For Daily Alerts
ಶೇಷಾದ್ರಿ ಕುಟುಂಬಕ್ಕೆ ಜೆಎಸ್‌ಎಸ್ ಸಹಾಯ ಹಸ್ತ
ವಾಷಿಂಗ್ಟನ್ ಡಿಸಿಯಲ್ಲಿ ಆಗಸ್ಟ್ 14ರಂದು ಯಾರದೋ ತಪ್ಪಿಗೆ, ಹುಚ್ಚಾಟಕ್ಕೆ ಬಲಿಯಾದ ಗಂಟೆ ಶೇಷಾದ್ರಿ ಅವರ ಕುಟುಂಬಕ್ಕೆ ಜೆಎಸ್‌ಎಸ್ ಆಧ್ಯಾತ್ಮ ಪ್ರಚಾರ ಮಂಡಳಿ ನೆರವು ನೀಡಲು ನಿರ್ಧರಿಸಿದೆ.
ಜಗದ್ಗುರು ದೇಶಿಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ನಡೆಯುತ್ತಿರುವ ಆಧ್ಯಾತ್ಮ ಮಂಡಳಿಯು ಶೇಷಾದ್ರಿಯವರ ಕುಟುಂಬಕ್ಕಾಗಿ ನಿಧಿ ಸಂಗ್ರಹಿಸುತ್ತಿದೆ. ಕುಟುಂಬದ ಆಧಾರ ಸ್ತಂಭವೇ ಕಳೆದುಹೋಗಿರುವ ಮನೆಗೆ ಸಹಾಯ ಮಾಡುವುದು ಪಾಪ ಪುಣ್ಯದ ದೃಷ್ಠಿಯನ್ನು ಹೊರತು ಪಡಿಸಿದರೂ, ಮಾನವೀಯತೆಯ ನೆಲೆಯಲ್ಲಿ ಸಹಜ ಅಲ್ಲವೇ ?
ಜೆಎಸ್‌ಎಸ್ ಆಧ್ಯಾತ್ಮ ಮಂಡಳಿ ಸಂಗ್ರಹಿಸುತ್ತಿರುವ ನಿಧಿಗೆ ತೆರಿಗೆ ಇರುವುದಿಲ್ಲ. ಆದ್ದರಿಂದ ವ್ಯಕ್ತಿ ನೀಡಿದ ದೇಣಿಗೆಯ ಅಷ್ಟೂ ಹಣ ಶೇಷಾದ್ರಿಯವರ ಮನೆ ತಲುಪುತ್ತದೆ. ಶೇಷಾದ್ರಿ ಮನೆಗೆ ಸಹಾಯ ಮಾಡಲು ಇಚ್ಚಿಸುವವರು ಕುಮಾರ್ ರಾಜಶೇಖರ್ ಅವರನ್ನು ಸಂಪರ್ಕಿಸಬಹುದು. ಇಮೇಯ್ಲ್ - skr505@msn.com
(ಇನ್ಫೋ ವಾರ್ತೆ)
ಗಂಟೆ ಶೇಷಾದ್ರಿ ಸಂಸಾರಕ್ಕೆ ನೆರವು ಕೊಡಿ
ಮುಖಪುಟ / ಸಾಹಿತ್ಯ ಸೊಗಡು