Yadagiri: ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆದ ಶಹಾಪುರ ರೈತರು
ಶಹಾಪುರ ಏಪ್ರಿಲ್ 4: ಬೇಸಿಗೆ ಬಂದರೆ ಎಲ್ಲೆಡೆ ನೀರಿನ ಅಭಾವ ಉಂಟಾಗುತ್ತದೆ. ಕೆಲ ಜಲ ಮೂಲಗಳು ಇರುವ ಪ್ರದೇಶಗಳಿಗೆ ನೀರು ತುಂಬಾ ಸುಲಭವಾಗಿ ಸಿಗುವುರಿಂದಾಗಿ ಆ ಭಾಗದ ರೈತರು ಬೆಳೆ ಬೆಳೆಯಲು ಕಷ್ಟವಾಗುದಿಲ್ಲ. ರೈತರಿಗೆ ಸಮರ್ಪಕವಾದ ನೀರು ಸಿಗುವುದರಿಂದಾಗಿ ಉತ್ತಮ ಬೆಳೆ ಬೆಳೆದ ಅಧಿಕ ಲಾಭ ಪಡೆಯುತ್ತಿದ್ದಾರೆ.
ಹೌದು ಶಹಾಪುರದ ಕೃಷ್ಣಾ ಕಾಲುವೆ ಜಾಲದ ಕೆಳ ಭಾಗದ ರೈತರು ಸಜ್ಜೆ ಬಿತ್ತನೆ ಮಾಡಿ ಮಳೆಗಾಲಕ್ಕೂ ಮುನ್ನ ಕಡಿಮೆ ಖರ್ಚಿನಲ್ಲಿ ಭರ್ಜರಿ ಲಾಭ ಪಡೆದಿದ್ದಾರೆ. ಅಲ್ಲದೆ ಈ ಭಾಗದ ರೈತರಿಗೆ ಪ್ರೇರಣೆಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ, ಸಹಾಯಕ ಕೃಷಿ ನಿರ್ದೇಶಕ ಡಾ. ಸುನಿಲ್ ಕುಮಾರ್ ಯರಗೊಳ ಅವರು, 'ಜಮೀನಿನಲ್ಲಿ ಹತ್ತಿ ಬೆಳೆಯ ನಂತರ ಸಜ್ಜೆ ಬೆಳೆ ಬೆಲೆದಿರುವೆ. ಮೂರು ಎಕರೆ ಜಮೀನಿನಲ್ಲಿ 40 ಕ್ವಿಂಟಲ್ ಇಳುವರಿ ಬಂದಿದೆ. ಉತ್ತಮ ಫಲವತ್ತೆಯ ಜಮೀನಿನಲ್ಲಿ 12 ರಿಂದ15 ಕ್ವಿಂಟಲ್ ಇಳುವರಿ ಬಂದಿದೆ. ಹತ್ತಿ ಬೆಳೆಗೆ ಮಾಡಿದ ಖರ್ಚು ಸಜ್ಜೆ ಬೆಳೆ ಸರಿದೂಗಿಸುತ್ತದೆ. ತಾಲ್ಲೂಕಿನಲ್ಲಿ ಸುಮಾರು 1,150 ಹೆಕ್ಟರ್ ಪ್ರದೇಶದಲ್ಲಿ ಸಜ್ಜೆ ಬಿತ್ತನೆ ಮಾಡಿದ್ದಾರೆ' ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಮತ್ತೊಬ್ಬ ರೈತ ಹನುಮಂತರಾಯ ಅವರು, 'ಸಜ್ಜೆ 90 ದಿನದ ಅವಧಿಯ ಬೆಳೆಯಾಗಿದ್ದು, ಸಜ್ಜೆಯ ವಿವಿಧ ಕಂಪನಿಯ ಬೀಜ ಪ್ರತಿ ಪಾಕೆಟ್‌ಗೆ 650 ಇದ್ದು, ಡಿಸೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಿದೆ. ಬೆಳಗ್ಗೆ ಎರಡು ಗಂಟೆ ದಿನಕ್ಕೊಮ್ಮೆ ನೀರು ಹರಿಸಲಾಗುತ್ತದೆ.
ಪ್ರತಿ ಎಕರೆಗೆ ಖರ್ಚು ಕೇವಲ 2000 ಬಂದಿದೆ. ಇಳುವರಿ ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಲ್ ನಮ್ಮ ಜಮೀನಿನಲ್ಲಿ ಬಮದಿದೆ. ಪ್ರತಿ ಕ್ವಿಂಟಲ್ ಎರಡು ಸಾವಿರರಿಂದ ಎರಡುವರೆ ಆಸುಪಾಸಿನಲ್ಲಿ ಮಾರಾಟ ಮಾಡಿದ್ದೇವೆ ಎಂದಿದ್ದಾರೆ.
ಜೂಜಾಟವಾಡುತ್ತಿದ್ದವರನ್ನು ಬಂಧಿಸಿದ ಪೊಲೀಸರು
ಹುಣಸಿಯ ಇಸಾಂಪುರ ಸೀಮಾಂತರದ ಕಾಲುವೆ ಬಳಿ ಜೂಟಾಟವಾಡುತ್ತಿದ್ದ 8 ಹೊಸ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 58,000 ನಗದು, 14 ಬೈಕ್, 4 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹುಣಸಗಿ ಸಿಪಿಐ ರವಿಕುಮಾರ್ ಎಸ್.ಎನ್. ನೇತೃತ್ವದಲ್ಲಿ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಹಾಗೂ ಏಳು ಮಂದಿ ಪೊಲೀಸ್ ಸಿಬ್ಬಂದಿ ಜೂಜಾಟದ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಸ್ಥಳದಲ್ಲಿ ಇದ್ದ ಕೆಲವರು ಪರಾರಿಯಾಗಿದ್ದರೆ ಇನ್ನೂ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications