ನನಗಿಂತ ಬದುಕು ಚೆನ್ನ, ಬದುಕಿಗಿಂತ ನಾನು ಚೆನ್ನ

ಚೌಕಾಸಿ ನನ್ನ ಜನ್ಮಸಿದ್ದ ಹಕ್ಕು : ಮಾನವನಾಗಿ ಹುಟ್ಟಿದಮೇಲೆ ಏನೇನು ಅದ್ಭುತ, ಆಶ್ಚರ್ಯ, ಅಪರೂಪ, ಆನಂದ, ಅಸಾಧಾರಣ, ನೆಮ್ಮದಿ ಹಾಗೂ ಸಾರ್ಥಕವಾದಂತಹ ಪವಾಡಗಳನ್ನು ಮಾಡಬಹುದು, ಹಾಗೂ ಆಗಾಗ್ಗೆ ಉಂಟಾಗುವ ಸವಿನೆನಪುಗಳನ್ನೂ ನೆನಪಿಸಿಕೊಳ್ಳುತ್ತಿರಬಹುದೆಂದು ಅನಿಸುತ್ತದೆ.ಬಾಲ್ಯದ ದಿವಸಗಳಲ್ಲಿ ತಂದೆಯವರ ಜೊತೆ ಅಂಗಡಿಗೆ ಸಾಮಾನು ತರಲು ಹೋದಾಗ, ಅವರು ಹೇಗೆ, "ಚೌಕಾಸಿ" ಮಾಡಿ ಸಾಮಾನು ತರುತ್ತಿದ್ದರೋ, ಅದೇ ನನ್ನಲ್ಲೂ, "ಕಾಂಕ್ರಿಟ್" ತರಹ ಬಲವಾಗಿ ಆವರಿಸಿಕೊಂಡು ಬಿಟ್ಟಿದೆ ಎಂದರೆ ತಪ್ಪಾಗಲಾರದು. "ಚೌಕಾಸಿ" ಈ ಪದ ಭಾರತದಲ್ಲಿ ಸರ್ವೇಸಾಮಾನ್ಯ. ಆದರೆ ಹೊರನಾಡು ಆಸ್ಟ್ರೇಲಿಯಾದಲ್ಲೂ ನಡೆಸಬಹುದೆಂದು ತಿಳಿದಿದ್ದು, ಅಲ್ಲಿ ಒಮ್ಮೆ "sunbeam mixer" ಕೊಳ್ಳುವಾಗ, ಅವನು ಹೇಳಿದ ಬೆಲೆ ಕೊಡಲು ಇಷ್ಟವಿಲ್ಲದಿದ್ದಾಗ ಪಟ್ಟ ಪೀಕಲಾಟ, ಒದ್ದಾಟ ಅಷ್ಟಿಟ್ಟಲ್ಲಾ ಮೇಲಾಗಿ ಹೊರನಾಡಿನ ಹೆದರಿಕೆ! ಕೊನೆಗೆ ಧೈರ್ಯಮಾಡಿ, ನನ್ನ 'ಅಸ್ತ್ರ' ಉಪಯೋಗಿಸಿ, 5 ಡಾಲರುಗಳು ಕಡಿಮೆ ಮಾಡಿಸಿ ತಂದದ್ದು 'ದಿಗ್ವಿಜಯ' ಪಡೆದಂತ ಅನುಭವ. ಊರಿನ ನೆಂಟರಿಷ್ಟರಿಗೆಲ್ಲಾ ಪತ್ರ ಬರೆದು ಸಂತೋಷ ಹಂಚಿಕೊಂಡದ್ದು ಹೇಳತೀರದು! "ಚೌಕಾಸಿ" ಮಾಡಿ ಸಾಮಾನು ತಂದರೆ ಅದರಿಂದ ಸಿಗುವ ಸಂತೋಷ ,ತೃಪ್ತಿ ಯಾವುದಕ್ಕೂ ಸಂಕೋಚಪಡದೆ ಧೈರ್ಯದಿಂದ ಕೇಳುವ ಹುಮ್ಮಸ್ಸನ್ನು ತರಿಸಿಬಿಟ್ಟಿದೆ.
