ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎಯಲ್ಲಿ ‘ರಾಜು-ನಿರು’ ಕಥಕ್ಕಳಿ !

By Staff
|
Google Oneindia Kannada News

‘ಕರ್ನಾಟಕ ಸಾಂಸ್ಕೃತಿಕ ಸಂಘ’ದಲ್ಲಿ ಒಂದು ನೃತ್ಯ ಸಮಾರಾಧನೆ! ಟಿ.ಡಿ. ರಾಜೇಂದ್ರ ಮತ್ತು ನಿರುಪಮಾ ರಾಜೇಂದ್ರರ ಕಥಕ್ಕಳಿ ನೃತ್ಯ ಕಾರ್ಯಕ್ರಮ ಸೆಪ್ಟೆಂಬರ್‌ 8ರಂದು ನಡೆಯಲಿದೆ.

ಥೌಸಂಡ್‌ ಓಕ್ಸ್‌ ಆಡಿಟೋರಿಯಂ (Thousand Oaks Civic Arts Plaza Scherr Forum Theatre, 2100, E. Thousand Oaks Blvd, Thousand Oaks CA 91362 ) ನಲ್ಲಿ ಸಂಜೆ ಐದೂವರೆ ಗಂಟೆಗೆ ಕಾರ್ಯಕ್ರಮ ಶುರುವಾಗುತ್ತದೆ. ಪ್ರವೇಶ ಶುಲ್ಕ 20 ಮತ್ತು 15 ಡಾಲರ್‌ ಗಳು. ನೃತ್ಯಾಭಿಮಾನಿಗಳು ಈಗಲೇ ಟಿಕೆಟ್‌ ಕೊಂಡು ಸೀಟು ಕಾದಿರಿಸಿ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಈ ಫೋನ್‌ ನಂಬರ್‌ಗಳನ್ನು ಬಳಸಬಹುದು. ಅನು ಜೈರಾಮ್‌ - ( 805) 3736186, ಜಯಂತಿ ಸುಕುಮಾರ್‌- (818) 9917314, ಸೀತಾ ರಾಮಕೃಷ್ಣನ್‌ (805) 4927883, ಅನು ಗೋಪಾಲ್‌- (949) 6540990.

ಯುವ ನೃತ್ಯ ಪಟುಗಳು..

ಯುವ ನೃತ್ಯ ಪಟುಗಳಾದ ಟಿ.ಡಿ. ರಾಜೇಂದ್ರ ಮತ್ತು ನಿರುಪಮಾ ರಾಜೇಂದ್ರ ಬೆಂಗಳೂರಿನವರು. ಆತ್ಮೀಯ ವಲಯದಲ್ಲಿ ರಾಜು ಮತ್ತು ನಿರು ಎಂದೇ ಪ್ರಸಿದ್ಧರು. ನೃತ್ಯ ನಿರ್ದೇಶಕಿ ಮಾಯಾರಾವ್‌ ಅವರ ಗರಡಿಯಲ್ಲಿ ಪಳಗಿದವರು. ಪದ್ಮಶ್ರೀ ಕುಮುದಿನಿ ಲಖಿಯಾ ಪದ್ಮ ಭೂಷಣ್‌ ಕಲಾನಿಧಿ ನಾರಾಯಣ್‌ ಮತ್ತು ನರ್ಮದಾ ಅವರ ಶಿಷ್ಯತ್ವದಲ್ಲಿ ನೃತ್ಯದ ಹೆಜ್ಜೆಗಳ ಲಯವನ್ನು ಮತ್ತಷ್ಟು ಹದಗೊಳಿಸಿಕೊಂಡಿದ್ದಾರೆ. ದೇಶವಿದೇಶದ ವೇದಿಕೆಯಲ್ಲಿ ತಾಳಕ್ಕೆ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಫ್ರೆಂಚ್‌, ಜರ್ಮನ್‌ ಸಂಘಟನೆಗಳಡಿಯಲ್ಲಿ ಯುರೋಪ್‌ನಲ್ಲಿ ನೃತ್ಯ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಲಂಡನ್‌ನ ಐರಿಷ್‌ ಥಿಯೇಟರ್‌ ಕಂಪೆನಿಯ ಬಹು ಸಾಂಸ್ಕೃತಿಕ ಯೋಜನೆಯನ್ನು ನಿರ್ವಹಿಸಿದ್ದಾರೆ.

ನ್ಯೂ ಯಾರ್ಕ್‌ನ ಬಾಟರಿ ಡಾನ್ಸ್‌ ಕಂಪೆನಿಯಿಂದ ಪ್ರಶಂಸೆ, ಮಿಚಿಗನ್‌ ರಾಜ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕೌನ್ಸಿಲ್‌ನಲ್ಲಿ ಮೆಚ್ಚುಗೆ... ಹೀಗೆ ರಾಜು ಮತ್ತು ನಿರು ನೃತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರು.

ಭಾರತೀಯ ಟೆಲಿವಿಷನ್‌ನಲ್ಲಿ, ನಿರುಪಮಾ ಭರತನಾಟ್ಯಂನಲ್ಲಿ ಎ ಗ್ರೇಡ್‌ ಪಡೆದರೆ ನಿರು, ರಾಜು ಜೋಡಿ ಕಥಕ್ಕಳಿಯಲ್ಲಿ ಎ ಗ್ರೇಡ್‌ ಗಿಟ್ಟಿಸಿಕೊಂಡಿದೆ. ಇಬ್ಬರ ಪ್ರತಿಭೆಯ ಕೂಸಾಗಿ ‘ಅಭಿನವ ಆರ್ಟ್‌ ಸೆಂಟರ್‌’ ಹುಟ್ಟಿಕೊಂಡಿದೆ. ನೃತ್ಯ ತರಬೇತಿ, ನಿರ್ದೇಶನ, ಶಿಕ್ಷಣ ಯೋಜನೆಗಳು ‘ಅಭಿನವ’ದಲ್ಲಿ ನಡೆಯುತ್ತವೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X