• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಗಲು ಹೆಗಲಿಗೊಂದು ಹೆಗಲು ಇದೆಯೇನು ಇಲ್ಲಿ?

By Staff
|

ಊರಲ್ಲಿನ ಚೆಡ್ಡಿ ದೋಸ್ತು ಮದುವೆಯಾದ ಬಗ್ಗೆಯಾಗಲಿ, ಅವನು ಅಪ್ಪ ಆದ ಬಗ್ಗೆಯಾಗಲಿ ನಮಗೆ ಗೊತ್ತಿರುವುದಿಲ್ಲ! ಆ ಬಗ್ಗೆ ತಿಳಿದುಕೊಳ್ಳಲು ನಮಗಷ್ಟು ಬಿಡುವಿಲ್ಲ! ನಾವು ಸಕತ್ತು ಬಿಝಿ! ಆದರೆ ರವೀನಾ ಟಂಡನ್ ಅಮ್ಮ ಆಗಿದ್ದು ಗೊತ್ತು! ಅದನ್ನು 10ಜನಕ್ಕೆ ಹೇಳೋದು ಸಹಾ ಗೊತ್ತು! ಇದಕ್ಕಿಂತ ದುರಂತ ಬೇಕೇ?


Shoulder to shoulderಸ್ನೇಹಿತನೊಬ್ಬ ಅಪರೂಪಕ್ಕೊಮ್ಮೆ ಫೋನು ಮಾಡುತ್ತಾನೆ; ದಿನಕ್ಕೆ ನಲವತ್ತೆಂಟು ಗಂಟೆ ಇದ್ದರೂ ಸಾಲದು ಎಂಬಂತೆ ಆಡುತ್ತೇವೆ. Can I call you tomorrow? ಅಂತ ಹೇಳಿ ಆತನ ಉತ್ತರಕ್ಕೂ ಕಾಯದೆ ಫೋನ್ ಇಟ್ಟುಬಿಡುತ್ತೇವೆ. ಇನ್ನು ನಮಗೆ ಈ-ಮೇಲ್ ಫಾರ್ವರ್ಡ್ ಓದುವುದಕ್ಕೆ ಪುರುಸೊತ್ತೆಲ್ಲಿರುತ್ತೆ?. ಓದುವುದು ಬಿಡಿ, ಇನ್‌ಬಾಕ್ಸ್ ನಲ್ಲಿ ಫಾರ್ವರ್ಡ್ ಕಂಡರೇ ಶನಿ ಎಂದುಕೊಂಡು ಸಿಟ್ಟಾಗುತ್ತೇವೆ. ಅದನ್ನು ಓಪನ್ ಸಹಿತ ಮಾಡದೆ ಡಿಲೀಟ್ ಮಾಡಿಬಿಡುತ್ತೇವೆ. ಡಿಲೀಟ್ ಮಾಡುವುದೂ ದೊಡ್ಡ ತಲೆನೋವಿನ ವಿಷಯ; ಸಿಟ್ಟು.