ಕಂಡಕ್ಟರ್ ಗೆ ಟಿಕೇಟ್ : ಒಮ್ಮೆ ರಜಕ್ಕೆ ಊರಿಗೆ ಹೋದಾಗ ಮೆಜೆಸ್ಟಿಕ್ ನಿಂದ ಗಂಗಾನಗರಕ್ಕೆ ಬಸ್ಸಿನ ನೂಕು ನುಗ್ಗಲಿನಲ್ಲಿ ನುಸುಳಿ ಬಸ್ಸು ಹತ್ತಿ ನಿಂತುಕೊಂಡು ಕಂಡೆಕ್ಟರ್ ಟಿಕೇಟ್ ಕೇಳಿದಾಗ 10 ರೂನ ನೋಟು ಕೊಟ್ಟೆ. ಅವನು ಚಿಲ್ಲರೆ ಇಲ್ಲ ಇಳಿಯುವಾಗ ಕೇಳಿ ತೆಗೆದುಕೊಳ್ಳಿ ಎಂದು ಟಿಕೇಟಿನಲ್ಲಿ ಬರೆದುಕೊಟ್ಟ.ಟಿಕೇಟನ್ನು 'ಹಳೆಯ ಪದ್ದತಿಯಂತೆ' ವಾಚಿಗೆ ಭದ್ರವಾಗಿ ಸಿಕ್ಕಿಸಿಕೊಂಡೆ. ಇಳಿಯುವ ಸಂಭ್ರಮದಲ್ಲಿ ಚಿಲ್ಲರೆ ಕೇಳುವುದನ್ನೇ ಮರೆತುಬಿಟ್ಟು ಮನೆಗೂ ಬಂದು ತಾಯಿಯವರೊಡನೆ ಸಂಭಾಷಿಸುತ್ತಿದ್ದಾಗ ವಾಚಿಗೆ ಸಿಕ್ಕಿಸಿದ್ದ ಟಿಕೇಟು ನೋಡಿ, 'ಅಯ್ಯೋ, ಸುಬ್ಬು, ಚಿಲ್ಲರೇನ ಕೇಳುವುದೇ ಮರೆತುಬಿಟ್ಟೆ ಎಂದು, ದಡ ದಡನೆ ಪುನಃ ಬಸ್ ಸ್ಟಾಂಡಿಗೆ ಹೋಗಿ, ಅಲ್ಲಿದ್ದ ಇನ್ಸ್ ಪೆಕ್ಟರಿಗೆ ವಿಷಯ ಹೇಳಿ, ಅವರು ಅದೇ ಬಸ್ಸಿನ ಕಂಡೆಕ್ಟರ್ ನಾಳೆ 10 ಗಂಟೆಗೆ ಬರುತ್ತಾನೆಂದು ಹೇಳಿದಾಗ ವಿಷಯ ಕೇಳಿ ಸಂತೋಷವಾಗಿ, ಮಾರನೆಯ ದಿವಸ ಹೋಗಿ ಕಂಡೆಕ್ಟರಿಗೆ ಟಿಕೇಟು ತೋರಿಸಿ 6 ರೂ.ಚಿಲ್ಲರೆಯನ್ನು ವಾಪಸ್ಸು ತಂದೆ.ನನ್ನದೇ ತಪ್ಪಾದ್ದರಿಂದ ಒಂದುತರಹ ಅಂಜಿಕೆಯೆನಿಸಿದರೂ, ಹೋಗಿ ಬಿಟ್ಟಿದ್ದ ಹಣವನ್ನು ವಾಪಸ್ ತಂದದ್ದು ತೃಪ್ತಿ ಕೊಟ್ಟಿತು.ಮನೆಯವರೆಲ್ಲಾ 'ಬಿದ್ದು ಬಿದ್ದು ನಕ್ಕರು'. ಆದರೆ ನಮ್ಮ ತಾಯಿ ನನ್ನ ಕೆಲಸಕ್ಕೆ ಮೆಚ್ಚಿಗೆ ಸೂಚಿಸಿದರು.
