ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೆರೆ ಬಂದ ‘ಚಿತ್ರಭಾನು’: ಸ್ವಾಗತಕೆ ಸಜ್ಜಾಗಿಹರು ಅನಿವಾಸಿ ಕನ್ನಡ ಬಂಧುಗಳು

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Ugadi Prasada‘ನಾಳೆ ಬೆಳಗಾದ್ರೆ ನಮಗೆ ಹಬ್ಬ ಬಂತಲ್ಲ ...’
ಎಂದು ಹಾಡುತ್ತಾಳೆ ಜನಪದ ಹೆಣ್ಣು . ಅವಳ ಹಾಡಿನಲ್ಲಿ ಹಬ್ಬದ ಕುರಿತಾದ ಸಂಭ್ರಮ ತುಂಬಿತುಳುಕುವಂತೆಯೇ, ಹಬ್ಬವನ್ನು ಸಂಭ್ರಮದಿಂದ ಆಚರಿಸಲಿಧಿಲು ಬಿಡದ ಬಡತನ ಕುರಿತಾದ ನಿಟ್ಟುಸಿರೂ ಸಣ್ಣಗೆ ಕೇಳುತ್ತದೆ. ಹಬ್ಬ ಕುರಿತಾದ ಸಂಭ್ರಮವೇ ಅಂಥಾದ್ದು . ಬತ್ತದ ಉತ್ಸಾಹದ ಊಟೆಯದು. ಹಬ್ಬವೆಂದರೆ- ಬರಿಯ ದೇವರ ಆಚರಣೆಯ ಸಂದರ್ಭವಲ್ಲ , ಅದು ಮನೆ ಮಂದಿಯೆಲ್ಲಾ ಕಲೆತು ಸಂಭ್ರಮಿಸುವ ಸಂದರ್ಭ. ಪ್ರಕೃತಿಗೆ ವರುಷಕೊಂದು ಹೊಸತು ಜನ್ಮ. ಮನುಷ್ಯನಿಗೆ ಒಂದೇ ಜನ್ಮ ; ಈ ಹಳೆಯ ಜನ್ಮ ಕ್ಕೆ ನವ ಚೈತನ್ಯ ತುಂಬುವ ಸಂಜೀವಿನಿ ಹಬ್ಬಗಳು. ಅಂಥ ಹಬ್ಬಗಳ ಸಾಲಿನಲ್ಲಿ ಮೊದಲಿಗೆ ಯುಗಾದಿ!

ಯುಗಾದಿ ವರುಷದ ಆದಿ. ಕ್ರಿಶ್ಚಿಯನ್‌ ಧರ್ಮೀಯರಿಗೆ ಜನವರಿಯಿಂದ ಹೊಸ ವರ್ಷ ಶುರುವಾದರೆ, ಹಿಂದೂಗಳಿಗೆ ಯುಗಾದಿಯೇ ವರ್ಷಾರಂಭದ ಸಂಕೇತ. ಯುಗಾದಿ ಹಬ್ಬಗಳ ಚಕ್ರವರ್ತಿ. ನೀವು ಸಂಕ್ರಾಂತಿ ಆಚರಿಸದಿರಬಹುದು. ಗಣಪತಿಯನ್ನು ಮರೆಯಬಹುದು. ಯುಗಾದಿಯನ್ನು ಮರೆಯಲು ಸಾಧ್ಯವೇ.

ಉಳಿದ ಹಬ್ಬಗಳು ಯಾವುದಾದರೂ ದೇವತೆಯಾಂದಿಗೆ ಸಂಬಂಧ ಹೊಂದಿದ್ದರೆ, ಯುಗಾದಿ ಅಪ್ಪಟ ಮನುಷ್ಯರಿಗೆ ಸಂಬಂಧಿಸಿದ ಹಬ್ಬ. ಹೊಸ ಬಟ್ಟೆ ತೊಟ್ಟು , ಹೋಳಿಗೆ ಉಂಡು, ಜೋಕಾಲಿಯಾಡುವ ದಿನ. ಕೆಲವರು ಜೂಜಾಡಿ ಅದೃಷ್ಟ ಪರೀಕ್ಷೆ ಮಾಡುವುದೂ ಉಂಟು.

ಅಂದಹಾಗೆ,
ಸೀಮೋಲ್ಲಂಘನದ ನಮ್ಮ ಅನಿವಾಸಿ ಕನ್ನಡ ಬಂಧುಗಳು ಯುಗಾದಿಯನ್ನು ಹೇಗೆ ಆಚರಿಸುತ್ತಾರೆ?

ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಪಾಲಿಗೆ ಯುಗಾದಿ ಬಹುತೇಕ ಸಮುದಾಯದ ಹಬ್ಬ. ಮನೆಯಲ್ಲಿ ಆಚರಿಸುವ ಹಬ್ಬ ಖಾಸಗಿಯಾದರೆ, ಹಲವು ಕುಟುಂಬಗಳು ಒಟ್ಟುಗೂಡಿ ಯುಗಾದಿಯನ್ನೂ ಆಚರಿಸುವುದೂ ಉಂಟು. ಯುಗಾದಿ ಆಚರಣೆ ಕಾರ್ಯಕ್ರಮ ಕುರಿತಾದ ಕೆಲವು ವಿವರಗಳು ಇಲ್ಲಿವೆ :

ಕಾವೇರಿಯಲ್ಲಿ ಏ.20 ರಂದು ಯುಗಾದಿ
ಏಪ್ರಿಲ್‌ 20 ರ ಶನಿವಾರ ಯುಗಾದಿ ಹಬ್ಬವನ್ನು ಆಚರಿಸಲು ಕಾವೇರಿ ಕನ್ನಡ ಸಂಘ ಸಿದ್ಧತೆಗಳನ್ನು ನಡೆಸಿದೆ. Wheaton High School, MD ಈ ಜಾಗೆಯಲ್ಲಿ ಸಂಜೆ 4.30 ರಿಂದ ರಾತ್ರಿ 9.30 ರ ವರೆಗೂ ಯುಗಾದಿ ಆಚರಣೆ. ಯುಗಾದಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಾವೇರಿ ಉದ್ದೇಶಿಸಿದೆ. ಡಿನ್ನರ್‌ ಕೂಡ ಉಂಟು, ಹೋಳಿಗೆ ಊಟ ಉಂಟೇನೋ ತಿಳಿದು ಬಂದಿಲ್ಲ.

ಕಾವೇರಿ ಮಕ್ಕಳು ಪ್ರಾಣಿಗಳ ರಾಜ್ಯಕ್ಕೆ ಗುಂಪಾಗಿ ಪ್ರಯಾಣ ಬೆಳೆಸಲಿದ್ದಾರೆ. ಯುವಕರಿಂದ ಡಾನ್ಸ್‌ , ಚಿತ್ರಗೀತೆ.. ಎಲ್ಲವೂ ಸಾಂಸ್ಕೃತಿಕ ಸಂಜೆಯಲ್ಲುಂಟು. ಕೊನೆಯದಾಗಿ ಪರ್ವತವಾಣಿ ಅವರ ಸ್ಮರಣೀಯ ನಾಟಕ. ಕಾರ್ಯಕ್ರಮಕ್ಕೆ ಪ್ರವೇಶಧನವಿದೆ- ಸದಸ್ಯರಿಗೆ- 5 ಡಾಲರ್‌, ಸದಸ್ಯರಲ್ಲದವರಿಗೆ- 10 ಡಾಲರ್‌. 5 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ. ಕಾರ್ಯಕ್ರಮ ನಡೆಯುವ ವಿಳಾಸ ಗುರುತು ಹಾಕಿಕೊಳ್ಳಿ :

