• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೇರಿಕಾದಲ್ಲಿ ಕನ್ನಡ ಏಕೆ ಕಲಿಸಬೇಕು?

By Staff
|

*ವರದಿ : ವಿ.ಎಂ. ಕುಮಾರಸ್ವಾಮಿ

Dr. Harold Schiffman ಕಾರ್ಯಕ್ರಮದಲ್ಲಿ ಮೂಡಿದ ಮೂರು ಅರ್ಥಪೂರ್ಣ ಪ್ರಶ್ನೆಗಳಿಗೆ ಷಿಫ್‌ಮನ್‌ ಉತ್ತರಿಸಿದರು. ಪ್ರಶ್ನೋತ್ತರ ಇಂತಿದೆ-

  1. ಅಮೆರಿಕಾದಲ್ಲಿ ಕನ್ನಡವನ್ನು ಕಲಿಸುತ್ತಿರುವುದು ಏಕೆ? ಕನ್ನಡ ಸಾಯುತ್ತಿರುವ ಭಾಷೆಯಲ್ಲವಾ?
ಕನ್ನಡ ಸಂಸ್ಕೃತಿಯನ್ನು ಅರಿಯಬೇಕಾದರೆ ಅದು ಕನ್ನಡ ಭಾಷೆಯ ಮೂಲಕವೇ ಸಾಧ್ಯ. 1200 ವರ್ಷಗಳ ಲಿಖಿತ ಇತಿಹಾಸವನ್ನು ಹೊಂದಿರುವ ಕನ್ನಡದಲ್ಲಿ - ಸಾಕಷ್ಟು ಸಂಶೋಧನೆ ಅಧ್ಯಯನಗಳು ಆಗಬೇಕಿದೆ, ಶಾಸನಗಳನ್ನು ಅರ್ಥೈಸಬೇಕಿದೆ, ಧರ್ಮ-ಇತಿಹಾಸ-ಕಲೆ- ವಾಸ್ತುಶಿಲ್ಪ- ಸಂಗೀತಗಳ ಹಿನ್ನೆಲೆಯಲ್ಲಿ ಜ್ಞಾನದ ಪರಿಕಲ್ಪನೆಯನ್ನು ರೂಪಿಸಬೇಕಾಗಿದೆ. ಇವುಗಳನ್ನೆಲ್ಲ ಅರ್ಥ ಮಾಡಿಕೊಂಡಾಗ ಮಾತ್ರ ಕನ್ನಡವನ್ನು ಅರ್ಥೈಸಿಕೊಳ್ಳಬಹುದು. ಇತರ ಸಾಂಪ್ರದಾಯಿಕ ಭಾಷೆಗಳ ವಿಷಯದಲ್ಲಿ ಇಂಥ ಪ್ರಯತ್ನಗಳು ಈಗಾಗಲೇ ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ನಡೆದಿವೆ. ಕನ್ನಡದ ವಿಷಯದಲ್ಲಿ ನಡೆಸುವ ಇಂಥ ಅಧ್ಯಯನ ಭಾರತ ಮಾತ್ರವಲ್ಲದೆ ಪಶ್ಚಿಮದಲ್ಲೂ ಮೆಚ್ಚುಗೆ ಗಳಿಸುತ್ತದೆ. ಸಂಸ್ಕೃತ, ತಮಿಳು ಅಥವಾ ಹಿಂದಿ ತಿಳಿದುಕೊಂಡ ಮಾತ್ರಕ್ಕೆ ಕನ್ನಡದ ಪರಿಸರವನ್ನು ಅರ್ಥ ಮಾಡಿಕೊಂಡಂತಾಗುವುದಿಲ್ಲ .

2. ಲಿಖಿತ ಭಾಷೆಯ ಜೊತೆಗೆ ಆಡುಭಾಷೆಯನ್ನೂ ಯಾಕೆ ಕಲಿಸಬೇಕು ?

