• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಕಲಾರಂಗಗಳಲ್ಲಿ ತ್ರಿವೇಣಿಗೆ ಹೂವು ತಂದವರು

By ಡಾ. ಎಚ್‌. ವೈ. ರಾಜಗೋಪಾಲ್‌
|

ತ್ರಿವೇಣಿಯ ಪ್ರಸ್ತುತ ಸದಸ್ಯರು, ಮಾಜಿ ಕಾರ್ಯನಿರ್ವಾಹಕರು, ತ್ರಿವೇಣಿ ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಅದರಲ್ಲಿ ಆಸಕ್ತಿ ವಹಿಸಿರುವ ಹಲವರು, ಸಾಹಿತ್ಯ ಮತ್ತು ಕಲಾರಂಗಗಳಲ್ಲಿ ಮಾಡುತ್ತಿರುವ ಕೆಲಸಗಳನ್ನೂ, ಅವರ ಈ ಕಳೆದ ನಾಲ್ಕೈದು ವರ್ಷಗಳಲ್ಲಿನ ಕೆಲವು ಸಾಧನೆಗಳನ್ನು ಇಲ್ಲಿ ಪರಿಚಯ ಮಾಡಿಕೊಟ್ಟಿದೆ:

ಅಮೆರಿಕದಲ್ಲಿ ಕನ್ನಡಕ್ಕಾಗಿ ಅವಿರತವಾಗಿ ದುಡಿಯುತ್ತಿರುವವರಲ್ಲಿ ಎಸ್‌. ಕೆ. ಹರಿಹರೇಶ್ವರರು ಮೊದಲಿಗರು. ತ್ರಿವೇಣಿಯ ಮಾಜಿ ಅಧ್ಯಕ್ಷರಾದ ಇವರು ಸದ್ಯದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕದ ಎಲ್ಲ ಕನ್ನಡ ಕೂಟಗಳೊಂದಿಗೂ ನಿಕಟ ಸಂಪರ್ಕವಿಟ್ಟುಕೊಂಡಿದ್ದು, ಅವುಗಳಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕರ್ನಾಟಕದಿಂದ ಇಲ್ಲಿ ಬರುವ ಸಾಹಿತಿಗಳಿಗೆ, ಇಲ್ಲಿಂದ ಅಲ್ಲಿ ಹೋಗುವವರಿಗೆ ಅವರು ಒಂದು ಸಂಪರ್ಕ ಕೇಂದ್ರವಿದ್ದಂತೆ. ಅವರು ಈ ಪ್ರದ

ತ್ರಿವೇಣಿಯ ಪ್ರಸ್ತುತ ಸದಸ್ಯರು, ಮಾಜಿ ಕಾರ್ಯನಿರ್ವಾಹಕರು, ತ್ರಿವೇಣಿ ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಅದರಲ್ಲಿ ಆಸಕ್ತಿ ವಹಿಸಿರುವ ಹಲವರು, ಸಾಹಿತ್ಯ ಮತ್ತು ಕಲಾರಂಗಗಳಲ್ಲಿ ಮಾಡುತ್ತಿರುವ ಕೆಲಸಗಳನ್ನೂ, ಅವರ ಈ ಕಳೆದ ನಾಲ್ಕೈದು ವರ್ಷಗಳಲ್ಲಿನ ಕೆಲವು ಸಾಧನೆಗಳನ್ನು ಇಲ್ಲಿ ಪರಿಚಯ ಮಾಡಿಕೊಟ್ಟಿದೆ:

ಅಮೆರಿಕದಲ್ಲಿ ಕನ್ನಡಕ್ಕಾಗಿ ಅವಿರತವಾಗಿ ದುಡಿಯುತ್ತಿರುವವರಲ್ಲಿ ಎಸ್‌. ಕೆ. ಹರಿಹರೇಶ್ವರರು ಮೊದಲಿಗರು. ತ್ರಿವೇಣಿಯ ಮಾಜಿ ಅಧ್ಯಕ್ಷರಾದ ಇವರು ಸದ್ಯದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕದ ಎಲ್ಲ ಕನ್ನಡ ಕೂಟಗಳೊಂದಿಗೂ ನಿಕಟ ಸಂಪರ್ಕವಿಟ್ಟುಕೊಂಡಿದ್ದು, ಅವುಗಳಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕರ್ನಾಟಕದಿಂದ ಇಲ್ಲಿ ಬರುವ ಸಾಹಿತಿಗಳಿಗೆ, ಇಲ್ಲಿಂದ ಅಲ್ಲಿ ಹೋಗುವವರಿಗೆ ಅವರು ಒಂದು ಸಂಪರ್ಕ ಕೇಂದ್ರವಿದ್ದಂತೆ. ಅವರು ಈ ಪ್ರದೇಶದಲ್ಲಿದ್ದಾಗ ಪ್ರಾರಂಭಿಸಿದ ‘ ಅಮೆರಿಕನ್ನಡ' ಪತ್ರಿಕೆ ಈಗ ನಡೆಯುತ್ತಿಲ್ಲವಾದರೂ, ಅದು ಅಮೆರಿಕದಲ್ಲಿ ಕನ್ನಡ ಪ್ರಚಾರಕ್ಕೆ, ಬೆಳವಣಿಗೆಗೆ ಅವರು ಕೈಗೊಂಡ ಒಂದು ಬಹುಮುಖ್ಯ ಕೆಲಸ. ಕನ್ನಡವನ್ನು ಗಣಕಯಂತ್ರ (computer)ಕ್ಕೆ ಅಳವಡಿಸುವ ವಿಷಯದಲ್ಲಿ ಬಹಳ ಮುಂಚಿನಿಂದಲೂ ಕೆಲಸ ಮಾಡಿದ್ದಾರೆ. ಇವರ ಕನ್ನಡ ಸೇವೆಯನ್ನು ಗೌರವಿಸಿ ಕರ್ನಾಟಕ ರಾಜ್ಯ ಸರಕಾರ 1990ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅನೇಕ ಕಡೆ ಅವರಿಗೆ ಸನ್ಮಾನ ಸಭೆಗಳು ನಡೆದುವು. ಅದೇ ವರ್ಷ ಅವರ ಕವನ ಸಂಕಲನ ‘‘ ವಿದೇಶಕ್ಕೆ ಬಂದವರು''(ಅಭಿವ್ಯಕ್ತಿ ಪ್ರಕಾಶನ, ಬೆಂಗಳೂರು)ಪ್ರಕಟವಾಗಿ ಅನೇಕ ಸಾಹಿತಿಗಳ ಮೆಚ್ಚುಗೆ ಪಡೆಯಿತು. ಸೆಪ್ಟೆಂಬರ್‌ 2000ದಲ್ಲಿ ಹ್ಯೂಸ್ಟನ್ನಿನಲ್ಲಿ ನಡೆದ ವಿಶ್ವ ಸಹಸ್ರ- ಸಂವತ್ಸರ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗೂ, ಅದೇ ಸಂದರ್ಭದಲ್ಲಿ ಬಿಡುಗಡೆಯಾದ ‘ ದರ್ಶನ' ಎಂಬ ವಿಶೇಷ ಗ್ರಂಥಕ್ಕೂ ಪ್ರಧಾನ ಸಂಪಾದಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರು ಬರೆದಿರುವ, ಪ್ರಕಟಿಸಿರುವ ಲೇಖನಗಳು, ಕವನಗಳು ಅನೇಕ. ಇಲ್ಲಿ ಪ್ರಕಟವಾಗುವ ಯಾವ ಪುಸ್ತಕ, ಪತ್ರಿಕೆಯನ್ನು ನೋಡಿದರೂ ಅದರಲ್ಲಿ ಅವರ ಲೇಖನವೊಂದಾದರೂ ನಿಮ್ಮ ಕಣ್ಣಿಗೆ ಬೀಳದೇ ಇರದು. ಅವರ ಪತ್ನಿ ನಾಗಲಕ್ಷ್ಮಿ ಅವರಿಗೆ ಎಲ್ಲ ರೀತಿಯಲ್ಲೂ ಸಹಧರ್ಮಿಣಿ. ಅವರ ಕನ್ನಡ ಪ್ರೇಮವನ್ನು ಇವರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಸ್ವತಃ ಅವರೂ ಉತ್ತಮ ಲೇಖಕಿ .

