BBK 12: ಬಿಗ್ ಬಾಸ್‌ನಲ್ಲಿ ಜಾತಿ,ಹಣ,ರಾಜಕೀಯ ನಡೀತಿದ್ಯಾ? ಸುದೀಪ್ ಹಸ್ತಕ್ಷೇಪ ಮಾಡ್ತಾರಾ? ಯಾರೆಲ್ಲ ಏನಂದ್ರು?
ಬಿಗ್ ಬಾಸ್ ಕನ್ನಡ 12 ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಇಂದಿನಿಂದ (ಜನವರಿ 17) ಬಿಗ್ ಬಾಸ್ ಫಿನಾಲೆ ಆರಂಭ ಆಗುತ್ತಿದೆ. 12ನೇ ಸೀಸನ್ ಗೆಲ್ಲೋದು ಯಾರು? ಅಂತ ಈಗಾಗಲೇ ಲೆಕ್ಕ ಹಾಕುತ್ತಿದ್ದಾರೆ. ಇದರ ಮಧ್ಯೆ ಒಂದಿಷ್ಟು ವಿವಾದಗಳು, ಟೀಕೆಗಳು ಕೂಡ ಬಿಗ್ ಬಾಸ್ ಫಿನಾಲೆ ಸಮಯದಲ್ಲಿಯೇ ಹುಟ್ಟಿಕೊಂಡಿದೆ. ಅದರಲ್ಲೂ ಇಬ್ಬರು ಪ್ರಬಲ ಸ್ಪರ್ಧಿಗಳ ಬಗ್ಗೆನೇ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ. ಪ್ರತಿ ವರ್ಷವೂ ಈ ಶೋ ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೊಸ ಹೊಸ ರೂಪದೊಂದಿಗೆ, ವಿಭಿನ್ನ ಪರಿಕಲ್ಪನೆಯೊಂದಿಗೆ ಈ ರಿಯಾಲಿಟಿ ಶೋ ಪ್ರೇಕ್ಷಕರ ಮುಂದೆ ಬರುತ್ತಲೇ ಇದೆ. ಕೆಲವೊಮ್ಮೆ ವಿವಾದಗಳು ಈ ಶೋ ಹಿಂದೆ ಸುದ್ದಿ ಕೊಂಡಿದ್ದೂ ಕೂಡ ಇದೆ. ಅದು ಸೀಸನ್‌ಗೂ ಮುಂದುವರೆದಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

ಅದರಲ್ಲೂ ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಹೆಚ್ಚು ಚರ್ಚೆಯಲ್ಲಿ ಇದಿದ್ದು ವಿಶೇಷ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಶೋ ನಿಲ್ಲಿಸಿದ್ದರಿಂದ ಹಿಡಿದು ಈಗ ಸ್ಪರ್ಧಿಗಳ ಜಾತಿಯವರೆಗೂ ಬಂದು ನಿಂತಿದೆ. ಇನ್ನೊಂದು ಬಿಗ್ ಬಾಸ್ ವಿನ್ನರ್ ಯಾರಾಗ್ಬೇಕು ಅನ್ನೋ ವಿಷಯದಲ್ಲಿ ಕಿಚ್ಚ ಸುದೀಪ್ ಹಸ್ತಕ್ಷೇಪ ಇರುತ್ತಾ? ಅನ್ನೋವರೆಗೂ ಚರ್ಚೆಯಾಗುತ್ತಿದೆ. ಇದಕ್ಕೆ ಸುದೀಪ್ ಆಪ್ತರಾಗಿರು ಚಕ್ರವರ್ತಿ ಚಂದ್ರಚೂಡ್ ಹಾಗೂ ಬಿಗ್ ಬಾಸ್ ಸೀಸನ್ 4ರ ರನ್ನರ್‌ಅಪ್ ಕಿರಿಕ್ ಕೀರ್ತಿ ಬೇರೆ ಬೇರೆ ವೇದಿಕೆಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಇಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಶ್ವಿನಿ ಗೌಡ ಕನ್ನಡಪರ ಹೋರಾಟಗಾರ್ತಿ, ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ವೋಟ್ ಅಂತ ಕೆಲವರು ಪ್ರಚಾರ ಮಾಡುತ್ತಿದ್ದರೆ, ಇತ್ತ ಗಿಲ್ಲಿ ಕುರುಬ ಸಮುದಾಯಕ್ಕೆ ಸೇರಿದ್ದು, ಆ ಜಾತಿಯವರೆಲ್ಲರೂ ವೋಟ್ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ. ಹಾಗಿದ್ದರೆ, ಬಿಗ್ ಬಾಸ್‌ನಲ್ಲಿ ಜಾತಿ, ಹಣ, ರಾಜಕೀಯ, ಪ್ರಭಾವಗಳು ನಡೆಯುತ್ತಾ? ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ ಅವರು ತಮ್ಮ ಚಕ್ರವರ್ತಿ ಅಖಾಡ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
BBK 12: ಬಿಗ್ ಬಾಸ್ ಪ್ರೀ-ಫಿನಾಲೆ ನಡೆಸಿಕೊಡಲ್ಲ ಕಿಚ್ಚ ಸುದೀಪ್: ಹೀಗಾಗಿದ್ದು ಇದೇ ಮೊದಲು
"ಮೊನ್ನೆ ಮುಖ್ಯ ಮಂತ್ರಿಗಳ ಕಚೇರಿಯಲ್ಲಿ ಜಾತಿ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಬಿಗ್ ಬಾಸ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಗಿಲ್ಲಿ ಕುರುಬ ಅನ್ನೋದು ಜನರಿಗೆ ಬೇಕಾಗಿಲ್ಲ. ಅಶ್ವಿನಿ ಗೌಡ ಒಕ್ಕಲಿಗರಾ? ಅದು ಜನರಿಗೆ ಬೇಕಾಗಿರಲಿಲ್ಲ. ಇನ್ಯಾರೋ ತುಳು, ಬಂಟರಾ? ಪೂಜಾರಿಗಳಾ? ಅದು ಜನರಿಗೆ ಬೇಕಾಗಿಲ್ಲ. ಜನರು ಜಾತಿಯನ್ನು ಇಟ್ಟುಕೊಂಡು, ಬೇರೆ ಬೇರೆ ಸಂಘಟನೆ ಇಟ್ಟುಕೊಂಡು ಹೇಗೆ ಬಂದಿದ್ದಾನೆ ಅನ್ನೋದನ್ನು ನೋಡುವುದಿಲ್ಲ. ಆ ಶೋನಲ್ಲಿ ಏನು ಮನರಂಜನೆ ಮಾಡಿದ್ದಾನೆ ಅನ್ನೋದನ್ನಷ್ಟೇ ನೋಡುತ್ತಾರೆ. ಕುರುಬ ಸಂಘಟನೆಯವರು ಗಿಲ್ಲಿ ಕುರುಬ ಅಂತ ಅನೌನ್ಸ್ ಮಾಡುತ್ತಾರೆ. ಸಿದ್ದರಾಮಯ್ಯ ಸಿಎಂ ಆದರೆ, ಕುರುಬ ಸಂಘಟನೆಯವರೆಲ್ಲರೂ ಉದ್ದಾರ ಆಗಲ್ಲ. ದೇವೇಗೌಡರು ಪ್ರಧಾನಿಗಳಾದರೆ ಒಕ್ಕಲಿಗರೆಲ್ಲರೂ ಉದ್ದಾರ ಆಗಲ್ಲ. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದರು ಅನ್ನೋ ಕಾರಣಕ್ಕೆ ಬ್ರಾಹ್ಮಣರೆಲ್ಲರೂ ಉದ್ಧಾರ ಆಗಲಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಸಿಎಂ ಆದರೆ, ಎಲ್ಲಾ ದಲಿತರಿಗೂ ಒಳ್ಳೆಯದಾಗಲ್ಲ. ಕನ್ನಡದ ಮನರಂಜನಾ ಕ್ಷೇತ್ರ ಜಾತಿಗೆ, ರಾಜಕೀಯಕ್ಕೆ ಒಳಪಟ್ಟರೆ ಎಂತಹ ಅಪಾಯ ಗೊತ್ತಾ? ಇಂತಹದ್ದನ್ನು ತಂದಾಕುತ್ತಿರುವವರಿಗೆ ಹೇಳುತ್ತೇನೆ. ಈ ಅಪಾಯ ಒಳ್ಳೆಯದಲ್ಲ." ಎಂದು ಚಕ್ರವರ್ತಿ ಚಂದ್ರಚೂಡ ಅಸಮಧಾನ ಹೊರ ಹಾಕಿದ್ದಾರೆ.
