ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ಕೊನೆಯಲ್ಲಿ ಬೋಸ್ಟನ್‌ಗೆ ಎಂ.ಡಿ. ಕೌಶಿಕ್‌

By Staff
|
Google Oneindia Kannada News

ಅಕ್ಕ ಟ್ರಸ್ಟಿ ಹಾಗೂ ಡೈರೆಕ್ಟರ್‌ ವಿ. ಎಂ. ಕುಮಾರಸ್ವಾಮಿ ಸುದ್ದಿಯೋಲೆಯಾಂದನ್ನು ಕಳುಹಿಸಿದ್ದಾರೆ. ಸಿನಿಮಾ ನಟ ಹಾಗೂ ನಿರ್ದೇಶಕ ಬೆಂಗಳೂರಿನ ಎಂ.ಡಿ. ಕೌಶಿಕ್‌ ಮೇ ತಿಂಗಳ ಕೊನೆಯಲ್ಲಿ ಬೋಸ್ಟನ್‌ಗೆ ಬರಲಿದ್ದಾರೆ. ಅವರ ಅಮೇರಿಕಾ ಯಾತ್ರೆ ಕಾಲದ ಕಾರ್ಯಕ್ರಮ ಹಾಗೂ ನೀವು ಕೌಶಿಕ್‌ರನ್ನು ಸಂಪರ್ಕ ಹೊಂದಬಹುದಾದ ವಿವರಗಳನ್ನು ಕುಮಾರಸ್ವಾಮಿ ನೀಡಿದ್ದಾರೆ.

ಕೆಲವು ತಾಂತ್ರಿಕ ಕಾರ್ಯಗಳಿಗಾಗಿ ಬೋಸ್ಟನ್‌ಗೆ ಬರುತ್ತಿರುವ ಕೌಶಿಕ್‌, ಸುಮಾರು 20 ದಿನಗಳ ಕಾಲ ಇಲ್ಲಿ ತಂಗುವರು. ಈ ಅವಧಿಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲು ಕೌಶಿಕ್‌ ಉತ್ಸುಕರಾಗಿದ್ದಾರೆ. ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಬಗೆಗೂ ಅವರಲ್ಲಿ ಕಾರ್ಯಕ್ರಮವುಂಟು.

ಮನರಂಜನಾ ಕಾರ್ಯಕ್ರಮ ಮಾತ್ರವಲ್ಲದೆ- ಅಮೇರಿಕೆಯಲ್ಲಿನ ಕನ್ನಡ ಚಟುವಟಿಕೆಗಳ ಬಗೆಗೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸಲು, ಈ ಸಂಬಂಧ ಸಂದರ್ಶನಗಳನ್ನು ನಡೆಸಲು ಕೌಶಿಕ್‌ ಪ್ಲಾನ್‌ ಮಾಡಿದ್ದಾರೆ. ಈ ಸಂಬಂಧ ಅವರು ಯಾವುದೇ ಹಣಕಾಸಿನ ನೆರವನ್ನು ನಿರೀಕ್ಷಿಸಿಲ್ಲ .

ಕನ್ನಡ ಜನರನ್ನು ಭೇಟಿ ಮಾಡಲು, ಕನ್ನಡ ಕೂಟಗಳಲ್ಲಿ ಅಥವಾ ಖಾಸಗಿ ಪ್ರದರ್ಶನಗಳನ್ನು ನೀಡಲು ಕೌಶಿಕ್‌ ಉತ್ಸುಕರಾಗಿದ್ದಾರೆ. ನೀವು ಆಸಕ್ತರಾಗಿದ್ದಲ್ಲಿ , ಗೆಳೆಯರೊಂದಿಗೆ ಸೇರಿ ಕೌಶಿಕ್‌ ಹಾಗೂ ಅವರ ಪ್ರತಿಭೆಯ ಪ್ರದರ್ಶನಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಬಹುದು. ಈ ಬಗ್ಗೆ ಗೊಂದಲ- ಪ್ರಶ್ನೆಗಳೇನಿದ್ದರೂ ಕೌಶಿಕ್‌ ಅವರನ್ನು ಸಂಪರ್ಕಿಸಬಹುದು. ಅವರ ಇ-ಮೇಯ್ಲ್‌ ವಿಳಾಸ, ಬೆಂಗಳೂರಿನ ಫೋನ್‌ ನಂಬರ್‌ ಹಾಗೂ ವೆಬ್‌ಪೇಜ್‌ ಬಗೆಗಿನ ಮಾಹಿತಿ ನಿಮ್ಮ ಅನುಕೂಲಕ್ಕಿವೆ. Email: [email protected] , Telefax:0803420455
http://kowshik.india.webjump.com, Mobile: 9845021342