ತ್ರಿವೇಣಿಯ ಸ್ಥಾಪಕರಲ್ಲೊಬ್ಬರೂ, ಅದರ ಮಾಜಿ ಅಧ್ಯಕ್ಷರೂ ಆದ ಡಾ. ಎಚ್‌. ವಿ. ರಂಗಾಚಾರ್‌ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. ಮೊದಲನೆಯದು, ‘ನೆಲದ ಕರೆ' (ಕವನ ಸಂಕಲನ); ನಂತರ ಬಂದದ್ದು ‘ಹೆರೋದೂತನ ಸಮರ ಕತೆಗಳು' (ಅಂಕಿತ ಪುಸ್ತಕ, ಬೆಂಗಳೂರು, 2000). ಇದು ಇಂಗ್ಲಿಷಿನ The Histories of Herodotus (ಮೂಲ ಗ್ರೀಕ್‌) ಎಂಬ ಗ್ರಂಥದ ಕನ್ನಡ ಭಾಷಾಂತರ. ಗ್ರಂಥಕ್ಕೆ ಮುನ್ನುಡಿ ಬರೆದಿರುವ ಡಾ. ಎಂ. ಚಿದಾನಂದ ಮೂರ್ತಿಯವರು ಕನ್ನಡಕ್ಕೆ ಇದೊಂದು ‘ಅನನ್ಯವಾದ ಕೊಡುಗೆ' ಎಂದು ಪ್ರಶಂಸಿದ್ದಾರೆ. ಇನ್ನೊಂದು ಗ್ರಂಥ ಪು.ತಿ. ನರಸಿಂಹಾಚಾರ್ಯರ ‘ಮಲೆ ದೇಗುಲ' ಕಾವ್ಯ ಸಂಗ್ರಹದ ಇಂಗ್ಲಿಷ್‌ ಅನುವಾದ. ಇದನ್ನು ಭಾರತ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿದ್ದಾರೆ. ಅವರ ಇತರ ಕೊಡುಗೆಗಳು : ಕತೆ (‘ಗೌರಮ್ಮ ') ಮತ್ತು ಕವಿತೆ ( ಪು.ತಿ.ನ. ಅವರಿಗೆ ಬೀಳ್ಕೊಡುಗೆ)- ಕಳೆದ ವರ್ಷ ಹ್ಯೂಸ್ಟನ್ನಿನಲ್ಲಿ ನಡೆದ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ; ಲೇಖನ : ‘ ಮೈ ಮನಗಳ ಸುಳಿಯಲ್ಲಿ -ಒಂದು ವಿಮರ್ಶಾತ್ಮಕ ಲೇಖನ'- ಡಾ. ನಾಗ ಐತಾಳರು ಸಂಪಾದಿಸಿದ ‘ ಕಾರಂತ ಚಿಂತನ- ಕಡಲಾಚೆಯ ಕನ್ನಡಿಗರಿಂದ '(ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ, ಜುಲೈ - 2000).

ಡಾ. ವಿ.ಕೆ. ಪ್ರಸನ್ನ ಕುಮಾರ್‌(ತಿ್ರವೇಣಿಯ ಸ್ಥಾಪಕರು ಮತ್ತು ಮಾಜಿ ಅಧ್ಯಕ್ಷರು)ಮೇಲೆ ಹೇಳಿದ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ‘ ಪೂರ್ವ ಪೂರ್ವವೇ, ಪಶ್ಚಿಮ ಪಶ್ಚಿಮವೇ ?' ಎಂಬ ಲೇಖನ ಬರೆದಿದ್ದಾರೆ.

