ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಐವತ್ತು ಮುಖ್ಯ ಬ್ಲಾಗುಗಳು :ಒಂದು ಭಾಷಣ

By Staff
|
Google Oneindia Kannada News

ಉತ್ತರ ಅಮೆರಿಕಾದ ಮೇರಿಲ್ಯಾಂಡ್ ನಲ್ಲಿರುವ "ಭೂಮಿಕಾದ" ಆಶ್ರಯದಲ್ಲಿ ಪ್ರತಿತಿಂಗಳು ಎರಡನೆಯ ಭಾನುವಾರ ಮಧ್ಯಾನ್ಹ 1.45 ಗಂಟೆಗೆ ಸರಿಯಾಗಿ ಕನ್ನಡ ರಂಗಭೂಮಿ, ಸಾಂಪ್ರದಾಯಿಕ ಕಲೆ ಸಾಹಿತ್ಯ ಮತ್ತು ಇತರೇ ವಿಷಯಗಳ ಬಗ್ಗೆ ವಿಚಾರ ವಿನಿಮಯ ಹಾಗೂ ಚರ್ಚೆ ನಡೆಸಲಾಗುತ್ತದೆ. ನಿಮಗೆಲ್ಲರಿಗೂ ಅದರದ ಸ್ವಾಗತ.

ಪ್ರಸ್ತುತ ಕಾರ್ಯಕ್ರಮ:

1.45-2.00PM - ಸ್ವಾಗತ, ಕಾರ್ಯಕ್ರಮದ ಪರಿಚಯ
2.00-3.30- ಸತೀಶ್ ಕುಮಾರ್ ರವರಿಂದ- ಪ್ರಸ್ಥಾವನೆ
ವಿಷಯ : ಕನ್ನಡ ಬ್ಲಾಗ್ಸ್: ಒಂದು ಪರಿಚಯ

ಸತೀಶ್ ಕುಮಾರ್ಸತೀಶ್‌ಕುಮಾರ್ ಹೊಸನಗರ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಹೊಬೋಕನ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಸದ್ಯಕ್ಕೆ ನ್ಯೂ ಜೆರ್ಸಿಯ ಟೆಲಿಕಮ್ಯುನಿಕೇಷನ್ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಲೇಖನಗಳನ್ನು ಈವರೆಗೆ ಹಲವು ನಿಯತಕಾಲಿಕಗಳಲ್ಲೂ ಹಾಗೂ ಇಂಟರ್‌ನೆಟ್ ಪೋರ್ಟಲ್‌ಗಳಲ್ಲೂ ಪ್ರಕಟಿಸಿರುವುದರ ಜೊತೆಗೆ ಕಳೆದ ಎರಡು ವರ್ಷಗಳಿಂದ ತಮ್ಮದೇ ಆದ ವೆಬ್ ಲಾಗ್‌ಗಳನ್ನು ಪ್ರಕಟಿಸುತ್ತ ಬಂದಿರುತ್ತಾರೆ.

ಅವರ ಮೂರು ಬ್ಲಾಗುಗಳು ಇಂತಿವೆ :'ಅಂತರಂಗ', 'ಕಾಲಚಕ್ರ' ಹಾಗೂ 'ದಾರಿದೀಪ'

ಅರೆಮಲೆನಾಡಿನ ಭಾಷೆಯಲ್ಲಿ ಕರ್ನಾಟಕದ ರಾಜಕೀಯ, ರಾಜಕಾರಣಿಗಳ ಬಗ್ಗೆ ಹಾಸ್ಯ ಹಾಗೂ ವಿಡಂಬನೆಗೆ ಒತ್ತು ಕೊಟ್ಟು ಬರೆಯುವುದಕ್ಕೆ ಮೀಸಲಾದ ಬ್ಲಾಗು 'ಕಾಲಚಕ್ರ'. 'ದಾರಿದೀಪ'ದಲ್ಲಿ ತಮ್ಮ ವಿದ್ಯಾರ್ಥಿ ಹಾಗೂ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಬಹಳಷ್ಟು ಜನರಿಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮುಖ್ಯ ಬ್ಲಾಗ್ ಆದ 'ಅಂತರಂಗ'ದಲ್ಲಿ ದಿನನಿತ್ಯದ ಆಗುಹೋಗುಗಳ ಬಗ್ಗೆ, ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ, ತಮ್ಮ ನೆರೆಹೊರೆಯ ಬಗ್ಗೆ ಓತಪ್ರೋತವಾಗಿ ಬರೆಯುತ್ತಲೇ ಬಂದಿದ್ದಾರೆ.

