ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಅಂಗಳದಲ್ಲಿ ಸಖತ್ ಶನಿವಾರ

By Staff
|
Google Oneindia Kannada News

Pratham Karnikವಾಷಿಂಗ್ ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ಈ ಬಾರಿ ತ್ರಿವಳಿ ಸಂಭ್ರಮ. ದೀಪಾವಳಿ, ಕನ್ನಡ ರಾಜ್ಯೋತ್ಸವ ಮತ್ತು ವಿಶೇಷ ಕಲಾ ಪ್ರದರ್ಶನ. ನವೆಂಬರ್ 1, ಸಖತ್ ಶನಿವಾರ.

ನವಂಬರ್ ಒಂದರಂದು ಅಮೆರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ, ವಾಷಿಂಗ್ಟನ್ ಡಿ. ಸಿ.ಯ ಕಾವೇರಿ ಕನ್ನಡ ಸಂಘದ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬವು ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳು ಭರದಿಂದ ನಡೆಯುತ್ತಿವೆ. ಈ ಸಲದ ಉತ್ಸವದ ವಿಶೇಷವೆಂದರೆ ಕಾವೇರಿ ಕಲಾವಿದರಿಂದ ರಚಿಸಿದ ಕಲಾಕೃತಿಗಳ ಪ್ರದರ್ಶನ. ರಾಜಧಾನಿ ಮತ್ತು ಸುತ್ತಮುತ್ತಲಿನ ಕನ್ನಡಿಗರಲ್ಲಿ ಹುದುಗಿರುವ ಕಲಾ ಪ್ರತಿಭೆಗಳನ್ನು ಪರಿಚಯಿಸುವುದೇ ಈ ಮೇಳದ ಮುಖ್ಯ ಉದ್ದೇಶ.

ನಮಗೆ ತಿಳಿದಿರುವಂತೆ ಭಾರತದಿಂದ ಹೊರಗೆ ಇಷ್ಟು ದೊಡ್ದ ಮಟ್ಟದಲ್ಲಿ , ಇಷ್ಟೊಂದು ಕನ್ನಡಿಗರು ಕಲಾ ಮೌಲ್ಯವುಳ್ಳ ಕಲಾಕೃತಿಗಳನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲು. ಕಾವೇರಿಯ ಕಲಾವಿದರಿಂದ ರಚಿತವಾದ ತೈಲವರ್ಣ, ಅಕ್ರಿಲಿಕ್, ಜಲವರ್ಣ ಚಿತ್ರಗಳು, ರೇಖಾ ಚಿತ್ರಗಳು, ಕಸೂತಿ ಮತ್ತು ಮಡಿಕೆಯ ಮೇಲೆ ರಚಿತವಾದ ಕೃತಿಗಳು, ಶಿಲ್ಪಗಳು ಈ ಕಲಾ ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ.

Art work by Pratham Karnikಕಾವೇರಿಯ ಕಲಾ ಮೇಳದ ಮುಖ್ಯ ಆಕರ್ಷಣೆ, ಮೇರಿಲ್ಯಾಂಡ್ ಮೋಂಟೆಗೋಮರಿ ಕೌಂಟಿಯ ವಾಲ್ಟ್ ವಿಟ್ಮಾನ್ ಶಾಲೆಯಲ್ಲಿ 11ನೆಯ ತರಗತಿಯಲ್ಲಿ ಕಲಿಯುತ್ತಿರುವ 16 ವರ್ಷ ವಯಸ್ಸಿನ ಪ್ರಥಮ್ ಕರಣಿಕ್ ಅವರ ಜಲವರ್ಣ ಮತ್ತು ತೈಲವರ್ಣ ಚಿತ್ರಗಳ ಪ್ರದರ್ಶನ. 10ನೆಯ ತರಗತಿವರೆಗೆ ಬೆಂಗಳೂರಿನ ಇಸ್ರೋ ಕ್ಯಾಂಪಸ್ ನಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಕಲಿತ ಪ್ರಥಮ್ ಬಾಲ್ಯದಲ್ಲಿಯೇ ಚಿತ್ರ ರಚನೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡವರು. 4ನೆಯ ತರಗತಿಂದ ಪ್ರಥಮ್ ಅವರಿಗೆ ಶಾಲೆಯ ಅತಿ ಸಮರ್ಥ ಕಲಾವಿದ, ಚಿತ್ರಕಲಾ ಪ್ರಾಧ್ಯಾಪಕರಾದ ಎಸ್. ಮಹಮದ್ ವಾಲಿಯವರ ಮಾರ್ಗದರ್ಶನವು ದೊರಕಲಾರಂಭಿಸಿತು. ಈ ಬಾಲಕನಿಗೆ ಸಣ್ಣ ವಯಸ್ಸಿನಲ್ಲಿಯೇ ಚಿತ್ರ ರಚನೆಗಾಗಿ ರಾಷ್ಟ್ರಮಟ್ಟದಲ್ಲಿ ಬಹಳಷ್ಟು ಬಹುಮಾನಗಳು ಬಂದಿವೆ.

