ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸ್ಕಟ್ ಗಣೇಶನಿಗೆ 24 ನಮಸ್ಕಾರಗಳು

By ವರದಿ : ನಾಗೇಶ್ ಶೆಟ್ಟಿ ಮುಕ್ಕ
|
Google Oneindia Kannada News

Ganesha Festival in Oman-Muscat
ಒಮಾನ್, ಸೆ. 11: ಮಸ್ಕತ್ ತುಳು ಬಾಂಧವರು ಸೆಪ್ಟೆಂಬರ್ 3ರಿಂದ ಮೂರು ದಿನಗಳ ಕಾಲ ಇಲ್ಲಿನ ಶಿವಾಲಯದ ಪ್ರಾಂಗಣದಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ತಳಿರು ತೋರಣ ಮತ್ತು ನಾನಾ ಪುಷ್ಪಗಳಿಂದ ಅಲಂಕೃತ ಭವ್ಯವಾದ ಮಂಟಪದಲ್ಲಿ ಮಂಗಳೂರಿನಿಂದ ತರಿಸಿಕೊಂಡ ಮೂರ್ತಿ ಪ್ರತಿಷ್ಠಾಪನೆಗೊಂಡು, ಪ್ರಧಾನ ಅರ್ಚಕ ಶಂಕರ ನಾರಾಯಣ ಅಡಿಗರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಮಸ್ಕತ್ ನಲ್ಲಿ ಕಳೆದ 24 ವರ್ಷದಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಜಯ ರಮೇಶ್ ಅವರ ಮಾರ್ಗದರ್ಶನದಲ್ಲಿ , ಪಾರು ನಿಗಾಂಧಿ ಮತ್ತು ಬಿಜಲ್ ವೇದ್ ರಚಿಸಿದ್ದ ವರ್ಣರಂಜಿತ ಗಣೇಶನ ರಂಗೋಲಿ ಭಕ್ತರ ಮನ ಸೂರೆಗೊಂಡಿತು. ವೈದ್ಯನಾಥನ್ ಅವರಿಂದ ವೈದಿಕ ಸ್ತೋತ್ರ ಪಠನ, ಎವಿ ಮನೋಹರ್ ಅವರಿಂದ ಶುಕ್ಲ ಯುಜುರ್ವೇದ ಗಾಯನ , ಕೋಣಿ ಪ್ರಕಾಶ್ ನಾಯಕ್ ಮತ್ತು ಸಂಗಡಿಗರಿಂದ ಭಜನೆ, ಕು ಅರ್ ಮೀನಾಕ್ಷಿ ಮತ್ತು ಸಂಗಡಿಗರಿಂದ ಕರ್ನಾಟಕ ಸಂಗೀತ, ಚಿತ್ರ ರವಿ ಮತ್ತು ಶಿಷ್ಯೆಯರ ವೀಣಾ ವಾದನದಿಂದ ವಿನಾಯಕ ಹಬ್ಬದಾಚರಣೆಗೆ ಕಳೆಯೇರಿತ್ತು.

ಚಿನ್ಮಯ ಬಾಲವಿಹಾರ್, ಹರೇ ಕೃಷ್ಣ ಬಳಗ, ಕಲ್ಕಿ ಭಗವಾನ್ ಬಳಗ, ಸಾಯಿ ಬಳಗ, ಮಾತಾ ಅಮೃತಮಯಿ ಭಜನ ಮಂಡಳಿ, ಸ್ವಾಮಿ ಅಯ್ಯಪ್ಪ ಭಕ್ತಿ ಸಮಿತಿ, ಆರ್ಟ್ ಆಫ್ ಲಿವಿಂಗ್ ಬಳಗ, ಮಸ್ಕತ್ ಜಿ ಎಸ್ ಬಿ ಬಳಗ, ಶ್ರೀ ಕೃಷ್ಣ ಭಜನ ಬಳಗ, ಡಿವೈನ್ ಪಾರ್ಕ್ ಬಳಗ, ಶ್ರೀ ತ್ಯಾಗರಾಜ ಸಮಿತಿ, ಮೈತ್ರಿವೃಂದ, ಪುರ್ಣಚಂದರ್, ಮೊದಲಾದವರು ವಿವಿಧ ಭಕ್ತಿ ಸಂಗೀತಗಳಿಂದ ಮನ ರಂಜಿಸಿದರು. ಆಪಾರ ಭಕ್ತ ಸಮುದಾಯದ ಸಮ್ಮುಖದಲ್ಲಿ ಮೂರನೇ ದಿನ ಭವ್ಯ ಮೂರ್ತಿಯ ವಿಸರ್ಜನೆ ನೆರವೇರಿತು. ಭಕ್ತರಿಗೆ ಸಾಂಪ್ರದಾಯಿಕ ಪದ್ದತಿಯಲ್ಲಿ ಮಹಾಪ್ರಸಾದ ವಿತರಿಸಲಾಯಿತು.

ಪೀತಾಂಬರ ಬಿ ಅಳಕೆಯವರ ನೇತೃತ್ವದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಗಣೇಶೋತ್ಸವ ಸಮಿತಿಯ ಕಾರ್ಯಕರ್ತರಾದ ದಯಾನಂದ ಆರ್ ಕಾವೂರ್, ಕೋಣಿ ಪ್ರಕಾಶ್ ನಾಯಕ್, ರಮಾನಂದ್ ಕುಂದರ್, ಎಸ್ ಕೆ ಪೂಜಾರಿ, ರಮೇಶ್ ಶೆಟ್ಟಿಗಾರ್, ಉಮೇಶ್ ಕರ್ಕೇರ, ಶಶಿದರ್ ಶೆಟ್ಟಿ ಮಲ್ಲಾರ್, ಕರುಣಾಕರ್ ರಾವ್, ಅಶೋಕ್ ಕೊಟ್ಯಾನ್, ನಾಗೇಶ್ ಶೆಟ್ಟಿ ಮುಕ್ಕ, ರವಿ ಕಾಂಚನ್, ಮಂಗಳದಾಸ್ ಕಾಮತ್ ಮತ್ತು ಇತರ ತುಳು ಭಾಂದವರು ಶ್ರಮಿಸಿದ್ದರು.

ಭಾರತದ ನಾನಾ ಪ್ರದೇಶದಿಂದ ಬಂದು ಇಲ್ಲಿ ನೆಲೆಗೊಂಡ ಗಣೇಶ ಭಕ್ತರು ಪಾಲ್ಗೊಂಡ ಚೌತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಭಾರತದ ರಾಯಭಾರಿ ಅನಿಲ್ ವಧ್ವ ,ಉದ್ಯಮಿಗಳಾದ ಕನಕ್ಷಿ ಕಿಮ್ಜಿ, ಕಿರಣ್ ಅಶಾರ್, ಅಶ್ವಿನ್ ನನ್ಷಿ, ಭಾರತಿಯ ಸಾಮಾಜಿಕ ಸಂಸ್ಥೆಯ ಅಧ್ಯಕ್ಷ ಡಾ ಸತೀಶ್ ನಂಬಿಯಾರ್ , ಆರ್ ವೈಕುಂಠ್ ಮೊದಲಾದವರು ಉಪಸ್ಥಿತರಿದ್ದರು.

ಮಸ್ಕತ್ ಗಣೇಶೋತ್ಸವದ ಗ್ಯಾಲರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X