ಈ ಪ್ರದೇಶದ ಪ್ರಮುಖ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಸಂಸ್ಥೆಯಾದ ಶ್ರುತಿಯ ಗ್ರಂಥಪ್ರಕಾಶನ ಸಮಿತಿಯಲ್ಲಿ ಹೇಮಾ ರಾಮಮೂರ್ತಿ ಮತ್ತು ಡಾ. ಎಚ್‌. ವೈ. ರಾಜಗೋಪಾಲ್‌ ಸದಸ್ಯರಾಗಿದ್ದಾರೆ. ಈ ಸಮಿತಿ ಮುಂದಿನ ವರ್ಷ ನಮ್ಮ ಶಾಸ್ತ್ರೀಯ ಸಂಗೀತ ನೃತ್ಯಗಳ ಚರಿತ್ರೆ, ಬೆಳವಣಿಗೆ, ವಿಕಾಸಗಳ ಬಗ್ಗೆ ಸುಮಾರು 250 ಪುಟಗಳ ಒಂದು ವಿಶೇಷ ಗ್ರಂಥವನ್ನು ಪ್ರಕಟಿಸುತ್ತಿದೆ. (ಸಂ: ಡಾ. ವಿಜಿ ಸ್ವಾಮಿನಾಥನ್‌). ಭಾರತದ ಅನೇಕ ಅತ್ಯುತ್ತಮ ಸಂಗೀತ ನೃತ್ಯ ಕಲಾವಿದರು ವಿದ್ವಾಂಸರು ಈ ಗ್ರಂಥಕ್ಕೆ ಲೇಖನಗಳನ್ನು ಬರೆದಿದ್ದಾರೆ. ಶ್ರುತಿಯ ಕಾರ್ಯಕಾರೀ ಸಮಿತಿಯಲ್ಲಿ ಈ ಹಿಂದೆ ಪೂರ್ಣಿಮಾ ನಾರಾಯಣ್‌ ಮತ್ತು ಸುಧಾಕರ ರಾವ್‌ ಕೆಲಸ ಮಾಡಿದ್ದಾರೆ.

ವಿಮಲಾ ರಾಜಗೋಪಾಲ್‌ ಈ ಕಳೆದ ನಾಲ್ಕು ವರ್ಷಗಳಿಂದಲೂ ಇಲ್ಲಿನ university of pennsylvania ದ south asia Regionlal studies department ನಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಹೇಳಿಕೊಡುತ್ತಿದ್ದಾರೆ. 1999ರಲ್ಲಿ ಈ ಪ್ರದೇಶದ council of indian organizations (CIO) ನವರು ಪ್ರತಿವರ್ಷ ನಡೆಸುವ ಭಾರತೀಯ ದಿನಾಚರಣೆಯಲ್ಲಿ ತಮ್ಮ ಕನ್ನಡ ಜನಪದ ಗೀತೆಗಳ ಮೂಲಕ ಇಲ್ಲಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಸೇವೆಗಾಗಿ ಅವರನ್ನು ವಿಶೇಷ ಫಲಕವಿತ್ತು ಗೌರವಿಸಿದರು. 1998ರಲ್ಲಿ ಅರಿಜೋನದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಆಹ್ವಾನಿತ ಕಲಾವಿದೆಯಾಗಿ ಭಾಗವಹಿಸಿ, ತಮ್ಮ ಸಹೋದರಿ ಖ್ಯಾತ ಜನಪದ ಗೀತೆಗಳ ಗಾಯಕಿ ಡಾ. ಎಲ್‌. ಜಿ. ಸುಮಿತ್ರರೊಂದಿಗೆ ಹೊಯ್ಸಳರ ವೀರಗತೆಗಳು ಎಂಬ ವಿಶಿಷ್ಟ ಕಾರ್ಯಕ್ರಮವನ್ನಿತ್ತರು. 1998ರಲ್ಲಿ ಬೆಂಗಳೂರಿನ ವಿಸೀ ಸಂಪದ ಪ್ರಕಟಿಸಿದ ‘ಸಂಗೀತದ ಸಿರಿ ಎಚ್‌.ಯೋಗನರಸಿಂಹಂ' ಗ್ರಂಥದಲ್ಲಿ ‘ ಶ್ರೀಮಂತ ಬದುಕು' ಎಂಬ ಲೇಖನ ಬರೆದಿದ್ದಾರೆ.

ಚೇತನಾ ನರಸಿಂಹ ಜೋಯಿಸ್‌ ಒಬ್ಬ ಉದಯೋನ್ಮುಖ ಕವಿ. ಇಂಗ್ಲಿಷಿನಲ್ಲಿ ಹಲವಾರು ಕವಿತೆಗಳನ್ನು ಬರೆದಿದ್ದಾರೆ. ಫಿಲಡೆಲ್ಫಿಯಾದ ಸುತ್ತ ಮುತ್ತಲಿನ ಅನೇಕ ಕಾವ್ಯ ಬಳಗಗಳಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ಓದಿದ್ದಾರೆ. ನಮ್ಮ ಸಂಸ್ಕೃತಿಯನ್ನು ತಮ್ಮ ಕವಿತೆಗಳ ಮೂಲಕ ಇಲ್ಲಿನ ಯುವಜನಾಂಗಕ್ಕೆ ಪರಿಚಯಿಸುತ್ತಿರುವ ಸೇವೆಯನ್ನು ಗುರುತಿಸಿ ಇಲ್ಲಿನ Project Impact & The Network of Indian Professionals ನವರು ಅವರನ್ನು ಕಳೆದ ವರ್ಷ ಗೌರವಿಸಿದರು.

ಶ್ರೀರಾಂ ರಾಜಗೋಪಾಲ್‌ university of Pennsylvania ದ ವ್ಹಾರ್ಟನ್‌ ಶಾಲೆಯಲ್ಲಿ ಎಂ. ಬಿ. ಎ . ವಿದ್ಯಾರ್ಥಿ) ಆ ಶಾಲೆ ಪ್ರತಿವರ್ಷವೂ ನಡೆಸುವ ಹೆಸರುವಾಸಿಯಾದ Wharton Follies ಎಂಬ ಹಾಸ್ಯಭರಿತ ಪ್ರದರ್ಶನಕ್ಕೆ ಮುಖ್ಯ ಬರಹಗಾರರಾಗಿ ಆಯ್ಕೆಯಾಗಿದ್ದಾರೆ.