ಇನ್ನೊಂದು ಕಡೆ ಬಿಗ್ ಬಾಸ್ ಯಾರು ಗೆಲ್ಲಬೇಕು ಅನ್ನೋದನ್ನು ಕಿಚ್ಚ ಸುದೀಪ್ ನಿರ್ಧಾರ ಮಾಡುತ್ತಾರೆ ಎನ್ನುವ ಟೀಕೆಗಳು ಕೂಡ ಕೇಳಿ ಬಂದಿವೆ. ಅದಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 4ರ ರನ್ನರ್‌ಅಪ್ ಕಿರಿಕ್ ಕೀರ್ತಿ ಸ್ಪೀಡ್ ನ್ಯೂಸ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
"ಯಾರಾದರೂ ಚಾನೆಲ್‌ಗಳ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುತ್ತಾರೋ ಅಂತಹವರನ್ನು ಚಾನೆಲ್‌ಗಳು ಉಳಿಸಿಕೊಳ್ಳುವುದಿಲ್ಲ. ಅಂತಹ ನಿರೂಪಕರನ್ನು ಚಾನೆಲ್‌ಗಳು ಹೊರಗಡೆ ಇಡುತ್ತವೆ. ಯಾರೆಲ್ಲ ಹೀಗೆ ಮಾತಾಡಿದ್ದಾರೋ ಅವರಿಗೆ ಹೌದಲ್ವಾ? ಅಂತ ಹೇಳುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದವರನ್ನೇ ತೆಗೆದುಕೊಂಡರೆ, ಕಾವ್ಯಾ, ರಕ್ಷಿತಾ, ರಘು ಅಣ್ಣ, ಗಿಲ್ಲಿ ಮತ್ತು ಅಶ್ವಿನಿ ಮೇಡಂ ಈ ಐದು ಜನರೊಂದಿಗೆ ಸುದೀಪ್ ಸರ್‌ಗೆ ಏನು ನಂಟಿದೆ? ಅವರೊಂದಿಗೆ ಸಿನಿಮಾ ಮಾಡಿಲ್ಲ. ಅವರ ಸಂಬಂಧಿಯಲ್ಲ. ಅವರಿಗೆ ಜಿಮ್ ಟ್ರೈನರ್ ಅಲ್ಲ. ಅವರಿಗೆ ಆಪ್ತರಲ್ಲ. ಅವರೊಂದಿಗೆ ಕ್ರಿಕೆಟ್ ಆಡಿದವರಲ್ಲ. ಅಲ್ಲಿ ಇರೋರು ಯಾರೂ ಐದು ಜನರಲ್ಲ. ಬೇಕು ಅಂದರೆ, ಅವರು ಯಾರನ್ನಾದರೂ ಉಳಿಸಿಕೊಳ್ಳಬಹುದಿತ್ತು. ಆ ಕೆಲಸ ಮಾಡಿಲ್ಲ" ಎಂದು ಕಿರಿಕ್ ಕೀರ್ತಿ ಹೇಳಿದ್ದಾರೆ.
Credit: Filmibeat
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications