ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಾನಭಾಗ್ಯ-ವೀಸಾಭಾಗ್ಯ : ಎತ್ತಣಿಂದೆತ್ತಣ ಸಂಬಂಧ?

By Staff
|
Google Oneindia Kannada News


ಬಹಳ ಜನಗಳ ಅಭಿಪ್ರಾಯದ ಪ್ರಕಾರ ತಾಯಿ ಆದಾಗ ಆಗುವ ಖುಷಿಗಿಂತ ಅಜ್ಜಿಯಾದಾಗ ಆಗುವ ಖುಷಿ ದುಪ್ಪಟಂತೆ, ಇದನ್ನು ಅರಿತ ಅತ್ತೆಯಂದಿರು ಸಿಹಿಸುದ್ದಿ ನೀಡಿದ ಅಳಿಮಯ್ಯನಿಗೆ ರುಚಿ-ರುಚಿಯಾದ ಅಡುಗೆಮಾಡಿ ಚೆನ್ನಾಗಿ ಉಪಚಾರಮಾಡಿ ನೋಡಿಕೊಳ್ಳುತ್ತಾರೆ. ಇದೆ ವರ್ಗಕ್ಕೆ ಸೇರಿದ ನನ್ನ ಸ್ನೇಹಿತನೊಬ್ಬ ನನ್ನ ಮುಂದೆ ಬಂದು ’’ನಮ್ಮ ಮನೇಲಿ ಈಗ ಡಿಶ್‌ವಾಶರ್‌ ಬೇಕಾಗಿಲ್ಲ ಕಣೋ’’ ಅಂದ, ಅದಕ್ಕೆ ಆಶ್ಚರ್ಯವಾಗಿ ನಾನವನಿಗೆ ’’ಏಕೆ?’’ ಎಂದು ಕೇಳಿದೆ, ಅವನೊಬ್ಬ ದೊಡ್ಡ ಚುಟಕು ಕವಿಮಹಾಶಯ..

ಡಿಶ್‌ವಾಶರ್‌ ಬೇಕಾಗಿಲ್ಲ
ನಮ್ಮ ಮನೆಯಲ್ಲಿ
ಇನು ಮುಂದೆ ಮತ್ತೆ !
ಏಕೆಂದರೆ
ಇಂಡಿಯಾದಿಂದ
ಬಂದಿದ್ದಾರೆ ನನ್ನ ಅತ್ತೆ !!

ಅತ್ತೆಯವರ ಪುರಾಣ ಸಾಕು ಇನ್ನು ಪತ್ನಿಯವರ ವಿಷಯಕ್ಕೆ ಬರೋಣ. ಹೆಂಡತಿ ಬಸುರಿಯಾಗಿರುವ ಸುದ್ದಿ ತಿಳಿಸುವುದೇ ತಡ ಭಾರತದಿಂದ ಫೋನಿನಲ್ಲಿ ಎಲ್ಲರೂ ಪಾಪ ಗಂಡನಿಗೆ ಅವಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾರುದ್ದ ಉಪದೇಶ ನೀಡುವುರೇ ಜಾಸ್ತಿ. ಅದರಲ್ಲೂ ಬಸುರಿನ ಬಯಕೆ ಇರುವ ಹೆಂಡತಿಯ ಗಂಡನ ಗೋಳು ಹೇಳತೀರದು ಮಾರಾಯ್ರೆ! ನನ್ನ ಸ್ನೇಹಿತನೊಬ್ಬನ

ಬಸುರಿ ಹೆಂಡತಿಗೆ ವಿಚಿತ್ರ ಬಯಕೆಯಂತೆ ಅವಳಿಗೆ ಬೇವಿನಎಲೆ ತಿನ್ನಬೇಕೆಂಬ ಆಸೆಯಂತೆ, ಪಾಪ ಅವನು ಅಮೆರಿಕಾ ತುಂಬಾ ಬೇವಿನಮರ ಹುಡುಕಿಕೊಂಡು 3 ತಿಂಗಳ ಅಡ್ಡಾಡಿದ ಪೇಚಾಟ ಹೇಳತೀರದು. ಅವನಿಗೆ ನಾನೆಂದೆ ’’ನನ್ನ ಹೆಂಡತಿ ಬಸುರಿಯಾಗಿದ್ದಾಗ ಆ ತರದ ಬಯಕೆಗಳೆ ಇರಲ್ಲಿಲ್ಲಾ ಆದರೂ ನಾನು ತುಂಬಾ ಕಷ್ಟ ಪಟ್ಟೆ ಕಣೋ’’ ಏಕೆಂದರೆ.....

ಕೆಲವು ಹೆಂಗಸರು
ಬಸುರಿ ಬಯಕೆ ಬ0ದಾಗ
ತಿನ್ನುತ್ತಾರಂತೆ
ಬೇವಿನ ಎಲೆ !
ನನ್ನ ಹೆಂಡತಿಗೆ ಬಸುರಿ
ಬಯಕೆ ಇರಲ್ಲಿಲ್ಲಾ
ಆದರೂ ತಿಂದಳು
ನನ್ನ ತಲೆ !!

ಹೆಂಡತಿ ಮಗುವಿಗೆ ಜನ್ಮಕೊಡುವಾಗ ಪಡುವ ಕಷ್ಟ ನೋಡಿದರೆ, ನಮ್ಮ ಗಂಡಸರ ಪಡುವ ಕಷ್ಟ ಯಾವ ಲೆಕ್ಕ ಎನಿಸುತ್ತದೆ. ನೀವು ತಂದೆಯಾದ ಕ್ಷಣದಿಂದ ಮನೆಖರ್ಚುಗಳು ಮಾತ್ರ ದುಪ್ಪಟ್ಟಾಗುವುದರಲ್ಲಿ ಎರಡು ಮಾತಿಲ್ಲ. ಈ ಖರ್ಚುಗಳನ್ನು ನೆನಸಿಕೊಂಡರೆ ಎಷ್ಟೋ ಜನಕ್ಕೆ ಹೊಟ್ಟೆನೋವು ಶುರುವಾಗುತ್ತದೆ ಅದರಲ್ಲೂ ಸ್ಪೆಷಲ್ಲಾಗಿ ಮಗುವಿಗೆ ಹಾಕುವ ಡೈಪರ್‌ ಖರ್ಚು ನೆನಸಿಕೊಂಡರೆ....

ನನ್ನ ಮಗನಿಗೆ
ಬೇಕು ದಿವಸಕ್ಕೆ
ಕನಿಷ್ಠ ಎಂಟರಿಂದ
ಹತ್ತು ಡೈಪರ್‌ !
ಅದನ್ನು ನೆನಸಿಕೊಂಡರೆ
ಹೊಟ್ಟೆನೋವು ನನಗೆ
ನನಗೂ ಬೇಕು
toiletಪೇಪರ್‌ !!

ಇದುವರೆಗೂ ನಾನು ಹೇಳಿದ್ದು ಬರೀ ಹಾಸ್ಯಕ್ಕೆ ಮಾತ್ರ ಸ್ವಾಮಿಗಳೆ! ಆದರೆ ಈ ನಮ್ಮ ಕನ್ನಡದ ಕಂದಮ್ಮಗಳು ಒಂದು ತುಂಟ ಕಿರುನೋಟ ಬೀರಿದರೆ ಸಾಕು, ನಮಗನಿಸುತ್ತೆ ಇಷ್ಟು ದಿವಸ ಮಾಡಿದ ಈ ಸಿಹಿಸುದ್ದಿಯ ಸರ್ಕಸ್‌.. ಸಕ್ಸಸ್‌ ಅಂತಾ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X