ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾದಗಿರಿ : ಹುಣಸಿಹೊಳೆ ಗ್ರಾಮದಲ್ಲಿ ಕೋತಿಗಳ ಕಾಟ

By ನಮ್ಮ ಪ್ರತಿನಿಧಿ
|
Google Oneindia Kannada News

ಯಾದಗಿರಿ, ನವೆಂಬರ್ 4 : ಗೋಡೆಯಿಂದ ಗೋಡೆಗೆ, ಮರದಿಂದ ಮರಕ್ಕೆ ಹಾರುತ್ತಿರುವ ಕೋತಿಗಳು. ಕೋತಿಗಳ ಚೇಷ್ಟೆ, ತುಂಟಾಟ ನೋಡಲು ಬಲು ಸುಂದರ. ಆದರೆ, ಈ ಊರಿನ ತುಂಬಾ ಕೋತಿಗಳ ಹಿಂಡು. ಕೋತಿಗಳ ಕಾಟದಿಂದಾಗಿ ಗ್ರಾಮಸ್ಥರು ಹೈರಾಣಾಗಿ ಹೋಗಿದ್ದಾರೆ.

ಇಂತಹ ಕಪಿರಾಯಗಳ ಸಾಮ್ರಾಜ್ಯ ಕಂಡು ಬರುವುದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಿಹೊಳೆ ಗ್ರಾಮದಲ್ಲಿ.
ಈ ಊರಿನ ತುಂಬಾ ಕೋತಿ ಹಿಂಡು. ಮರದಿಂದ ಮಾಳಿಗೆಗೆ, ಗೋಡೆಯಿಂದ ಅಂಗಡಿಗಳಿಗೆ ಜಿಗಿಯುತ್ತ ದಾಂಧಲೆ ನಡೆಸುತ್ತಿವೆ.

ಆಗುಂಬೆ ಘಾಟಿಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಮಾರಣ ಹೋಮಆಗುಂಬೆ ಘಾಟಿಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಮಾರಣ ಹೋಮ

ಗ್ರಾಮದಲ್ಲಿ ಕೋತಿಗಳ ಕಾಟದಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ. ಕೋತಿಗಳನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಾಮರಾಜನಗರದ ಶಿವಪುರ ಗ್ರಾಮದಲ್ಲಿ ವಾನರನಿಗೊಂದು ದೇಗುಲಚಾಮರಾಜನಗರದ ಶಿವಪುರ ಗ್ರಾಮದಲ್ಲಿ ವಾನರನಿಗೊಂದು ದೇಗುಲ

ಹುಣಸಿಹೊಳೆ ಗ್ರಾಮ ಕೃಷ್ಣಾ ನದಿಯ ದಡದಲ್ಲಿದೆ. ಸುತ್ತ-ಮುತ್ತ ನದಿ, ಅರಣ್ಯ ಪ್ರದೇಶಗಳು ಇರುವುದರಿಂದ ಕೋತಿಗಳಿಗೆ ಈ ಗ್ರಾಮ ಆಶ್ರಯ ತಾಣವಾಗಿದೆ. ಆದರೆ, ಈ ಕಪಿಗಳ ಚೇಷ್ಟೆಯಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ...

ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...

1000ಕ್ಕೂ ಹೆಚ್ಚು ಕೋತಿಗಳಿವೆ

1000ಕ್ಕೂ ಹೆಚ್ಚು ಕೋತಿಗಳಿವೆ

ಯಾದಗಿರಿ ಜಿಲ್ಲೆಯ ಹುಣಸಿಹೊಳೆ ಗ್ರಾಮ ಕೃಷ್ಣಾ ನದಿಯ ದಡದಲ್ಲಿದೆ. ಸುತ್ತ-ಮುತ್ತ ನದಿ, ಅರಣ್ಯ ಪ್ರದೇಶಗಳು ಇರುವುದರಿಂದ ಕೋತಿಗಳಿಗೆ ಈ ಗ್ರಾಮ ಆಶ್ರಯ ತಾಣವಾಗಿದೆ. 1000ಕ್ಕೂ ಹೆಚ್ಚು ಕೋತಿಗಳು ಈ ಗ್ರಾಮದಲ್ಲಿವೆ.

ಧಾನ್ಯಗಳೆಲ್ಲ ಕೋತಿ ಪಾಲು

ಧಾನ್ಯಗಳೆಲ್ಲ ಕೋತಿ ಪಾಲು

ಮನೆಯ ಮುಂದೆ ಒಣಹಾಕಿದ ದವಸ-ಧಾನ್ಯ, ಬಟ್ಟೆಗಳನ್ನು ಕೋತಿಗಳು ಎತ್ತಿಕೊಂಡು ಹೋಗುತ್ತಿವೆ. ದಿನಸಿ ಅಂಗಡಿಗಳಿ ಕೋತಿಗಳು ನುಗ್ಗಿ ಉಪಟಳ ನೀಡುತ್ತಿವೆ.

ಮಕ್ಕಳಿಗೆ ಕೋತಿ ಕಾಟ

ಮಕ್ಕಳಿಗೆ ಕೋತಿ ಕಾಟ

ಹಾಸಿಗೆಗಳನ್ನು ಕಿತ್ತುಹಾಕುತ್ತಿವೆ. ಮಕ್ಕಳಿಗೆ ಕಚ್ಚುತ್ತಿವೆ. ಮನೆಯ ಮೇಲೆ ಕೋತಿಗಳು ಮಾಡುತ್ತಿರುವ ದಾಂಧಲೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಹುಣಸಿಹೊಳೆ ಗ್ರಾಮಸ್ಥರು ಕೋತಿಯ ಕಾಟದಿಂದ ಮುಕ್ತಿ ಕೊಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಕ್ರಮ ಕೈಗೊಳ್ಳುತ್ತೇವೆ

ಕ್ರಮ ಕೈಗೊಳ್ಳುತ್ತೇವೆ

ಹುಣಸಿಹೊಳೆ ಗ್ರಾಮದ ಸುತ್ತಮುತ್ತ ನದಿ, ಅರಣ್ಯ ಪ್ರದೇಶವಿದೆ. ಆದ್ದರಿಂದ, ಈ ಭಾಗದಲ್ಲಿ ಕೋತಿಗಳ ಸಂಖ್ಯೆ ಹೆಚ್ಚಿದೆ. ಕೋತಿಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

English summary
Monkeys trouble for residents of Hunasiholi village, Yadgir district. Villagers alleged that the forest department had not take any action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X