• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರ್ವಿನ್‌ನಲ್ಲಿ ಕನ್ನಡ ಸಾಹಿತ್ಯ ಗೋಷ್ಠಿ - ಸಂವಾದ

By Staff
|

Karnataka Cultural Association of Southern California
Special Interest Group Literature
ಇವರಿಂದ ಇದೋ ನಿಮಗಿಲ್ಲಿದೆ ಸಾಹಿತ್ಯಗೋಷ್ಠಿಗೆ ಆಮಂತ್ರಣ.
ಸಾಹಿತ್ಯವನ್ನು ಆಸ್ವಾದಿಸುವ ಸಹೃದಯರು ನೀವಾದಲ್ಲಿ ಜೂನ್‌ 3 ರ ಭಾನುವಾರದ ಈ ಸಾಹಿತ್ಯ ಗೋಷ್ಠಿಯೇ ನಿಮ್ಮ ಪಾಲಿಗೆ ಮಧ್ಯಾಹ್ನದ ಊಟವಾಗಬಹುದು. ‘ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದು ದಾರಿ- ಸ್ಥೂಲ ಸಮೀಕ್ಷೆ ಹಾಗೂ ಮುಂದೇನು ?’ ವಿಷಯದ ಬಗೆಗೆ ಆ ಮಧ್ಯಾಹ್ನ ಚಿಂತನ- ಮಂಥನ ನಡೆಯಲಿದೆ.


ಎಲ್‌.ಆರ್‌.ಭಟ್‌ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಆನಂತರ ನಡೆಯುವ ಮುಕ್ತ ಸಂವಾದ ಕಾರ್ಯಕ್ರಮವದ ನಿರ್ವಹಣೆಯನ್ನು ನಳಿನಿ ಭಟ್‌ ಹೊತ್ತಿದ್ದಾರೆ. ಆ ಹೊತ್ತಿನ ಚರ್ಚೆಯಲ್ಲಿ ಏನೆಲ್ಲ ಹೊಸ ಅಂಶಗಳು ಹೊರ ಬೀಳಲಿವೆಯೋ .. ! ನೀವೂ ಕೂಡ ಚರ್ಚೆಗೊಂದು ಮಾತು ಸೇರಿಸಬಹುದು.

ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯುವ ಈ ಕಾರ್ಯಕ್ರಮ ಏರ್ಪಾಡಾಗಿರುವ ವಿಳಾಸವನ್ನು ಗುರುತು ಹಾಕಿಕೊಳ್ಳಿ-
Harvard Community Athletic Park, 14701 Harvard Ave., Irvine, Ca 92606.
Directions: On I5 Exit Jamboree, Go South on Jamboree, Left On Walnut
(East), Right on Harvard Ave. The Park is on the Right Hand Side.


ಹೆಚ್ಚಿನ ವಿವರಗಳಿಗೆ ವಿಶ್ವೇಶ್ವರ್‌ ದೀಕ್ಷಿತ್‌ ಅಥವಾ ರಮೇಶ್‌ ಬಸವಪಟ್ಣ ಅವರನ್ನು ಸಂಪರ್ಕಿಸಬಹುದು. ದೀಕ್ಷಿತರ ದೂರವಾಣಿ ಸಂಖ್ಯೆ- 562-947-8752. ಈ- ಮೇಯ್ಲ್‌ : vishdixit@hotmail.comರಮೇಶ್‌ ಅವರ ದೂರವಾಣಿ ಸಂಖ್ಯೆ- 562-924-0406 . ಈ- ಮೇಯ್ಲ್‌ : rameshbas@yahoo.com

ಎಲ್‌.ಆರ್‌.ಭಟ್‌ ಅವರನ್ನು ನೀವು ಬಲ್ಲಿರಾ ?

ಪ್ರೌಢಶಾಲಾ ಶಿಕ್ಷಕ- ಕಾಲೇಜು ಉಪನ್ಯಾಸಕನಾಗಿ 38 ವರ್ಷಗಳ ಕಾಲ ದುಡಿದಿರುವ ಭಟ್‌, ಅನೇಕ ಕಥೆ, ಕವನಗಳನ್ನು ಬರೆದಿದ್ದಾರೆ. ಅವರು ಬರೆದ ನಾಟಕಗಳು ಯಶಸ್ವಿ ರಂಗ ಪ್ರಯೋಗ ಕಂಡಿವೆ. ಆಕಾಶವಾಣಿಯಲ್ಲೂ ಪ್ರಸಾರವಾಗಿವೆ. ಅಂಕೋಲಾದ ಜಿಲ್ಲಾ ಮಟ್ಟದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ - ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ಕಾಲ ದುಡಿದ ಅನುಭವವೂ ಇರುವ ಭಟ್‌, ಪ್ರಸ್ತುತ ದಾಂಡೇಲಿ ಪರಿಷತ್ತಿನ ಕಾರ್ಯದರ್ಶಿ.

ಬಳಕೆದಾರರ ವೇದಿಕೆಯ ಸದಸ್ಯ, ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಮಾತ್ರವಲ್ಲದೇ ಶಿರಸಿಯ ‘ಧ್ಯೇಯನಿಷ್ಠ ಪತ್ರಕರ್ತ’ ಪತ್ರಿಕೆಯ ವರದಿಗಾರನಾಗಿ ಭಟ್‌ ಅವರ ಪ್ರತಿಭೆಯದು ಹತ್ತಾರು ಮುಖ.

ಭಾರತೀಸುತರ ಸುತೆಯಿವರು ನಳಿನಿ ಭಟ್‌

ಪ್ರಸಿದ್ಧ ಕಾದಂಬರಿಕಾರ ಭಾರತೀಸುತ ಅವರ ಮಗಳು ನಳಿನಿ ಭಟ್‌. ಕಳೆದ 38 ವರ್ಷಗಳಿಂದ ಹೈಸ್ಕೂಲು ಶಿಕ್ಷಕಿಯಾಗಿ ಸೇವೆಯಲ್ಲಿರುವ ನಳಿನಿ ಭಟ್‌, ಸಾಹಿತ್ಯ ಚರಿತ್ರೆಯ ಚಳವಳಿ, ಹೋರಾಟಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದಾರೆ.

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X