ಡಾ. ಎಚ್‌. ವೈ. ರಾಜಗೋಪಾಲ್‌ ಹಲವಾರು ಲೇಖನಗಳನ್ನು ಬರೆದಿದ್ದಾರೆ: ‘ ಶ್ರೀನಿವಾಸನ ಭಾರತ ಪ್ರಯಾಣ'(ಅನುಭವಾತ್ಮಕ ಲೇಖನ, ಹ್ಯೂಸ್ಟನ್ನಿನ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ, ಹಾಗೂ ಚಿಕಾಗೋ ಕನ್ನಡ ಸಂಸ್ಥೆ ‘ವಿದ್ಯಾರಣ್ಯ' ಪ್ರಕಟಿಸುವ ‘ ಸಂಗಮ'ದಲ್ಲಿ ), ‘ ಕಾರಂತರ ಕಣ್ಣಿನಲ್ಲಿ ಇತರರು'(‘ಕಾರಂತ ಚಿಂತನ'ದಲ್ಲಿ), ‘ತುಂಬಿದ ಬಾಳ್ವೆ'(‘ ಸಂಗೀತದ ಸಿರಿ ಎಚ್‌. ಯೋಗನರಸಿಂಹಂ' ಗ್ರಂಥದಲ್ಲಿ), ‘ ಇನ್ನಷ್ಟು ವಾತ್ಸಲ್ಯವಿದ್ದಿದ್ದರೆ '(‘ ಮೊಮ್ಮಕ್ಕಳು ಹೇಳಿದ ಅಜ್ಜೀ ಕಥೆ'ಯಲ್ಲಿ, ಪ್ರ : ಅಕ್ಷರ ಪ್ರಕಾಶನ, ಹೆಗ್ಗೋಡು).

ತ್ರಿವೇಣಿಯ ಸದಸ್ಯರ ಪೈಕಿ ಕನ್ನಡ ಮತ್ತು ಇತರ ಭಾರತೀಯ ಸಾಹಿತ್ಯಗಳಲ್ಲಿ ಹಾಗೂ ಕಲಾ ಪ್ರಕಾರಗಳಲ್ಲಿ ವಿಶೇಷ ಆಸಕ್ತಿ ಇರುವ ಹಲವರು ಸೇರಿ ನಡೆಸುತ್ತಿರುವ ಒಂದು ಗಮನಾರ್ಹ ಕಾರ್ಯಕ್ರಮವೆಂದರೆ ‘ಪ್ರಸ್ತಾಪ' ಎಂಬ ಹೆಸರಿನಲ್ಲಿ ನಡೆಯುತ್ತಿರುವ ವಿಚಾರಗೋಷ್ಠಿ. ಅನೇಕ ಕಾಲ ಫಿಲಡೆಲ್ಫಿಯದಲ್ಲಿ ವಾಸವಾಗಿದ್ದ, ಗಣ್ಯ ಸಾಹಿತ್ಯ ವಿಮರ್ಶಕರೆಂದೂ, ಲೇಖಕರೆಂದೂ ಮಾನ್ಯತೆ ಗಳಿಸಿದ್ದ, ಲಸಾಲ್‌ ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿದ್ದ ಪಿ. ಶ್ರೀನಿವಾಸ ರಾವ್‌ ಅವರ ನೆನಪಿನಲ್ಲಿ ಸ್ಥಾಪಿತವಾದ ಈ ಗೋಷ್ಠಿಯನ್ನು ಕನ್ನಡದ ಖ್ಯಾತ ಲೇಖಕ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು. ಆರ್‌. ಅನಂತಮೂರ್ತಿ ಜನವರಿ 2000ದಲ್ಲಿ ಉದ್ಘಾಟಿಸಿದರು. ಇದುವರೆಗೆ 14 ಸಭೆಗಳಾಗಿವೆ. ಇವುಗಳಲ್ಲಿ ಅನೇಕ ಖ್ಯಾತ ವಿದ್ವಾಂಸರು, ಲೇಖಕರು, ಕಲಾವಿದರು ತಮ್ಮ ಭಾಷಣಗಳನ್ನು ಮಂಡಿಸಿದ್ದಾರೆ. ಉದಾ : ಯು.ಆರ್‌. ಅನಂತಮೂರ್ತಿ (‘ ಅಡಿಗರ ಕಾವ್ಯ'), ಎನ್‌. ಎಸ್‌. ಲಕ್ಷ್ಮಿನಾರಾಯಣ ಭಟ್ಟ (‘ ಕುಮಾರ ವ್ಯಾಸ'), ಜಿ.ವಿ. ಕುಲಕರ್ಣಿ (‘ ಬೇಂದ್ರೆ'), ಜಿ. ಎಸ್‌. ಶಿವರುದ್ರಪ್ಪ (‘ ಆದಿಕವಿ ಪಂಪ'), ಬನ್ನಂಜೆ ಗೋವಿಂದಾಚಾರ್ಯ (‘ ಭವಭೂತಿಯ ಉತ್ತರರಾಮ ಚರಿತ') ಟಿ.ಎನ್‌. ಬಾಲ(‘ ತ್ಯಾಗರಾಜ') ಮತ್ತು ಡಾ. ಎಚ್‌. ವಿ. ರಂಗಾಚಾರ್‌ (‘ ಹೆರೋದೂತನ ಸಮರ ಕತೆಗಳು'), ಇವಲ್ಲದೆ, ಗುಲಾಂ ಮಹಮ್ಮದ್‌ ಷೇಖ್‌ (ಗುಜರಾತಿ ಕವಿ ಮತ್ತು ವರ್ಣಚಿತ್ರಕಾರ) ಅವರಿಂದ ತಮ್ಮ ಕಲಾಕೃತಿಗಳ ಬಗ್ಗೆ ಚಿತ್ರ ನಿರೂಪಣೆ, ಚಲನಚಿತ್ರ ನಿರ್ದೇಶಕ ಕೆ. ಹರಿಹರನ್‌ ಅವರಿಂದ ಕನ್ನಡ ಚಿತ್ರ ‘ ತಾಯಿ ಸಾಹೇಬಾ' ಚಿತ್ರ ಪ್ರದರ್ಶನ ಮತ್ತು ಅದರ ಬಗ್ಗೆ ಚರ್ಚೆ, ಝುಂಪಾ ಲಾಹಿರಿಯವರ ಕಥಾ ಸಂಗ್ರಹ ‘interpreter of maladies' ಬಗ್ಗೆ ಒಂದು ಬಹುಮುಖವಾದ ವಿಚಾರ ಗೋಷ್ಠಿ ಮೊದಲಾದ ಉತ್ಕೃಷ್ಟ ಕಾರ್ಯಕ್ರಮಗಳು ನಡೆದಿವೆ.

ತ್ರಿವೇಣಿಯ ಸದಸ್ಯರಾದ ಉಷಾ ಮತ್ತು ಶಿವಸ್ವಾಮಿ ವಸ್ತಾರೆ, ಹೇಮಾ ಮತ್ತು ಎಚ್‌. ರಾಮಮೂರ್ತಿ, ಎಚ್‌.ವಿ. ರಂಗಾಚಾರ್‌, ಗುಂಡು ಶಂಕರ್‌, ವಿಮಲ ಮತ್ತು ಎಚ್‌. ವೈ. ರಾಜಗೋಪಾಲ್‌ ಈ ಗೋಷ್ಠಿಯ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಾಹಿತ್ಯಾಭಿಮಾನಿಗಳಿಗೂ, ಕಲಾಸಕ್ತರಿಗೂ ವಿಚಾರ ವಿನಿಮಯಕ್ಕೆ ಈ ಗೋಷ್ಠಿ ಒಂದು ಸದವಕಾಶವನ್ನು ಕಲ್ಪಿಸಿದೆ. ತ್ರಿವೇಣಿಯ ಅನೇಕ ಸದಸ್ಯರು ಈ ಗೋಷ್ಠಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಶದಲ್ಲಿದ್ದಾಗ ಪ್ರಾರಂಭಿಸಿದ ‘ ಅಮೆರಿಕನ್ನಡ' ಪತ್ರಿಕೆ ಈಗ ನಡೆಯುತ್ತಿಲ್ಲವಾದರೂ, ಅದು ಅಮೆರಿಕದಲ್ಲಿ ಕನ್ನಡ ಪ್ರಚಾರಕ್ಕೆ, ಬೆಳವಣಿಗೆಗೆ ಅವರು ಕೈಗೊಂಡ ಒಂದು ಬಹುಮುಖ್ಯ ಕೆಲಸ. ಕನ್ನಡವನ್ನು ಗಣಕಯಂತ್ರ (computer)ಕ್ಕೆ ಅಳವಡಿಸುವ ವಿಷಯದಲ್ಲಿ ಬಹಳ ಮುಂಚಿನಿಂದಲೂ ಕೆಲಸ ಮಾಡಿದ್ದಾರೆ. ಇವರ ಕನ್ನಡ ಸೇವೆಯನ್ನು ಗೌರವಿಸಿ ಕರ್ನಾಟಕ ರಾಜ್ಯ ಸರಕಾರ 1990ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅನೇಕ ಕಡೆ ಅವರಿಗೆ ಸನ್ಮಾನ ಸಭೆಗಳು ನಡೆದುವು. ಅದೇ ವರ್ಷ ಅವರ ಕವನ ಸಂಕಲನ ‘‘ ವಿದೇಶಕ್ಕೆ ಬಂದವರು''(ಅಭಿವ್ಯಕ್ತಿ ಪ್ರಕಾಶನ, ಬೆಂಗಳೂರು)ಪ್ರಕಟವಾಗಿ ಅನೇಕ ಸಾಹಿತಿಗಳ ಮೆಚ್ಚುಗೆ ಪಡೆಯಿತು. ಸೆಪ್ಟೆಂಬರ್‌ 2000ದಲ್ಲಿ ಹ್ಯೂಸ್ಟನ್ನಿನಲ್ಲಿ ನಡೆದ ವಿಶ್ವ ಸಹಸ್ರ- ಸಂವತ್ಸರ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗೂ, ಅದೇ ಸಂದರ್ಭದಲ್ಲಿ ಬಿಡುಗಡೆಯಾದ ‘ ದರ್ಶನ' ಎಂಬ ವಿಶೇಷ ಗ್ರಂಥಕ್ಕೂ ಪ್ರಧಾನ ಸಂಪಾದಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರು ಬರೆದಿರುವ, ಪ್ರಕಟಿಸಿರುವ ಲೇಖನಗಳು, ಕವನಗಳು ಅನೇಕ. ಇಲ್ಲಿ ಪ್ರಕಟವಾಗುವ ಯಾವ ಪುಸ್ತಕ, ಪತ್ರಿಕೆಯನ್ನು ನೋಡಿದರೂ ಅದರಲ್ಲಿ ಅವರ ಲೇಖನವೊಂದಾದರೂ ನಿಮ್ಮ ಕಣ್ಣಿಗೆ ಬೀಳದೇ ಇರದು. ಅವರ ಪತ್ನಿ ನಾಗಲಕ್ಷ್ಮಿ ಅವರಿಗೆ ಎಲ್ಲ ರೀತಿಯಲ್ಲೂ ಸಹಧರ್ಮಿಣಿ. ಅವರ ಕನ್ನಡ ಪ್ರೇಮವನ್ನು ಇವರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಸ್ವತಃ ಅವರೂ ಉತ್ತಮ ಲೇಖಕಿ .