ಕಾಗದ ಬರೆಯೋರು ಯಾರೂ ಇಲ್ಲ ಈಗ, ಏನಿದ್ರೂ ಫೋನು- ಅಂತಾರೆ. ಪೋಸ್ಟ್ ಆಫೀಸಿನಿಂದ ಕಾರ್ಡು-ಇನ್ಲಾಂಡ್ ಲೆಟರ್ ತಂದು ಅಥವ ಮನೆಯಲ್ಲೇ ಇರುವ ಬಿಳಿಯ ಹಾಳೆಯ ಮೇಲೆ ಶ್ರೀ ಬರೆದು, ದಿನಾಂಕ ಗುರುತು ಹಾಕಿ, ಬೆರಳುಗಳ ಮಧ್ಯದಿಂದ ಭಾವನೆ ಹರಿಸಿ ಹಗುರಾಗಿ, ಮತ್ತೊಮ್ಮೆ ಓದಿಕೊಂಡು ತಂಪಾಗಿ, ಕವರಿನೊಳಕ್ಕೆ ಬೆಚ್ಚನೆಯ ಉಸಿರು ತುಂಬಿಸಿ, ಅದರ ನಡುವೆ ಪತ್ರವಿಟ್ಟು ಬಂಧಿಸಿ, ಒಣಗಿಲ್ಲ ಅನ್ನುವುದನ್ನು ರವಾನಿಸುವುದಕ್ಕೋ ಏನೋ ನಾಲಗೆ ಅಂಚಿಗೆ ಮುಟ್ಟಿಸಿ ಸ್ಟ್ಯಾಂಪ್ ಹಚ್ಚಿ ಪೋಸ್ಟ್ ಬಾಕ್ಸಿಗೆ ಹಾಕಿ ಕೈಮುಗಿಯುವ ಸ್ವೀಟಾದ ತಾಳ್ಮೆಯ ಮಾತು ಬಿಡಿ, ಒಂದು ಈ-ಮೇಲ್‌ಗೆ ರಿಪ್ಲೈ ಮಾಡಲೂ ಪುರುಸೊತ್ತಲ್ಲಿದಷ್ಟು ಕ್ರಿಯಾಶೀಲರು ಜನ, ಈ ಯುಗದಲ್ಲಿ.

ಇಲ್ಲಿ ಯಾರಿಗೆ ಕೆಲಸವಿಲ್ಲ ಹೇಳಿ? ನಾವು ಮರೆಯುವುದು ಅದನ್ನೇ. ಒಬ್ಬಾತ ಫೋನ್ ಮಾಡಿದರೆ, ಫಾರ್ವರ್ಡ್ ಕಳಿಸಿದರೆ, ಮಾಡೋಕೆ ಬೇರೆ ಕೆಲಸ ಇಲ್ಲಾ- ಅಂತ ಅಂದುಕೊಳ್ಳುತ್ತೇವೆ. ಅವನು ನಮಗಿಂತ ಬಿಝಿಯಾಗಿರುತ್ತಾನೆ ಅನ್ನುವುದು ನಮಗೆ ಬೇಕಿಲ್ಲ. ನಾವು ಎಷ್ಟು ಬಿಝಿ ಅನ್ನುವುದನ್ನು ತೋರಿಸಿಕೊಳ್ಳಬೇಕು. ಅಥವ ಇವರು ಬಿಝಿಯಾಗಿದ್ದಾಗ ಅವರಿಗೆ ಬಿಡುವಿರುತ್ತೆ, ಅವರು ಬಝಿಯಾಗಿದ್ದಾಗ ಇವರಿಗೆ ಬಿಡುವಿರುತ್ತೆ. ಜನ, ಈ ಕಾರ್ಯಕ್ಕೇ ಅಂತ ಬಿಡುವು ಮಾಡಿಕೊಂಡಿರುತ್ತಾರೆ ಅನ್ನುವುದನ್ನು ಮರೆಯುತ್ತೇವೆ. ತುಂಬಾ ಹಾರ್ಶ್ ಆಗಿ ಅವಸರದಲ್ಲಿ ಫೋನ್ ಇಟ್ಟುಬಿಡುತ್ತೇವೆ. ಈ-ಮೈಲ್ ಗಳಿಗೆ ರಿಪ್ಲೈ ಮಾಡುವುದಿಲ್ಲ. ಎಲ್ಲೋ ಓದಿದ ನೆನಪು- No letter should be left unanswered.