Wheaton High School, 12601 Dalewood Drive Wheaton, Maryland 20906
Directions from Beltway I495:
Take the MD185/Connecticut Ave exit exit number 33 towards Chevy Chase/Kensington. Merge onto MD185N/Connecticut Ave. Turn Right onto Randolph Rd/MD183 E. Turn left onto Dalewood Dr. School is on the right, next to Thomas Edison School of Technology.
For information and to volunteer on that day call:
Ravi Dankanikote 7038182560,
Sanjay S. Rao 7034423316,
Mrityunjay Mahashetty 3015154602

ಏಪ್ರಿಲ್‌ 13 ರಂದು ಆಸ್ಟಿನ್‌ ಕನ್ನಡ ಸಂಘದಲ್ಲಿ ಯುಗಾದಿ
ಏಪ್ರಿಲ್‌ 13 ರ ಶನಿವಾರ ಬೆಳಗ್ಗೆ 11.30 ರಿಂದ ಸಂಜೆ 4 ರವರೆಗೆ ಆಸ್ಟಿನ್‌ ಕನ್ನಡ ಸಂಘ ಯುಗಾದಿ ಕಾರ್ಯಕ್ರಮ ಏರ್ಪಡಿಸಿದೆ. ಲಂಚ್‌ ವ್ಯವಸ್ಥೆಯಿದೆ.
ಕಾರ್ಯಕ್ರಮ ನಡೆಯುವ ಸ್ಥಳ :
Murchison Community School, 3700 North Hills Drive (near Far West Blvd and Mopac intersection).

ಹಾಡುಹಬ್ಬದೊಂದಿಗೆ ಚಿತ್ರಭಾನುವಿಗೆ ಕೆಸಿಎ ಸ್ವಾಗತ
ಸಂಗೀತ ಹಬ್ಬದೊಂದುಗೆ ಯುಗಾದಿ ಆಚರಣೆಯನ್ನು ನಡೆಸುವುದು ಕರ್ನಾಟಕ ಸಾಂಸ್ಕೃತಿಕ ಸಂಘ (ಕೆಸಿಎ) ಉದ್ದೇಶ. ‘ಶಾಂತಿ, ಸೌಹಾರ್ದತೆ, ಸಹನೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೆಸಿಎ ಯುಗಾದಿ ಆಚರಿಸಲಿದೆ. ಯುಗಾದಿ ಆಚರಣೆ ಸಂದರ್ಭದಲ್ಲೇ ಸಂಘದ ಕಾರ್ಯಕಾರಿ ಸಮಿತಿ ಸಭೆಯೂ ನಡೆಯಲಿದೆ. ಅಂದಹಾಗೆ, ಕಾರ್ಯಕ್ರಮ ನಡೆಯುವುದು ಏಪ್ರಿಲ್‌ 20 ರಂದು. ಮಧ್ಯಾಹ್ನ 2 ರಿಂದ ಕಾರ್ಯಕ್ರಮ ಶುರು. ಸದಸ್ಯರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ. ಇತರರಿಗೆ 10 ಡಾಲರ್‌ ಪ್ರವೇಶ ಶುಲ್ಕವಿದೆ.

ಸ್ಥಳ : Hoover Middle School, 3501 Countryclub Drive, Lakewood, CA.
ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು Sharan 3232573811 [email protected] ಈ ವಿಳಾಸ ಸಂಪರ್ಕಿಸಬಹುದು.
ಏ.27 ರಂದು ನ್ಯೂಯಾರ್ಕ್‌ ಕನ್ನಡ ಕೂಟದಲ್ಲಿ ಯುಗಾದಿ ಸಂಭ್ರಮ, ನಾಟಕೋತ್ಸವ
ನ್ಯೂಯಾರ್ಕ್‌ ಕನ್ನಡ ಕೂಟ ಯುಗಾದಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಏಪ್ರಿಲ್‌ 27ರಂದು ಯುಗಾದಿ ನಾಟಕೋತ್ಸವ ಮತ್ತು ಸರ್ವ ಸದಸ್ಯರ ಸಭೆಯನ್ನು ಕನ್ನಡ ಕೂಟ ಹಮ್ಮಿಕೊಂಡಿದೆ. ನಾಲ್ಕು ನಾಟಕಗಳು, ಸಂಗೀತ ಗೋಷ್ಠಿ ಸಂಭ್ರಮವನ್ನು ಅನುಭವಿಸಲು ಕನ್ನಡಿಗರಿಗೆಲ್ಲ ಕನ್ನಡ ಕೂಟದ ಆಹ್ವಾನವಿದೆ. ಕಾರ್ಯಕ್ರಮ ನಡೆಯುವುದು ದಧಿಕ್ಷಿಣ ಅಮೆರಿಕಾದ ಹಿಂದೂ ದೇವಳದ ಸಭಾಂಗಣದಲ್ಲಿ. ನಾಟಕೋತ್ಸವ ಮತ್ತು ಯುಗಾದಿ ಸಂಭ್ರಮದ ವಿವರಗಳು ಇಲ್ಲಿವೆ:

