ಸ್ವಾದವೆನಿಸುತ್ತದೆ. ಇದರ ನೈಸರ್ಗಿಕ ಸಿಹಿ ಕಾಫಿಯ ಕಹಿಯನು ಕಡಿಮೆಮಾಡುತ್ತದೆ. ಭಾರತದಲಿ ಶೇ 10 ರಿಂದ ಶೇ 45ರ ವರೆಗೆ ಮಾತ್ರ ಕಾಫಿಯೊಂದಿಗೆ ಚಿಕೋರಿ ಮಿಶ್ರಣ ಸೇರ್ಪಡಿಸಲು ಅನುಮತಿ ಇದೆ.

ಅಧ್ಯಯನಗಳ ಪ್ರಕಾರ ಆರೋಗ್ಯಕಾರಿ ಈ ಚಿಕೋರಿ:-

ಚಿಕೋರಿಯಲ್ಲಿ ಕೆಫೀನ್ ಇರುವುದಿಲ್ಲ. ಚಿಕೋರಿ ಸಕ್ಕರೆಗಳ(ಇನ್ಸ್ಯುಲಿನ್) ಮಿಶ್ರಣದಿಂದ ಕೂಡಿದೆ. ಇದರಲ್ಲಿ ಶೇ 5 ರಿಂದ 6 ಪೌಷ್ಠಿಕಾಂಶ ಮತ್ತು ಅತೀ ಕಡಿಮೆ ಪ್ರಮಾಣದಲ್ಲಿ ನಾರಿನಂಶವಿದೆ ಹಾಗೂ ವಿಟಮಿನ್ ಎ ಕೂಡ ಹೆಚ್ಚಿನಂಶವಿದೆ.ಮಧುಮೇಹ ರೋಗಿಗಳು ದಿನ ನಿತ್ಯದ ಆಹಾರದಲ್ಲಿ ಚಿಕೋರಿ ಉಪಯೋಗಿಸುವುದರಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗುತ್ತದೆ.

ಚಿಕೋರಿ ರುಚಿಯಲ್ಲಿ ಕಹಿ, ಕಫ ಹಾಗೂ ಪಿತ್ತವನ್ನು ಉಪಶಮನಗೊಳಿಸುವ ಗುಣವಿದ್ದು ಜೊತೆಗೆ ಉದ್ದೀಪನಗೊಳಿಸುವ ಶಕ್ತಿ ಹೊಂದಿದೆ. ಆರೋಗ್ಯಕರ ಡಯಟ್, ನಿತ್ಯ ವ್ಯಾಯಾಮ ಜೊತೆಗೆ ಚಿಕೋರಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿ ತರಬಹುದು.ಸಸ್ಯದ ಎಲ್ಲ ಅಂಗಗಳೂ ಪ್ರಯೋಜನಕಾರಿ. ಬೀಜವು ಮೂತ್ರದ ತೊಂದರೆ, ನಿದ್ರಾಹೀನತೆಗೆ ಉಪಯುಕ್ತ. ಚಿಕೋರಿ ಎಲೆಯಿಂದ ತಯಾರಿಸಿದ ಕಷಾಯ, ಅಂಟು ತಲೆನೋವು, ಉರಿ, ಸಂಧಿವಾತಗಳಿಗೆ ಮುಲಾಮು.

ಟೈಮ್ಸ್ ಹೆಲ್ತ್ ವರದಿಯ ಪ್ರಕಾರ ನಿಶ್ಯಕ್ತಿಯನ್ನು ದೂರ ಮಾಡಲು ಹಾಲಿನೊಂದಿಗೆ ಚಿಕೋರಿ ಪುಡಿಯನು ಉಪಯೋಗಿಸಲಾಗುತ್ತದೆ. ಲಿವರ್, ಗಾಲ್ ಬ್ಲಾಡ್ದರ್, ಉಸಿರಾಟ ಹಾಗೂ ಮುಟ್ಟಿನ ತೊಂದರೆಗಳಿಗೆ ಅತಿ ಕಡಿಮೆ ಮಾತ್ರದಲ್ಲಿ ಚಿಕೋರಿಪುಡಿ ಉಪಯುಕ್ತ. ಚಿಕೋರಿಯಿಂದ ಯಾವುದೇ ಪ್ರತಿಕೂಲ ಪರಿಣಾಮವಿಲ್ಲದ ಕಾರಣ ಇದರ ಸೇವನೆ ಮೂತ್ರ ಉತ್ಪತ್ತಿ ಪ್ರಮಾಣವನ್ನು ಹೆಚ್ಚಿಸಿ, ಕಿಡ್ನಿಯ ಕೆಲವು ಸಮಸ್ಯೆಗಳನ್ನು ಕಡಿಮೆ ಮಾಡುವುದಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more