ತ್ರಿವೇಣಿಯ ಸ್ಥಾಪಕರಲ್ಲೊಬ್ಬರೂ, ಅದರ ಮಾಜಿ ಅಧ್ಯಕ್ಷರೂ ಆದ ಡಾ. ಎಚ್‌. ವಿ. ರಂಗಾಚಾರ್‌ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. ಮೊದಲನೆಯದು, ‘ನೆಲದ ಕರೆ' (ಕವನ ಸಂಕಲನ); ನಂತರ ಬಂದದ್ದು ‘ಹೆರೋದೂತನ ಸಮರ ಕತೆಗಳು' (ಅಂಕಿತ ಪುಸ್ತಕ, ಬೆಂಗಳೂರು, 2000). ಇದು ಇಂಗ್ಲಿಷಿನ The Histories of Herodotus (ಮೂಲ ಗ್ರೀಕ್‌) ಎಂಬ ಗ್ರಂಥದ ಕನ್ನಡ ಭಾಷಾಂತರ. ಗ್ರಂಥಕ್ಕೆ ಮುನ್ನುಡಿ ಬರೆದಿರುವ ಡಾ. ಎಂ. ಚಿದಾನಂದ ಮೂರ್ತಿಯವರು ಕನ್ನಡಕ್ಕೆ ಇದೊಂದು ‘ಅನನ್ಯವಾದ ಕೊಡುಗೆ' ಎಂದು ಪ್ರಶಂಸಿದ್ದಾರೆ. ಇನ್ನೊಂದು ಗ್ರಂಥ ಪು.ತಿ. ನರಸಿಂಹಾಚಾರ್ಯರ ‘ಮಲೆ ದೇಗುಲ' ಕಾವ್ಯ ಸಂಗ್ರಹದ ಇಂಗ್ಲಿಷ್‌ ಅನುವಾದ. ಇದನ್ನು ಭಾರತ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿದ್ದಾರೆ. ಅವರ ಇತರ ಕೊಡುಗೆಗಳು : ಕತೆ (‘ಗೌರಮ್ಮ ') ಮತ್ತು ಕವಿತೆ ( ಪು.ತಿ.ನ. ಅವರಿಗೆ ಬೀಳ್ಕೊಡುಗೆ)- ಕಳೆದ ವರ್ಷ ಹ್ಯೂಸ್ಟನ್ನಿನಲ್ಲಿ ನಡೆದ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ; ಲೇಖನ : ‘ ಮೈ ಮನಗಳ ಸುಳಿಯಲ್ಲಿ -ಒಂದು ವಿಮರ್ಶಾತ್ಮಕ ಲೇಖನ'- ಡಾ. ನಾಗ ಐತಾಳರು ಸಂಪಾದಿಸಿದ ‘ ಕಾರಂತ ಚಿಂತನ- ಕಡಲಾಚೆಯ ಕನ್ನಡಿಗರಿಂದ '(ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ, ಜುಲೈ - 2000).

ಡಾ. ವಿ.ಕೆ. ಪ್ರಸನ್ನ ಕುಮಾರ್‌(ತಿ್ರವೇಣಿಯ ಸ್ಥಾಪಕರು ಮತ್ತು ಮಾಜಿ ಅಧ್ಯಕ್ಷರು)ಮೇಲೆ ಹೇಳಿದ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ‘ ಪೂರ್ವ ಪೂರ್ವವೇ, ಪಶ್ಚಿಮ ಪಶ್ಚಿಮವೇ ?' ಎಂಬ ಲೇಖನ ಬರೆದಿದ್ದಾರೆ.

ಈ ಪ್ರದೇಶದ ಪ್ರಮುಖ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಸಂಸ್ಥೆಯಾದ ಶ್ರುತಿಯ ಗ್ರಂಥಪ್ರಕಾಶನ ಸಮಿತಿಯಲ್ಲಿ ಹೇಮಾ ರಾಮಮೂರ್ತಿ ಮತ್ತು ಡಾ. ಎಚ್‌. ವೈ. ರಾಜಗೋಪಾಲ್‌ ಸದಸ್ಯರಾಗಿದ್ದಾರೆ. ಈ ಸಮಿತಿ ಮುಂದಿನ ವರ್ಷ ನಮ್ಮ ಶಾಸ್ತ್ರೀಯ ಸಂಗೀತ ನೃತ್ಯಗಳ ಚರಿತ್ರೆ, ಬೆಳವಣಿಗೆ, ವಿಕಾಸಗಳ ಬಗ್ಗೆ ಸುಮಾರು 250 ಪುಟಗಳ ಒಂದು ವಿಶೇಷ ಗ್ರಂಥವನ್ನು ಪ್ರಕಟಿಸುತ್ತಿದೆ. (ಸಂ: ಡಾ. ವಿಜಿ ಸ್ವಾಮಿನಾಥನ್‌). ಭಾರತದ ಅನೇಕ ಅತ್ಯುತ್ತಮ ಸಂಗೀತ ನೃತ್ಯ ಕಲಾವಿದರು ವಿದ್ವಾಂಸರು ಈ ಗ್ರಂಥಕ್ಕೆ ಲೇಖನಗಳನ್ನು ಬರೆದಿದ್ದಾರೆ. ಶ್ರುತಿಯ ಕಾರ್ಯಕಾರೀ ಸಮಿತಿಯಲ್ಲಿ ಈ ಹಿಂದೆ ಪೂರ್ಣಿಮಾ ನಾರಾಯಣ್‌ ಮತ್ತು ಸುಧಾಕರ ರಾವ್‌ ಕೆಲಸ ಮಾಡಿದ್ದಾರೆ.

