• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾದಲ್ಲಿ ‘ಸಂಸ್ಕೃತ ಭಾರತಿ’ ಹಾಗೂ ಹಿಂದೂ ಪರಂಪರಾ ಶಿಬಿರ

By Staff
|

‘ಸಂಸ್ಕೃತ ಭಾಷೆಯ ಮೂಲಕ ಸಾಮಾಜಿಕ ಬದಲಾವಣೆ’- ಈ ಘೋಷಣೆಯಾಂದಿಗೆ ಕೆಲಸ ಮಾಡುತ್ತಿರುವ ‘ಸಂಸ್ಕೃತ ಭಾರತಿ’ ಅಮೆರಿಕಾದಲ್ಲಿ ಸಂಸ್ಕೃತ ಕಲಿಕಾ ಹಾಗೂ ಹಿಂದೂ ಪರಂಪರಾ ಶಿಬಿರಗಳನ್ನು ಆಯೋಜಿಸಿದೆ.

2 ದಿನಗಳ ಸಂಸ್ಕೃತ ಮಾತುಗಾರಿಕೆ ಕಲಿಯುವ ಶಿಬಿರಕ್ಕೆ ಪ್ರವೇಶ ಉಚಿತ. ಚಿಕ್ಕಮಗುವೊಂದು ಮಾತೃಭಾಷೆಯನ್ನು ಕಲಿಯುವಂತೆ ಸರಳ ಸಂಸ್ಕೃತವನ್ನು ಕಲಿಯಲು ಈ ಎರಡು ದಿನಗಳ ಶಿಬಿರದಲ್ಲಿ ಮಾರ್ಗದರ್ಶನ ಮಾಡಲಾಗುವುದು. ಈ ಶಿಬಿರದಲ್ಲಿ ಭಾಗವಹಿಸಲು ಸಂಸ್ಕೃತದ ಬಗ್ಗೆ ಪೂರ್ವ ಜ್ಞಾನವೇನೂ ಬೇಕಾಗಿಲ್ಲ.

ಮಕ್ಕಳೆಲ್ಲರೂ ಭಾಗವಹಿಸಬೇಕಾದ ಕಾರ್ಯಕ್ರಮವಿದು. ಮನೆಯಿಂದ ಮಕ್ಕಳ ಪಾಲಕರೊಬ್ಬರು ಮಕ್ಕಳ ಜೊತೆಗೆ ಬರಬೇಕು. ಮುಖ್ಯವಾಗಿ ಯುವಕ ಮತ್ತು ಯುವತಿಯರಿಗೆ ಸ್ವಾಗತ. ಸಂಪರ್ಕಿಸಿ ಅನಿಲ್‌ ಪಾರಿಖ್‌ : 562-802 -0253
ಮಧು ಹೆಬ್ಬಾರ್‌ : 562-865-6542
ಇ-ಮೇಲ್‌ ವಿಳಾಸ : madhuhebbar@yahoo.com

ಇಂತಹುದೇ ತರಗತಿಗಳನ್ನು ಏಪ್ರಿಲ್‌ 1ರಿಂದ 5ರವರೆಗೆ ಇರ್ವಿನ್‌ನಲ್ಲಿಯೂ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅರುಳ್‌ ಅವರನ್ನು ಸಂಪರ್ಕಿಸಬಹುದು. ದೂರವಾಣಿ : 714-235- 2358
ಹಿಂದೂ ಪರಂಪರಾ ಶಿಬಿರ

ಹಿಂದೂ ಹಬ್ಬಗಳನ್ನು ಹೇಗೆ ಆಚರಿಸಬೇಕು ಎಂಬ ಬಗ್ಗೆ ಮಾಹಿತಿ ನೀಡುವ ಹಿಂದೂ ಪರಂಪರಾ ಶಿಬಿರವನ್ನು ಮಾರ್ಚ್‌ 16ರಂದು ಏರ್ಪಡಿಸಲಾಗಿದೆ. ಎಲ್ಲ ಹಿಂದೂ ಹಬ್ಬಗಳನ್ನು ಒಂದೇ ದಿನದಲ್ಲಿ ಸಾಂಕೇತಿಕವಾಗಿ ಆಚರಿಸಿ ತೋರಿಸುವ ಮೂಲಕ ಹಬ್ಬಗಳ ವೈಶಿಷ್ಟ್ಯತೆಯನ್ನು ಶಿಬಿರದಲ್ಲಿ ವಿವರಿಸಲಾಗುವುದು.

ಕಾರ್ಯಕ್ರಮ ನಡೆಯುವ ಸ್ಥಳ - North wood Community Park, (Bryan and Yale Intersection), 4531 Bryan Ave, Irvine California.ಶಿಬಿರ ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ನಡೆಯುವುದು.

ಸಂಪರ್ಕ : ಶೈಲಜಾ ಮಲ್ಲಾಡಿ - 714-974-5234
ಶಿಲ್ಪಾ ಬನ್ಸಾಲ್‌ - 949-387-7791
ಶೀಲಾ ಕೆನೆ -949-786-1364
ಪದ್ಮಾ ವಾರಣಾಸಿ - 714-505-0406

ಮಮತಾ ರಾವ್‌ - 714-838-2148
ಅನು ಬಜಾಜ್‌- 949-654-5425
ಕೃತಿ ಗಾಂಧಿ - 562-921-4912

ಪ್ರತಿ ಮಗುವಿಗೆ ಐದು ಡಾಲರ್‌ ಪ್ರವೇಶ ಶುಲ್ಕ. ಒಂದು ಕುಟುಂಬಕ್ಕೆ 10 ಡಾಲರ್‌. ಶಿಬಿರದಲ್ಲಿ ಹಬ್ಬಗಳ ಆಚರಣೆ, ರಾಮಾಯಣ, ಮಹಾಭಾರತ, ಪುರಾಣ ಕತೆಗಳು, ಪೂಜಾ ಶ್ಲೋಕಗಳ ಬಗೆಗೆ ತಿಳಿಸಿಕೊಡಲಾಗುವುದು. ಹಿಂದೂ ಹೆಸರಿನ ಬಗ್ಗೆ, ಸಂಸ್ಕೃತಿಯ ಬಗೆಗೆ, ಹಿಂದೂ ಮನೆಯ ಬಗ್ಗೆ ವಿವರಗಳನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಸಣ್ಣ ಪುಟ್ಟ ಆಟಗಳು, ಕಸೂತಿ ವಿಷಯಗಳು, ಯೋಗದ ಬಗೆಗೂ ಹೇಳಿಕೊಡಲಾಗುವುದು. ಶಿಬಿರದಲ್ಲಿ ಊಟ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ.

(ಇನ್ಪೋ ವಾರ್ತೆ)

Click here to go to top
ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more