ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದ ಜೈಜೈ ಗೋಪಾಲ ಜೈಜೈ... ಕ್ಯಾಂಟನ್‌ನಲ್ಲಿ ಭಜನ ಸಂಧ್ಯಾ

By Staff
|
Google Oneindia Kannada News

(ಇನ್ಫೋ ಇನ್‌ಸೈಟ್‌)

Canton Presents Bhajana Sandhya on Feb 15thಇದು ಪುರಂದರದಾಸ, ಕನಕದಾಸ, ತ್ಯಾಗರಾಜರ ಮಾಹೆ. ಫೆಬ್ರವರಿ 12ರಂದು ಬೆಂಗಳೂರಿನ ಎಸ್‌.ಎಸ್‌.ಎಂ.ಆರ್‌.ವಿ ಕಾಲೇಜಲ್ಲಿ 25ಕ್ಕೂ ಹೆಚ್ಚು ಸಂಗೀತಗಾರರ ಕೀರ್ತನೆಗಳ ರಸ ಸಂಜೆ ಆಯೋಜಿತವಾಗಿದೆ. ಭಕ್ತಿಯ ಅಭಿವ್ಯಕ್ತಿಗೆ ಸೀಮೆಗಳಿಲ್ಲ. ಭಗವಂತನ ನೆನೆ...ಭಕುತಿಗಿದು ಮನೆ. ಕುಂತಾಗ ರಾಮ ನಿಂತಾಗ ರಾಮ. ಮನಸ್ಸು ನಿರಾಳ, ಆ-ರಾ-ಮ. ಆ ಕಾರಣಕ್ಕೇ ಸಾಗರದಾಚೆಯಲ್ಲೂ ಭಕ್ತಿ ರಸ ಉಕ್ಕುತ್ತಲಿರುವುದು. ಈ ಬಾರಿ ಸಂಧ್ಯಾ ಭಜನೆ. ಇದು ಕ್ಯಾಂಟನ್ನಿನ ಹಿಂದೂ ದೇವಾಲಯದ ಆಯೋಜನೆ.

ಭಜನೆ ಮಾಡುವವರು ರಂಗ ತಿರುಮಲ. ಅವರ ಸಾಥಿಗಳು : ರಾಜಾ ಮೆಹ್ತಾ- ಹಾರ್ಮೋನಿಯಂ, ಮೋಹನ್‌ ಪನ್ನಂಗಾವಿಲ್‌- ತಬಲಾ, ಅಜಿತ್‌ ಆಚಾರ್ಯ- ತಬಲಾ. ಫೆಬ್ರವರಿ 15ರಂದು ಶುಕ್ರವಾರ, ಸಂಜೆ 8ರಿಂದ 9.30 ಗಂಟೆವರೆಗೆ.

ಸ್ಥಳ : Canton Hindu Temple
44955, Cherry Hill Road
Canton, MI (734) 981-8730

ಭಜನಾ ತಂಡದ ಕಿರು ಪರಿಚಯ

ರಂಗ ತಿರುಮಲ : ಚಿಕ್ಕ ವಯಸ್ಸಿನಲ್ಲೇ ಸಂಗೀತದ ಒಲವು. ಮೈಸೂರು ವಾಸುದೇವಾಚಾರ್ಯರ ಮಗನ ಶಿಷ್ಯೆ ಶ್ರೀಮತಿ ಶ್ಯಾಮಲಾ ಪುಣ್ಯಮೂರ್ತಿ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ. ನೆಚ್ಚಿನವರ ‘ರಂಗ’ ಅವರಿಗೆ ಸಂಗೀತ ತುಡಿತ. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಇವರ ಇನ್ನೊಂದು ಮುಖ ಸಾಫ್ಟ್‌ವೇರ್‌ ವೃತ್ತಿಪರ. ಉದ್ಯಮಿಯಾಗಿ ರೂಪುಗೊಳ್ಳುತ್ತಿರುವ ಪ್ರತಿಭಾವಂತ.

