ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸು ಮನಸಿನ ತುಂಬಾ ‘ಕನ್ನಡಪೀಠ’

By Staff
|
Google Oneindia Kannada News

*ವರದಿ : ವಿ.ಎಂ. ಕುಮಾರಸ್ವಾಮಿ

ದಕ್ಷಿಣ ಕ್ಯಾಲಿಫೋರ್ನಿಯಾ : ಕನ್ನಡಿಗರೊಂದಿಗೆ ಕೆಲಸ ಮಾಡಲು ನನಗೆ ರೋಮಾಂಚನವಾಗುತ್ತಿದೆ !

ಇಲ್ಲಿನ ಕರ್ನಾಟಕ ಸಾಂಸ್ಕೃತಿಕ ಒಕ್ಕೂಟ(ಕೆಸಿಎ) ಜುಲೈ 25 ರಂದು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಹೆರಾಲ್ಡ್‌ ಷಿಫ್‌ಮನ್‌ ಪುಳಕಿತರಾಗಿದ್ದರು. ಅವರೀಗ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಪೀಠ ಸ್ಥಾಪಿಸುವ ಉಮೇದಿನಲ್ಲಿದ್ದಾರೆ. ಆ ಕಾರಣದಿಂದಾಗಿಯೇ ಮಾತಿನ ತುಂಬಾ ಕನ್ನಡ, ಮನಸ್ಸಿನಲ್ಲೂ ಕನ್ನಡ.

ಆದರೆ, ಪ್ರೊ.ಷಿಫ್‌ಮನ್‌ ಮಾತನಾಡಿದ್ದು ಇಂಗ್ಲಿಷ್‌ನಲ್ಲಿ . ಇತ್ತೀಚೆಗೆ ಕನ್ನಡ ಸಂಪರ್ಕ ಕಡಿಮೆಯಾಗಿದೆ ಎಂದು ಹೇಳಿದ ಅವರು, ಇಂಗ್ಲೀಷ್‌ನಲ್ಲಿ ಮಾತನಾಡಲು ಅನುಮತಿ ಕೋರುವ ಮೂಲಕವೇ ಮಾತು ಆರಂಭಿಸಿದರು. ಅಮೆರಿಕ ಹಾಗೂ ಭಾರತಗಳಲ್ಲಿ ತಾವು ತಮಿಳು ಮತ್ತು ಕನ್ನಡ ಕಲಿತ ಬಗೆಯನ್ನು ವಿವರಿಸಿದರು.

ಕನ್ನಡದ ಮೌಖಿಕ ಹಾಗೂ ಬರವಣಿಗೆ ರೂಪಗಳಲ್ಲಿನ ವ್ಯತ್ಯಾಸಗಳನ್ನು ಕುರಿತು ಮಾತನಾಡಿದ ಷಿಫ್‌ಮನ್‌, ಸ್ಥಳೀಯ ಅಮೆರಿಕನ್ನರಿಗೆ ಹಾಗೂ ಅಮೆರಿಕನ್‌ ಕನ್ನಡಿಗರ ಮಕ್ಕಳಿಗೆ ತಾವು ಕನ್ನಡ ಕಲಿಸುವ ಬಗೆಯನ್ನು ವಿವರಿಸಿದರು. ಕನ್ನಡಿಗರು ಹಾಗೂ ಕನ್ನಡ ಸಮುದಾಯದೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿರುವ ಬಗೆಗೆ ಸಂತೋಷ ವ್ಯಕ್ತಪಡಿಸಿದ ಅವರು, UPENN ನಲ್ಲಿ ಕನ್ನಡ ಪೀಠ ಸ್ಥಾಪನೆಯ ಅಗತ್ಯದ ಕುರಿತು ಮಾತನಾಡಿದರು.

ವಿಶ್ವ ವಿದ್ಯಾಲಯಗಳ ನಡುವಿನ ಕನ್ನಡ ಕೊಂಡಿ ..

