ಮಿಡಿವ ಹೃದಯಗಳ ‘ಸಂಗೀತ ಸಂಧ್ಯಾ’
ಮನೆ ಕುಸಿದಿದೆ. ಮನ ಕದಡಿದೆ. ವಿಶ್ವ ವ್ಯಾಪಾರಿ ಕೇಂದ್ರದ ಅವಳಿ ಕಟ್ಟಡದೊಳಕ್ಕೆ ಉಗ್ರರು ವಿಮಾನಗಳ ನುಗ್ಗಿಸಿ ಹದಿನೈದು ದಿನಗಳಾದರೂ ಹೊಗೆ ಇನ್ನೂ ಪೂರ್ತಿ ಆರಿಲ್ಲ. ಮಾನವೀಯತೆಯ ವಿರುದ್ಧದ ಈ ದಾಳಿಯಲ್ಲಿ ಸತ್ತವರೆಲ್ಲಾ ನಮ್ಮವರೇ ಅಲ್ಲವೇ? ದುರಂತಕ್ಕೆ ಅಮೆರಿಕೆಯಲ್ಲಿರುವ ಕನ್ನಡದ ಮನಗಳೂ ಸ್ಪಂದಿಸುತ್ತಿವೆ. ಸಂತ್ರಸ್ತರ ಸಂಸಾರಕ್ಕೆ ಅಳಿಲು ಸೇವೆ ಸಲ್ಲಿಸಲು ಠರಾವು ಮಾಡಿವೆ. ಇದಕ್ಕಾಗೇ ಆಯೋಜಿತವಾಗಿದೆ 'ರಾಗ’ಸುಧೆ.
ಉತ್ತರ ಕ್ಯಾಲಿಫೆೋರ್ನಿಯಾ ಕನ್ನಡ ಕೂಟ 'ಸಂಗೀತ ಸಂಧಾ’್ಯ ಎಂಬ ಕಾರ್ಯಕ್ರಮ ಯೋಜಿಸಿದೆ; ಆಕ್ಟೋಬರ್ 6ರಂದು ಸಂಜೆ 5.30ರಿಂದ. ಹಳೆ- ಹೊಸ ಕನ್ನಡ ಗೀತೆಗಳ ಗಾನಪಾನ ನಿಮಗಾಗಿ. ನೀವು ಖರೀದಿಸುವ ಟಿಕೆಟ್ಟಿನ ಹಣ ತಮ್ಮವರ ಕಳಕೊಂಡ ದುಃಖದಲ್ಲಿರುವ ಸಂತ್ರಸ್ತರ ಸಂಸಾರಕ್ಕೆ ಕಾಣಿಕೆಯಾಗಲಿದೆ. ಸಂಗೀತಾನುಭಾವಿಗಳಾಗುವ ಜೊತೆಗೆ ದಾನಿಗಳಾಗುವ ಅಪರೂಪದ ಅವಕಾಶವಿದು.
ಕನ್ನಡದ ಹಿರಿ- ಕಿರಿ ತೆರೆಯಲ್ಲಿ ಮಿಂಚಿರುವ ಸುಮನ್ ನಗರ್‌ಕರ್ ಕಾರ್ಯಕ್ರಮದ ಮುಖ್ಯ ಆಕರ್ಷಣೆ. ಕೂಟದ ಅಧ್ಯಕ್ಷ ಹಾಗೂ 'ರಾಗ ’ ಬಳಗದ ಹಾಡುಗಾರರಲ್ಲೊಬ್ಬರಾದ ರಾಮ್‌ಪ್ರಸಾದ್ ಕೂಡ ಹಾಡಲಿದ್ದಾರೆ. ಇವರು ಹಾಡಿರುವ ನನ್ನ ಪ್ರೀತಿಯ ಹುಡುಗಿ ಚಿತ್ರದ 'ಮೂಡಲ್ ಕುಣಿಗಲ್ ಕೆರೆ...’ ಹಾಡನ್ನು ನೀವು ಈಗಲೂ ಗುನುಗುತ್ತಿರಬಹುದು.
ಸ್ಥಳ- ಸ್ಪ್ಯಾಂಜನ್‌ಬರ್ಗ್ ಥಿಯೇಟರ್
ವಿಳಾಸ- 780 ಅರ್ಯಾಸ್ಟ್ರಾಡರೋ ರಸ್ತೆ, ಪಾಲೋ ಆಲ್ಟೋ
ಟಿಕೆಟ್ ದರ- 7 ಡಾಲರ್.
ಟಿಕೆಟ್ ಕೊಳ್ಳಲು ನೀವೂ ಮನಸ್ಸು ಮಾಡಿದಲ್ಲಿ, ಖರೀದಿಗೆ ದಾರಿ ಇದೋ ಇಲ್ಲಿದೆ...
ವಾದಿರಾಜ ಭಟ್ (510-814-1805), ಅಶೋಕ್ ಕುಮಾರ್ (510-769-1581)
ರಾಮ್ ಪ್ರಸಾದ್ (510-489-7190),ಆನಂದ್ ಹೆಬ್ಬಳಲು (510-738-1834)
ಪರಿಮಳ ಮುರಳಿಧರ (408-927-9945),ಸುನಿಲ್ ಕುಮಾರ್ (408-835-7928)
(ಇನ್ಫೋ ವಾರ್ತೆ)












Click it and Unblock the Notifications