ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಕ್ಕಿಂತ ಇನ್ನೆಂಥ ಕೊಡುಗೆಯನ್ನು ಕೇಳಲು ಸಾಧ್ಯ?

By Staff
|
Google Oneindia Kannada News
ಮೇ 29, 2004ರಂದು ನಡೆದ ವಸಂತಸಾಹಿತ್ಯೋತ್ಸವ ನಮ್ಮ ಅಮೇರಿಕನ್ನಡಿಗರಿಗೆಲ್ಲಾ ಒಂದು ಹೊಸ ರೂಪ, ಸ್ವರೂವನ್ನೇ ಕೊಟ್ಟಿದೆ. ಅಂತಹ ಅದ್ಭುತ ಸಮ್ಮೇಳನವನ್ನು ನಡೆಸಿ ಕೊಟ್ಟ ಕಾರ್ಯಕಾರಿಯ ಸಕ್ರಿಯ ಸದಸ್ಯರೆಲ್ಲರಿಗೂ ಹಾಗೂ ಭಾಗವಹಿಸಿದ ಸಾಹಿತ್ಯಾಸಕ್ತರೆಲ್ಲರಿಗೂ ನನ್ನ ನಮನ. ನನಗಂತೂ ಒಂದು ಹಬ್ಬದ ದಿನವಿದ್ದಂತಿತ್ತು. ಒಂದೇ ದಿವಸದಲ್ಲಿ ಅಷ್ಟೊಂದು ಕನ್ನಡದ ಸಾಹಿತ್ಯದ ಬಗ್ಗೆ ವಿಷಯಗಳು ತಲೆಗೆ ಹೋಗುತ್ತವೆಯೇ ಎಂದು ನನಗನ್ನಿಸಿತ್ತು. ಆದರೆ ಅದನ್ನು ‘ ಆಗುತ್ತದೆ ’ ಎಂದು ಸಾಬೀತು ಪಡಿಸಿತು ನಮ್ಮ ಈ ಸಮ್ಮೇಳನ. ಸಾಹಿತ್ಯ ರಂಗ ಅಮೇರಿಕನ್ನಡಿಗರಿಗೊಂದು ಕುವೆಂಪು ಶತಾಬ್ದಿಯ ಕೊಡುಗೆ. ಇದಕ್ಕಿಂತ ಇನ್ನೆಂಥ ಕೊಡುಗೆಯನ್ನು ಕೇಳಲು ಸಾಧ್ಯ. ಯಾವ ವರ್ಷವೂ ನನ್ನ ಮಗಳ ಹುಟ್ಟುಹಬ್ಬವನ್ನು ತಪ್ಪಿಸದ ನನಗೆ, ಈ ಬಾರಿ ಈ ಸಮ್ಮೇಳನಕ್ಕೋಸ್ಕರ ತಪ್ಪಿಸಬೇಕಾಗಿ ಬಂದರೂ, ನನ್ನ ಮಗಳಿಗೆ ಯಾವ ಹಿಂಜರಿಕೆಯಿಲ್ಲದೇ ಹೇಳಬಲ್ಲೆ *ನಿನ್ನ ಹುಟ್ಟು ಹಬ್ಬಕ್ಕಿಂತಲೂ ಮಿಗಿಲಾದ ಕಾರ್ಯಕ್ರಮಕ್ಕೆ ಹೋಗಿಬಂದೆ. ನೀನು ಬಂದಿದ್ದರೆ ಅದೇ ನಿನಗೆ ಒಳ್ಳೆಯ ಕೊಡುಗೆಯಾಗುತ್ತಿತ್ತೆಂದು*.

12 ಘಂಟೆಗಳಕಾಲ ಸತತವಾಗಿ ಒಂದು ಕಾರ್ಯಕ್ರಮದಲ್ಲೂ ಪ್ರಕಟಿತ ವೇಳೆಗೆ ಮೀರದೆ, ಬೇಸರ ತರದೆ ವೀಕ್ಷಕರನ್ನು ಸೆರೆಹಿಡಿದಿದ್ದು ನಾನೆಲ್ಲಿಯೂ ನೋಡಿರಲಿಲ್ಲ. ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಉತ್ಸಾಹ ಹೆಚ್ಚುತ್ತಿತ್ತು. ಬೆಳಿಗ್ಗೆ ರಾಜಗೋಪಾಲ್‌ರ ಮುಖದಲ್ಲಿ ಕಾಣುತ್ತಿದ್ದ ಆತಂಕ ಘಂಟೆಗಳು ಉರುಳಿದಂತೆ ಅವರ ಮುಖದಲ್ಲಿ ಜಯಭೇರಿ ಹೊಡಿಯುತ್ತಿರುವ ಚಿನ್ಹೆಗಳಿದ್ದವು.

