• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿವಿನಾಡಿನಲ್ಲಿ ಕನ್ನಡ ಕಲರವ

By Staff
|

ಆಕ್ಲೆಂಡ್ ಕನ್ನಡಿಗರ ಸಂತೋಷಕ್ಕೆ ಅಂದು ಪಾರವೇ ಇರಲಿಲ್ಲ. ಕನ್ನಡ ಎಂಬ ಮೂರಕ್ಷಕರ ಮಂತ್ರ ಆಕ್ಲೆಂಡ್ ಕನ್ನಡಿಗರನ್ನು ಅಂದು ಒಂದುಗೂಡಿಸಿತ್ತು. ಎಲ್ಲರ ಮನದಲ್ಲಿ ಕನ್ನಡ ಡಿಂಡಿಮ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಭಾವ ಮೈಮನಗಳ ಸುಳಿಯಲ್ಲಿ.

  • ಪ್ರಕಾಶ್ ರಾಜರಾವ್

ಕಿವಿನಾಡಿನಲ್ಲಿ ಕನ್ನಡ ಕಲರವನ್ಯೂಜಿಲೆಂಡಿನಲ್ಲಿ ಭಾರತೀಯರ ಧ್ವನಿಯಾಗಿರುವ ಆಂಗ್ಲ ಭಾಷಾಪತ್ರಿಕೆ ದಿ ಇಂಡಿಯನ್ ನ್ಯೂಸ್‌ಲಿಂಕ್‌ನ ಪ್ರಧಾನ ಸಂಪಾದಕರಾದ ವೆಂಕಟರಾಮನ್ ಅವರು ಈ ಬಾರಿಯ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ದಿನಾಂಕ 24ನೇ ನವೆಂಬರ್ 2007ರಂದು ಶನಿವಾರ ಆಕ್ಲೆಂಡಿನಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ಮಾಡಿ ಮತ್ತು ಜ್ಯೋತಿ ಬೆಳಗಿಸಿದ ನಂತರ ಅವರು ತಮ್ಮ ಭಾಷಣವನ್ನು ಸರಳ ಸುಂದರ ಕನ್ನಡದಲ್ಲಿ ಆರಂಭಿಸಿದಾಗ ನೆರೆದಿದ್ದವರ ಸಂತಸಕ್ಕೆ ಪಾರವಿಲ್ಲದಾಯಿತು.

ಸುಮಾರು ಐವತ್ತು ವರ್ಷಗಳ ಹಿಂದಿನ ತಮ್ಮ ಬೆಂಗಳೂರಿನ ಬದುಕನ್ನು ಮೆಲುಕು ಹಾಕಿದ ಅವರು ಸರ್ ಎಂ. ವಿಶ್ವೇಶ್ವರಯ್ಯ ಮುಂತಾದವರು ಕರ್ನಾಟಕದ ಏಳಿಗೆಗೆ ನೀಡಿರುವ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಒಬ್ಬ ಪ್ರವಾಸಿಯಾಗಿ, ಪತ್ರಕರ್ತನಾಗಿ ಸುದೀರ್ಘ ಅನುಭವ ಹೊಂದಿರುವ ಅವರು ಇಂದು ಪ್ರಪಂಚದಲ್ಲಿ ಎಲ್ಲಿ ಹೋದರೂ "ಯಶಸ್ವಿ ಕನ್ನಡಿಗರು" ಸಿಗುತ್ತಾರೆ ಎಂದರು. ಶಾಂತಿ ಮತ್ತು ಸಾಧನೆಗಳಿಗೆ ಹೆಸರಾದ ಕನ್ನಡಿಗರನ್ನು ಎಲ್ಲರೂ ಗೌರವಿಸುತ್ತಾರೆ ಅದಕ್ಕಾಗಿ ಹೆಮ್ಮೆ ಪಡಬಹುದಾಗಿದೆ ಎಂದು ಅಭಿಪ್ರಾಯಿಸಿದ ವೆಂಕಟರಾಮನ್ , ಕನ್ನಡತನ ಉಳಿಸಿಕೊಂಡಿರುವುದಕ್ಕಾಗಿ ನ್ಯೂಜಿಲೆಂಡ್ ಕನ್ನಡಿಗರನ್ನು ಮನಸಾರೆ ಅಭಿನಂದಿಸಿದರು.

ಕನ್ನಡ ಕೂಟದ ಸಂಸ್ಥಾಪನಾಧ್ಯಕ್ಷರೂ ಪ್ರಸ್ತುತ ಸಲಹೆಗಾರರೂ ಆದ ಪ್ರೊ. ವಾಮನ ಮೂರ್ತಿಯವರು ಕರ್ನಾಟಕದಿಂದಾಚೆಗೆ ಇರಬಹುದು [ಸುಮಾರು ಮೂವತ್ತಾರು ವರ್ಷದಿಂದ] ಆದರೆ ಕರ್ನಾಟಕವೆಂದೂ ಅವರಿಂದ ಆಚೆಗೆ ಹೋಗದು ಎಂದು ಅವರು ಹೇಳಿದಾಗ ಸುದೀರ್ಘ ಕರತಾಡನವಾಯಿತು.

ಸ್ವಾಗತ ಭಾಷಣ ಮಾಡಿದ ಪ್ರೊ.ವಾಮನ ಮೂರ್ತಿಯವರು ಇತ್ತೀಚಿನ ದಿನಗಳಲ್ಲಿ ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕ್ರತಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯ ಎಂದರು. ಯಾವುದೇ ಭೇದ ಭಾವವಿಲ್ಲದೆ ಕನ್ನಡ ನಮ್ಮನ್ನು ಭಾವನಾತ್ಮಕವಾಗಿ ಒಂದುಗೂಡಿಸಿದೆ ಎಂದ ಅವರ ಮಾತಿಗೆ ಸಾಕ್ಷಿಯಾಗಿ ಇಡೀ ದಿನದ ಬಹುತೇಕ ಕಾರ್ಯಕ್ರಮಗಳು ಭಾಷಾಭಿಮಾನ ಹಾಗೂ ಜಾತ್ಯತೀತಗೆ ಒತ್ತು ಕೊಟ್ಟಿದ್ದವು.

ಶ್ರೀಮತಿ ರತ್ನಾ ವಾಮನಮೂರ್ತಿಯವರು ಪ್ರಾರ್ಥನೆ ಹಾಡಿದ ನಂತರ ಮೂರು ಗಂಟೆಗಳ ಕಾಲ ಗಾಯನ, ಯುಗಳ ಗೀತೆಗಳು, ಸಮೂಹ ಗಾಯನ, ನೃತ್ಯ, ಕಿರು ನಾಟಕ, ನಾಟಕ ಎಲ್ಲವೂ ಪ್ರೇಕ್ಷಕರ ಮನ ತಣಿಸುವಲ್ಲಿ ಪೈಪೋಟಿ ನಡೆಸಿದವು. ಯಾರ ಪುಣ್ಯವೋ ಏನೊ ನಮ್ಮ ಊರಿನಲ್ಲಿ ಕನ್ನಡ ಕಲಾವಿದರ ಸಂಖ್ಯೆ ಹೆಚ್ಚುತ್ತಿದೆ. ಗಾಯಕರಲ್ಲಿ ಬಾಲಿವುಡ್ ಮೆಲೊಡಿ ಚಾಂಪ್ಸ್ ಗಾಯನ ಪ್ರಶಸ್ತಿ ವಿಜೇತೆ ಅಖಿಲಾ ಪುತ್ತಿಗೆ, ವಿದ್ವಾನ್‌ದಿವಾಕರ್, ಪವನ್ ಕೌಶಿಕ್, ಚೈತ್ರ, ಸ್ಮಿತಾಗೌರಿ,ಅನುಪಮ,ಸತ್ಯಕುಮಾರ್,ಸುಹಾಸ್,ಲತ,ಮೇಧಾ, ವರ್ಷ ಪೈ, ಏಕ್ತಾ, ಉದಯ ಕುಮಾರ್, ಅನೂಷ, ನೇಹಾ ಮುಂತಾದವರನ್ನು ಹೆಸರಿಸಬಹುದಾದರೆ, ಹಸುಳೆಗಳಾದ ಸುಮಂತ, ನಿಧಿ, ವೈಷ್ಣವಿ ಇವರುಗಳು ಗಮನ ಸೆಳೆಯುತ್ತಿದ್ದಾರೆ.

ನೃತ್ಯ ವಿಭಾಗದಲ್ಲಿ ಮಯಾಂಕ, ಯಶಸ್, ಧರಣೇಂದ್ರ ಇವರುಗಳು ಯಶಸ್ವಿಯಾಗಿದ್ದಾರೆ. ಹಳದಿ ಕೆಂಪು ವೇಷಧಾರಿಗಳಾಗಿ ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ ಎಂದು ನರ್ತಿಸಿದ ಬೆಂಗಳೂರು ಬಾಯ್ಸ್ ತಂಡ ಮೆಚ್ಚುಗೆ ಗಳಿಸಿತು. ನಾಟಕ ಯಮರಾಜನ ಬೋನಸ್ ನವಿರಾದ ಹಾಸ್ಯವಿದ್ದರೂ ಕನ್ನಡದ ಅನೇಕ ಹಿರಿಯ ಚೇತನಗಳಿಗೆ ನಮಿಸುವ ಸಲುವಾಗಿಯೆ ಮುಡಿಪಾಗಿತ್ತು. ವೃಂದಗಾನದಲ್ಲಿ ಸೊಗಸಾಗಿ ಹಾಡಿದ "ಕನ್ನಡಾಂಬೆ ಸುತರು ಎಂದು ಹೆಮ್ಮೆ ಪಡುವ ನಾವು" ಗೀತೆ ಪ್ರೇಕ್ಷಕರೂ ದನಿಗೂಡಿಸುವಂತೆ ಮಾಡಿತು.

ಕನ್ನಡ ಕೂಟದ ಕಾರ್ಯದರ್ಶಿ ಚಕ್ರಪಾಣಿ ವಂದನಾರ್ಪಣೆ ಮಾಡಿ ದಿನದ ಕಾರ್ಯಕ್ರಮಗಳು ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನರ್ಪಿಸಿದರು.

ಕಣ್ಸೆಳೆಯುತ್ತಿದ್ದ ವೇದಿಕೆ ನಿರ್ಮಾಣ, ಧ್ವನಿ ಮತ್ತು ಬೆಳಕಿನ ಸಂಯೋಜನೆ ಹಾಗೂ ಭೋಜನ ವ್ಯವಸ್ಥೆ ಮಾಡಿದ ಎಲ್ಲರನ್ನು ಅವರು ವಂದಿಸಿದರು. ಗುರುನಾಥ್ ಮತ್ತು ಅವರ ಪತ್ನಿ ಕವಿಯಿತ್ರಿ ಶ್ರೀಮತಿ ಸುಮಂಗಲ ಅವರು ಸುಂದರವಾಗಿ ನಿರೂಪಿಸಿ ಅನೇಕ ಹಿರಿಯ ಕವಿಗಳನ್ನು ಸಾಹಿತಿಗಳನ್ನು ಉಲ್ಲೇಖಿಸಿದ್ದು ಕಾರ್ಯಕ್ರಮಕ್ಕೆ ಅಪಾರವಾದ ಮೆರುಗು ತಂದಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more