ಇರ್ವಿನ್‌ನಲ್ಲಿ ಕನ್ನಡ ಕಲಿಕಾ ತರಗತಿ
ಕ್ಯಾಲಿಫೋರ್ನಿಯಾ : ಇರ್ವಿನ್‌ನಲ್ಲಿ ಕನ್ನಡ ಕಲಿಕಾ ತರಗತಿಗಳು ಆರಂಭವಾಗಿದೆ. ನಿಮ್ಮ ಮಕ್ಕಳಿಗೆ, ಸ್ನೇಹಿತರಿಗೆ ಕನ್ನಡ ಕಲಿಯಬೇಕು, ಕಲಿಸಬೇಕು ಎಂದುಕೊಂಡಿದ್ದೀರಾ. ಎಂಥ ಒಳ್ಳೆ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದೆ ನೋಡಿ.
ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ ಕನ್ನಡ ಕಲಿಕಾ ತರಗತಿಗಳು ನಡೆಯುತ್ತವೆ. ಅಯ್ಯೋ, ಭಾನುವಾರದ ರಜೆಯನ್ನೆಲ್ಲಾ ಖರ್ಚು ಮಾಡಬೇಕಲ್ಲಾ ಅಂತ ಬೇಜಾರು ಮಾಡಿಕೊಳ್ಳಬೇಕಾಗಿಲ್ಲ. ತರಗತಿ ಇರುವುದು ಕೇವಲ ಒಂದು ಗಂಟೆ ಅವಧಿ ಮಾತ್ರ. ಮಧ್ಯಾಹ್ನ 1.15 ನಿಮಿಷಕ್ಕೆ ಕ್ಲಾಸ್ ಶುರುವಾಗುತ್ತದೆ. ಕನ್ನಡ ಕಲಿಯುವ ನಿಮ್ಮ ಉತ್ಸಾಹಕ್ಕೆ ಪ್ರೋತ್ಸಾಹ ಕೊಡುವವರು ಕೆಸಿಎ ಸಂಘದವರು.
ಕನ್ನಡದ ಗಂಧ ಗಾಳಿ ಇಲ್ಲದವರು ಕೂಡ ಈ ತರಗತಿಗೆ ಬರಬಹುದು. ತರಗತಿಗಳು ಮುಗಿಯುವ ಹೊತ್ತಿಗೆ ನೀವು ಸರಾಗವಾಗಿ ಕನ್ನಡ ಓದಬಲ್ಲಿರಿ. ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲಿರಿ. ತರಗತಿ ನಡೆಸುವವರು ಹೇಳುವ ಸೂಚನೆಗಳನ್ನು ನಿಯತ್ತಿನಿಂದ ಪಾಲಿಸುವುದು ಮಾತ್ರ ನೀವು ಮಾಡಬೇಕಾಗಿರುವ ಕೆಲಸ.
ತರಗತಿ ನಡೆಯುವ ಸ್ಥಳ ಡಿಯರ್ ಫೀಲ್ಡ್ ಕಮ್ಯೂನಿಟಿ ಸೆಂಟರ್. 50, ಡಿಯರ್ ವುಡ್ ವೇ.
ಬಾಲ್ಯದಲ್ಲಿ ಬಾಯಿ ತುಂಬ ಕನ್ನಡ ಮಾತಾಡಿಕೊಂಡು ನೀವು ಓಡಾಡುತ್ತಿದ್ದು, ನಿಮ್ಮ ತಮ್ಮ ತಂಗಿಯರು ಕನ್ನಡ ತೊದಲು ನುಡಿಯುತ್ತಿದ್ದುದು ಎಲ್ಲ ನಿಮಗೀಗ ನೆನಪಾಗುತ್ತಿರಬಹುದು. ತರಗತಿ ಬಗ್ಗೆ ಹೆಚ್ಚಿನ ಮಾಹಿತಿಗಳೇನಾದರೂ ಬೇಕಿದ್ದರೆ ನೀವು ಸಂಪರ್ಕಿಸಬಹುದಾದ ಫೋನ್ ನಂಬರ್‌ಗಳು ಅಲ್ಲಿವೆ.
ವಿಶ್ವೇಶ್ವರ್ ದೀಕ್ಷಿತ್ (562) 9478752
ಎಸ್.ವಿ. ಜಗನ್ನಾಥ್ (714) 8322757
ಜಯರಾಮ್ ರಾವ್ (949) 6540807
ವಿಜಯ ಕೊಪ್ಪಾ ರಾಮ್ (949) 5524055
ಈ ತರಗತಿಗಳಿಗೆ ಬರುವುದು ನಿಮಗೆ ಕಷ್ಟವಾಗಬಹುದು. ಅಂತಿಟ್ಟುಕೊಳ್ಳಿ. ನಿಮ್ಮ ಏರಿಯಾದಲ್ಲಿಯೇ ಕನ್ನಡ ತರಗತಿಗಳನ್ನು ಆರಂಭಿಸಬೇಕು ಎಂಬ ಯೋಚನೆ ಇದ್ದರೆ ಕೆಸಿಎಯ ಸದಸ್ಯರನ್ನು ಭೇಟಿಯಾಗಿ ನಿಮ್ಮ ಆಸೆ ಹೇಳಿಕೊಳ್ಳಬಹುದು. ನಿಮ್ಮೂರಿನಲ್ಲಿಯೇ ಒಂದು ಕನ್ನಡ ಕಲಿಕಾ ತರಗತಿ ಆರಂಭಿಸಬಹುದು. ಸರಿ ಮತ್ತೆ. ಈಗಲೇ ಫೋನ್ ಮಾಡಿ. ಕನ್ನಡ ಕಲಿತ ತಕ್ಷಣ ನಮಗೊಂದು ಪತ್ರ ಬರೆಯುತ್ತೀರಾ ?
ಮುಖಪುಟ / ಸಾಹಿತ್ಯ ಸೊಗಡು