......ಹೀಗೇ, ಒಂದು ಮಾತು - ಪುಟ 2

ಮೇಲಿನ ಎರಡು ಘಟನೆಗಳನ್ನು ವಿಶ್ಲೇಷಿಸುವ ಮೊದಲು ಒಪ್ಪಿಕೊಳ್ಳಬೇಕಾದ ಒಂದು ಸತ್ಯವಿದೆ. ವೈದ್ಯ ವಿಜ್ಞಾನ ಒಂದು ಸೂಕ್ಷ್ಮ ವ್ಯವಹಾರ. ‘ವೈದ್ಯೋ ನಾರಾಯಣೋ ಹರಿಃ’. ಎಲ್ಲಾ ಸುಳ್ಳು ಸುಳ್ಳೇ. ವೈದ್ಯ ವ್ಯವಹಾರಿಯಾಗುವುದು ತಪ್ಪೇನಿಲ್ಲ. ಆಸ್ಪತ್ರೆಗಳು ಅಂಗಡಿಗಳಾಗುವುಗದು ಅಷ್ಟೇ ಕಾಲನಿಯಮ. ವೈದ್ಯ ರೋಗಿಯ ಸಂಬಂಧ ದೇವರು ಭಕ್ತನ ಮಾದರಿಯನ್ನು ಬಿಟ್ಟು ವ್ಯಾಪಾರಿ ಗ್ರಾಹಕನ ಆಯಾಮವನ್ನು ತೆಗೆದುಕೊಳ್ಳುವುದು ಒಂದು ಆರೋಗ್ಯಕರ ಬೆಳವಣಿಗೆಯೆಂದೇ ನನ್ನ ಭಾವನೆ. ಒಬ್ಬ ವೈದ್ಯ ದೇವರಾಗಿಬಿಟ್ಟರೆ, ಆ ರೋಗಿ ಆ ದೇವರನ್ನು ಪ್ರಶ್ನಿಸುವ ಅವಕಾಶವನ್ನೇ ಕಳೆದುಕೊಂಡು ಬಿಡುತ್ತಾನೆ. ನಮ್ಮ ದೇಶದಲ್ಲಂತೂ ವೈದ್ಯರುಗಳು ಬಹಳ ದಿನಗಳಿಂದ ಈ ದೇವರ ಪಾತ್ರವನ್ನು ಆನಂದಿಸುತ್ತಲೆ ಬಂದಿದ್ದಾರೆ. ಆದರೆ ಆ ದಿನಗಳು ಮುಗಿದಿವೆ. ಪ್ರಪಂಚದ ಬೇರೆ ಯಾವ ನಾಗರಿಕ ಸಮಾಜದಲ್ಲಿಯೂ ರೋಗಿ ತನ್ನ ದೇಹದ ಮೇಲೆ ಹಕ್ಕನ್ನು ಕಳೆದುಕೊಂಡಿಲ್ಲ. ತನ್ನ ಒಪ್ಪಿಗೆಯಿಲ್ಲದೆ ತನ್ನ ದೇಹವನ್ನು ಮುಟ್ಟುವ ಹಕ್ಕು ಬೇರೆ ಯಾರಿಗೂ ಇಲ್ಲ ಎನ್ನುವ ನಾಜಿ ಸಿದ್ಧಾಂತ ಬೇರೆಡೆಯೆಲ್ಲಾ ಇದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಒಬ್ಬ ರೋಗಿ, ವೈದ್ಯನ ಬಳಿ ಹೋದ ತಕ್ಷಣ ತನ್ನ ಹಕ್ಕುಗಳನ್ನು ಕಳೆದುಕೊಂಡುಬಿಡುತ್ತಿದ್ದ. ತನ್ನ ತೊಂದರೆಯೇನೆಂಬುದನ್ನು ತಿಳಿಯುವುದೂ ಮಹಾಪರಾಧವೆಂದು ತಿಳಿಯುತ್ತಿದ್ದ ದಿನಗಳು ಸ್ವಲ್ಪ ಮಟ್ಟಿಗಾದರೂ ಸುಧಾರಿಸಿವೆ ಅನ್ನುವುದಾದರೂ ಸಮಾಧಾನದ ಸಂಗತಿ.