ಸಾಮಾನ್ಯವಾಗಿ ಮಾತೃಭಾಷೆಯನ್ನೇ ಮಾತಾಡುವವರು ಬಾಲ್ಯದಲ್ಲಿಯೇ ಆ ಭಾಷೆಯನ್ನು ಕಲಿತಿರುತ್ತಾರೆ. ಭಾರತದಲ್ಲಿ ಅದಕ್ಕೆ ಪೂರಕವಾಗಿ ಪರಿಸರದಲ್ಲಿಯೂ ಅದೇ ಭಾಷೆ ಪ್ರಚಲಿತದಲ್ಲಿರುತ್ತದೆ. ಮಗು ಶಾಲೆಗೆ ಸೇರಿದಾಗ ತನ್ನ ಮಾತೃಭಾಷೆಯ ಲಿಖಿತ ರೂಪವನ್ನು ಕಲಿಯಲಾರಂಭಿಸುತ್ತದೆ. ಸಹಜವಾಗಿಯೇ ಲಿಖಿತ ಭಾಷೆಯೇ ಆ ಭಾಷೆಯ ನಿಜ ಸ್ವರೂಪ ಮತ್ತು ಆಡು ಮಾತು ಸ್ವಚ್ಛವಲ್ಲ ಎಂಬ ಭಾವನೆ ಜನರಲ್ಲಿರುತ್ತದೆ.

ಅಮೆರಿಕಾದಲ್ಲಿ ಯಾವುದೇ ಭಾಷೆಯನ್ನು ಮಾತಾಡುವವನ ಮನಸ್ಸಿನಲ್ಲಿ ಇಂಗ್ಲಿಷ್‌ ಬೇರೂರಿರುತ್ತದೆ. ಆದ್ದರಿಂದ ಮಾತಾಡುವ ಕನ್ನಡ ಮತ್ತು ಲಿಖಿತ ರೂಪದ ಕನ್ನಡ ಎರಡೂ ಬೇರೆ ಭಾಷೆಯಂತೆಯೇ ತೋರುತ್ತದೆ. ಉದಾಹರಣೆಗೆ ಮಾಡುವುದಕ್ಕೆ ಎಂಬ ಪದ ಆಡುಭಾಷೆಯ ಪ್ರಕಾರ ಮಾಡೋಕೆ ಎಂದಾಗುತ್ತದೆ. ಹೀಗೆ, ಮೌಖಿಕ ಮತ್ತು ಲಿಖಿತ ಭಾಷೆಯ ನಡುವಿನ ವ್ಯತ್ಯಾಸಗಳನ್ನು ಅರ್ಥ ಮಾಡಿಸಿಕೊಡುವ ಕಾರಣಕ್ಕೆ ಪ್ರತ್ಯೇಕ ಶಿಕ್ಷಣದ ಅಗತ್ಯವಿದೆ. ಆಡು ಭಾಷೆಯ ಪದಗಳನ್ನು ದಿನ ನಿತ್ಯದ ವ್ಯವಹಾರದಲ್ಲಿ ಬಳಸಲು ಅವರಿಗೆ ಸಹಾಯವಾಗುತ್ತದೆ. ಲಿಖಿತ ಭಾಷೆಯನ್ನು ಅಭ್ಯಸಿಸುವುದರಿಂದ ಪುಸ್ತಕಗಳನ್ನು ಓದಲು ಹಾಗೂ ಅಧ್ಯಯನ ಮಾಡಲು ಅನುಕೂಲವಾಗುತ್ತದೆ.

ಆಡು ಭಾಷೆಯ ಬಗೆಗೆ ವಿದ್ಯಾರ್ಥಿಗಳು ಜಾಸ್ತಿ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಕನ್ನಡ ಆಡುಭಾಷೆಯ ವ್ಯಾಕರಣ ಪುಸ್ತಕವನ್ನು ಬರೆದದ್ದೇ ಈ ಕಾರಣಕ್ಕಾಗಿ. ಯಾಕೆಂದರೆ ಲಿಖಿತ ಭಾಷೆಯ ವ್ಯಾಕರಣ ಸ್ವರೂಪಗಳ ಬಗೆಗೆ ಸಾಕಷ್ಟು ಪುಸ್ತಕಗಳು ಲಭ್ಯವಿವೆ. ಆದರೆ ಆಡುಭಾಷೆಯ ಬಗ್ಗೆ ಹೆಚ್ಚು ಮಾಹಿತಿ ಸಿಗದು. ಕನ್ನಡ ಮಾತೃಭಾಷೆಯಲ್ಲದವರಿಗೂ ಪ್ರತ್ಯೇಕ ತರಗತಿಗಳನ್ನು ನಡೆಸುವುದು ಒಳ್ಳೆಯದು. ಅಂತಹವರಿಗೆ ನಾನು ಪ್ರತ್ಯೇಕ ದಿನಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಅಥವಾ ಬೇರೆ ಶಿಕ್ಷಕರನ್ನು ನೇಮಿಸುತ್ತಿದ್ದೆ.