ಕೌಶಿಕ್‌ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬೇಕೆ ? ಕಿರು ಪರಿಚಯ ಇಲ್ಲಿದೆ-

ತಿರುವುಗಳು, ಹೀಗೂ ಉಂಟೆ, ಗಗನ ಕುಸುಮ, ನಾವಿರೋದೆ ಹೀಗೆ ಎನ್ನುವ ಜನಪ್ರಿಯ ದೂರದರ್ಶನ ಧಾರಾವಾಹಿಗಳನ್ನು ಕೌಶಿಕ್‌ ನಿರ್ದೇಶಿಸಿದ್ದಾರೆ. ನಾಲ್ಕು ಸಿನಿಮಾ ಹಾಗೂ ಐದು ಟೆಲಿ ಫಿಲಂಗಳು ಕೂಡ ಕೌಶಿಕ್‌ ನಿರ್ದೇಶನದ ಪಟ್ಟಿಯಲ್ಲಿವೆ. ಅವರ ನಿರ್ದೇಶನದ ಸಿನಿಮಾಗಳು-
ಮುಖವಾಡ (ರಾಮಕೃಷ್ಣ , ಜಯಂತಿ, ತಾರಾ)
ಪ್ರೇಮ ಕಾವ್ಯ (ಸುನೀಲ್‌, ಮಾಧುರಿ, ರಮೇಶ್‌ಭಟ್‌)
ಮಹಾಯುದ್ಧ (ಶಂಕರ್‌ನಾಗ್‌, ವಿನೋದ್‌, ಮಹಾಲಕ್ಷ್ಮಿ)
ರಂಭೆ ನೀ ವಯ್ಯಾರದ ಗೊಂಬೆ (ಕೌಶಿಕ್‌, ಅಖಿಲಾ)

ಕೌಶಿಕ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿದ ರಂಭೆ ನೀ ವ್ಯಯಾರದ ಗೊಂಬೆ ಚಿತ್ರ ಅಮೇರಿಕೆಯಲ್ಲಿ ನಡೆದ ಹವೇಲಿ ಅಂತರರಾಷ್ಟ್ರೀಯ ಚಿತ್ರೋತ್ಸವ (1999) ಹಾಗೂ ಈಜಿಪ್ಟ್‌ನ ಕೈರೋ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು.

ನಲವತ್ತಕ್ಕೂ ಹೆಚ್ಚು ಡಾಕ್ಯುಮೆಂಟರಿಗಳನ್ನು ಭಾರತ ಹಾಗೂ ವಿದೇಶದಲ್ಲಿ ಕೌಶಿಕ್‌ ನಿರ್ಮಿಸಿ- ನಿರ್ದೇಶಿಸಿದ್ದಾರೆ. ಸಿಂಗಪುರ್‌, ಹವಾಯಿ, ಲಾಸ್‌ ಏಂಜಲೀಸ್‌, ಸ್ಯಾನ್‌ಫ್ರಾನ್ಸಿಸ್ಕೋ, ಸ್ಯಾನ್‌ ಜೋಸ್‌ ಹಾಗೂ ಅರಿಜೋನಾಗಳಲ್ಲಿ ತಮ್ಮ ಡಾಕ್ಯುಮೆಂಟರಿಗಳನ್ನು ಕೌಶಿಕ್‌ ಚಿತ್ರೀಕರಿಸಿದ್ದಾರೆ. ದಕ್ಷಿಣ ಭಾರತ ಫಿಲಂ ಚೇಂಬರ್‌ (ಚೆನ್ನೈ)ನ ಮುಖ್ಯ ವಾಹಿನಿ ವಿಭಾಗದ ಸಿನಿಮಾಗಳ ಆಯ್ಕೆ ಸಮಿತಿಯಲ್ಲಿ ಜ್ಯೂರಿಯಾಗಿ ಹಾಗೂ ಫಿಲಂ ಡಿವಿಜನ್‌, ಕೆಎಫ್‌ಐಡಿಸಿಗಳಲ್ಲಿ ಪ್ಯಾನಲ್‌ ಪ್ರೊಡ್ಯೂಸರ್‌- ನಿರ್ದೇಶಕರಾಗಿ ದುಡಿದ ಅನುಭವವೂ ಅವರಿಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X