ರಾಜ್‌ ಮೆಹ್ತಾ : ಸಾಕಷ್ಟು ಸಾಣೆಗೊಡ್ಡಿಕೊಂಡಿರುವ ಹಾರ್ಮೋನಿಯಂ ಹಾಗೂ ತಬಲಾ ವದಕ. ಹಲವಾರು ವರ್ಷಗಳ ಹಿಂದೆ ಭಾರತದಲ್ಲಿ ಸಂಗೀತ ಕಲಿತದದ್ದು. ಕಳೆದ ಮೂವತ್ತು ವರ್ಷಗಳಿಂದ ಡೆಟ್ರಾಯಿಟ್‌ ಪ್ರದೇಶದಲ್ಲಿರುವ ಇವರು ಸಂಗೀತ ಸಂಬಂಧಿಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಡೆಟ್ರಾಯಿಟ್‌ನ ಶೃತಿ ಲಯ ಮತ್ತಿತರ ವೃತ್ತಿಪರ ಲಘು ಸಂಗೀತ ಸಮೂಹಗಳ ಹಿರಿಕ. ಅಮೆರಿಕಾದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿರುವ ಅನುಭವಿ.

ಮೋಹನ್‌ ಪನ್ನಂಗಾವಿಲ್‌ : ಶಾಲಾ ದಿನಗಳಲ್ಲೇ ತಬಲದ ಮಲೆ ಪುಟ್ಟ ಬೆರಳುಗಳನ್ನಾಡಿಸಿದ ಪ್ರತಿಭೆ. ಖ್ಯಾತನಾಮರಾದ ದಿವಂಗತ ಕಬೀರ್‌ ದಾಸ್‌ ಹಾಗೂ ಶರತ್‌ಚಂದ್ರ ಮರಾಠೆ ಅವರ ಶಿಷ್ಯ. ಶರತ್‌ ಚಂದ್ರ ಮರಾಠೆ ಸಿನಿಮಾ ಸಂಗೀತ ನಿರ್ದೇಶಕರೂ ಹೌದು. ಹೆಸರಾಂತ ಸಂಗೀತಗಾರರಿಗೆ ತಬಲಾ ಸಾಥಿಯಾದ ಹೆಮ್ಮೆ ಮೋಹನ್‌ ಅವರದು. ಭಾರತದ ಸ್ವಾತಂತ್ರ್ಯ ಸುವರ್ಣೋತ್ಸವ ಪ್ರಯುಕ್ತ ಪ್ಯಾಲೇಸ್‌ ಆಫ್‌ ಆಬರ್ನ್‌ ಹಿಲ್ಸ್‌ ನಲ್ಲಿ ತಬಲಾ ಕಾರ್ಯಕ್ರಮ ಕೊಟ್ಟಿದ್ದರು. ಪ್ರಸ್ತುತ ಡೈಮ್ಲರ್‌ ಕ್ಲಿಸ್ಲರ್‌ನಲ್ಲಿ ಸೀನಿಯರ್‌ ಅನಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಅಜಿತ್‌ ಆಚಾರ್ಯ : ಶೇಷಗಿರಿ ರಾವ್‌ ಅವರ ಮಾರ್ಗದರ್ಶನದಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಬೆಂಗಳೂರಲ್ಲಿ ತಬಲಾ ತರಪೇತಿ. ಅಮೆರಿಕೆಯ ಮಧ್ಯ ಪಾಶ್ಚಾತ್ಯ ಪ್ರದೇಶದಲ್ಲಿ ಅತ್ಯುತ್ತಮ ತಬಲಾ ಗುರು ಎನಿಸಿಕೊಂಡಿರುವ ಡಾ.ರಾಜನ್‌ ಸಚ್‌ದೇವ ಅವರ ಜೊತೆ 10 ವರ್ಷಗಳಿಗೂ ಹೆಚ್ಚು ಕಾಲ ತಬಲಾ ಅಧ್ಯಯನ. ಸಚ್‌ದೇವ ಅವರ ಜೊತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ತಬಲಾ ನುಡಿಸಿರುವ ಅಜಿತ್‌, ಉಪನ್ಯಾಸ ಕಾರ್ಯಕ್ರಮಗಳಲ್ಲೂ ತೊಡಗಿಕೊಂಡವರು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X