• search
  • Live TV
ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಷ್ಟದಿಂದ ಡಿಕೆಶಿ ಪಾರುಮಾಡಲು ಯಾದಗಿರಿಯಲ್ಲಿ ಇಷ್ಟದೇವಿಗೆ ನಡೆಯಿತು ಪೂಜೆ

By ಯಾದಗಿರಿ ಪ್ರತಿನಿಧಿ
|

ಯಾದಗಿರಿ, ಆಗಸ್ಟ್ 31: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಕೋರಿ ಯಾದಗಿರಿಯಲ್ಲಿ ವಿಶೇಷ ಪೂಜೆ ನಡೆದಿದೆ. ಸದ್ಯ, ಡಿಕೆಶಿ ಇಡಿ ವಿಚಾರಣೆಗೆ ಹಾಜರಾಗಿದ್ದು, ಅವರನ್ನು ಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿ ಶಕ್ತಿ ದೇವಿಯಾಗಿದ್ದು, ದೇವಿಯ ಆರಾಧಕ ಮಹಾದೇವಪ್ಪ ನಿನ್ನೆ ಹಾಗೂ ಇಂದು ಬೆಳಿಗ್ಗೆ ವಿಶೇಷ ಪೂಜೆ ನಡೆಸಿದ್ದಾರೆ. ದೇಗುಲದ ಅರ್ಚಕ ಮರಿಸ್ವಾಮಿ ಡಿಕೆಶಿ ಪರ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.

ರಾಜಕೀಯ ಪ್ರೇರಿತ ತಂತ್ರವನ್ನು ಎದುರಿಸಿ ಗೆಲ್ಲುವೆ: ಡಿಕೆಶಿ

ಡಿ.ಕೆ.ಶಿವಕುಮಾರ್ ತಮ್ಮ ಕಷ್ಟಕಾಲದಲ್ಲಿ ಗಡೇ ದುರ್ಗಾದೇವಿ ಮೊರೆ ಹೋಗುತ್ತಿದ್ದರು, ಮಹಾದೇವಪ್ಪ ಅವರು ಬೆಂಗಳೂರಿನ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಈ ಹಿಂದೆ ಸಾಕಷ್ಟು ಬಾರಿ ದೇವಿಯ ಪೂಜೆ ನಡೆಸಿದ್ದರು ಎನ್ನಲಾಗಿದೆ.

ಚಿದಂಬರಂ ಮೇಲೆ ಇದ್ದ ಪ್ರೀತಿ ಡಿಕೆಶಿ ಮೇಲೆ ಇಲ್ಲ ಯಾಕೆ..?

ಇದೇ ವರ್ಷದ ಫೆಬ್ರವರಿಯಲ್ಲಿ ಗಡೇ ದುರ್ಗಾದೇವಿ ಜಾತ್ರೆಗೆ ಬರುತ್ತೇನೆಂದು ತಿಳಿಸಿದ ಡಿಕೆಶಿ ಕಾರಣಾಂತರಗಳಿಂದ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಡಿಕೆಶಿ ಕಷ್ಟ ನಿವಾರಿಸುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಮಹಾದೇವಪ್ಪ ತಿಳಿಸಿದ್ದಾರೆ.

English summary
A special pooja was held at Yadagiri praying relief to former minister dk shivakumar from ed investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X