ಎರಡು ವರ್ಷಗಳಲ್ಲಿ ಸುಮಾರು ಮುನ್ನೂರ ಅರವತ್ತೈದಕ್ಕೂ ಹೆಚ್ಚು ಬ್ಲಾಗ್ ಪೋಸ್ಟ್ ಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಸತೀಶ್ ಅವರದು. 2006 ರಲ್ಲಿ ಸತೀಶ್ ಅವರು 'ಕೋಮಲ ಗಾಂಧಾರ' ಎನ್ನುವ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ.

ಭೂಮಿಕಾದ ವೇದಿಕೆಯಲ್ಲಿ 'ಕನ್ನಡ ಬ್ಲಾಗ್‌ಪ್ರಪಂಚದ ಪಕ್ಷಿನೋಟ' ಎನ್ನುವ ವಿಷಯವನ್ನು ಕುರಿತು ಅವರು ಮಾತನಾಡಲಿದ್ದಾರೆ. ವೆಬ್ ಲಾಗ್ (ಬ್ಲಾಗ್)ನ ಇತಿಹಾಸ, ಬ್ಲಾಗ್‌ನ ಬೆಳವಣಿಗೆ ಹಾಗೂ ಬ್ಲಾಗ್ ಪ್ರಪಂಚದಲ್ಲಿ ಕನ್ನಡದ ಸ್ಥಾನ ಮಾನದ ಬಗ್ಗೆ ವಿವರಿಸಲಿದ್ದಾರೆ. ಬ್ಲಾಗ್‌ಗಳ ಬಗ್ಗೆ ಅನೇಕ ಪರಾಮರ್ಶೆಗಳನ್ನು ಒದಗಿಸಿ ಬ್ಲಾಗ್‌ಗೆ ಸಂಬಂಧಿಸಿದಂತೆ ರೋಚಕವಾದ ಅಂಕಿ-ಅಂಶಗಳನ್ನೂ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಕನ್ನಡದ ಮುಖ್ಯವಾದ ಐವತ್ತು ಬ್ಲಾಗ್‌ಗಳ ಪಟ್ಟಿಯನ್ನು ಮಂಡಿಸುವವರಿದ್ದಾರೆ. ಕನ್ನಡದ ಬ್ಲಾಗ್ ಅನ್ನು ಇತರೆ ಗದ್ಯ ಸಾಹಿತ್ಯ ಪ್ರಕಾರಗಳಾದ ಅಂಕಣ, ಕಥೆ, ಕಾದಂಬರಿ, ಸಂವಾದ ಮುಂತಾದವುಗಳಿಗೆ ಹೋಲಿಸಲಿದ್ದಾರೆ.

ಕನ್ನಡದ ಬ್ಲಾಗ್ ಹಿನ್ನೆಲೆಯಲ್ಲಿ ಅನೇಕ ಬ್ಲಾಗ್‌ದಾರರನ್ನು ಪರಿಚಯಿಸುತ್ತಾ ಕೆಲವು ವೈಯುಕ್ತಿಕ ಬ್ಲಾಗ್ ಹಾಗೂ ಸಮುದಾಯದ ಬ್ಲಾಗ್‌ಗಳಲ್ಲಿನ ಉದಾಹರಣೆಗಳನ್ನು ಶ್ರೋತೃಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಬ್ಲಾಗ್ ಬರೆಯುವವರ ಹಿನ್ನೆಲೆ, ಇತಿಮಿತಿ ಹಾಗೂ ಸ್ವರೂಪದ ಸ್ಥೂಲ ಪರಿಚಯವೂ ಇರುತ್ತದೆ.ಇತರ ಭಾರತೀಯ ಭಾಷೆಗಳಲ್ಲಿನ ಬ್ಲಾಗ್‌ಗಳ ಬಗ್ಗೆ, ಕನ್ನಡ ಬ್ಲಾಗ್‌ಪ್ರಪಂಚದ ಭವಿಷ್ಯದ ಬಗ್ಗೆ ತಮ್ಮ ಆಲೋಚನೆಗಳನ್ನು ದಾಖಲಿಸುತ್ತಾರೆ,ನೀವು ಸಾಕ್ಷಿಯಾಗಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X