ವೈದ್ಯಶಾಸ್ತ್ರ ಒಂದು ವ್ಯಾಪಾರವಾದಲ್ಲಿ ಈ ವ್ಯಾಪಾರ ಸರಿಯಾಗಿ ನಡೆಯಲು ಪ್ರಮುಖವಾಗಿ ಬೇಕಾಗುವುದು ವ್ಯಾಪಾರಿ-ಗ್ರಾಹಕನ ಉತ್ತಮ ಸಂಬಂಧ. ಒಬ್ಬ ವ್ಯಾಪಾರಿ ತನ್ನ ವ್ಯಾಪಾರ ಸರಿಯಾಗಿ ನಡೆಸಲು ಹಲವಾರು ಮಾರಾಟದ ತಂತ್ರಗಳನ್ನು ಉಪಯೋಗಿಸಲೇಬೇಕಾಗಿಬಿಟ್ಟಿದೆ. ಇದರಲ್ಲಿ ತೀರ ಮುಖ್ಯವಾದದ್ದು ಪ್ರಚಾರ. ಆದರೆ, ಈ ರಂಗದ ಕೆಲವೊಂದು ಅಲಿಖಿತ ನಿಯಮಾವಳಿಗಳು ಪೆಪ್ಸಿ-ಕೋಕಿನಷ್ಟು ಕೊಲೆಗಡುಕ ಸ್ಪರ್ಧೆಯಿಂದ ಹೊರಗುಳಿಸುತ್ತದೆ. (ಸಚಿನ್ನಾಗಲಿ, ಹೃತಿಕ್‌ ರೋಷನ್ನಾಗಲೀ ಯಾವ ಆಸ್ಪತ್ರೆಯ ಜಾಹೀರಾತಿಗೂ ಬರುವುದು ಹಾಸ್ಯಾಸ್ಪದವೆಂದು ನಾವು ತಿಳಿದಿದ್ದೇವೆ.) ಪಾಶ್ಚಿಮಾತ್ಯ ದೇಶಗಳಲ್ಲಿ ಔಷಧ ಕಂಪೆನಿಗಳಿಂದ, ಆಸ್ಪತ್ರೆಗಳವರೆಗೆ ಜಾಹೀರಾತುಗಳು ಇದ್ದೇ ಇವೆ. ಒಬ್ಬ ವೈದ್ಯ ತನಗೆ ತಾನು ಪ್ರಚಾರ ಪಡೆಯುವುದು ತನ್ನ ಕೆಲಸದಿಂದ ಮಾತ್ರ ಅನ್ನುವ ದಿನಗಳು ದೂರವಾಗಿವೆ.

ನಮ್ಮ ಈ ಮೇಲಿನ ಎರಡು ವೈದ್ಯರುಗಳು ಎಲ್ಲಿ ಎಡವಿದರು ? ಮೊದಲನೆಯವ ದಂತ ವೈದ್ಯ. ತನ್ನನ್ನು ತಾನು ಮಾರ್ಕೆಟ್‌ ಮಾಡುವುದರಲ್ಲಿ ಸೋತಿದ್ದ. ನಾನು ಅಮೆರಿಕಾದಲ್ಲಿದ್ದುದು ಹಾಗೂ, ವೈದ್ಯನಾಗಿದ್ದುದು ಆತನಿಗೆ ಹೆದರಿಕೆ ತರುವ ವಿಷಯವಾಗಿತ್ತು. ಆತನೂ ಬೇರೆ ಬೇರೆ ದೇಶಕ್ಕೆ ಹೋಗಿಬಂದಿದ್ದಾನೆ. ತನ್ನ ಕೆಲಸದಲ್ಲಿ ಸಾಕಷ್ಟು ಪರಿಣತಿ ಇದ್ದೇ ಇದೆ. ಆದರೂ ಅಮೆರಿಕಾದಲ್ಲಿರುವ ವೈದ್ಯನೊಬ್ಬ ತನ್ನ ಬಳಿ ರೋಗಿಯಾಂದಿಗೆ ಬಂದಿದ್ದಾನೆಂಬುದು ಆತನ ಆತ್ಮಸ್ಥೈರ್ಯವನ್ನು ಕಳೆದಿತ್ತು. ಮೇಲಾಗಿ ನಾನು ಅವನ ಕಾರ್ಯವೈಖರಿಯ ಬಗ್ಗೆ ನಾನಾ ಪ್ರಶ್ನೆಗಳನ್ನು ಕೇಳಿದಾಗ ಇನ್ನೂ ಕಂಗಾಲಾಗಿದ್ದ. ಆತನ ರಕ್ಷಣೆಗೆ ಆಗ ಬಂದದ್ದು ನಮ್ಮ ವ್ಯವಸ್ಥೆ . ಕರೆಂಟು, ಮುಂತಾದವುದರ ನೆಪಕೊಟ್ಟು ನನ್ನನ್ನು ಸಾಗ ಹಾಕಲು ನೋಡಿದ್ದ. ನನ್ನ ಹೆಂಡತಿ ಹೇಳಿದಂತೆ, ನನ್ನಂತಹವರು ಬೇಕಾದಷ್ಟಿರುವಾಗ ನನ್ನನ್ನು ಆಕರ್ಷಿಸಲು ಆತನಿಗೆ ಬೇರೆ ಯಾವ ತಂತ್ರಗಳೇನೂ ಬೇಕಾಗಿರಲಿಲ್ಲ. ತನ್ನ ಕೆಲಸದ ಸಂಸ್ಕೃತಿ ಕೆಡದೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುವುದು ಆತನಿಗೆ ಮುಖ್ಯ.