ಕಲಾವಿದ ಸುಚೇಂದ್ರ ಪ್ರಸಾದ್ ಹೇಳಿದ ಮಾತು ನೆನಪಾಗುತ್ತಿದೆ- ಮುಂಚೆ ಎಲ್ರೂ ಸೇರಿ ಹರಟೆ ಹೊಡೆಯೋರು. ಸೋಮಾರಿ ಕಟ್ಟೆ ಅಂತಾನೆ ಹಳ್ಳಿ ಕಡೆ ಅದಕ್ಕೆ ಹೆಸರು. ಈಗ ಅದಕ್ಕೆಲ್ಲ ಯಾರಿಗೂ ಬಿಡುವಿಲ್ಲ. ಅವರದ್ದೂ ಬಿಡುವಿಲ್ಲದಷ್ಟು ಬಿಝಿ ಶೆಡ್ಯೂಲ್ ಆದರೂ ಹೋಗೋಕೆ ಮುಂಚೆ ಒಮ್ಮೆ ಭೇಟಿಯಾಗಿ, ಹರಟೆ ಹೊಡೆಯೋಣ ಅಂತ ಪ್ರೀತಿಯಿಂದಲೇ ಆಹ್ವಾನಿಸಿದರು. ಹೋಗಲು ಆಗಲಿಲ್ಲ. ಫೋನಿನಲ್ಲೇ ಗಂಟೆಗಟ್ಟಲೆ ಹರಟೆ ಕೊಚ್ಚಿ ಬಂದೆ.

ಕಾಫೀ ಡೇ, ಬೌಲಿಂಗ್, ಗೋ ಕಾರ್ಟಿಂಗ್, ಪಬ್‌ಗಳಲ್ಲಿ ಇಂತಹ ಹರಟೆ ಘಟಿಸುವುದಿಲ್ಲ. ಏನೋ ಕರ್ಕಶ ಹಾಡು ಕೇಳಿಸುತ್ತಿರುತ್ತೆ, ಬೇಕಾದಷ್ಟು ಹುಡುಗಿಯರು ತಿರುಗುತ್ತಿರುತ್ತಾರೆ. ಅಲ್ಲೇನಿದ್ದರೂ ಮೋಜು ಅಷ್ಟೆ. ಅದೇ ಟೀ ಅಂಗಡಿಯ ಬೆಂಚಿನ ಮೇಲೆ, ವೈಶಾಲಿ ಹೋಟೆಲ್ ಮುಂದಿನ ಮಸಾಲೆದೋಸೆಯ ಪರಿಮಳ ಹಾಸಿಕೊಂಡ ಫುಟ್‌ಪಾತಿನಲ್ಲಿ, ಧೂಳು ಹಬ್ಬಿದ ಸಂಜೆಯ ಖಾಲಿ ಮೈದಾನದಲ್ಲಿ, ಸ್ನೇಹಿತನ ಮನೆ ಹೊರಗೆ ಕತ್ತಲೆಯ ಜಗಲಿಯಲ್ಲಿ, ಬಿಟ್ಟು ಬಂದು ಮರೆತ ಕಾಲೇಜಿನ ಪಾರ್ಕಿಂಗ್ ಲಾಟ್‌ನಲ್ಲಿ ಗುಂಪಾಗಿ ಕಳೆತು ಒಂದಿಷ್ಟು ಕೆಲಸಕ್ಕೆ ಬಾರದ ಮಾತನಾಡಿ ಯಾವ ಕಾಲವಾಯಿತು ಯೋಚಿಸಿ.

ನಾವುಗಳು ಒಂದಷ್ಟು ಜನ ಸಮಯ ಹಾಳು ಮಾಡಬೇಕು ಅಂತಲೇ ಯಾರಾದರು ಒಬ್ಬರ ಮನೆಯಲ್ಲಿ ಸೇರಿ ಗಂಟೆಗಟ್ಟಲೆ ಅವರಿವರನ್ನು ಗೇಲಿ ಮಾಡಿಕೊಂಡಿರುತ್ತೇವೆ. ಯಾವುದಾದರು ಟಾಪಿಕ್ ಬಗ್ಗೆ ಚರ್ಚೆ ಮಾಡುತ್ತೇವೆ. ಅರ್ಥ ಇರಲೇಬೇಕು ಅಂತೇನಿಲ್ಲ. ಒಂದಿಷ್ಟು ನಿಮಿಷಗಳನ್ನು ಸುಟ್ಟು ಅದರ ಹವೆಯಲ್ಲಿ ಪುನರುಜ್ಜೀವನಗೊಂಡು ಮರಳುತ್ತೇವೆ.

