• search
 • Live TV
ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾದಗಿರಿಯಲ್ಲಿ ಎತ್ತನ್ನು ಕಾಪಾಡಲು ಹೋಗಿ ಇಬ್ಬರು ರೈತರ ಸಾವು

By ಯಾದಗಿರಿ ಪ್ರತಿನಿಧಿ
|

ಯಾದಗಿರಿ, ಸೆಪ್ಟೆಂಬರ್ 28: ಎತ್ತನ್ನು ಕಾಪಾಡಲು ಹೋಗಿ ಇಬ್ಬರು ರೈತರು ಸಾವನ್ನಪ್ಪಿರುವ ದಾರುಣ ಘಟನೆ ಯಾದಗಿರಿಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ-ಶಿವನೂರು ಸಮೀಪ ಇಂದು ಸಂಜೆ ನಡೆದಿದೆ.

ಬಸಪ್ಪ (30) ಹಾಗೂ ಮೌಲಾಲಿ (28) ಎಂಬ ರೈತರು ಸಾವನ್ನಪ್ಪಿರುವವರು. ಹೊಲದ ಬದಿಯ ತಂತಿ ಬೇಲಿಗೆ ವಿದ್ಯುತ್ ತಂತಿ ತಾಗಿದ್ದು, ಮೇಯಲು ಹೋದ ಎತ್ತಿಗೆ ವಿದ್ಯುತ್ ತಂತಿ ತಗುಲಿದೆ. ಬೆಂಡೆಬೆಂಬಳಿ ಗ್ರಾಮದ ಬಸಪ್ಪ ಜಾನುವಾರುಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ಆ ಸಂದರ್ಭ ಬೇಲಿ ಬದಿ ಒದ್ದಾಡುತ್ತಿದ್ದ ಎತ್ತನ್ನು ಕಂಡು ಅದರ ರಕ್ಷಣೆಗೆ ಬಸಪ್ಪ ಹೋಗಿದ್ದಾರೆ. ತಂತಿ ಬೇಲಿಯ ಸಮೀಪ ವಿದ್ಯುತ್ ತಂತಿ ಕೂಡ ಹಾದುಹೋಗಿದ್ದು, ಅದನ್ನು ಗಮನಿಸದೇ ಎತ್ತನ್ನು ತಳ್ಳಲು ಹೋದ ಬಸವರಾಜ್ ಅವರಿಗೂ ವಿದ್ಯುತ್ ತಗುಲಿದೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವಿದ್ಯುತ್ ಶಾಕ್ ನಿಂದ ಮೂವರು ಸ್ಥಳದಲ್ಲೇ ಸಾವು

   Virat ಹಾಗು Anushka ಬಗ್ಗೆ ಏನೇನೋ ಹೇಳಿ , ಸಮಜಾಯಿಷಿ ನೀಡಿದ Sunil Gavaskar | Oneindia Kannada

   ಬಸಪ್ಪ ಹಾಗೂ ಎತ್ತು ಬಿದ್ದಿರುವುದನ್ನು ಕಂಡು ಮೌಲಾಲಿ ಅವರ ರಕ್ಷಣೆಗೆ ಹೋಗಿ, ಅವರೂ ಸಾವನ್ನಪ್ಪಿದ್ದಾರೆ. ಇಬ್ಬರು ರೈತರು, ಎತ್ತು ಬಿದ್ದಿದನ್ನು ಕಂಡು, ವಿದ್ಯುತ್ ತಂತಿ ಗಮನಿಸಿದ ಸ್ಥಳೀಯರು ಜೆಸ್ಕಾಂ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು, ಸಿಬ್ಬಂದಿ ಬರಲಿಲ್ಲ. ಹೀಗಾಗಿ ಸ್ಥಳೀಯರು ಜೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಘಡ ನಡೆದರೂ ಎಚ್ಚೆತ್ತಿಲ್ಲ, ಸಮಯಕ್ಕೆ ಸರಿಯಾಗಿ ಬಂದಿಲ್ಲ ಎಂದು ಆರೋಪಿಸಿದ್ದಾರೆ.

   English summary
   A two farmers electrocuted and died while saving cattle near Bendebembali-Shivanur in Vadagera taluk in Yadagiri today evening
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X