Get Updates
Get notified of breaking news, exclusive insights, and must-see stories!

ಕನ್ನಡ-ಇಂಗ್ಲಿಷ್‌ ಅನುವಾದಕರಿಗೆ ಸಾಹಿತ್ಯಗೋಷ್ಠಿಯ ಕರೆ

*ಡಾಕ್ಟರ್‌ ಕೆ. ಆರ್‌. ಎಸ್‌. ಮೂರ್ತಿ

Jayantha Kaikiniಇದೋ ಕೇಳಿ!

ತಡಮಾಡದೆ ಓಡಿಬನ್ನಿ ; ಅಕ್ಕಂದಿರೆ! ಅಣ್ಣಂದಿರೆ! ಭೂಲೋಕವನ್ನೆಲ್ಲಾ ಸುತ್ತಿ, ಊರು ಕೇರಿಗಳಲ್ಲಿ, ಹಳ್ಳಿ, ಗುಡ್ಡಗಳಲ್ಲಿ ಕನ್ನಡದ ಶ್ರೀಗಂಧವನ್ನು, ಮೈಸೂರು ಮಲ್ಲಿಗೆಯ ಕುಸುಮಗಳನ್ನು, ಧಾರವಾಡದ ಸಿಹಿಪೇಢಗಳನ್ನು, ಕನ್ನಡನಾಡಿನ ಕಡಲ ತೀರದ ಸೌಂದರ್ಯವನ್ನೂ, ಕನ್ನಡಮ್ಮನ ಹೆಮ್ಮೆಯನ್ನು ಪರನಾಡಿನಲ್ಲೆಲ್ಲಾ ಹರಡಿ, ಲೋಕದ ಜನರಿಗೆಲ್ಲಾ ನಾಲಗೆ ಸಿಹಿ ಮಾಡುವ ಅವಕಾಶ ನಿಮಗೆಲ್ಲರಿಗೂ ಇದೆಯೆಂದು ಡಂಗುರ ಬಾರಿಸಲು ಅಮ್ಮ ನಮಗೆ ಹೇಳಿದ್ದಾಳೆ. ಯಾರು ಬೇಕಾದರೂ, ಅಮ್ಮನಿಗೆ ಬಲುಬೇಗ ಪತ್ರವನ್ನು ಬರೆಯಬಹುದಂತೆ.

ಕನ್ನಡ ಭಾಷೆಯು ಕೆಲವು ನೂರು ವರುಷಗಳಿಂದ ಸೃಷ್ಟಿಶೀಲತೆಯಿಂದೊಡಗೂಡಿ ಬೆಳೆದು ತನ್ನ ಸಾಹಿತ್ಯ ಭಂಡಾರದ ಸೊಬಗನ್ನು ಭಾರತದಲ್ಲಿರುವ ಇತರ ಸೋದರ ಭಾಷೆಗಳಿಗೆ ಧಾರಾಳವಾಗಿ ಹಂಚಿರುವುದಲ್ಲದೆ, ಕನ್ನಡದ ಸಾಹಿತ್ಯದ ದಿಗ್ಗಜರು ಅನೇಕ ಜ್ಞಾನಪೀಠಗಳನ್ನೇ ತಂದು ಕನ್ನಡಮ್ಮನನ್ನು ಅಲಂಕರಿಸಿ ಕೂಡಿಸಿ ಮೆಚ್ಚಿನಾರತಿಯನ್ನೇ ಬೆಳಗಿಬಿಟ್ಟಿದ್ದಾರೆ.

ಇಷ್ಟಾದರೂ ಲೋಕದ ಇತರ ನಾಡುಗಳಲ್ಲಿ ಕನ್ನಡಮ್ಮನ ಹೆಸರನ್ನು ಸಾಕಷ್ಟು ಜನರು ಕೇಳಿ ಆನಂದಿಸಿಲ್ಲ ; ನಮ್ಮ ಅಮ್ಮನ ಹಿರಿಮೆಯನ್ನೂ, ಅವಳ ನಾಲಗೆಯಿಂದ ಹೊರಬಂದ ಕಾವ್ಯ ಕಾವೇರಿಯ ಪವಿತ್ರ ಸ್ನಾನವನ್ನು ಇತರ ದೇಶದ ಪ್ರಜೆಗಳು ಅನುಭವಿಸಿಲ್ಲ. ಇದು ಅವರ ತಪ್ಪಲ್ಲ ; ಅವರ ಭಾಷೆಗಳೆಲ್ಲಾ ಬೇರೆ ಬೇರೆ. ನಮ್ಮ ಕನ್ನಡಮಾತೆಯ ಸಾಹಿತ್ಯವನ್ನು ಅವರಿಗೆ ತಿಳಿಯುವಂತೆ ಅವರ ಭಾಷೆಗಳಲ್ಲಿ ಹೇಳಿದರೆ ಅವರು ಆನಂದ ಪಟ್ಟಾರು; ಅವರ ಮನದ ಕಣ್ಣುಗಳಲ್ಲಿ ಕನ್ನಡದ ಸೌಂದರ್ಯ ಕುಣಿದೀತು!