ಅವಕಾಶ ವಾಣಿ :ಮಗನಿಗೆ ಅಮೇರಿಕಾದಲ್ಲಿ ಕೆಲಸ ಸಿಕ್ಕಿದಾಗ, ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಂಡು ಹೋದ. ಆದರೆ ಅಲ್ಲಿಯ ನಿಯಮದಂತೆ ಪುನಃ ಡ್ರೈವಿಂಗ್ ಲೆಸೆನ್ಸ್ ತೆಗೆದುಕೊಳ್ಳಬೇಕು, ಇಲ್ಲದಿದ್ದಲ್ಲಿ, 5, 6 ವರ್ಷ ಡ್ರೈವಿಂಗ್ ಮಾಡಿದ ರೆಕಾರ್ಡಿನ ಲೆಟರ್ ಬೇಕು ಎಂದು ಕೇಳಿದರೆಂದು ಬೇಜಾರಿಸಿಕೊಂಡು ಫೋನ್ ಮಾಡಿದ. ಹೀಗೆ ಮಾತನಾಡುತ್ತಿದ್ದಾಗ, 'ಆಕಾಶವಾಣಿ' (6th sense ಅಥವಾ ಅವಕಾಶ ವಾಣಿ ಅಂದುಕೊಳ್ಳಿ) ನುಡಿದಂತೆ ಯಜಮಾನರ ಹತ್ತಿರ ನಿಮ್ಮ ಸ್ವಂತ ಉದ್ಯಮದಲ್ಲಿ ಅವನು ಕೆಲವು ವರ್ಷಗಳು ಕೆಲಸ ಮಾಡಿದ್ದರಿಂದ ಶಿಫಾರಸು ಪತ್ರದಲ್ಲಿಯೇ ಬರೆದು ನಮೂದಿಸಿ ಕಳುಹಿಸಿದರೇ ಅನುಕೂಲವಾಗಬಹುದೆಂದಿದ್ದೇ ಸಾಕಾಗಿ ಮಗನಿಗೆ ಲೈಸೆನ್ಸ್ ಸಿಕ್ಕಿ ಅವನು ಸಂತೋಷವನ್ನ, you have done one good thing ಎಂದು ವ್ಯಕ್ತಪಡಿಸಿದ.
'ಬಹಾಮಾಸ್'ಪಯಣ :ಇ-ಮೇಲ್ ಗಳಲ್ಲಿ ಬೇಕಾದ್ದು, ಬೇಡವಾದ್ದು ಸಾಕಷ್ಟು ಎಲ್ಲರಿಗೂ ಬರುವುದು ತಿಳಿದಿರುವ ವಿಷಯವೇ! ಅದರಲ್ಲಿ 'ಬಹಾಮಾಸ್' ಕ್ರೂಸ್ ಫ್ರೀ ಟಿಕೇಟ್ ಯಜಮಾನರಿಗೆ ಬಂದು ಆಕರ್ಷಿಸಿ, (ಯಾವಾಗಲೂ ಮಾಡದೇ ಇರುವವರು) ಎಲ್ಲಾ ಡಿಟೈಲ್ಸ್, ಕ್ರೆಡಿಟ್ ಕಾರ್ಡ್ ನಂಬರುಗಳನ್ನು ಕೊಟ್ಟ ಮೇಲೆ ದೂರವಾಣಿ ಮೂಲಕ ಸಂಪರ್ಕಿಸುವ ನಂಬರು ಸಿಕ್ಕಿತು.ಕೆಲವು ಸಮಯ ಬಿಟ್ಟು ಪರೀಕ್ಷಿಸಲು ಫೋನ್ ಮಾಡಿದರೆ ಯಾರೂ ಪತ್ತೇನೆ ಇಲ್ಲ. ಆತಂಕ, ಯೋಚನೆ ಶುರುವಾಯಿತು.ಮಲಗಿದರೂ ನಿದ್ದೆ ಹತ್ತುತ್ತಿಲ್ಲ.ಆಕಡೆ ಈ ಕಡೆ ಹೊರಳಾಟ, ತೊಳಲಾಟ, ಓ ಮೋಸಹೋದೆ! ಉಸ್, ಉಸ್ ಎಂದು ಅವರ ನಿಟ್ಟುಸಿರು ಬಿಡುವುದು ನೋಡಲಾಗದೆ ತಕ್ಷಣ ಹೊಳೆದು ರಾತ್ರಿ 1 ಗಂಟೆಗೆ ವೀಸಾ ಕಾರ್ಡ್ ಆಫೀಸಿಗೆ ಫೋನ್ ಮಾಡಿ ಕಾರ್ಡ್ ಕ್ಯಾನ್ಸಲ್ ಮಾಡಿಬಿಡಿ ಎಂದು ಸಲಹೆ ಕೊಟ್ಟು ಈಸ್ಟರ್ ಹಾಲಿಡೆ ಚೆನ್ನಾಗಿ ಕಳೆದೆವು.
ಫ್ರೀ ಸ್ಟಾಪ್ ಫ್ರೀ ಸ್ಟೇ ಸ್ಪೆಷಲ್ ಡೀಲ್ಸ್ : ಮೊದಲಸಲ ಅಮೇರಿಕಾ ಪ್ರವಾಸ ಅತಿ 'ದುಬಾರಿ' ಎಂದು ಎಲ್ಲರ ಬಾಯಿಂದ ಕೇಳುತ್ತಲೇ ಇದ್ದು ಹೋಗುವ ಪ್ರಯತ್ನ ನಡೆಸಿದಾಗ ಮತ್ತು ಹೋಗಿ ಬಂದವರ ಅನುಭವ ಕೇಳಿ ಸಾಕಷ್ಟು ಟ್ರಾವೆಲ್ ಏಜೆಂಟುಗಳ ವಿಚಾರಣೆ, ಸ್ಪೆಷಲ್ ಡೀಲ್ಸ್ ಗಳು ಕೊಡುವ ಹಾಗೆ ಮಾಡಿಕೊಂಡು ಹೋಗಿ ಬಂದಿದ್ದರ ಸವಿ ನೆನಪು ಇನ್ನು ಮರುಕಳಿಸುತ್ತಲೇ ಇದೆ.ಅದರಲ್ಲೂ ನಮಗೆ ಎರಡು ಸಲವೂ ಫ್ರೀ ಸ್ಟಾಪಿನ ಜೊತೆಗೆ ಫ್ರೀ ಆಗಿ ಇಳಿದು ಕೊಳ್ಳಲು ಕೊಟ್ಟ ಅನುಕೂಲಕ್ಕಿಂತ ಇನ್ನೇನು ಬೇಕು? ಹಾಗೂ ಅಮೇರಿಕಾದ ರಾಜಧಾನಿ ವಾಷಿಂಗ್ಟನ್ ಗೆ ಹೋಗಿದ್ದರ ಟಿಕೇಟಿನ ವೆಚ್ಚ ಸೇರಿಸದೇ 'ಬಿಟ್ಟಿ' ಯಾಗಿದ್ದು ಗೊತ್ತಾದ ದಿವಸದ ಮಜ ಕೇಳಬೇಕಾಗೇ ಇಲ್ಲ! ಕೆಲವು ಸಮಯದನಂತರ ತಿಳಿದಿದ್ದು ನಮ್ಮ ಟ್ರಾವೆಲ್ ಏಜೆಂಟು, ಏಜೆನ್ಸಿ ಮುಚ್ಚಿದರೆಂದು ಗೊತ್ತಾದಾಗ ಮಗನಿಂದ ಬಂದ ಮಾತು, "ನಿನಗೆ ಅಷ್ಟೊಂದು ಡೀಲ್ಸ್" ಕೊಟ್ಟಿದ್ದರಿಂದ ಅವರು ಬ್ರೋಕ್ (ಪಾಪರ್) ಆದರೆಂದ.
You Indians bargain, but we (ಬಿಳಿಯವರು) won't :ಮನೆಯ ಸೊಫಾ ಸೆಟ್ ಹಳೆಯದಾಗಿ ಅದನ್ನು ವರ್ಗಾಯಿಸುವ ಆಲೋಚನೆ ಬಂದು, ಪೇಪರಿನಲ್ಲಿ ಪ್ರಕಟಿಸಿ ದೂರವಾಣಿಗೆ ಕಾಯುತ್ತಿದ್ದಾಗ, ಮನೆಯಲ್ಲಿ ಪ್ರಕಟಿಸಿರುವ ಬೆಲೆ ಬಗ್ಗೆ , ಯಾರು ಅಷ್ಟಕ್ಕೆ ತೆಗೆದುಕೊಳ್ಳುತ್ತಾರೆಂಬುದರ ಬಗ್ಗೆ ಮಾಮುಲು ಮಾತುಕತೆ ನಡೆಯುತಿತ್ತು. ಆದರೆ ಅದೃಷ್ಟದ ದಿನ ಬಂದೇ ಬಿಟ್ಟಿತು ತೆಗೆದುಕೊಳ್ಳುವ ಗಿರಾಕಿಯವರ ಫೋನ್ ಕಾಲ್, ಎಲ್ಲಾ ವಿಚಾರಿಸಿಕೊಂಡು, ಬರುವ ದಿನ, ವೇಳೆ ತಿಳಿಸಿ , ಹಣವನ್ನೂ ಹಿಡಿದುಕೊಂಡು ಬಂದು ಎಲ್ಲಾ ತಿರುಗಿಸಿ ನೋಡಿ "ತುಂಬಾ ಚೆನ್ನಾಗಿ ಇಟ್ಟಿರುವೆ" ತೆಗೆದುಕೊಳ್ಳುವೆನೆಂದು ಹೇಳಿ ದುಡ್ಡು ಎಣಿಸಿಯೇ ಬಿಟ್ಟರು! ಹಾಗೂ ಪೇಪರಿನಲ್ಲಿ O N O ಹಾಕಿದೆ ಎಂದದ್ದಕ್ಕೆ,ಬಂದ ಒತ್ತರ "you Indians bargain, but we (ಬಿಳಿಯವರು) won't' " ಎಂದು ನಗೆ ಸೂಚಿಸಿದರು! ಎಲ್ಲಾ ಬಿಳಿಯರೂ ಹೀಗೇ ಇರುವುದಿಲ್ಲಾ ಅಂದುಕೊಳ್ಳಿ!!.