ನಮ್ಮಲ್ಲಿ ಎಲ್ಲರಿಗೂ ಮಾಡಲು ಬೇಕಾದಷ್ಟು ಕೆಲಸವಿದೆ. ಅದರ ನಡುವೆಯೇ ಒಂದು ಕಾಡುಹರಟೆ, ತಮಾಷೆ, ಗೆಳಯನಿಗೆ ಸಿಗಲೇಬೇಕೆಂಬ ಒತ್ತಾಯ, ಬಹಳ ದಿವ್ಸ ಸಿಗದಿದ್ದಾಗ ಬೈಗುಳ, ಬೈಟು ಮಸಾಲೆದೋಸೆ, ಒಂದು ವಾಕ್, ಎಲ್ಲಕ್ಕಿಂತ ಖುಷಿ ಕೊಡುವ ಟೇರಿಸಿನ ಮೇಲೊಂದು ಚಾಪೆ ಹಾಸಿ ಎಲ್ಲರೂ ಒಟ್ಟಾಗಿ ಕೂತು ಕತ್ತಲೆಯಲ್ಲಿ ಕಾಲದೊಳಗೆ ಲೀನವಾಗುವುದು.

ಅಲ್ಲಿ ಪೋಲಿ ಜೋಕುಗಳು, ಅಡಿಗರ ಕವಿತೆಗಳು, ಎಂದೂ ಗೆಲ್ಲದ ಕ್ರಿಕೆಟ್ ಮ್ಯಾಚುಗಳು, ಎಂದೂ ಸೋಲದ ಸರಕಾರಗಳು, ಅವರಿವರ ಗಾಸಿಪ್ಪು, ಬಯಾಲಜಿ ಮೇಷ್ಟ್ರು ಹಾಕಲು ಮರೆತ ಜಿಪ್ಪು, ಮರೆಯಲು ಆಗದ ಎಂದೂ ಮಾತಾಡಿಸಿರದ ಮೆಚ್ಚಿನ ಹುಡುಗಿಯರು, ಕ್ಲಾಸ್‌ಮೇಟ್ ಒಬ್ಬನ ರಗಳೆಗಳು, ನಾವೇ ಮಾಡಿದ ತರಲೆಗಳು, ಮುಗಿಯದ ಕೆಲಸಗಳು, ಮುಂದಿನ ಯೋಜನೆಗಳು...... ಬಹುಶಃ ಮಾತನಾಡುತ್ತ ಆಡುತ್ತ ಕಾಲದೊಳಗೆ ಲೀನವಾಗುವ ಸುಖ ಕೊಡುವುದು ಇಂತಹ ನಿಷ್ಪ್ರಯೋಜಕ ಹರಟೆಗಳು ಮಾತ್ರ ಅನಿಸುತ್ತೆ. ಮತ್ತು ಅವು ಸಾಧ್ಯವಾಗುವುದು ಸ್ನೇಹ ಸಂಬಂಧಗಳಲ್ಲಿ ಗುಂಪಿನ ಏಕಾಂತದಲ್ಲಿ ಮಾತ್ರ.

ನಮ್ಮ ಹರಟೆ ಮಲ್ಲರ ಗುಂಪಿನವನೇ ಆದ ಸ್ನೇಹಿತನೊಬ್ಬ ಮೊನ್ನೆ ಫಾರ್ವರ್ಡ್ ಕಳಿಸಿದ್ದ. ಇದು ನಿಮ್ಮ ಮೇಲ್ ಮನೆಯ ಇನ್‌ಬಾಕ್ಸ್ ಬಾಗಿಲನ್ನು ಕೂಡ ತಟ್ಟಿರುತ್ತೆ, ನೀವು ಅದನ್ನು ಡಿಲೀಟ್ ಸಹಿತ ಮಾಡಿರುತ್ತೀರಿ. ಆ ಕತೆ, ಅದನ್ನ ಓದಿ ಕವಿತೆಯೊಂದು ನೆನಪಾದ ಕತೆ ಹೀಗಿದೆ:

"My mother used to ask me what the most important part of the body is. Through the years I would take a guess at what I thought was the correct.