ಅವುಗಳಲ್ಲಿ ಮುಖ್ಯವಾದದು 2006ರಲ್ಲಿ ಭಾರತೀಯ ಅಂಚೆ ಇಲಾಖೆಯು ರಾಷ್ಟ್ರ ಮಟ್ಟದಲ್ಲಿ ನಡೆಸಿದ ಸ್ಟಾಂಪ್ ಡಿಸೈನ್ ಸ್ಪರ್ಧೆಯ ಸೀನಿಯರ್ ವಿಭಾಗಲ್ಲಿ ಮೊದಲನೆಯ ಬಹುಮಾನ. ಪ್ರಥಮ್ ಅವರ ರಚನೆಯು ಅಂಚೆ ಇಲಾಖೆಯ ಮಿನಿಯೇಚರ್ ಪ್ರಸಿದ್ಧೀಕರಣದಲ್ಲಿ 'ಮ್ಯಾಜಿಕ್ ಆಫ್ ಲೈಟ್' ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿದೆ. ಇದರ ಜೊತೆಗೆ ಹತ್ತು ಸಾವಿರ ರೂಪಾಯಿಗಳು ಬಹುಮಾನವಾಗಿ ದೊರೆತಿದೆ. ಈ ಕಲಾಮೇಳದಲ್ಲಿ ಪ್ರಥಮ್ ಅವರ ಹತ್ತಕ್ಕೂ ಹೆಚ್ಚಿನ ರಚನೆಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಪ್ರಥಮ್ ಅವರು ಕಲಾಮೇಳದಲ್ಲಿ ಜಲವರ್ಣ ಚಿತ್ರದ ರಚನೆಯ ಪ್ರಾತ್ಯಕ್ಷಿಕೆಯನ್ನೂ ನಡೆಸಿಕೊಡಲಿದ್ದರೆ.

ಈ ಕಲಾಮೇಳದಲ್ಲಿ ಪಾಲ್ಗೊಳ್ಳುವ ಇತರರು:

ಲೀಲಾ ಕೃಷ್ಣ (ಶಿಲ್ಪಗಳು ಮತ್ತು ಮಡಕೆಯ ಮೇಲೆ ರಚಿಸಿದ ಚಿತ್ರಗಳು)
ಗೋಪಿನಾಥ್ ಬೋರೆ (ರೇಖಾ ಚಿತ್ರಗಳು)
ವಿಜಯ ಬಾಣಾವರ್ (ಕಸೂತಿ ಮತ್ತು ಕ್ವಿಲ್ಟ್ ಡಿಸೈನ್)
ನೂತನ್ ದೊಡ್ ಬೆಲೆ (ತೈಲವರ್ಣ ಚಿತ್ರಗಳು)
ಶೋಭ ಕರಣಿಕ್ (ತೈಲವರ್ಣ ಚಿತ್ರಗಳು)
ನಂದಿತ ಕೆ. (ತೈಲವರ್ಣ ಮತ್ತು ಆಕ್ರಿಲಿಕ್ ಚಿತ್ರಗಳು)
ಸುಷ್ಮ ಕೌಶಿಕ್ (ರೇಖಾ ಚಿತ್ರಗಳು ಮತ್ತು ಗಾಜಿನ ಮೇಲೆ ರಚಿಸಿದ ಚಿತ್ರಗಳು)
ರಂಜನ ಹಿರೇಸಾವೆ (ತೈಲವರ್ಣ ಚಿತ್ರಗಳು)
ರೋಹನ್ ರಾವ್ (ಜಲವರ್ಣ ಚಿತ್ರಗಳು)

Art work by Pratham Karnikಹಾಗೂ ಇನ್ನಿತರ ಕಾವೇರಿ ಕಲಾವಿದರ ಕೃತಿಗಳು. ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದಲ್ಲಿ ಭಾಗವಹಿಸುವ ಎಲ್ಲರಿಗೂ ಅತ್ಯುತ್ತಮ ಕಲಾಕೃತಿ ಮತ್ತು ಅತ್ಯುತ್ತಮ ಕಲಾವಿದರನ್ನು ಗುರುತಿಸಲು ಮತ್ತು ಆರಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಮತದಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕಲಾ ಮೇಳದ ಪ್ರದರ್ಶನವನ್ನು ವಾಷಿಂಗ್ಟನ್ ಡಿ ಸಿ.ಯಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅನಿವಾಸಿ ಭಾರತೀಯರಿಗಾಗಿ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡತಿ ಆರತಿ ಕೃಷ್ಣ ಅವರು ಉದ್ಘಾಟಿಸಲಿದ್ದಾರೆ.

ಕಾವೇರಿಯ ರಾಜ್ಯೋತ್ಸವ ಮತ್ತು ದೀಪಾವಳಿಗೆ ಬಹಳಷ್ಟು ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಸುಪ್ರಸಿದ್ಧ ಗಾಯಕರಾದ ಮೈಸೂರು ಅನಂತ ಸ್ವಾಮಿಯವರ ಮಕ್ಕಳಾದ ಅನಿತ ಮತ್ತು ಸುನಿತ ಅವರಿಂದ ಸುಗಮ ಸಂಗೀತವು 2008ನೆಯ ಸಾಲಿನ ಕಾವೇರಿಯ ದೀಪೋತ್ಸವ ಹಬ್ಬದ ವಿಶೇಷ ಆಕರ್ಷಣೆ. ಇದೂ ಅಲ್ಲದೆ ನಾಡ ಗೀತೆ, ಸಮೂಹ ನೃತ್ಯ, ದೀಪ ನೃತ್ಯ, ನವರಾತ್ರಿ ನೃತ್ಯ,ಫ್ಯಾಷನ್ ಶೋಗಳು ನಡೆಯಲಿವೆ. ಕಿತ್ತೂರ ವೀರರಾಣಿ ಚೆನ್ನಮ್ಮ ಮತ್ತು ಬೋಸ್ಟನ್ ಬವಣೆ ಎಂಬ ಕಿರುನಾಟಕಗಳು ಪ್ರದರ್ಶನಗೊಳ್ಳಲಿವೆ. ದೀಪಾವಳಿ ಹಬ್ಬದ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾವೇರಿ ಕನ್ನಡ ಸಂಘವು ಎಲ್ಲರಿಗೂ ರಾಜ್ಯೊತ್ಸವ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳನ್ನು ಹಾರೈಸುತ್ತ, ರಾಜಧಾನಿಯ ಹಾಗೂ ಸುತ್ತಮುತ್ತಲಿನ ಎಲ್ಲಾ ಕನ್ನಡಿಗರನ್ನು ಈ ಹಬ್ಬಕ್ಕೆ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ನೀವೂ ಬರುತ್ತೀರಿ ತಾನೆ? ಆರ್.ಎಸ್.ವಿ.ಪಿ. ಮಾಡಲು ಮರೆಯದಿರಿ. ಹೆಚ್ಚಿನ ವಿವರಗಳಿಗೆ ಕಾವೇರಿಯ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X