  1. ಭಾರತ ಹಾಗೂ ಪಶ್ಚಿಮ ದೇಶಗಳಲ್ಲಿ ಭಾಷೆಯನ್ನು ಕಲಿಸುವ ಶೈಕ್ಷಣಿಕ ಕ್ರಮದಲ್ಲಿ ಇರುವ ವ್ಯತ್ಯಾಸಗಳೇನು?
ಭಾಷೆಯನ್ನು ಸಂಪರ್ಕ ಮಾಧ್ಯಮವನ್ನಾಗಿ ಬಳಸುವುದು ಹೇಗೆ ಎನ್ನುವುದನ್ನು ನಾವು ಕಲಿಸಿಕೊಡುತ್ತೇವೆ. ಪ್ರಶ್ನೆಗಳನ್ನು ಕೇಳಲು, ಮಾಹಿತಿಯನ್ನು ಕೇಳಲು, ಮಲಗುವ ಸ್ಥಳ- ಊಟ... ಮುಂತಾಗಿ ಸಂಪರ್ಕ ಮಾಧ್ಯಮವಾಗಿ ಭಾಷೆಗೆ ಹಲವಾರು ಮುಖ. ಆದರೆ, ಭಾರತದಲ್ಲಿ ಭಾಷೆಯನ್ನು ಕ್ರಮಬದ್ಧವಾಗಿ ಕಲಿಸಲಾಗುತ್ತದೆ. ಮೊದಲಿಗೆ ಅಕ್ಷರಗಳ ಕಲಿಕೆ, ನಂತರ ಓದುವುದರ ಅಭ್ಯಾಸ. ನಾವು ‘ಸಿಎ’ ಸಿಲಬಸ್‌ ಪ್ರಕಾರ ಅಕ್ಷರಗಳನ್ನು ಮೊದಲಿಗೆ ಬೋಧಿಸುತ್ತೇವೆ. ಉದಾಹರಣೆಗೆ ಕಲಾ, ಮಗ, ರಾಜ, ಮರ .. ಒಟ್ಟಿನಲ್ಲಿ ಸರಳ ಪದಗಳು. ಭಾಷೆಯಲ್ಲಿ ಬಳಕೆಯಲ್ಲಿಲ್ಲದ ಯಾವುದೇ ಪದವನ್ನು ನಾವು ಬೋಧಿಸುವುದಿಲ್ಲ .

ಮತ್ತೊಂದು ಉದಾಹರಣೆಯೆಂದರೆ- ಸಹಾಯಕ ಕ್ರಿಯಾಪದಗಳ ಮೂಲಕ ನಾನು ಭಾಷೆಯನ್ನು ಕಲಿಸುತ್ತೇನೆ. ಬೇಕು, ಸಾಕು, ಗೊತ್ತು ಮುಂತಾದ ಸಹಾಯಕ ಕ್ರಿಯಾಪದಗಳನ್ನು - ಇವು ನನಗೆ ಗೊತ್ತು , ನಿಮಗೆ ಏಕೆ ಬೇಕು ಮುಂತಾಗಿ ಬಳಸಿದಾಗ ಅರ್ಥಪೂರ್ಣವೆನಿಸುತ್ತವೆ. ಮಾಡು, ಹೋಗು, ಬಾ ಮುಂತಾದ ಕ್ರಿಯಾಪದಗಳು ಹೆಚ್ಚು ಪರಿಪೂರ್ಣ ಹಾಗೂ ಸಂಕೀರ್ಣವಾಗಿರುವುದನ್ನು ಗಮನಿಸಬಹುದು. ಸಾಕು, ಬೇಕು.. ಪದಗಳು ಮೊದಲಿಗೆ ಗೊತ್ತಿದ್ದಲ್ಲಿ ಭಾಷೆಯಲ್ಲಿ ಅಭಾಸಗಳಾಗುವುದು ತಪ್ಪುತ್ತದೆ. ಸರಳ ಪಾಠಗಳನ್ನು ರೂಪಿಸುವ ಬಗ್ಗೆ ಪ್ರಸ್ತುತ ನಾನು ತೊಡಗಿಕೊಂಡಿದ್ದು , ಅವುಗಳನ್ನು ಸದ್ಯದಲ್ಲಿಯೇ ವೆಬ್‌ನಲ್ಲಿ ಪರಿಚಯಿಸುತ್ತೇನೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪ್ರಶ್ನೆಯಾಂದಕ್ಕೆ ಷಿಫ್‌ಮನ್‌ರ ಉತ್ತರ-