ಎರಡನೆಯಾತ ಇನ್ನೊಂದು ತುದಿಯಲ್ಲಿದ್ದ. ತನ್ನ ಪಾಡಿಗೆ ತಾನಿರುವ ಸೋಗಿನಲ್ಲಿ ಪ್ರಪಂಚದ ಹುಳುಕನ್ನು ಹೊರಗೆ ಹಾಕಲು ಪ್ರಯತ್ನಿಸಿದ್ದ. ನಯವಾಗಿಯೇ ದೊಡ್ಡ ಆಸ್ಪತ್ರೆಗಳ , ಅವುಗಳ ಘನಂದಾರಿ ವೈದ್ಯರುಗಳ ಕಾರ್ಯ ದಕ್ಷತೆಯನ್ನು ನನಗೆ ತಿಳಿಸಲು ಪ್ರಯತ್ನ ಪಟ್ಟಿದ್ದ . ಇದೊಂದು ರೀತಿಯ ಪ್ರತಿಪ್ರಚಾರ. ತನ್ನ ಪ್ರತಿಭೆಯನ್ನು ತನ್ನ ಕೆಲಸದಿಂದ ಪ್ರತಿಫಲಿಸಲು, ಜಗತ್ತಿಗೆ ಅದನ್ನು ತೋರಿಸಲು ಅಸಮರ್ಥನಾಗಿದ್ದಾನೆ ಆತ. ಹಾಗೆಂದಾಕ್ಷಣ ಆತ ಕೆಟ್ಟ ವೈದ್ಯನೆಂದೇನಲ್ಲ. ಹೇಳಿಕೊಳ್ಳಲು ತನ್ನ ಬಳಿ ಒಳ್ಳೆಯದೇನೂ ಇಲ್ಲವೆಂಬ ಆತನ ಕೀಳರಿಮೆ ಬೇರೆಯವರ ಸಣ್ಣ ಹುಳುಕನ್ನು ದೊಡ್ಡದು ಮಾಡಲು ಪ್ರಯತ್ನಿಸುತ್ತಿದೆ. ಮೇಲಾಗಿ ಈ ದೊಡ್ಡ ಆಸ್ಪತ್ರೆಗಳ ಜೊತೆ ಸ್ಪರ್ಧಿಸಲೇಬೇಕಾದ ಅನಿವಾರ್ಯತೆಯನ್ನು ಕಂಡುಕೊಂಡಿದ್ದಾನೆ. ಅದು ಅಸಾಧುವೆನಿಸಿದಾಗ ಈ ರೀತಿಯ ಗಿಮಿಕ್‌ಗಳಿಗೆ ಶರಣುಹೋಗಿದ್ದಾನೆ. ಈ ದೊಡ್ಡ ಆಸ್ಪತ್ರೆಗಳೇ ಹೀಗೆ. ಬರುವಾಗಲೇ ಪ್ರಚಾರ ಪಡೆದುಕೊಂಡೇ ಬಂದಿರುತ್ತವೆ. ಆಸ್ಪತ್ರೆಯಲ್ಲಿರುವ ವೈದ್ಯರುಗಳಿಗಿಂತ ಆಸ್ಪತ್ರೆ ಪ್ರಸಿದ್ಧವಾದಾಗ ಆ ದೊಡ್ಡ ಸಂಸ್ಥೆಯ ಭಾಗವಾದ, ಆದರೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುವ ಸಾಮಾನ್ಯ ವೈದ್ಯನೂ ಈ ರೀತಿಯ ಕೀಳು ತಂತ್ರಗಳಿಗೆ ಜೋತು ಬೀಳಲೇ ಬೇಕಾಗುತ್ತದೆ.


ಮುಖಪುಟ / ಸಾಹಿತ್ಯ ಸೊಗಡು
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+