ವಿಮಲಾ ರಾಜಗೋಪಾಲ್‌ ಈ ಕಳೆದ ನಾಲ್ಕು ವರ್ಷಗಳಿಂದಲೂ ಇಲ್ಲಿನ university of pennsylvania ದ south asia Regionlal studies department ನಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಹೇಳಿಕೊಡುತ್ತಿದ್ದಾರೆ. 1999ರಲ್ಲಿ ಈ ಪ್ರದೇಶದ council of indian organizations (CIO) ನವರು ಪ್ರತಿವರ್ಷ ನಡೆಸುವ ಭಾರತೀಯ ದಿನಾಚರಣೆಯಲ್ಲಿ ತಮ್ಮ ಕನ್ನಡ ಜನಪದ ಗೀತೆಗಳ ಮೂಲಕ ಇಲ್ಲಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಸೇವೆಗಾಗಿ ಅವರನ್ನು ವಿಶೇಷ ಫಲಕವಿತ್ತು ಗೌರವಿಸಿದರು. 1998ರಲ್ಲಿ ಅರಿಜೋನದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಆಹ್ವಾನಿತ ಕಲಾವಿದೆಯಾಗಿ ಭಾಗವಹಿಸಿ, ತಮ್ಮ ಸಹೋದರಿ ಖ್ಯಾತ ಜನಪದ ಗೀತೆಗಳ ಗಾಯಕಿ ಡಾ. ಎಲ್‌. ಜಿ. ಸುಮಿತ್ರರೊಂದಿಗೆ ಹೊಯ್ಸಳರ ವೀರಗತೆಗಳು ಎಂಬ ವಿಶಿಷ್ಟ ಕಾರ್ಯಕ್ರಮವನ್ನಿತ್ತರು. 1998ರಲ್ಲಿ ಬೆಂಗಳೂರಿನ ವಿಸೀ ಸಂಪದ ಪ್ರಕಟಿಸಿದ ‘ಸಂಗೀತದ ಸಿರಿ ಎಚ್‌.ಯೋಗನರಸಿಂಹಂ' ಗ್ರಂಥದಲ್ಲಿ ‘ ಶ್ರೀಮಂತ ಬದುಕು' ಎಂಬ ಲೇಖನ ಬರೆದಿದ್ದಾರೆ.

ಚೇತನಾ ನರಸಿಂಹ ಜೋಯಿಸ್‌ ಒಬ್ಬ ಉದಯೋನ್ಮುಖ ಕವಿ. ಇಂಗ್ಲಿಷಿನಲ್ಲಿ ಹಲವಾರು ಕವಿತೆಗಳನ್ನು ಬರೆದಿದ್ದಾರೆ. ಫಿಲಡೆಲ್ಫಿಯಾದ ಸುತ್ತ ಮುತ್ತಲಿನ ಅನೇಕ ಕಾವ್ಯ ಬಳಗಗಳಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ಓದಿದ್ದಾರೆ. ನಮ್ಮ ಸಂಸ್ಕೃತಿಯನ್ನು ತಮ್ಮ ಕವಿತೆಗಳ ಮೂಲಕ ಇಲ್ಲಿನ ಯುವಜನಾಂಗಕ್ಕೆ ಪರಿಚಯಿಸುತ್ತಿರುವ ಸೇವೆಯನ್ನು ಗುರುತಿಸಿ ಇಲ್ಲಿನ Project Impact & The Network of Indian Professionals ನವರು ಅವರನ್ನು ಕಳೆದ ವರ್ಷ ಗೌರವಿಸಿದರು.

ಶ್ರೀರಾಂ ರಾಜಗೋಪಾಲ್‌ university of Pennsylvania ದ ವ್ಹಾರ್ಟನ್‌ ಶಾಲೆಯಲ್ಲಿ ಎಂ. ಬಿ. ಎ . ವಿದ್ಯಾರ್ಥಿ) ಆ ಶಾಲೆ ಪ್ರತಿವರ್ಷವೂ ನಡೆಸುವ ಹೆಸರುವಾಸಿಯಾದ Wharton Follies ಎಂಬ ಹಾಸ್ಯಭರಿತ ಪ್ರದರ್ಶನಕ್ಕೆ ಮುಖ್ಯ ಬರಹಗಾರರಾಗಿ ಆಯ್ಕೆಯಾಗಿದ್ದಾರೆ.

ಡಾ. ಎಚ್‌. ವೈ. ರಾಜಗೋಪಾಲ್‌ ಹಲವಾರು ಲೇಖನಗಳನ್ನು ಬರೆದಿದ್ದಾರೆ: ‘ ಶ್ರೀನಿವಾಸನ ಭಾರತ ಪ್ರಯಾಣ'(ಅನುಭವಾತ್ಮಕ ಲೇಖನ, ಹ್ಯೂಸ್ಟನ್ನಿನ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ, ಹಾಗೂ ಚಿಕಾಗೋ ಕನ್ನಡ ಸಂಸ್ಥೆ ‘ವಿದ್ಯಾರಣ್ಯ' ಪ್ರಕಟಿಸುವ ‘ ಸಂಗಮ'ದಲ್ಲಿ ), ‘ ಕಾರಂತರ ಕಣ್ಣಿನಲ್ಲಿ ಇತರರು'(‘ಕಾರಂತ ಚಿಂತನ'ದಲ್ಲಿ), ‘ತುಂಬಿದ ಬಾಳ್ವೆ'(‘ ಸಂಗೀತದ ಸಿರಿ ಎಚ್‌. ಯೋಗನರಸಿಂಹಂ' ಗ್ರಂಥದಲ್ಲಿ), ‘ ಇನ್ನಷ್ಟು ವಾತ್ಸಲ್ಯವಿದ್ದಿದ್ದರೆ '(‘ ಮೊಮ್ಮಕ್ಕಳು ಹೇಳಿದ ಅಜ್ಜೀ ಕಥೆ'ಯಲ್ಲಿ, ಪ್ರ : ಅಕ್ಷರ ಪ್ರಕಾಶನ, ಹೆಗ್ಗೋಡು).

