ಚೆನ್ನೈ: ಜ.18 ರ ರಾಜ್ಯೋತ್ಸವದಲ್ಲಿ ರಸರಂಗಂ ಹಾಗೂ ವಾಸುದೇವ ಮಂಜರಿ
ಮೈಸೂರು : ಜನವರಿ 18ರಂದು ಚೆನ್ನೈನಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಆಯೋಜಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮೈಸೂರಿನ ಲಲಿತಕಲಾ ಅಕಾಡೆಮಿ ಫೌಂಡೇಶನ್ ಹಾಗೂ ಚೆನ್ನೈನ ಶ್ರೀಕೃಷ್ಣ ಸಭಾ ಜಂಟಿಯಾಗಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿವೆ. ಸಮಾರಂಭದ ವಿಶೇಷ ಆಕರ್ಷಣೆಯಾಗಿ ಮೈಸೂರು ವಾಸುದೇವಾಚಾರ್ಯರ ಕೃತಿಗಳ ಆಧಾರದ ಮೇಲೆ ‘ವಾಸುದೇವ ಮಂಜರಿ’ ಎಂಬ ನೃತ್ಯ ಸಂಗೀತ ರೂಪಕವನ್ನು ಆಯೋಜಿಸಲಾಗಿದೆ.
ಮುರಳೀಧರ್ ಅವರಿಂದ ವಚನ ಸಾಹಿತ್ಯ ಕಾರ್ಯಕ್ರಮ ಹಾಗೂ ್ನ ರಾಧಿಕಾ ನಂದಕುಮಾರ್ ಅವರಿಂದ ‘ರಸರಂಗಂ ’ ಎಂಬ ಭರತನಾಟ್ಯ ರೂಪಕವನ್ನು ಕೂಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದೆ. ನಾಡಹಬ್ಬದ ಕಾರ್ಯಕ್ರಮದಲ್ಲಿ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದ ಕಾರ್ಯದರ್ಶಿ ರಾಜಾರಾವ್ ಅವರಿಗೆ ‘ಲಲಿತಕಲಾ ಪೋಷಕ’ ಎಂಬ ಬಿರುದು ನೀಡಿ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಕರ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications