ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬೆ ಜಯಶ್ರೀ, ಶುಭಾ ಮುದ್ಗಲ್ ಜುಗಲಬಂದಿ

By Staff
|
Google Oneindia Kannada News

Bombay Jayashri and Subha Mudgal
ಡಿಸೆಂಬರ್ 7ರ ಸಂಜೆ ಲಂಡನ್ನಿನಲ್ಲಿ ಬಾಂಬೆ ಜಯಶ್ರೀ ಮತ್ತು ಶುಭಾ ಮುದ್ಗಲ್ ಜುಗಲಬಂದಿಯನ್ನು ಕನ್ನಡಿಗರು ಯುಕೆ ಮಿಲಾಪ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಕನ್ನಡಿಗರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಕನ್ನಡಿಗರು ಯುಕೆ ಸಂಸ್ಥೆ ಕೇಳಿಕೊಂಡಿದೆ.

ಆಂಗ್ಲ ನಾಡಿನ ಆತ್ಮೀಯ ಕನ್ನಡಿಗರೆ,

ಆಂಗ್ಲ ನಾಡಿನ ಭಾರತೀಯರಿಗೆ ಒಂದು ಸುವರ್ಣಾವಕಾಶ. ಭಾರತದ ಕಲಾ ಮತ್ತು ಸಂಸ್ಕೃತಿ ಇಲಾಖೆಯಂತೆ, ಇಂಗ್ಲೆಂಡಿನಲ್ಲೂ Arts Council UK ಎಂಬ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ "ಕರ್ನಾಟಕ ಮತ್ತು ಹಿಂದೂಸ್ತಾನಿ ಗಾಯನ ಜುಗಲ್ಬಂದಿ" ಕಾರ್ಯಕ್ರಮಕ್ಕೆ ನಿಮಗೆಲ್ಲ ಆದರದ ಸ್ವಾಗತ.

ಭಾರತದ ಹೆಸರಾಂತ ಮತ್ತು ಉಚ್ಚ ಮಟ್ಟದ ಪ್ರತಿಭೆಯನ್ನು ಮತ್ತು ಕೀರ್ತಿಯನ್ನು ಹೊಂದಿರುವ ಬಾಂಬೆ ಜಯಶ್ರಿ (ಕರ್ನಾಟಕ ಸಂಗೀತ) ಮತ್ತು ಶುಭಾ ಮುದ್ಗಲ್ (ಹಿಂದೂಸ್ತಾನಿ ಸಂಗೀತ) ತಮ್ಮ ಗಾಯನದಿಂದ ನಮ್ಮೆಲ್ಲರನ್ನೂ ಹೊಸ ಲೋಕಕ್ಕೆ ಒಯ್ಯಲು ಲಂಡನ್ ನಗರಕ್ಕೆ ಆಗಮಿಸುತ್ತಿದ್ದಾರೆ.

ಕೆಲವೇ ವಾರಗಳ ಹಿಂದೆ, ರಾಜ್ಯೋತ್ಸವ 2008ನ್ನು ಆಂಗ್ಲ ನಾಡಿನ ಕನ್ನಡಿಗರ ಸಹಯೋಗದಿಂದ ಕನ್ನಡಿಗರು ಯುಕೆ ಸಂಸ್ಥೆ ಯಶಸ್ವಿಯಾಗಿ ಆಯೋಜಿಸಿತ್ತು. ಈಗ ಕನ್ನಡಿಗರು ಯುಕೆ ಸಂಸ್ಥೆ ಇಂಗ್ಲೆಂಡಿನ ಮಿಲಾಪ್ ಸಂಸ್ಥೆಯ ಸಹಭಾಗಿತ್ವದೊಂದಿಗೆ, ಬಾಂಬೆ ಜಯಶ್ರೀ ಮತ್ತು ಶುಭಾ ಮುದ್ಗಲ್ ಅವರ ಜುಗಲಬಂದಿ ಗಾಯನವನ್ನು ಲಂಡನ್ ನಗರದಲ್ಲಿ ಆಯೋಜಿಸಿದೆ. ಮುಂದಿನ ಭಾನುವರ ಡಿಸೆಂಬರ್ 7ರಂದು ಸಂಜೆ 7.30ಕ್ಕೆ ಈ ಕಾರ್ಯಕ್ರಮ ಆರಂಭವಾಗುತ್ತದೆ.

ವಿವರಗಳು

ಸ್ಥಳ : ಕ್ವೀನ್ ಎಲಿಜಬೆತ್ ಹಾಲ್, ಸೌಥ್ ಬ್ಯಾಂಕ್, ಲಂಡನ್ (ವಾಟರ್ ಲೂ ರೈಲ್ವೇ ನಿಲ್ದಾಣದ ಎದುರು)
ದಿನಾಂಕ : ಡಿಸೆಂಬರ್ 7, 2008
ಸಮಯ : ಸಂಜೆ 7.30

ಇಂತಹ ಕಾರ್ಯಕ್ರಮಗಳು ಇಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಸಾಗಬೇಕಾದರೆ, ನಿಮ್ಮೆಲ್ಲರ ಸಹಕಾರ ಮತ್ತು ಸಹಾಯ ಅತ್ಯಗತ್ಯ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ವೈಶಿಷ್ಟ್ಯಪೂರ್ಣ ಸಂಗೀತ ಸಂಜೆಯನ್ನು ಯಶಸ್ಸಿಗೊಳಿಸಬೇಕೆಂದು ಕೋರಿಕೆ.

ಪವನ್ ಮೈಸೂರ್
ಕನ್ನಡಿಗರು ಯು.ಕೆ
ದೂರವಾಣಿ : 07782324462 ಅಥವಾ ಈ-ಮೈಲ್- [email protected]

ಟಿಕೆಟ್ ಗಳನ್ನು ಅಂತರ್ಜಾಲದ ಮೂಲಕ ಕಾದಿರಿಸಬಹುದಾಗಿದೆ. Or call 0871 663 2500

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X