ಕನ್ನಡಮ್ಮನ ಪರವಾಗಿ, ಮೊದಲು ಕನ್ನಡದಿಂದ ಇಂಗ್ಲೀಷಿಗೆ ಕೆಲವು ಸಣ್ಣಕಥೆಗಳನ್ನು ಅನುವಾದಿಸಲು ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯದ ಸಾಹಿತ್ಯ ಗೋಷ್ಠಿ ಯೋಜಿಸಿದೆ. ಹೆಸರಾಂತ ಕಥೆಗಾರರಾದ ಜಯಂತ ಕಾಯ್ಕಿಣಿಯವರ ಕೆಲವು ಸಣ್ಣ ಕಥೆಗಳನ್ನು ಇಂಗ್ಲೀಷಿಗೆ ಅನುವಾದಿಸಿ ಒಂದು ಕಥಾಮಾಲೆಯನ್ನು ಪೋಣಿಸಿ, ಜಯಂತ ಕಾಯ್ಕಿಣಿಯವರ ಬರಹದ ಸುಗಂಧವನ್ನು ಭೂಲೋಕದ ಇಂಗ್ಲೀಷು ಓದುಗರಿಗೆಲ್ಲಾ ಹಂಚುವ ತಯಾರಿ ನಡೆಯುತ್ತಿದೆ.

ಈ ಶುಭ ಕಾರ್ಯಕ್ಕೆ ಸಣ್ಣಕಥೆಗಾರ ವಿಶ್ವನಾಥ ಹುಲಿಕಲ್‌ ಅವರು ಮುಖ್ಯ ಸಂಪಾದಕರಾಗಿ ಈಗಾಗಲೇ ಸ್ವತಃ ಕರ್ನಾಟಕಕ್ಕೆ ಹೋಗಿ ಜಯಂತ ಕಾಯ್ಕಿಣಿಯವರ ಒಪ್ಪಿಗೆಯನ್ನು ಪಡೆದು ಬಂದಿದ್ದಾರೆ.

ಈ ಅನುವಾದದ ಅವಕಾಶವನ್ನು ಎಲ್ಲರಿಗೂ ಡಂಗುರ ಸಾರುತ್ತಿದ್ದೇವೆ. ಆಸಕ್ತರೆಲ್ಲಾ ಕೆಳಗಿನ ವಿಳಾಸವನ್ನು ತಕ್ಷಣ ಸಂಪರ್ಕಿಸಿ. ನಿಮ್ಮ ಹೆಸರು, ವಿಳಾಸ, ದೂರವಾಣಿ ವಿವರ, ಅನುವಾದದ ಅನುಭವ, ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯ ರಚನೆಯ ಅನುಭವದ ವಿವರಗಳನ್ನು Baraha 4.0 or later version ನಲ್ಲಿ ಬರೆದು ಕಳಿಸಿ. ಸಾಧ್ಯವಾದರೆ ನಿಮ್ಮ ಫೋಟೊ ಕೂಡ ಕಳಿಸಿ.

ಸಂಪರ್ಕಿಸಬೇಕಾದ ಇ-ಮೇಲ್‌ ವಿಳಾಸ :
ಡಾಕ್ಟರ್‌ ಕೆ. ಆರ್‌. ಎಸ್‌. ಮೂರ್ತಿ: [email protected]
ವಿಶ್ವನಾಥ ಹುಲಿಕಲ್‌: [email protected]

ಡಿಸೆಂಬರ್‌ 31, 2002 ದಿನಾಂಕದೊಳಗೆ ನಿಮ್ಮ ಅರ್ಜಿ ತಲುಪಬೇಕು.

2003 ರ ಜನವರಿಯ ಕೊನೆಯ ವೇಳೆಗೆ ಆಯ್ಕೆಯಾದ ಅನುವಾದಕರ ಪಟ್ಟಿಯನ್ನು ಪ್ರಕಟಿಸಲು ಸಂಪಾದಕ ಮಂಡಳಿ ಉದ್ದೇಶಿಸಿದೆ.

ನೀವು ನಿಮಗೆ ಗೊತ್ತಿರುವ ಇತರ ಲೇಖಕ ಗೆಳೆಯರಿಗೆ ಕೂಡ ಈ ಡಂಗುರದ ಸುದ್ದಿಯನ್ನು ಸಾರಬಹುದು. ಬನ್ನಿ ಬೇಗ! ಶುಭಕಾರ್ಯಕ್ಕೆ ಇಂದೇ, ಈ ಕ್ಷಣವೇ ಶುಭ ಗಳಿಗೆ. ಬಾರಿಸಿ ಕನ್ನಡದ ಡಿಂಡಿಮವ...

Click here to go to top
ಮುಖಪುಟ / ಸಾಹಿತ್ಯ ಸೊಗಡು


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+