ಅಪರಾಹ್ನ
1.00: ನೋಂದಾವಣಿ
2.00: ಪ್ರಾರ್ಥನೆ, ಸಂಕೇತ ಗೀತೆ, ಅಮೆರಿಕನ್‌ ರಾಷ್ಟ್ರಗೀತೆ
2.15: ಸ್ವಾಗತ ಭಾಷಣ
2.20 : ಕನ್ನಡ ಕ್ಯಾರಿಯೋಕಿ ಆರ್ಕೆಷ್ಟ್ರಾ- ವಸಂತ ಶಶಿಯವರಿಂದ
2.45: ಸ್ಯಾಟ್‌ ಬಹುಮಾನ ವಿತರಣೆ
2.55 : ನಾಟಕ -1: ಫೋಟೋ ಅವಾಂತರ, ಚಂದನ್‌ ಗ್ರೂಪ್‌ ಕಲಾವಿದರಿಂದ. ನಿರ್ದೇಶನ ಉಮಾ ರಾಮಕೃಷ್ಣ
3.40 : ನಾಟಕ-2 : ನನ್ನವಳ ಕಾಗದ , ನ್ಯೂಜೆರ್ಸಿ ಗೆಳೆಯರ ಬಳಗದ ಕಲಾವಿದರಿಂದ. ನಿರ್ದೇಶನ ಶ್ರೀಧರ್‌ ಸುಬ್ಬರಾವ್‌
4.25: ರ್ಯಾಫಲ್‌ ಡ್ರಾ ಮ್ಯಾಗಸೀನ್‌ ಅನಾವರಣ
4.30: ನಾಟಕ-3 : ದಂಡಪಿಂಡಗಳು, ರಂಗಭಾರತ ಕಲಾವಿದರಿಂದ, ನಿರ್ದೇಶನ ಬ.ರಾ. ಸುರೇಂದ್ರ
5.15: ಸನ್ಮಾನ ಕಾರ್ಯಕ್ರಮ
5.25: ಕ್ಯಾರಿಯೋಕಿ ವಾದ್ಯಗೋಷ್ಠಿ, ಶ್ರೀಧರ್‌ ಸುಬ್ಬರಾವ್‌, ರಶ್ಮಿಯವರಿಂದ
5.45: ನಾಟಕ -4 : ತರಂಗ ಕಲಾವಿದರಿಂದ, ನಿರ್ದೇಶನ ಎಂ.ಜಿ. ಪ್ರಸಾದ್‌ ದಂಪತಿ
6.25 : ಧನ್ಯವಾದ ಸಮರ್ಪಣೆ
6.30: ಕಲ್ಯಾಣ ಮಂಟಪದಲ್ಲಿ ಸರ್ವಸದಸ್ಯರ ಸಭೆ ಮತ್ತು ರಾತ್ರಿ ಸುಖಭೋಜನ.

ಹಿಂದೂ ದೇವಳದ ಸಭಾಂಗಣಕ್ಕೆ ದಾರಿ ಇಲ್ಲಿದೆ: New Auditorium of Hindu Temple Society of North America, 14309 Holly AvenueFlushing, N.Y. 11355.

Post your Views

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X