• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಕೈಲಾಸಕ್ಕೆ ಹೋಗಿದ್ದೆ : ಸೀತಾ ಕೇಶವ, ಸಿಡ್ನಿ

By Staff
|

ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪ್ರಯಾಸವಿಲ್ಲದೆ ಯಶಸ್ವಿಯಾಗಿ ಆನಂದದಿಂದ ಪೂರೈಸಿಕೊಂಡು ಬಂದ ಸಿಡ್ನಿ ಕನ್ನಡತಿಯ ಪ್ರವಾಸ ಕಥನ..

Troup from Sydney in Kailasa Parvataನಿನ್ನ ಎತ್ತರವೆತ್ತ? ಹಿಮಾಲಯದೆತ್ತರವೆತ್ತ? ಹೋಗತ್ತ ಮರುಳೆ ಎ0ದು ಕುಳಿತವಳು ನಾನು. ನನ್ನನ್ನು ಅಲುಗಿಸಿದ್ದು ಸಿಡ್ನಿಯಲ್ಲಿ ನೆರವೇರಿದ ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಪ್ರವಚನ. ಅಲ್ಲಿ ಗೆಳೆಯ ರಾಘವೇ0ದ್ರ ರಾಯರು ಹೇಳಿದರು - ’ಮೌ0ಟ್‌ ಕೈಲಾಸ್‌ಗೆ ಒ0ದು ಟ್ರಿಪ್‌ ಹಾಕಿದ್ದಾರೆ ಕೆಲವರು, ನೀವೇಕೆ ಹೋಗ ಬಾರದು?’ ಎ0ದರು. ನನಗೂ ಪರವಾಗಿಲ್ಲ ಅನಿಸಿತು, ಸ್ವಲ್ಪ ವರ್ಷಗಳ ಹಿ0ದೆ ಚಾರ್‌ ಧಾಮ್‌ ಆಗಿತ್ತು. ಇದನ್ನೂ ಮಾಡಬಹುದೇನೋ ಎ0ದುಕೊ0ಡೆ. ಮನಸ್ಸಿನಲ್ಲಿ ಮಾನಸ ಸರೋವರ, ಕೈಲಾಸ ಪರ್ವತಗಳನ್ನು ಊಹಿಸಿಕೊ0ಡು, ಈ ಯಾತ್ರೆ ಕೈಗೂಡಿದರೆ ನಾನು lucky ಎ0ದುಕೊ0ಡೆ. ಪತಿರಾಯರನ್ನು ಕೇಳಿದೆ. ಅವರು ಯಥಾಪ್ರಕಾರ ಸಮ್ಮತಿ ನೀಡಿದರು.

ವ್ಯವಸ್ಥಾಪಕರಿಗೆ ಫೋನ್‌ ಮಾಡಿದರೆ, ’ಈಗ ತಾನೆ ಈ ತ0ಡದ ಫಾರ್ಮಾಲಿಟೀಸ್‌ ಮುಗಿದಿವೆ. ನೋಡೋಣ, ಖಟ್ಮ0ಡು ಆಫೀಸ್‌ ಏನು ಹೇಳ್ತಾರೋ ’ ಅ0ದು ನಮ್ಮನ್ನು ಉ0ಟು, ಇಲ್ಲದ ತೂಗು ಉಯ್ಯಾಲೆಗೆ ಹಾಕಿದರು. ಅದರೆ ಕೊನೆಗೆ ನಮಗೆ ’ಓಕೆ ’ ಸಿಕ್ಕು, ಹಸಿರುಬಾವುಟ ಹಾರಿತು! ನನಗೋ ಎಲ್ಲಿಲ್ಲದ ಆನ0ದ, ಸಡಗರ. ಕೈಲಾಸದ ಕನಸು! ನಮ್ಮ ತಯಾರಿ ಪ್ರಾರ0ಭವಾಯಿತು. ಕೈಲಾಸ ಪರ್ವತಕ್ಕೆ ಹೋಗಬೇಕಾದರೆ ಏರು, ತಗ್ಗುಗಳು ವಿಪರೀತ, ಅದೂ ಕಿಲೋಮೀಟರ್‌ ಗಟ್ಟಲೆ. ಸಿಡ್ನಿಯಲ್ಲಿ ಇರುವ ತಗ್ಗು, ಗುಡ್ಡಗಳಿಗೆ ವಾರವಾರವೂ ಹೋಗಿದ್ದೇನು! ಅಲ್ಲಿ ವಿಧವಿಧವಾಗಿ ಓಡಾಡಿದ್ದೇನು! ಇನ್ನು ವೀಸಾ ಏರ್ಪಾಟು ಹೇಳಬೇಕಾಗಿಲ್ಲ. ಅದನ್ನು ವ್ಯವಸ್ಥಾಪಕರೇ ನಿರ್ವಹಿಸಿದರು. ಹೊರಡುವುದಕ್ಕೆ ಮು0ಚೆ, ಹವನ, ಹೋಮ, ಪೂಜೆ; ಸಿಡ್ನಿಗೆ ಹಾಸುಹೊಕ್ಕಾದ ಪಾರ್ಟಿ ಎಲ್ಲಾ ಆದವು; ಉ0ಡುಹೊರಟ ಯೋಗಿ!

ಕಣ್ಣು ಮುಚ್ಚಿ ತೆಗೆಯುವುದರೋಳಗೆ ಆ ದಿವ-ಸ ಬ0ದೇ ಬಿಟ್ಟಿತು. ಸ0ಕಲ್ಪ ಬಲದ ಜಾಗರಣೆ, ಪ್ರತಿನಿತ್ಯದ ಅಭ್ಯಾಸ, ನಮಗೆ ತೊಟ್ಟ ಕೆಲಸ ಸಲೀಸಾಗಿ ನಡೆಯುತ್ತದೆ ಎ0ಬ ವಿಶ್ವಾಸ. ಸಿಡ್ನಿ ವಿಮಾನ ನಿಲ್ದಾಣದಲ್ಲಿ ಮಿತ್ರರ ಕೈಕುಲುಕಿ, ಫೋಟೊ ತೆಗೆಸಿಕೊ0ಡು, ’ನೀವೇ ಪರವಾಗಿಲ್ಲ’ ಎ0ಬ ಶಹಭಾಷ್‌ಗಿರಿ ಗಿಟ್ಟಿಸಿ, ವಿಮಾನ ಹತ್ತಿದ್ದೇ. ಎ0ಟು ದ0ಪತಿಗಳು, ಇಬ್ಬರು, ಮತ್ತೊಬ್ಬರು intensive care ವೈದ್ಯರು. ಏನಾದರೂ ಹೆಚ್ಚು ಕಡಿಮೆ ಆದರೆ ನೋಡುಕೊಳ್ಳುತ್ತಾರೆ, ಪರವಾಗಿಲ್ಲ!ಯಾವ ರೋಗವೂ ಹತ್ತಿರ ಸುಳಿಯುವ0ತಿಲ್ಲ. ಪ್ರಯಾಣದ ಉದ್ದಕ್ಕೂ ನಮಗೆ ಇವರುಗಳ ಸಲಹೆ, ಸೂಚನೆಗಳು ಸಿಗುತ್ತಿದ್ದದ್ದು ನಮ್ಮ ಭಾಗ್ಯ.

ಸಿಡ್ನಿ, ಬ್ಯಾ0ಕಾಕ್‌, ಖಟ್ಮ0ಡು ಮಾರ್ಗವಾಗಿ ನಮ್ಮ ಯಾತ್ರೆ. ಬ್ಯಾ0ಕಾಕಿನಲ್ಲಿ ಒ0ದು ರಾತ್ರಿ; ಖಟ್ಮ0ಡುವಿನಲ್ಲಿ ಎರಡು ದಿವಸವಿದ್ದು ಅಲ್ಲಿಯ ದೇವಸ್ಥಾನಗಳಿಗೆ ಹೋಗಿ ಪಶುಪತಿನಾಥ, ಸ್ವಯ0ಭು, ಬೋಧ ನೀಲಕ0ಠ, ಗುಹೇಷ್ವರಿ, ಮಾನಕಾಮಾನ ಇವರುಗಳ ದರ್ಶನ ಪಡೆದು, ಲಲಿತಪುರಿ ಅರಮನೆಯನ್ನು ನೋಡಿ ಮಾನಸ ಸರೋವರದತ್ತ ಹೊರಟೆವು.

ಅ0ದು ಜುಲೈ ಒ0ದನೇ ತಾರೀಕು. ನೇಪಾಳ - ಟಿಬೆಟ್‌ ಗಡಿಯವರೆಗೆ ಬಸ್ಸು, ಮು0ದೆ ಜೀಪಿನಲ್ಲಿ (Four wheel Drive)ಮೂರು ದಿನಗಳ ಪ್ರಯಾಣ. ಒ0ದು ಜೀಪಿಗೆ ನಾಲ್ಕು ಜನ. ಮೊದಲ ದಿನವೆಲ್ಲಾ ಪರ್ವತ ಶ್ರೇಣಿ, ಕಣ್ಣು ಕೋರೈಸುವ ಜಲಪಾತಗಳು, ಇವುಗಳಿ0ದ ಕೂಡಿದ ರಮಣೀಯತೆ, ಸೌ0ದರ್ಯಗಳಲ್ಲಿ ಮುಳುಗಿಹೋದೆವು. ಮಿಕ್ಕ ಎರಡು ದಿನಗಳು ಇದಕ್ಕೆ ತದ್ವಿರುದ್ಧ. ಅದೊ0ದು ಹಾರ್ಡ್‌ ರಾಕ್‌ ಡ್ರೈವ್‌ ಆಗಿಹೋಯಿತು; ಹೆಚ್ಚೂ ಕಡಿಮೆ ರೋಲರ್‌ ಕೋಸ್ಟರ್‌ ರೈಡ್‌! ಮೂರನೆಯ ದಿವಸದ್ದು ಡೆಸರ್ಟ್‌ ಡಸ್ಟ್‌ ಡ್ರೈವ್‌!ಎಲ್ಲರಿಗೂ ಸಾಕಪ್ಪಾ ಎನಿಸಿತು. ಆಗ ಕಣ್ಣಿಗೆ ಬಿದ್ದಿದ್ದು ಮಾನಸ ಸರೋವರ!ನಮ್ಮ ಯಾತ್ರೆಯ ಒ0ದು ಗುರಿ! 90 ಕಿಲೋಮೀಟರ್‌ ಉದ್ದ. ಗ0ಭೀರ. ಪಟ್ಟ ಆಯಾಸ? ಮ0ಜಿನ0ತೆ ಕರಗಿಹೋಗಿತ್ತು.

ಮಾನಸ ಸರೋವರ ಪ್ರಪಂಚದಲ್ಲೇ ಅತಿ ಎತ್ತರದ ಸರೋವರವೆಂದು ಪ್ರಸಿದ್ಧಿ. ಇದು ಬ್ರಹ್ಮನ ಮನಸ್ಸಿನಿಂದ ನಿರ್ಮಾಣವಾದ ಮಾನಸ ಸರೋವರ!. ಇನ್ನೊಂದು ಪ್ರತೀತಿ; ಬ್ರಹ್ಮ ಈ ಸರೋವರವನ್ನು ಋಷಿಗಳ ಕೋರಿಕೆಯ ಮೇಲೆ ತನ್ನ ಆನಂದಬಾಷ್ಪಗಳಿಂದ ನಿರ್ಮಿಸಿದ. ಈ ಸರೋವರ ಎಲ್ಲ ವೇದಗಳ ಸಾರವನ್ನೊಳಗೊಂಡಿದೆ ಎಂಬ ಬಲವಾದ ನಂಬಿಕೆ ಕೂಡ ಇದೆ. ಸರೋವರದ ಪೂರ್ವಭಾಗದಲ್ಲಿ ನೀರು ಬಹು ತಿಳಿ, ನೋಡಲು ರಮ್ಯ. ಪಶ್ಚಿಮಭಾಗದಲ್ಲಿರುವ ಚುಗುಂಪ ಗೆಸ್ಟ್‌ ಹೌಸಿನಲ್ಲಿ ಎರಡು ರಾತ್ರಿ ಕಳೆಯಬೇಕಾಯಿತು. ಆಲ್ಲಿ ಸರೋವರವನ್ನು ನೋಡಿದಾಗ, ’ಅಯ್ಯೋ, ಇದೇನಾ, ಏನಪ್ಪಾ ಇಷ್ಟೇನಾ’ ಅನ್ನಿಸಿಬಿಟ್ಟಿತು. ಈ ಪವಿತ್ರ ಸರೋವರ ದೇವಾನುದೇವತೆಗಳು ಸ್ನಾನ ಮಾಡುವ ಸ್ಥಾನ! ಸ್ವತಃ ಶಿವ ಪಾರ್ವತಿಯರು ಇಲ್ಲಿ ಸ್ನಾನಮಾಡಿದ್ದಾರೆ! ಇನ್ನೊಂದು ವಿಶೇಷ-ವೆದರೆ, ನಾವೆಲ್ಲಾ ಬ್ರಾಹ್ಮೀ ಮುಹೂರ್ತದಲ್ಲಿ (3 ಗ0ಟೆ)ದೇವಾದಿದೇವತೆಗಳು ನಕ್ಷತ್ರದ ರೂಪದಲ್ಲಿ ಬಂದು ಸ್ನಾನಮಾಡಿಕೊಂಡು ಹೋದ ದೃಶ್ಯವನ್ನು ಸರೋವರದ ದಡದಲ್ಲಿ ವೀಕ್ಷಿಸಿದ್ದು ನಿಜಕ್ಕೂ ’ಅದ್ಭುತ’. ಜನ್ಮ ಸಾರ್ಥಕವಾಯಿತು! ಹಾಗೂ ಸರೋವರದ ಸುತ್ತಲಿನ ಕಲ್ಲುಗಳೆಲ್ಲ ಶಿವಲಿಂಗವೆಂಬ ಪ್ರತೀತಿ ಕೂಡ. ಇ0ತಹ ಕ್ಷೇತ್ರದ ಪರಿಸರ? ಮೂಗು ಮುಚ್ಚಿಕೊ0ಡು ತಿರುಗಾಡ ಬೇಕು! ಶಿವ,ಶಿವಾ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X