ಕ್ರಿಕೆಟರ್‌ ದುಲೀಪ್‌ ದೋಷಿ ಸೇರಿದಂತೆ ಮೂವರು ಎನ್‌ಆರ್‌ಐಗಳಿಗೆ ಸನ್ಮಾನ

ಲಂಡನ್‌: ಮಾಜಿ ಟೆಸ್ಟ್‌ ಆಟಗಾರ ದುಲೀಪ್‌ ದೋಷಿ ಸೇರಿದಂತೆ ಮೂವರು ಗಣ್ಯ ಅನಿವಾಸಿ ಭಾರತೀಯರನ್ನು ಸಾಗರೋತ್ತರ ಭಾರತೀಯ ಕಾಂಗ್ರೆಸ್‌(ಐಓಸಿ) ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಿತು.

ಕ್ರಿಕೆಟರ್‌ ದುಲೀಪ್‌ ದೋಷಿ, ಪ್ರಸಿದ್ಧ ಬರಹಗಾರ ಕನ್ವಾಲ್‌ ನೈನ್‌ ಹಾಗೂ ಭಾರತೀಯ ಸಂಗೀತದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಜಯ್‌ ವಿಶ್ವ ದೇವ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆಗಳನ್ನು ನೀಡುವ ಮೂಲಕ ಭಾರತೀಯ ರಾಯಭಾರಿ ನರೇಶ್‌ವೇ ದಯಾಳ್‌ ಸನ್ಮಾನಿಸಿದರು.

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಸಂಬಂಧ ಎಲ್ಲ ಕ್ಷೇತ್ರಗಳಲ್ಲಿ ಗುಣಾತ್ಮಕವಾಗಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ದಯಾಳ್‌ ಬಣ್ಣಿಸಿದರು. ಕಳೆದ ತಿಂಗಳು ಭಾರತದ ಪ್ರಧಾನಿ ವಾಜಪೇಯಿ ಹಾಗೂ ಬ್ರಿಟನ್‌ ಪ್ರಧಾನಿ ಟೋನಿ ಬ್ಲೇರ್‌ ಅವರು ದೆಹಲಿ ಘೋಷಣೆ ಪ್ರಕಟಿಸಿದ ನಂತರ ಉಭಯ ರಾಷ್ಟ್ರಗಳ ನಡುವಣ ಕೊಡು -ಕೊಳುವ ಸಂಬಂಧಕ್ಕೆ ಹೆಚ್ಚಿನ ಬಲ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಐಓಸಿಯ ಅಧ್ಯಕ್ಷ ಬಲ್ವಂತ್‌ ಕಪೂರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

(ಪಿಟಿಐ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+