ಬನ್ನಿ ಸ್ವಲ್ಪ ವಾಪಸ್ಸು ಕೊಡುತ್ತೇನೆ: ವ್ಯಾಪಾರಸ್ಥರಿಗೆ ಒಂದುಸಲ ದುಡ್ಡುಕೊಟ್ಟುಬಿಟ್ಟರೆ ಅವರಿಂದ ವಾಪಸ್ಸು ಪಡೆಯುವುದು ಕಷ್ಟವೆಂದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇತ್ತೀಚೆಗೆ ನಡೆದ ಪಾರ್ಟಿಯಲ್ಲಿ, ಊಟದ ವ್ಯವಸ್ಥೆ ನಡೆಸುವವರು ತಮ್ಮ ಕೆಲಸ ಏರು ಪೇರಾಗಿ ಮಾಡಿ ನಮಗೆ ಬೇಕಾದ ರೀತಿಯಲ್ಲಿ ಮಾಡದೆ ತಾನು ಸಮಾಧಾನ ಪಡದೆ, ನಮಗೂ ತೃಪ್ತಿ ಕೊಡದೆ ಇದ್ದುದರಿಂದ ಒಪ್ಪಿದ ಹಣ ನಮಗೂ ಕೋಡಲು ಬೇಸರ. ಆದನ್ನು ಪಡೆಯಲು ಅವನಿಗೂ ಮುಜುಗರ ಕಡೆಗೆ, ಇಬ್ಬರಿಗೂ ಸಮಂಜಸವೆನಿಸುವ ಬೆಲೆಗೆ ಒಪ್ಪಿ ಮನೆಯ ಗಂಡಸರ ಮರ್ಯಾದೆಯನ್ನೂ ಕಾಪಾಡುವ ಸಲುವಾಗಿ ಒಲ್ಲದ ಮನಸ್ಸಿನಿಂದ ಸ್ವಲ್ಪ ಕಡಿಮೆ ಮಾಡಿ ದುಡ್ಡು ಕೊಟ್ಟು ಕಳುಹಿಸಲಾಗಿತ್ತು.ಆದರೂ ಬಿಡದೆ ಮಾರನೆಯ ದಿವಸ ಫೋನ್ ಮಾಡಿ, ಮನಮುಟ್ಟುವಂತೆ ಮಾತನ್ನು ನಯವಾಗಿ ಆಡಿ ಅವರ ಮನ ಕರಗಿಸಿ ನಮಗೆ ನೀವು ಸ್ವಲ್ಪ ಹಣವಾದರೂ ವಾಪಸ್ಸು ಮಾಡಿದರೆ ಸಂತೋಷವಾಗುತ್ತೆ, ಆ ದಿವಸ ನೀವು ಬೇಜಾರು ಮಾಡಿಕೊಬಾರದೆಂದು ಅಷ್ಟು ಹಣ ಕೊಟ್ಟೆವು. ದಯವಿಟ್ಟು ಈ ವಿಷಯವನ್ನು ಪರಿಗಣಿಸಬೇಕು, ನಮ್ಮ ನಿಮ್ಮ ಸ್ನೇಹ, ವಿಶ್ವಾಸ ಮುಂದೆಯೂ ಇರಬೇಕು ಎಂದೆಲ್ಲಾ ಭಾಷಣ ಬಿಗಿದ ನಂತರ ದೊಡ್ಡ ಮನಸ್ಸು ಮಾಡಿ, "ಬನ್ನಿ ಸ್ವಲ್ಪ ವಾಪಸ್ಸು ಕೊಡುತ್ತೇನೆ" ಎಂದು ಹೇಳಿದ್ದೇ ಸಾಕು ಎನಿಸಿ ತಕ್ಷಣ ಹೋಗಿ ತೆಗೆದುಕೊಂಡು ಬಂದೆವು.
ನಮ್ಮಲ್ಲಿ ನಮಗೆ ಅತ್ಮ ವಿಶ್ವಾಸ, ಸಂತೋಷ, ತೃಪ್ತಿ ಇದ್ದರೆ ಏನೆಲ್ಲಾ ಬೇಕಾದರೂ ಸಾಧಿಸಬಹುದು. ಮನಸ್ಸಿದ್ದರೆ ಮಾರ್ಗ, ಛಲವಿದ್ದರೆ ಗೆಲುವಿದೆ, ಕೈ ಕೆಸರಾದರೆ ಬಾಯಿ ಮೊಸರು ಅನ್ನುವ ಆ ನಾಣ್ಣುಡಿ ಅದೆಷ್ಟು ಸತ್ಯವೆನ್ನುವುದು ನನ್ನ ಈ ಕೆಲವು ಅನುಭವಗಳು ಮನದಟ್ಟು ಮಾಡಿಕೊಟ್ಟಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications