ಎಮಿರೇಟ್ಸ್ ಮರಳುಗಾಡಿನಲ್ಲಿ ಉದಯ ಟಿವಿ ಸವಾರಿ

Udaya TV, News reader (File Photo)
ಉದಯ ವಾರ್ತೆಗಳು, ಓದುತ್ತಿರುವವರು ಸುಜಾತಾ (File Photo)
ಬೆಂಗಳೂರು, ಜೂ. 17 : ಖಾಸಗಿ ವಲಯದ ಮೊಟ್ಟಮೊದಲ ಕನ್ನಡ ಟಿವಿ ವಾಹಿನಿ "ಉದಯ ಟಿವಿ " ಈಗ ಮಧ್ಯಪ್ರಾಚ್ಯ ರಾಷ್ಟ್ರಗಳ ಕನ್ನಡ ಸಮುದಾಯಕ್ಕೆ ಲಭ್ಯ. ಇದೇ ಜೂನ್ 15ರಿಂದ ವಾಹಿನಿಯು ತನ್ನ ಪ್ರಸರಣಾ ಜಾಲವನ್ನು ಮರಳುಗಾಡಿನ ದೇಶಗಳಿಗೆ ವಿಸ್ತರಿಸಿದ್ದು ಈ ಭಾಗದ ಕನ್ನಡಿಗ ಕುಟುಂಬಗಳು ಈಗಾಗಲೆ ವಾಹಿನಿಯನ್ನು ವೀಕ್ಷಿಸಲು ಶುರುಮಾಡಿದ್ದಾರೆ.

ಎಮಿರೇಟ್ಸ್‌ನ ಪ್ರಾಂತ್ಯಗಳಾದ ಅಬುದಾಭಿ, ದುಬೈ, ಫುಜೈರಾ, ರಸ್ ಅಲ್ ಖೈಮ, ಶಾರ್ಜಾ ಮತ್ತು ಉಮ್ ಅಲ್ ಕ್ವೈನ್ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಉದಯ ವಾಹಿನಿಯ ನಾಲಕ್ಕೂ ಪ್ರಸಾರಗಳು ದೊರೆಯುತ್ತವೆ. ಮುಖ್ಯ ಚಾನಲ್ ಆದ ಉದಯ ಟಿವಿ, ಉದಯ ವಾರ್ತೆಗಳು, ಉದಯ ಮೂವಿಸ್ ಮತ್ತು ಕನ್ನಡ ಚಿತ್ರದ ಹಾಡುಗಳಿಗೆ ಮೀಸಲಾದ U2 ಕಾರ್ಯಕ್ರಮಗಳನ್ನು ಆಸಕ್ತರು ವೀಕ್ಷಿಸಬಹುದು.

ಉದಯ ಚಾನಲ್ಲಿನ ಮೇಲೆ ಹೇಳಿದ ಎಲ್ಲ ಕಾರ್ಯಕ್ರಮಗಳು ಎಂದಿನಂತೆ ಚೆನ್ನೈ ಮತ್ತು ಬೆಂಗಳೂರಿನಿಂದ ಹೊರಹೊಮ್ಮುತ್ತವೆ. ವಿದೇಶಗಳಲ್ಲಿ ವಾಹಿನಿಯ ಕಾರ್ಯಕ್ರಮಗಳನ್ನು ಬಿಂಬಿಸುವ ಹಕ್ಕುಗಳನ್ನು ಮಾತ್ರ ಆಯಾ ದೇಶಗಳಲ್ಲಿರುವ ಯಾವುದಾದರೊಂದು ಟಿವಿ ಪೂರೈಕೆದಾರ ಸಂಸ್ಥೆಗೆ ವಹಿಸಲಾಗುತ್ತದೆ. ಎಮಿರೇಟ್ಸ್‌ನಲ್ಲಿ ಉದಯ ಪ್ರಸಾರ ಹಕ್ಕುಗಳನ್ನು ಪಡೆದಿರುವ ಸಂಸ್ಥೆ ETISALAT.

ಉದಯ ಟಿವಿಗೆ ಚಂದಾದಾರರಾಗ ಬಯಸುವ ಯುಎಇ ಕನ್ನಡಿಗರು ಗ್ರಾಹಕ ಸಂಪರ್ಕ ದೂರವಾಣಿ ಸಂಖ್ಯೆ 101ಕ್ಕೆ ಕರೆಮಾಡಬಹುದು. ಈ ದೂರವಾಣಿ ಸಂಖ್ಯೆ ಎಮಿರೇಟ್ಸ್‌ನ ಏಳೂ ರಾಷ್ಟ್ರಗಳಿಗೆ ಅನ್ವಯವಾಗುತ್ತದೆ. ಮಾಸಿಕ ಚಂದಾ AED 5.

**

ಕನ್ನಡದಲ್ಲಿ ಒಟ್ಟು 8 ಟಿವಿ ವಾಹಿನಿಗಳಿವೆ. ದೂರದರ್ಶನ, ಚಂದನ, ಉದಯ, ಈಟಿವಿ, ಕಸ್ತೂರಿ, ಜೀ ಕನ್ನಡ, ಟಿವಿ9 ಮತ್ತು ಏಷ್ಯಾನೆಟ್‌ನ ಸುವರ್ಣ. ಈ ಎಲ್ಲ ವಾಹಿನಿಗಳು ಯಾವ ಯಾವ ದೇಶದಲ್ಲಿ ಲಭ್ಯ ಅಥವಾ ಅಲಭ್ಯ ಎನ್ನುವ ಮಾಹಿತಿ ದಟ್ಸ್‌ಕನ್ನಡಕ್ಕೆ ಲಭ್ಯವಾಗಿಲ್ಲ. ವಿದೇಶಗಳಲ್ಲಿ ನೆಲೆಸಿರುವ ನಮ್ಮ ಮಾನ್ಯ ಓದುಗರು ಮಾಹಿತಿಯನ್ನು ಕಾಮೆಂಟ್ಸ್ ಅಂಗಳದಲ್ಲಿ ದಾಖಲಿಸಬೇಕಾಗಿ ವಿನಂತಿ. ಉದಾ : ನಾನು ಕಂಪಾಲಾ ಸಿಟಿಯಲ್ಲಿ ನೆಲೆಸಿದ್ದೇನೆ. ಇಲ್ಲಿ ಈಟಿವಿ ಸಿಗುತ್ತದಾ?

ನಿಮ್ಮ ನಗರದಲ್ಲಿರುವ, ಚಂದಾದಾರರಾಗ ಬಯಸುವ ಇತರ ಕನ್ನಡಿಗರಿಗೆ ಪೂರೈಕೆಕಾರರ ಸಂಸ್ಥೆಯ ಹೆಸರು ಮತ್ತು ಅವರ ದೂರವಾಣಿ ಸಂಖ್ಯೆ ಅಥವಾ ಈಮೇಲ್ ವಿಳಾಸಗಳನ್ನು ನೀಡಿ ಸಹಕರಿಸಿ - ಸಂಪಾದಕ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+