When I was younger, I thought sound was very important to us as humans, so I said, "My ears, Mommy."

She said, "No. Many people are deaf. But you keep thinking about it and I will ask you again soon."

Several years passed before she asked me again. Since making my first attempt, I had contemplated the correct answer.

So this time I told her, "Mommy, sight is very important to everybody, so it must be our eyes."

She looked at me and told me, "You are learning fast, but the answer is not correct because there are many people who are blind."

Stumped again, I continued my quest for knowledge and over the years,

Mother asked me a couple more times and always her answer was, "No. But you are getting smarter every year, my child."

Then one year, my grandfather died. Everybody was hurt. Everybody was crying. Even my father cried. I remember that especially because it was only the second time I saw him cry.

My Mom looked at me when it was our turn to say our final good-bye to my Grandfather. She asked me, "Do you know the most important body part yet, my dear?" I was shocked when she asked me this now. I always thought this was a game between her and me.

She saw the confusion on my face and told me, "This question is very important. It shows that you have really lived in your life. For every body part you gave me in the past, I have told you were wrong and I have given you an example why. But today is the day you need to learn this important lesson."

She looked down at me as only a mother can. I saw her eyes well up with tears. She said, "My dear, the most important body part is your shoulder."

I asked, "Is it because it holds up my head?"

She replied, "No, it is because it can hold the head of a friend or a loved one when they cry. Everybody needs a shoulder to cry on sometime in life, my dear. I only hope that you have enough love and friends that you will always have a shoulder to cry on when you need it."

Then and there I knew the most important body part is not a selfish one. It is made for others and not for yourself. It is sympathetic to the pain of others.

People will forget what you said. People will forget what you did . But people will NEVER forget how you made them feel.

The origination of this letter is unknown, Good friends are like stars...You dont always see them, but you always know they are there.

*

ಹೊಸ್ತಿಲು

ಅತ್ತು ಹಗುರಾಗಲು

ಹೆಗಲಿನಾಸರೆಯಿಲ್ಲ

ನಕ್ಕು ಸಂಭ್ರಮಿಸಲು

ಸಾವಿನನುಮತಿಯಿಲ್ಲ

ನಗುವಿನಾವೃಕದಳುವು

ಕಡುಗಪ್ಪಿನಾಳದಲಿ

ಸುಗಮಗೀತೆಯ ಕವಿತೆ

ಚಂಡೆ ಹಿಮ್ಮೇಳದಲಿ

ಧೃತಿವಾಕ್ಯ, ತತ್ವ,

ವೈರಾಗ್ಯ ಕ್ಷಣಿಕ

ಭರವಸೆಯ ಬುತ್ತಿಯಲಿ

ಭುಗಿಲೆದ್ದ ತಕ್ಷಕ

ಅಂಗೈಯ ಮಧ್ಯದಲಿ

ಜಲಬಿಂದು ವಿವರ್ಣ

ನಿರ್ಲಜ್ಜ ಜಿಹ್ವೆಗಳು

ಬಯಸುತಿವೆ ತರ್ಪಣ

ನಿನ್ನ ಸಾಮ್ರಾಜ್ಯದಲಿ

ನಿಜದ ನಗುವಿಗೆ ತವಕ

ಒಮ್ಮೆ ಮೂಡಿಸಿ ಹರುಷ

ಮೆರೆದಾಳುತಿರು ಸೂತಕ

ನೀವು ಬೇಕಿದ್ದರೆ ಕವಿತೆ ಓದುತ್ತ ಕೂರಿ. ನನಗೆ, ಸ್ನೇಹಿತರಿಗೆ ಫೋನು ಮಾಡಿ ಒಂದಿಷ್ಟು ಕೆಲಸಕ್ಕೆ ಬಾರದ ಸಂಗತಿಗಳನ್ನು ಹೆಣೆಯುತ್ತ ಮಾತನಾಡುವುದಿದೆ. Iam too busy, ಮತ್ತೆ ಸಿಗೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X