ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಟರ್ ಹಿರಣ್ಣಯ್ಯ ಹೇಳಿದ "ಪ್ರತಿಮೆಯಿಂದ ಪಾಠ"

By Staff
|
Google Oneindia Kannada News

Wise quotes by master Hirannaiahಮೊನ್ನೆ ಬೆಂಗಳೂರಿಗೆ ಹೋಗಿದ್ದಾಗ ಮಾಸ್ಟರ್ ಹಿರಣ್ಣಯ್ಯನವರ ನಿವಾಸಕ್ಕೆ ಭೇಟಿ ನೀಡುವ ಅವಕಾಶ ಬಂದೊದಗಿತು. ಮನೆಯೊಳಕ್ಕೆ ಕಾಲಿಟ್ಟಾಗಲಿಂದ ಅವರದ್ದೇ ಚುರುಕಾದ ಹಾಸ್ಯ ಲೇಪಿತ ಮಾತೇಮಾತು. ಹೀಗೇ ಆಡುತ್ತಿರಲು ನೆರೆದಿದ್ದ ಮಕ್ಕಳನ್ನುದ್ದೇಶಿಸಿ ಅವರು ಜೀವನದಲ್ಲಿ ಹಿರಿಯರು, ಅನುಭವಿಗಳು ನೀಡುವ ಉಪದೇಶ ಮತ್ತು ಬದುಕಿನಲ್ಲಿ ಎದುರಾಗುವ ಏಟುಗಳ ಬಗ್ಗೆ ಪ್ರತಿಮೆಗೆ ಹೋಲಿಸಿ ಪುಟ್ಟ ಕಟ್ಟು ಕತೆಯನ್ನು ಹೇಳಿದರು. ಅದು ಹೀಗಿತ್ತು...

ದೇವಾಲಯವೊಂದರಲ್ಲಿ ಪುರರೂ ಪುರೋಹಿತರೂ ಪೂಜೆ ಮುಗಿಸಿ ದೇವಸ್ಥಾನದ ಬಾಗಿಲು ಮುಚ್ಚಿ ಹೋದ ಬಳಿಕ, ಅಲ್ಲೇ ಸುಂದರ ಪ್ರತಿಮೆಯ ಮುಂದಿದ್ದ ಮೆಟ್ಟಿಲು ಪ್ರತಿಮೆಯನ್ನು ಕಂಡು "ಎಲೈ ಪ್ರತಿಮೆಯೇ, ಇದೆಂಥಾ ಅನ್ಯಾಯ ನಾನೂ ನೀನೂ ಒಂದೇ ಬಂಡೆಯಿಂದ ಬಂದವರಾದರೂ ನಿನಗೆ ಮಾತ್ರ ದಿನವೂ ಪೂಜೆ, ಅಭಿಷೇಕಾಲಂಕಾರಗಳು, ಆದರೆ ನನ್ನನ್ನು ಮಾತ್ರ ತುಳಿದುಕೊಂಡು ಓಡಾಡುತ್ತಾರೆ" ಎಂದಿತು.

ಅದಕ್ಕೆ ಉತ್ತರವಾಗಿ ಪ್ರತಿಮೆಯು "ಹೌದು ನೋಡು ನಾನೂ ನೀನೂ ಒಂದೇ ಬಂಡೆಯಿಂದ ಬಂದವರಾದರೂ ನೀನು ಮಾತ್ರ ಒಂದೇ ಉಳಿಯೇಟಿಗೇ ತುಂಡಾಗಿ ಹೋದೆ ಅದಕ್ಕೆ ನಿನ್ನನ್ನು ಮೆಟ್ಟಿಲು ಮಾಡಿದರು, ಆದರೆ ನಾನು ಸಾವಿರ ಏಟು ಬಿದ್ದರೂ ಸೀಳಲಿಲ್ಲ ಅದಕ್ಕೆ ನನ್ನನ್ನು ಪ್ರತಿಮೆಯನ್ನಾಗಿ ಮಾಡಿದರು"

ಜೀವನದಲ್ಲಿ ಎದಿರಾಗುವ ಕಷ್ಟಗಳನ್ನು ಎದುರಿಸಿದಲ್ಲಿ ಮಾನವ ಪೂಜಿಸಲ್ಪಡುವ ಪ್ರತಿಮೆಯಂತೆ ಪಕ್ವವಾಗುತ್ತಾನೆ, ಕಷ್ಟ ತೊಂದರೆಗಳಿಗೆ ಸೋತರೆ ಮೆಟ್ಟಿಲಿನ ಹಾಗೆ ಎಂಬುದೇ ಅದರ ಅರ್ಥ. ಎಷ್ಟಾದರೂ ಅನುಭವಿಗಳೂ ಅದರಲ್ಲೂ ಹಿರಣ್ಣಯ್ಯನವರದು ಐವತ್ತು ವರ್ಷಕ್ಕೂ ಮೀರಿದ ರಂಗಭೂಮಿ ಕಲಾನುಭವ ಅಲ್ಲವೇ.

ರಾಜಲಕ್ಷ್ಮಿ ಮತ್ತು ಕನಕಾಪುರ ನಾರಾಯಣ
ಲಿವರ್ಪೂಲ್, ಸಿಡ್ನಿ,ಆಸ್ತ್ರೇಲಿಯಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X