ಪ್ರೀತಿಯ ತೇಜಸ್ವಿ ,

ಕನ್ನಡ ಫಾಂಟ್ಸ್‌ ಮತ್ತು ವಿವಿಧ ವರ್ಡ್‌ ಪ್ರೊಸೆಸರ್‌ಗಳ ನಡುವಣ ಹೊಂದಾಣಿಕೆಯ ಕೊರತೆ... ಕುರಿತಂತೆ ಕುಮಾರಸ್ವಾಮಿ ಅವರ ಮೂಲಕ ತಾವು ಕಳುಹಿಸಿದ ಪ್ರಶ್ನೆ ತಲುಪಿದೆ. ಇದೊಂದು ಸಮಸ್ಯೆಯೆಂದು ನಾನು ಒಪ್ಪುತ್ತೇನೆ. ನನಗೆ ಗೊತ್ತಿರುವಂತೆ ಕನ್ನಡ ಮಾತ್ರವಲ್ಲದೆ ತಮಿಳು, ಚೀನೀ ಸೇರಿದಂತೆ ವಿವಿಧ ಭಾಷೆಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಚೀನೀಯರು ಅಭಿವೃದ್ಧಿ ಪಡಿಸಿರುವ ಸಾಫ್ಟ್‌ವೇರ್‌, ವೆಬ್‌ಸೈಟ್‌ನಲ್ಲಿ ಬಳಸಿರುವ ಫಾಂಟ್‌ಗಳನ್ನು ಗುರುತಿಸಿ ತಂತಾನೆ ಆ ಫಾಂಟ್‌ಗಳನ್ನು ಅಳವಡಿಸಿಕೊಳ್ಳುತ್ತದೆ.

ಕನ್ನಡ ಐಟಿ ಸಮುದಾಯದಲ್ಲಿ ಕೂಡ ಯಾರಾದರೊಬ್ಬರು ಸಮರ್ಥವಾದ ಫಾಂಟ್‌ ಕನ್ವರ್ಟರ್‌ ಅಭಿವೃದ್ಧಿ ಪಡಿಸುವ ಬಗೆಗೆ ನಾನು ಆಶಾವಾದಿಯಾಗಿದ್ದೇನೆ. ಕನ್ನಡದಲ್ಲಿ ಯೂನಿಕೋಡ್‌ ಅಭಿವೃದ್ಧಿಯಲ್ಲಿ ನೀವು ತೊಡಗಿಕೊಂಡಿದ್ದೀರೋ ಇಲ್ಲವೋ ನನಗೆ ತಿಳಿದಿಲ್ಲ . ತಮಿಳು ಯೂನಿಕೋಡ್‌ ಬಗ್ಗೆ ಹೇಳುವುದಾದರೆ- ಕೆಲವು ಮಂದಿ ತಮ್ಮ ಫಾಂಟ್‌ ಇತರರ ಫಾಂಟ್‌ಗಿಂತ ಉತ್ತಮವೆಂದು ಭಾವಿಸಿದ್ದಾರೆ. ಅಲ್ಲದೆ, ಯೂನಿಕೋಡ್‌ನಲ್ಲಿ ಹೊರಗಿನಿಂದ ಬಂದ ಕೆಲವು ಪದಗಳನ್ನು ಅಳವಡಿಸಿಕೊಳ್ಳಬೇಕೆ ಎನ್ನುವ ಕುರಿತೂ ಗೊಂದಲಗಳಿವೆ.

ಕನ್ನಡ ಐಟಿ ಸಮುದಾಯ ಈ ಸವಾಲನ್ನು ಸಮರ್ಥವಾಗಿ ಎದುರಿಸಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಬಗೆಗೆ ನನಗೆ ನಂಬುಗೆಯಿದೆ.

ಹೆಚ್‌. ಷಿಫ್‌ಮನ್‌

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more