ಯಾದಗಿರಿ, ರಾಯಚೂರು ಅಭಿವೃದ್ಧಿಗೆ ಕೇಂದ್ರದ ವಿಶೇಷ ಯೋಜನೆ: ಡಿವಿಎಸ್

ಯಾದಗಿರಿ, ಅ.1: ಹಿಂದುಳಿದ ಜಿಲ್ಲೆಗಳ ಪಟ್ಟಿಯಿಂದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳನ್ನು ಹೊರ ತರಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ, ಯಾದಗಿರಿ, ರಾಯಚೂರು ಜಿಲ್ಲೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಗುರುತಿಸಿದೆ, 2020ರೊಳಗೆ ಈ ಜಿಲ್ಲೆಗಳನ್ನು ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿದ್ಧವಾಗಿದ್ದು, ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಆರೋಗ್ಯ, ಶಿಕ್ಷಣ,ಮೂಲಭೂತ ಸೌಕರ್ಯ ಎರಡು ಜಿಲ್ಲೆ ಗಳು ಅಭಿವೃದ್ಧಿ ಪಡಿಸಲಾಗುತ್ತಿದೆ, ಹಂತ ಹಂತವಾಗಿ ಜಿಲ್ಲೆ ಅಭಿವೃದ್ಧಿ ಆಗುತ್ತಿದೆ, ಬೇರೆ ಬೇರೆ ಕಡೆಯಿಂದ ಅಧಿಕಾರಿಗಳು ಇಗಾಗಲೇ ಬಂದಿದ್ದಾರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಬೇಕಾದ ಸಿಬ್ಬಂದಿಗಳ ಕೊರತೆ ಕಂಡು ಬಂದಿದೆ, ಅದನ್ನು ನೀಗಿಸುವಲ್ಲಿ ಪ್ರಯತ್ನ ಐದಾರು ತಿಂಗಳಲ್ಲಿ ಸರಿಪಡಿಸಲಾಗುತ್ತದೆ.

Central govt special program in Yadgir and Raichur district to eradicate backwardness

ಆನೆಕಾಲು ರೋಗ, ಅಥವಾ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ನಿವಾರಣೆಗೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ಆಯುಷ್ಮಾನ್ ಭಾರತ ಯೋಜನೆ ಜನರಿಗೆ ತಲುಪಿಸುವ ಗುರಿ ಹೊಂದಿದೆ ಈ ಕಾರ್ಯವನ್ನು ಕೈಗೊಳಲಾಗಿದೆ ಎಂದರು.

ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ ಯಾದಗಿರಿಯಲ್ಲಿ ಶೇ.50ರಷ್ಟು ಶಿಕ್ಷಕರ ಕೊರತೆ ಇದೆ, ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಎರಡು ಸೇರಿ ಅಭಿವೃದ್ಧಿ ಮಾಡಲಿದೆ.

ಜಿಲ್ಲಾಡಳಿತದಿಂದ ವಿಶೇಷವಾಗಿ ಪ್ರತಿತಿಂಗಳು ಜಿಲ್ಲೆಯಲ್ಲಿ ಅಭಿವೃದ್ಧಿಯ ಸಮೀಕ್ಷೆ ನಡೆಯುತ್ತಿದೆ ಹಿಂದಿರುವ ಜಿಲ್ಲಾಧಿಕಾರಿ ಮಂಜುನಾಥ ಅವರು ಒಳ್ಳೆಯ ಕೆಲಸ ಮಾಡಿದ್ದಾರೆಂದು ತಿಳಿದುಬಂದಿದೆ, ಅಭಿವೃದ್ಧಿ ಸಮೀಕ್ಷೆ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+