ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 18ರಂದು ಬೋಸ್ಟನ್‌ಗೆ ಚಿತ್ರನಟ ಕೌಶಿಕ್‌ಅಮೆರಿಕಾ ಯಾತ್ರೆಗೆ ಅಣಿಯಾಗಿದ್ದಾರೆ ಎಂ.ಡಿ.ಕೌಶಿಕ್‌

By Staff
|
Google Oneindia Kannada News

M.D. Kowshikಬೆಂಗಳೂರು : ಕನ್ನಡ ಚಲನಚಿತ್ರ ನಟ ಹಾಗೂ ನಿರ್ದೇಶಕ ಎಂ.ಡಿ. ಕೌಶಿಕ್‌ ಬೋಸ್ಟನ್‌ಗೆ ತೆರಳುವುದು ಈಗ ಖಚಿತವಾಗಿದೆ. ಜುಲೈ 17ರಂದು ಬೆಂಗಳೂರು ಬಿಡುವ ಕೌಶಿಕ್‌ 18ರಂದು ಸಂಜೆ ಬೋಸ್ಟನ್‌ ತಲುಪಲಿದ್ದಾರೆ. ಈ ವಿಷಯವನ್ನು ಸ್ವತಃ ಕೌಶಿಕರೆ ಕನ್ನಡ.ಇಂಡಿಯಾಇನ್‌ಫೋ.ಕಾಂಗೆ ಶನಿವಾರ ತಿಳಿಸಿದ್ದಾರೆ.

ವಾಸ್ತವವಾಗಿ ಮೇ ತಿಂಗಳಿನಲ್ಲೇ ಕೌಶಿಕ್‌ ಅಮೆರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ವಿದೇಶ ಪ್ರಯಾಣಕ್ಕೆ ಏರ್‌ ಟಿಕೆಟ್‌ ಕೂಡ ಬುಕ್ಕಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ತಮ್ಮ ಅಮೆರಿಕಾ ಪ್ರವಾಸವನ್ನು ಒಂದೂವರೆ ತಿಂಗಳ ಕಾಲ ಮುಂದೂಡಿರುವುದಾಗಿ ಕೌಶಿಕ್‌ ತಿಳಿಸಿದ್ದರು.

ತಮ್ಮ ಚಿತ್ರ ಚಟುವಟಿಕೆಗಳಿಂದ ಈಗ ಬಿಡುವು ಪಡೆದಿರುವ ಕೌಶಿಕ್‌ ಜುಲೈ 18ರಿಂದ ನ್ಯೂಯಾರ್ಕ್‌, ನ್ಯೂ ಜೆರ್ಸಿ, ಫಿಲಿಡೆಲ್ಫಿಯಾ ಮೊದಲಾದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಬಗ್ಗೆಯೂ ಅವರು ಕಾರ್ಯಕ್ರಮ ನೀಡುತ್ತಿದ್ದಾರೆ. ಮನರಂಜನಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿದ್ದಾರೆ.

ಅಮೇರಿಕೆಯಲ್ಲಿನ ಕನ್ನಡ ಚಟುವಟಿಕೆಗಳ ಬಗೆಗೆ ಸಾಕ್ಷ ಚಿತ್ರ ತಯಾರಿಸುವ ಮತ್ತು ಅತಿ ಚಿಕ್ಕ ವಿಡಿಯೋ ಕ್ಯಾಮರಾಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುವ ಉದ್ದೇಶವೂ ಕೌಶಿಕರಿಗಿದೆ. ಹೆಚ್ಚಿನ ವಿವರಗಳಿಗೆEmail: [email protected] , Telefax:0803420455 http://kowshik.india.webjump.com, Mobile: 9845021342 ಸಂಪರ್ಕಿಸಬಹುದು.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X