Mavasu flanked by Dr. H.Y. Rajagoplಕಾರ್ಯಕ್ರಮದ ಭಾಷಣಕಾರರಿಗೆ ವೇಳೆಯ ಕಡಿವಾಣ ಹಿಡಿದಿದ್ದ ಉಡುಪ ಅವರ ವಂದನಾವಂಚಿತ (Thankless) ಕಾರ್ಯ ನಿಜವಾಗಲೂ ಶ್ಲಾಘನೀಯ. ಘಂಟಾನಾಯಕನೆಂದೇ ಕರೆಯಲ್ಪಟ್ಟ ಅವರಿಗೆ ಎಷ್ಟು ವಂದನೆಗಳನ್ನು ಹೇಳೀದರೂ ಸಾಲದು. ಮೈಕಾಸುರನ ಹಾವಳಿಯೇ ಇಲ್ಲದಂತೆ ಮೈಕಾಸುರನನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ನಟರಾಜ್‌ ತಂಡ ನಿಜಕ್ಕೂ ಮೆಚ್ಚುಗೆಗೆ ಅರ್ಹರು. ವಿವಿಧ ಕಾರ್ಯಕ್ರಮಗಳ ಚುಕ್ಕಾಣಿ ಹಿಡಿದಿದ್ದ ಪ್ರತಿಯಾಬ್ಬ ನಿಯೋಜಕರು ತಮ್ಮ ಜವಾಬ್ದರಿಯನ್ನು ಅರಿತು ಮೈಕಾಸುರನನ್ನು ಆವರಿಸದೇ ನಿಗದಿತ ವೇಳೆಯಲ್ಲೇ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಅವರ ಕಾರ್ಯತತ್ಪರತೆಯನ್ನು ಸಾರುತ್ತದೆ. ತ್ರಿವೇಣಿಯ ಸದಸ್ಯರಾದ ಯುವಕರುಗಳು ಮಾಡಿದ ಸ್ವಯಂಸೇವೆಯ ಸಹಾಯ ನಾನೆಂದೂ ಮರೆಯಲಾರೆ. ಅವರೆಲ್ಲರೂ ನಮ್ಮ ಮುಂದಿನ ಕನ್ನಡ ದ್ವಜ ಹಿಡಿಯುವ ಪೀಳಿಗೆ.

ಈ ಯಶಸ್ವಿಯಲ್ಲಿ ಎಲ್ಲರ ತೆರೆಯ ಹಿಂದಿನ ಮತ್ತು ತೆರೆಯ ಮುಂದಿನ ಶ್ರಮವಹಿಸಿದ್ದಾರೆಂದು ಸಮ್ಮೇಳನದ ಪೂರ್ಣಸಮಯ ಎತ್ತು ತೋರಿಸುತ್ತಿತ್ತು. ಇವೆರಲ್ಲರ ಸೇವೆಯ ಆಸರೆಯಿಂದ ಬೆಳೆಯ ಬೇಕಾಗಿರುವ ಈ ಸಾಹಿತ್ಯರಂಗವೆಂಬ ಗಿಡ ಮರವಾಗಿ ಬೆಳೆಯಲಿ ಎಂದು ಹಾರೈಸುವೆ.

ಸಾಹಿತ್ಯ ರಂಗಕ್ಕೆ ಒಂದೆರಡು ಕಿವಿಮಾತು. ಈ ಸಮ್ಮೇಳನದಲ್ಲಿ ನಾವು ನೋಡಿದ ತಲೆಗಳೆಲ್ಲಾ ಚಾಳೀಸು ದಾಟಿದ ಸಾಹಿತ್ಯಾಸಕ್ತರೆ. ನಮ್ಮ ಧ್ಯೇಯ ನಮ್ಮ ಮುಂದಿನ ಪೀಳೀಗೆಗೆ ಈ ದೀಪವನ್ನು ಸಾಗಿಸುವುದು. ಈ ದೆಶೆಯಲ್ಲಿ ಮಕ್ಕಳಿಗೆ ಉತ್ತೇಜನಕಾರಿಯಾದ ಹಾಗೂ ಕನ್ನಡದಲ್ಲಿ ಆಸಕ್ತಿ ತರುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿ. ಮಕ್ಕಳು ರಂಗದ ಮೇಲೆ ಬಂದು ಕನ್ನಡದಲ್ಲಿ ಕಿರು ಸಾಹಿತ್ಯ (ಕಥೆ, ಕವನ, ಭಾಷಾಂತರಣ ಲೇಖನ... ) ಅರ್ಪಿಸಿದಾಗ ಈ ಸಾಹಿತ್ಯರಂಗ ತನ್ನ ಉದ್ಧೇಶ ಸಾಧಿಸಿದಂತಾಗುತ್ತದೆ ಎನ್ನುವುದು ನನ್ನ ಅನಿಸಿಕೆ.


ಓದಿ...
ವಸಂತೋತ್ಸವ - ಅಮೃತದಂತಹ ಒಂದು ನೆನಪು!


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X