ಷಿಫ್‌ಮನ್‌ ಅವರು ಕನ್ನಡವನ್ನು ಬೋಧಿಸುವ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಮೆರಿಕಾದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸುವ ಕೊಂಡಿಯಾಗಿದ್ದಾರೆ ಎಂದು ಷಿಫ್‌ಮನ್‌ ಅವರನ್ನು ಸಭೆಗೆ ಪರಿಚಯಿಸಿದ ಕೆಸಿಎ ಆಜೀವ ಸದಸ್ಯ ಹಾಗೂ ‘ಅಕ್ಕ’ ಟ್ರಸ್ಟಿ ಮತ್ತು ನಿರ್ದೇಶಕ ವಿ.ಎಂ. ಕುಮಾರಸ್ವಾಮಿ ಹೇಳಿದರು.

‘ಅಕ್ಕ’ ಬಳಗ ಹಾಗೂ ಕನ್ನಡ ಪೀಠವನ್ನು ಸ್ಥಾಪಿಸುವ ಅದರ ಉದ್ದೇಶದ ಬಗೆಗೆ ಅಮೇರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ಷಿಫ್‌ಮನ್‌ ಇ-ಮೇಲ್‌ ಮೂಲಕ ಸಂಪರ್ಕಿಸಿದ್ದಾರೆ. ಆದರೆ, UCLA, UCBerkeley ಮತ್ತು UPENN ವಿಶ್ವ ವಿದ್ಯಾಲಯಗಳು ಮಾತ್ರ ಷಿಫ್‌ಮನ್‌ ಅವರಿಗೆ ಪ್ರತಿಕ್ರಿಯಿಸಿವೆ. ಕನ್ನಡ ಪೀಠ ಸ್ಥಾಪನೆ ಹಾಗೂ ‘ವೆಬ್‌ನಲ್ಲಿ ಕನ್ನಡ’ದ ಬಗೆಗೆ ಷಿಫ್‌ಮನ್‌ ಧನಾತ್ಮಕ ಪ್ರತಿಕ್ರಿಯೆ ಹೊಂದಿದ್ದಾರೆ. ಷಿಫ್‌ಮನ್‌ ಹಾಗೂ ಅವರ ಹಿನ್ನೆಲೆಯ ವಿವರಗಳನ್ನು ಯುಎಸ್‌ಎ ಮತ್ತು ಕೆನಡಾದ ಎಲ್ಲ ಕನ್ನಡ ಕೂಟಗಳಿಗೆ ಕಳುಹಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ವೆಬ್‌ ಮೂಲಕ ಕನ್ನಡ ಬೋಧಿಸುವ ಮತ್ತು ಕಲಿಯುವ WE TALK ಕಾರ್ಯಕ್ರಮದ ಬಗೆಗೆ ಮತ್ತು UPENN ಹಾಗೂ PENN LANGUAGE CENTER ನೆರವಿನಿಂದ ವೆಬ್‌ನಲ್ಲಿ ಕನ್ನಡ ಅಳವಡಿಸುವ ಕುರಿತು ಕುಮಾರಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಷಿಫ್‌ಮನ್‌ ಅವರ ಫೋಟೋ ಹೊಂದಿದ್ದ ಹಾಗೂ ಕನ್ನಡ ಭಾಷೆಯಲ್ಲಿದ್ದ ಸ್ಮರಣಿಕೆಯನ್ನು ಕೆಸಿಎ ಕೆಸಿಎ ಅಧ್ಯಕ್ಷ ವಿಶ್ವೇಶ್ವರ ದೀಕ್ಷಿತ್‌ ಅವರು ಪ್ರೊ. ಹೆರಾಲ್ಡ್‌ ಷಿಫ್‌ಮನ್‌ರಿಗೆ ನೀಡಿ ಗೌರವಿಸಿದರು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X