ತ್ರಿವೇಣಿಯ ಸದಸ್ಯರ ಪೈಕಿ ಕನ್ನಡ ಮತ್ತು ಇತರ ಭಾರತೀಯ ಸಾಹಿತ್ಯಗಳಲ್ಲಿ ಹಾಗೂ ಕಲಾ ಪ್ರಕಾರಗಳಲ್ಲಿ ವಿಶೇಷ ಆಸಕ್ತಿ ಇರುವ ಹಲವರು ಸೇರಿ ನಡೆಸುತ್ತಿರುವ ಒಂದು ಗಮನಾರ್ಹ ಕಾರ್ಯಕ್ರಮವೆಂದರೆ ‘ಪ್ರಸ್ತಾಪ' ಎಂಬ ಹೆಸರಿನಲ್ಲಿ ನಡೆಯುತ್ತಿರುವ ವಿಚಾರಗೋಷ್ಠಿ. ಅನೇಕ ಕಾಲ ಫಿಲಡೆಲ್ಫಿಯದಲ್ಲಿ ವಾಸವಾಗಿದ್ದ, ಗಣ್ಯ ಸಾಹಿತ್ಯ ವಿಮರ್ಶಕರೆಂದೂ, ಲೇಖಕರೆಂದೂ ಮಾನ್ಯತೆ ಗಳಿಸಿದ್ದ, ಲಸಾಲ್‌ ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿದ್ದ ಪಿ. ಶ್ರೀನಿವಾಸ ರಾವ್‌ ಅವರ ನೆನಪಿನಲ್ಲಿ ಸ್ಥಾಪಿತವಾದ ಈ ಗೋಷ್ಠಿಯನ್ನು ಕನ್ನಡದ ಖ್ಯಾತ ಲೇಖಕ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು. ಆರ್‌. ಅನಂತಮೂರ್ತಿ ಜನವರಿ 2000ದಲ್ಲಿ ಉದ್ಘಾಟಿಸಿದರು. ಇದುವರೆಗೆ 14 ಸಭೆಗಳಾಗಿವೆ. ಇವುಗಳಲ್ಲಿ ಅನೇಕ ಖ್ಯಾತ ವಿದ್ವಾಂಸರು, ಲೇಖಕರು, ಕಲಾವಿದರು ತಮ್ಮ ಭಾಷಣಗಳನ್ನು ಮಂಡಿಸಿದ್ದಾರೆ. ಉದಾ : ಯು.ಆರ್‌. ಅನಂತಮೂರ್ತಿ (‘ ಅಡಿಗರ ಕಾವ್ಯ'), ಎನ್‌. ಎಸ್‌. ಲಕ್ಷ್ಮಿನಾರಾಯಣ ಭಟ್ಟ (‘ ಕುಮಾರ ವ್ಯಾಸ'), ಜಿ.ವಿ. ಕುಲಕರ್ಣಿ (‘ ಬೇಂದ್ರೆ'), ಜಿ. ಎಸ್‌. ಶಿವರುದ್ರಪ್ಪ (‘ ಆದಿಕವಿ ಪಂಪ'), ಬನ್ನಂಜೆ ಗೋವಿಂದಾಚಾರ್ಯ (‘ ಭವಭೂತಿಯ ಉತ್ತರರಾಮ ಚರಿತ') ಟಿ.ಎನ್‌. ಬಾಲ(‘ ತ್ಯಾಗರಾಜ') ಮತ್ತು ಡಾ. ಎಚ್‌. ವಿ. ರಂಗಾಚಾರ್‌ (‘ ಹೆರೋದೂತನ ಸಮರ ಕತೆಗಳು'), ಇವಲ್ಲದೆ, ಗುಲಾಂ ಮಹಮ್ಮದ್‌ ಷೇಖ್‌ (ಗುಜರಾತಿ ಕವಿ ಮತ್ತು ವರ್ಣಚಿತ್ರಕಾರ) ಅವರಿಂದ ತಮ್ಮ ಕಲಾಕೃತಿಗಳ ಬಗ್ಗೆ ಚಿತ್ರ ನಿರೂಪಣೆ, ಚಲನಚಿತ್ರ ನಿರ್ದೇಶಕ ಕೆ. ಹರಿಹರನ್‌ ಅವರಿಂದ ಕನ್ನಡ ಚಿತ್ರ ‘ ತಾಯಿ ಸಾಹೇಬಾ' ಚಿತ್ರ ಪ್ರದರ್ಶನ ಮತ್ತು ಅದರ ಬಗ್ಗೆ ಚರ್ಚೆ, ಝುಂಪಾ ಲಾಹಿರಿಯವರ ಕಥಾ ಸಂಗ್ರಹ ‘interpreter of maladies' ಬಗ್ಗೆ ಒಂದು ಬಹುಮುಖವಾದ ವಿಚಾರ ಗೋಷ್ಠಿ ಮೊದಲಾದ ಉತ್ಕೃಷ್ಟ ಕಾರ್ಯಕ್ರಮಗಳು ನಡೆದಿವೆ.

ತ್ರಿವೇಣಿಯ ಸದಸ್ಯರಾದ ಉಷಾ ಮತ್ತು ಶಿವಸ್ವಾಮಿ ವಸ್ತಾರೆ, ಹೇಮಾ ಮತ್ತು ಎಚ್‌. ರಾಮಮೂರ್ತಿ, ಎಚ್‌.ವಿ. ರಂಗಾಚಾರ್‌, ಗುಂಡು ಶಂಕರ್‌, ವಿಮಲ ಮತ್ತು ಎಚ್‌. ವೈ. ರಾಜಗೋಪಾಲ್‌ ಈ ಗೋಷ್ಠಿಯ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಾಹಿತ್ಯಾಭಿಮಾನಿಗಳಿಗೂ, ಕಲಾಸಕ್ತರಿಗೂ ವಿಚಾರ ವಿನಿಮಯಕ್ಕೆ ಈ ಗೋಷ್ಠಿ ಒಂದು ಸದವಕಾಶವನ್ನು ಕಲ್ಪಿಸಿದೆ. ತ್ರಿವೇಣಿಯ ಅನೇಕ ಸದಸ್ಯರು ಈ ಗೋಷ್ಠಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

English summary
Thriveni kannada sangha members contribution to kannada literary activities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X